Puttakkana Makkalu: ಹ್ಯಾಂಡ್ಸಮ್ ಕಂಠಿ, ಜಗಳಗಂಟಿ ಸ್ನೇಹಾ ಮಧ್ಯೆ ಶುರುವಾಗೇ ಬಿಡ್ತಾ ರೊಮ್ಯಾನ್ಸ್?

Published : Jun 20, 2022, 03:22 PM IST
Puttakkana Makkalu: ಹ್ಯಾಂಡ್ಸಮ್ ಕಂಠಿ, ಜಗಳಗಂಟಿ ಸ್ನೇಹಾ ಮಧ್ಯೆ ಶುರುವಾಗೇ ಬಿಡ್ತಾ ರೊಮ್ಯಾನ್ಸ್?

ಸಾರಾಂಶ

ಜೀ ಕನ್ನಡದ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಕಂಠಿ ಮತ್ತು ಸ್ನೇಹಾ ಡ್ಯುಯೆಟ್ ಹಾಡೋ ರೀಲ್ಸ್ ಪೋಸ್ಟ್ ಆಗಿದೆ. ಬ್ಲ್ಯಾಕ್ ಶರ್ಟ್ ನಲ್ಲಿ ಸಖತ್ ಹ್ಯಾಂಡ್‌ಸಮ್‌ ಆಗಿ ಮಿಂಚುತ್ತಿರುವ ಕಂಠಿ, ಗ್ರೀನ್ ಡ್ರೆಸ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣ್ತಿರುವ ಸ್ನೇಹಾ ಜೊತೆಯಾಗಿ 'ಅವಳ ಒಲವ ನಗೆ' ಹಾಡಿಗೆ ಎನಾಕ್ಟ್ ಮಾಡಿದ್ದಾರೆ. ಇದು ಆದಷ್ಟು ಬೇಗ ಸೀರಿಯಲ್‌ನಲ್ಲೂ ಬರಲಿ ಅನ್ನೋದು ಜನರ ಹಾರೈಕೆ.

ಟಿಆರ್ ಪಿ(TRP)ಯಲ್ಲಿ ಹೆಚ್ಚಾಗಿ ನಂಬರ್ 1 (No.1) ಆಗಿಯೇ ಇರುವ ಜೀ ಕನ್ನಡದ ಜನಪ್ರಿಯ ಸೀರಿಯಲ್ 'ಪುಟ್ಟಕ್ಕನ ಮಕ್ಕಳು(Puttakkana Makkalu)'. ಈ ಸೀರಿಯಲ್‌ನ ಕಂಠಿ- ಸ್ನೇಹ ರೊಮ್ಯಾಂಟಿಕ್ ರೀಲ್ಸ್(Romantic Reels) ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರಿಂದ ಮೆಚ್ಚುಗೆ ಪಡೀತಿದೆ. ಈ ಸೀನ್ ಇನ್ನೂ ಸಿರಿಯಲ್‌ನಲ್ಲಿ ಬಂದೇ ಇಲ್ಲ. ಬರುತ್ತಾ ಅಂತಲೂ ಗೊತ್ತಿಲ್ಲ. ಬಂದ್ರೆ ಚೆನ್ನಾಗಿರುತ್ತೆ ಅಂತ ಜನ ಅಂತೂ ಕಾಯ್ತಿದ್ದಾರೆ. ಆದರೆ ಕಂಠಿ ಹೃದಯದಲ್ಲಿ ಸ್ನೇಹಾ ಬಗ್ಗೆ ಪ್ರೀತಿಯ ಕಿಡಿ ಹಚ್ಚಿ, ಕಣ್ಣಾಮುಚ್ಚಾಲೆ ಆಡಿಸ್ತಿದ್ದಾರೆ ಸೀರಿಯಲ್ ಟೀಮ್ ನವ್ರು. ಇದು ಈಗಿನ ಮಟ್ಟಿಗಂತೂ ಒನ್‌ವೇ ಲವ್(one way Love). ಸದ್ಯಕ್ಕಂತೂ ಬಡ್ಡಿ ಬಂಗಾರಮ್ಮನ ಮಗ ಕಂಠಿ ಮತ್ತು ಪುಟ್ಟಕ್ಕನ ಮಗಳು ಸ್ನೇಹ ನಡುವಿನ ರೊಮ್ಯಾಂಟಿಕ್ ರೀಲ್ಸ್ ನ ಜನ ಬಹಳ ಇಷ್ಟಪಡುತ್ತಿದ್ದಾರೆ. ಇದು ಸೀರಿಯಲ್‌ನಲ್ಲೂ ಬರಲಿ ಅಂತ ಅಪೇಕ್ಷಿಸುತ್ತಿದ್ದಾರೆ. ಆದರೆ ಸೀರಿಯಲ್‌ನಲ್ಲಿ ಇನ್ನೂ ಕಂಠಿ ಸ್ನೇಹಾಗೆ ಪ್ರೊಪೋಸ್(propose) ಮಾಡಿಯೇ ಇಲ್ಲ. ಹೀಗಿರುವಾಗ ಆತನ ಕಲ್ಪನೆಯಲ್ಲಿ ಇಂಥದ್ದೆಲ್ಲ ಬರಬಹುದೇ ಹೊರತು, ರಿಯಲ್‌ ಆಗಿ ಇಂಥಾ ದೃಶ್ಯ ಬರಲಿಕ್ಕೆ ಬಹಳ ಟೈಮ್ ಹಿಡಿಯುತ್ತೆ ಅನ್ನೋ ಅಭಿಪ್ರಾಯ ಕೆಲವರದ್ದು. ಆದರೆ ಕಂಠಿ ಮತ್ತು ಸ್ನೇಹಾ ಯಾವಾಗ ಒಂದಾಗ್ತಾರೆ ಅಂತ ಕಾಯ್ತಿರೋ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ. ಆದರೆ ಅದಕ್ಕೆ ಒಂದಲ್ಲ ಒಂದು ಅಡ್ಡಿ ಎದುರಾಗುತ್ತಲೇ ಇದೆ. ಇನ್ನೊಂದೆಡೆ ಸ್ನೇಹಾ ಬಂಗಾರಮ್ಮನ ಮಗನನ್ನು ಜೈಲು ಸೇರಿಸ್ತೀನಿ ಅಂತ ಬೇರೆ ಹೊರಟಿದ್ದಾಳೆ. ಈ ಸೀನ್‌(Scene)ಗಳ ಎಳೆದಾಟದ ನಡುವೆ ಈ ರೀಲ್ಸ್ ಒಂಥರ ವೀಕ್ಷಕರ ಮೂಗಿಗೆ ತುಪ್ಪ ಸವರೋ ಹಾಗಿದ್ಯಲ್ಲಾ ಅಂತ ಅನುಮಾನ ಪಟ್ಟವರೂ ಇದ್ದಾರೆ.

ನಟ ಸತೀಶ್ ವಜ್ರ ಕೊಲೆ ಪ್ರಕರಣ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಗೆಳೆಯ

ಜನ ಹೀಗೆಲ್ಲ ಅಂದುಕೊಡೋದಕ್ಕೆ ಕಾರಣ 'ಪುಟ್ಟಕ್ಕನ ಮದುವೆ' ಸೀರಿಯಲ್‌ನ ಕತೆ.

ಈ ಸೀರಿಯಲ್ ನಾಯಕಿ ಸ್ನೇಹಾಗೆ ಐಎಎಸ್(IAS) ಮಾಡುವ ಆಸೆ. ಅಪ್ಪ ಬಿಟ್ಟುಹೋದ ಮೇಲೆ ಕುಸಿದು ಹೋದ ಅಮ್ಮನಿಗೆ ಮತ್ತೆ ಗೌರವ ತಂದುಕೊಟ್ಟು, ತನ್ನ ಮೂವರು ಹೆಣ್ಣುಮಕ್ಕಳ ಬಗ್ಗೆ ಪುಟ್ಟಕ್ಕ ಹೆಮ್ಮೆ ಪಡುವಂತೆ ಮಾಡುವುದು ಅವಳ ಗುರಿ. ಇದಕ್ಕಾಗಿ ಅವಳು ಗಟ್ಟಿಗಿತ್ತಿಯಾಗಿ ಬೆಳೆಯುತ್ತಿದ್ದಾಳೆ. ನ್ಯಾಯಕ್ಕಾಗಿ ಸದಾ ಮಾತೆತ್ತುವ ಅವಳ ವರ್ತನೆ ಅವಳನ್ನು ಜಗಳ ಗಂಟಿಯಾಗಿ ಮಾಡಿದೆ. ಇತ್ತ ಬಡ್ಡಿ ಬಂಗಾರಮ್ಮನಿಗೂ ಪುಟ್ಟಕ್ಕನಿಗೂ ಒಂದಲ್ಲ ಒಂದು ಕಾರಣಕ್ಕೆ ಕಲಹ ಆಗುತ್ತಲೇ ಇದೆ. ತನ್ನಮ್ಮನಿಗೆ ನೋವಾಗುವಂತೆ ಮಾಡಿದ ಬಂಗಾರಮ್ಮನ ಮಗನನ್ನು ಜೈಲಿಗೆ ಹಾಕಿಯೇ ಸಿದ್ಧ ಎಂದು ಸ್ನೇಹ ಸಮರ ಸಾರಿದ್ದಾಳೆ.

Kannadathi: ಡಾ.ದೇವ್ ಪಾತ್ರಧಾರಿ ವಿಜಯ ಕೃಷ್ಣ ಸೀರಿಯಲ್‌ನಿಂದ ಔಟ್! ಹೇಮಂತ್ ಎಂಟ್ರಿ..

ಇತ್ತ ಬಂಗಾರಮ್ಮನ ಮಗ ಕಂಠಿಗೆ ಪುಟ್ಟಕ್ಕನ ಮಗಳು ಸ್ನೇಹಾ ಮೇಲೆ ಪ್ರೀತಿ ಹುಟ್ಟಿದೆ. ಆದರೆ ಅವಳ ಎದುರು ತನ್ನ ಪ್ರೀತಿಯನ್ನು ಹೇಳಿಕೊಳ್ಳುವಷ್ಟು ಧೈರ್ಯ ಆತನಿಗೆ ಇಲ್ಲ. ಆದರೆ ಸದಾ ಸ್ನೇಹಾ ಬಗ್ಗೆಯೇ ಕನಸು ಕಾಣುತ್ತಿರುತ್ತಾನೆ. ಇತ್ತ ಆತನ ತಾಯಿ ಬಂಗಾರಮ್ಮ ತನ್ನ ಅಣ್ಣನ ಮಗಳನ್ನೇ ಕಂಠಿಗೆ ಮದುವೆ ಮಾಡಿಸುವ ಸಿದ್ಧತೆ ನಡೆಸಿದ್ದಾಳೆ. ಆದರೆ ಸ್ನೇಹಾ ಜೊತೆಗೆ ಲವ್ವಲ್ಲಿ ಬಿದ್ದಿರೋ ಕಂಠಿ ಇತ್ತ ಅಮ್ಮನಿಂದ ಪಾರಾಗಿ, ಅತ್ತ ಅವಳು ಗೊತ್ತು ಮಾಡಿರುವ ಹುಡುಗಿಯಿಂದ ಪಾರಾಗಿ, ಸ್ನೇಹಾಳ ಕೆಂಗಣ್ಣಿಗೆ ಗುರಿಯಾಗದ ಹಾಗೆ ತನ್ನ ಪ್ರೀತಿಯನ್ನು ಹೇಗೆ ತೋಡಿಕೊಳ್ತಾನೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಅದಕ್ಕೆ ಸರಿಯಾಗಿ ಜೀ ಕನ್ನಡದ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಕಂಠಿ ಮತ್ತು ಸ್ನೇಹಾ ಡ್ಯುಯೆಟ್ ಹಾಡೋ ರೀಲ್ಸ್(Reels) ಪೋಸ್ಟ್ ಆಗಿದೆ. ಬ್ಲ್ಯಾಕ್ ಶರ್ಟ್ ನಲ್ಲಿ ಸಖತ್ ಹ್ಯಾಂಡ್‌ಸಮ್‌(Handsome) ಆಗಿ ಮಿಂಚುತ್ತಿರುವ ಕಂಠಿ, ಗ್ರೀನ್ ಡ್ರೆಸ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣ್ತಿರುವ ಸ್ನೇಹಾ ಜೊತೆಯಾಗಿ 'ಅವಳ ಒಲವನಗೆ' ಹಾಡಿಗೆ ಎನಾಕ್ಟ್ ಮಾಡಿದ್ದಾರೆ. ಸದಾ ಕಲರ್‌ಫುಲ್ ಡ್ರೆಸ್‌ನಲ್ಲಿ ಮಿಂಚುತ್ತಿರುವ ಕಂಠಿಯ ಈ ಲುಕ್ ಜನರಿಗೆ ಇಷ್ಟವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಥರ ಸೀರಿಯಲ್ ನಾಯಕ ನಾಯಕಿಯ ರೀಲ್ಸ್ ಫೇಮಸ್ ಆಗ್ತಿದೆ. ಇದು ಆದಷ್ಟು ಬೇಗ ಸೀರಿಯಲ್‌ನಲ್ಲೂ ಬರಲಿ ಅನ್ನೋದು ಜನರ ಹಾರೈಕೆ.

 

'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ಅನ್ನು ಆರೂರು ಜಗದೀಶ್(Aruru Jagadish) ನಿರ್ದೇಶನ ಮಾಡುತ್ತಿದ್ದಾರೆ. ಇವರ ನಿರ್ದೇಶನದ ಇನ್ನೊಂದು ಜನಪ್ರಿಯ ಸೀರಿಯಲ್‌ 'ಜೊತೆ ಜೊತೆಯಲಿ'. ಈ ಸೀರಿಯಲ್‌ ತೆಲುಗಿನಲ್ಲಿ ಬರುತ್ತಿದ್ದ 'ರಾಧಮ್ಮ ಕುತುರು' ಅನ್ನುವ ಸೀರಿಯಲ್‌ನ ರೀಮೇಕ್. ಉಮಾಶ್ರೀ(Umashree), ಮಂಜುಭಾಷಿಣಿ(Manjubhashini) ಮುಖ್ಯಪಾತ್ರದಲ್ಲಿದ್ದಾರೆ. ಸಂಜನಾ ಬುರ್ಲಿ(Sanjana burli) ಪುಟ್ಟಕ್ಕನ ಹಿರಿ ಮಗಳು ಸ್ನೇಹಾ ಪಾತ್ರದಲ್ಲಿ, ಧನುಷ್(Dhanush) ಬಂಗಾರಮ್ಮನ ಮಗನಾಗಿ ಸ್ನೇಹಾಳನ್ನು ಪ್ರೀತಿಸುವ ಹುಡುಗ ಕಂಠಿ ಪಾತ್ರದಲ್ಲಿದ್ದಾರೆ. ಹಂಸ ಪ್ರತಾಪ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

Hitler Kalyanaದ ಎಡವಟ್ಟು ಲೀಲಾ ಈಗ ಹಾಸ್ಯ ನಟ ಚಿಕ್ಕಣ್ಣನ ಪ್ರೇಯಸಿ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಿಲ್ಲಿಯಲ್ಲ, Bigg Boss ವಿನ್ನರೇ ಬೇರೆ: ಅಭಿಷೇಕ್​ ಹೇಳಿದ ಆ ಹೆಸರು ಯಾರದ್ದು, ಇಲ್ಲಿದೆ ಕುತೂಹಲ
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?