ಬುರ್ಕಾ ಧರಿಸಿ ಶಾಪಿಂಗ್ ಮಾಡಿದ ನಟಿ; ಅಗೌರವಿಸಿದ್ದಕ್ಕೆ ನೆಟ್ಟಿಗರಿಂದ ಕ್ಲಾಸ್

Published : Jun 20, 2022, 02:39 PM ISTUpdated : Jun 20, 2022, 02:48 PM IST
ಬುರ್ಕಾ ಧರಿಸಿ ಶಾಪಿಂಗ್ ಮಾಡಿದ ನಟಿ; ಅಗೌರವಿಸಿದ್ದಕ್ಕೆ ನೆಟ್ಟಿಗರಿಂದ ಕ್ಲಾಸ್

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಟ್ರೋಲ್ ಆದ ನಟಿ ಮಂದನಾ ಕರೀಮಿ.

ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟಿ ಕಮ್ ಬಿಗ್ ಬಾಸ್ ಸ್ಪರ್ಧಿ ಮಂದನಾ ಕರೀಮಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು ಕಾಂಟ್ರವರ್ಸಿ ಕ್ರಿಯೇಟ್ ಮಾಡುವ ವಿಡಿಯೋ ಹಂಚಿಕೊಂಡು ಟ್ರೋಲ್ ಆಗಿದ್ದಾರೆ. ಅಲ್ಲದೆ ಬುರ್ಕಾ ಆಯ್ಕೆ ಮಾಡಿಕೊಂಡಿರುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. 

ಹೌದು! ಟರ್ಕಿಯಲ್ಲಿರುವ ಇಸ್ತಾನ್‌ ಬುಲ್ ಪ್ರವಾಸದಲ್ಲಿ ಬ್ಯುಸಿಯಾಗಿರುವ ಮಂದನಾ ಕರೀಮಿ ಬುರ್ಕಾ ಧರಿಸಿ ಶಾಪಿಂಗ್ ಮಾಡಿದ್ದಾರೆ. ಈ ವಿಡಿಯೋ ಅಪ್ಲೋಡ್ ಮಾಡಿ 'ಬುರ್ಕಾ ಧರಿಸಿ ಶೂಟಿಂಗ್ ಮಾಡಿದರೆ ಎಷ್ಟು ಸುಲಭವಾಗಿರುತ್ತದೆ ಅಲ್ವಾ? ಹಳೆ ವಿಡಿಯೋ. ಇಲ್ಲಿ ದ್ವೇಷಕ್ಕೆ ಜಾಗವಿಲ್ಲ. ಸಣ್ಣ ಸಿನಿಮಾ ಚಿತ್ರೀಕರಣದ ಸಮಯ' ಎಂದು ಬರೆದು ಮಂದನಾ ಬರೆದುಕೊಂಡಿದ್ದಾರೆ. 

'ಅಗೌರವ, ಬುರ್ಕಾ ಧರಿಸಿ ಈ ರೀತಿ ಮಜಾ ಮಾಡುತ್ತಿರುವುದಕ್ಕೆ ಬೇಸರ ಆಗುತ್ತಿಲ್ವಾ? ಈ ರೀತಿ ನಡೆದುಕೊಳ್ಳುವ ಮುನ್ನ ವಿಡಿಯೋ ಹಂಚಿಕೊಳ್ಳುವ ಮುನ್ನ ಯೋಚಿಸಿ'ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 'ನಾನು ಅಲ್ಲನಿಗೆ ಬೇಡಿಕೊಳ್ಳುವೆ ನೀವು ಮಾಡುತ್ತಿರುವುದು ತಪ್ಪು ಇದಕ್ಕೆ ಪಶ್ಚಾತಾಪ ಪಡುತ್ತೀಯಾ' ಎಂದು ಹೇಳಿದ್ದಾರೆ.

ಖ್ಯಾತ ನಿರ್ದೇಶಕನ ಜೊತೆ ಅಫೇರ್:

ನಟಿ ಕಂಗನಾ, ಮಂದನಾ ಬಳಿ ತಮ್ಮ ಜೀವನದ ರಹಸ್ಯವನ್ನು ಬಹಿರಂಗ ಪಡಿಸುವಂತೆ ಕೇಳಿದರು. ಆಗ ಮಂದನಾ, ಮಹಿಳಾ ಹಕ್ಕುಗಳ ಬಗ್ಗೆ ಆಗಾಗ್ಗೆ ಮಾತನಾಡುವ ಪ್ರಸಿದ್ಧ ನಿರ್ದೇಶಕರ ಜೊತೆ ರಹಸ್ಯ ಸಂಬಂಧವನ್ನು ಹೊಂದಿರುವ ಬಗ್ಗೆ ಬಹಿರಂಗ ಪಡಿಸಿದರು. 'ಆ ಸಂಬಂಧ ಕೆಲವೇ ತಿಂಗಳುಗಳಲ್ಲಿ ತುಂಬಾ ಗಟ್ಟಿಯಾಗಿತ್ತು, ಮತ್ತು ಇಬ್ಬರು ಸೆಟ್ಲ್ ಆಗುವ ಪ್ಲಾನ್ ಮಾಡಿದ್ದೆವು. ಆದರೆ ಇಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಡಲು ನಿರ್ಧರಿಸಿದ್ದೆವು. ಯಾಕೆಂದರೆ ಮಾಜಿ ಪತಿಯಿಂದ ವಿಚ್ಛೇದನಕ್ಕಾಗಿ ಕಾಯುತ್ತಿದ್ದೆ. ಆ ಸಮಯದಲ್ಲಿ ನಾನು ಗರ್ಭಿಣಿಯಾದೆ. ವಿಷಯ ಗೊತ್ತಾಗುತ್ತಿದ್ದಂತೆ ಆತ ದೂರ ಸರಿದನು. ಕಾರಣ ಆತ ಈ ಜವಾಬ್ದಾರಿಯನ್ನು ನಿಭಾಯಿಸಲು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸಿದ್ಧನಾಗಿರಲಿಲ್ಲ. ಅಲ್ಲದೆ ಗರ್ಭಪಾತ ಮಾಡಿಸುವಂತೆ ಆತ ಮನವಲಿಸಿದ. ಮಗುವನ್ನು ನೋಡಿಕೊಳ್ಳಲು ನಿರಾಕರಿಸಿದನು. ಆಗ ನಾನು ತುಂಬಾ ಸ್ಟ್ರಾಂಗ್ ಆಗಿ ಗರ್ಭಪಾತ ಮಾಡಿಸುವ ನಿರ್ಧಾರ ತೆಗೆದುಕೊಂಡೆ' ಎಂದು ಬಹಿರಂಗ ಪಡಿಸಿದರು.

ಪ್ರಭಾವಿ ವ್ಯಕ್ತಿಗಳನ್ನು ಡೇಟ್ ಮಾಡಿರುವುದಾಗಿ ಒಪ್ಪಿಕೊಂಡ ನಟಿ ಮಂದನಾ!

ಲಾಕಪ್ ಶೋ:

ಲಾಕಪ್ ಟ್ರೋಫಿ ಮಂದನಾ ಕೈ ಸೇರಲಿದೆ ಎಂದು ಲೆಕ್ಕಚಾರ ಹಾಕುತ್ತಿದ್ದ ನೆಟ್ಟಿಗರಿಗೆ ಬಿಗ್ ಶಾಕ್ ಎದುರಾಗಿದೆ.  ಎಲಿಮಿನೇಷನ್‌ನಿಂದ ಪದೇ ಪದೇ ಪಾರಾಗುತ್ತಿದ್ದ ಮಂದನಾ ಈಗ ಜೈಲಿನಿಂದ ಹೊರ ಬಂದಿದ್ದಾರೆ. ತಮ್ಮ ನಡೆನಡುಯಿಂದ ಜೈಲರ್ ಕರಣ್‌ ಜೊತೆ ಸಿಕ್ಕಾಪಟ್ಟೆ ಕಿತ್ತಾಡಿರುವ ಮಂದನಾ ಕೊನೆಯಲ್ಲಿ ಹೇಳಿದ ಸಾಲುಗಳಿಗೆ ನೆಟ್ಟಿಗರು ಗರಂ ಆಗಿದ್ದಾರೆ. 

'ಜನರನ್ನು ತಿಂದು ಹಾಕುವ ಅಥವಾ ಅವರ ಗಂಟಲು ಕತ್ತರಿಸುವ ಬುದ್ದಿ ಮತ್ತು ಆಸೆ ನನಗಿಲ್ಲ. ನನಗೆ ಜೀವನದಲ್ಲಿ ನೆಮ್ಮದಿ ಮುಖ್ಯ. ನಿಮ್ಮ ಜೊತೆ ಕೆಲಸ ಮಾಡುವುದಕ್ಕೆ ನಿಮ್ಮ ಎದುರು ನಿಂತು ಮಾತನಾಡುವುದಕ್ಕೆ ನಾನು ಪುಣ್ಯ ಮಾಡಿದ್ದೆ ಅಲ್ಲದೆ ನಿಮ್ಮ ಜೊತೆ ನನ್ನ ಜೀವನದ ಅನೇಕ ಸೀಕ್ರೆಟ್‌ಗಳನ್ನು ಹಂಚಿಕೊಂಡಿರುವೆ. ಬೇರೆಯವರ ಬಗ್ಗೆ ಮಾತನಾಡುವುದಕ್ಕೆ ಇಷ್ಟವಿಲ್ಲ' ಎಂದು ಹೇಳಿ ಲಾಕಪ್ ಶೋಗೆ ಗುಡ್ ಬೈ ಹೇಳಿದ್ದಾರೆ ಮಂದನಾ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Meet ದೇವಿ ಬಿಳಗಲಿ… ಚಿಕ್ಕಪ್ಪನಾದ ಸಂಭ್ರಮವನ್ನು ಹಂಚಿಕೊಂಡ Kishen Bilagali
ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ