ನಟಿ ಐಶ್ವರ್ಯ ಮುಖಕ್ಕೆ ಪಾರ್ಶ್ವವಾಯು; ಸ್ಟ್ರಾಂಗ್ ಸ್ಟಿರಾಯ್ಡ್‌ಗಳು ಹಿಂಸೆ ಎಂದ ನಟಿ

Published : Jun 20, 2022, 01:07 PM ISTUpdated : Jun 20, 2022, 01:15 PM IST
ನಟಿ ಐಶ್ವರ್ಯ ಮುಖಕ್ಕೆ ಪಾರ್ಶ್ವವಾಯು; ಸ್ಟ್ರಾಂಗ್ ಸ್ಟಿರಾಯ್ಡ್‌ಗಳು ಹಿಂಸೆ ಎಂದ ನಟಿ

ಸಾರಾಂಶ

ಮುಖಕ್ಕೆ ಪಾರ್ಶ್ವವಾಯು ಆದರೆ ಎಷ್ಟು ಕಷ್ಟ ಆಗುತ್ತದೆ ಎಂದು ಮೊದಲ ಬಾರಿ ನಟಿ ಐಶ್ವರ್ಯಾ ಸಖುಜಾ ಹಂಚಿಕೊಂಡಿದ್ದಾರೆ.

ಅಮೆರಿಕಾ ಪಾಪ್ ಗಾಯಕ ಜಸ್ಟಿನ್ ಬೀಬರ್ ಮುಖಕ್ಕೆ ಪಾರ್ಶ್ಚವಾಯು ಆಗಿದೆ ಎಂದು ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಜಸ್ಟಿನ್‌ ಶೀಘ್ರದಲ್ಲಿ ಹಾಡಲು ಶುರು ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ಹಿಂದಿ ಕಿರುತೆರೆ ಜನಪ್ರಿಯ ನಟಿ ಐಶ್ವರ್ಯಾ ಸಖುಜಾ ಹೇಳಿದ್ದಾರೆ. ಐಶ್ವರ್ಯ ಈ ರೀತಿ ಹೇಳಲು ಕಾರಣ ಇಲ್ಲಿದೆ....

ಐಶ್ವರ್ಯಾ ಸಖುಜಾ ಕಥೆ:

ಎಂಟು ವರ್ಷಗಳ ಹಿಂದೆ ನಟಿ ಐಶ್ವರ್ಯಾ ಸಖುಜಾ ಅವರ ಮುಖಕ್ಕೆ ಪಾರ್ಶ್ಚವಾಯು ಆಗಿತ್ತಂತೆ. 'ಮೈನ್ ನಾ ಭೂಲುಂಗಿ' (2014) ಧಾರಾವಾಹಿ ಚಿತ್ರೀಕರಣದ ವೇಳೆ ನಡೆದ ಘಟನೆ. ಮದುವೆ ಸೀಕ್ವೆನ್ಸ್‌ ಶುರುವಾಗುತ್ತಿದ್ದ ಕಾರಣ ನಾನ್ ಸ್ಟಾಪ್ ಚಿತ್ರೀಕರಣ ಮಾಡಿರುವೆ. ರೋಹಿತ್ (ಈಗ ಪತಿ, 2014ರಲ್ಲಿ ಬಾಯ್‌ಫ್ರೆಂಡ್) ಯಾಕೆ ಪದೇ ಪದೇ ಕಣ್ಣು ಹೊಡೆಯುತ್ತಿರುವೆ ಎಂದು ಪ್ರಶ್ನೆ ಮಾಡಿದ್ದರು. ಪ್ರೀತಿಯಿಂದ ತಮಾಷೆ ಮಾಡುತ್ತಿದ್ದಾರೆ ಎಂದು ನಾನು ಸುಮ್ಮನಾದೆ. ಆದರೆ ಮರು ದಿನ ಬೆಳಗ್ಗೆ ನಾನು ಹಲ್ಲು ಉಜ್ಜುವಾಗ ಬಾಯಲ್ಲಿ ನೀರು ಇಟ್ಟುಕೊಳ್ಳಲು ಆಗುತ್ತಿರಲಿಲ್ಲ. ನನ್ನ ದೇಹ ದಣಿದಿದೆ ಎಂದುಕೊಂಡು ಸುಮ್ಮನಾದೆ' ಎಂದು ನಟಿ ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಹೇಳಿದ್ದಾರೆ.

ಗಾಯಕ ಜಸ್ಟಿನ್ ಬೀಬರ್‌ ಮುಖಕ್ಕೆ ಪಾರ್ಶ್ವವಾಯು; ನಗಲೂ ಆಗದ ವಿಚಿತ್ರ ಕಾಯಿಲೆಗೆ ಕಾರಣವಾಗೋದೇನು ?

'ನನ್ನ ರೂಮ್‌ ಮೇಟ್‌ ಪೂಜಾ ಶರ್ಮಾ ನನ್ನ ಮುಖ ನೋಡಿ ವಿಚಿತ್ರವಾಗುತ್ತಿದೆ ಎಂದು ಹೇಳುತ್ತಿದ್ದಳು. ಆರೋಗ್ಯ ಸರಿ ಇಲ್ಲ ಎಂದುಕೊಂಡಳು ಆದರೆ ನಾನು ಸೂಪರ್ ಫಿಟ್ ಆಗಿದ್ದೆ. ಬಾತ್‌ರೂಮ್‌ನಲ್ಲಿ ಕನ್ನಡಿ ಇರಲಿಲ್ಲ. ಗಡಿಬಿಡಿಯಲ್ಲಿ ರೆಡಿಯಾಗುತ್ತಿರುವ ಕಾರಣ ನಾನು ರೂಮ್‌ನಲ್ಲಿ ಮುಖ ನೋಡಿಕೊಂಡಿರಲಿಲ್ಲ. ಏನೋ ಬದಲಾವಣೆ ಕಾಣಿಸುತ್ತಿದೆ ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಸ್ನೇಹಿತೆ ಹೇಳಿದ್ದಳು. ಮೆದುಳಿಗೆ MRI ಸ್ಕ್ಯಾನ್ ಮಾಡಿಸಿದ ನಂತರವೂ ನಾನು ಚಿತ್ರೀಕರಣ ಮುಂದುವರೆಸಿದೆ. ಎರಡು ಮೂರು ಸ್ಕ್ಯಾನ್‌ಗಳ ನಂತರ ತಿಳಿಯಿತ್ತು ನನಗೆ Ramsay Hunt Syndrome ಆಗಿದೆ ಎಂದು. ತಕ್ಷಣವೇ ಸ್ಟಿರಾಯ್ಡ್‌ ಆರಂಭಿಸಿದ್ದರು' ಎಂದು ಐಶ್ವರ್ಯ ಹೇಳಿದ್ದಾರೆ. 

'ಟೈಟ್‌ ಶೆಡ್ಯೂಲ್‌ ಇದ್ದ ಕಾರಣ ಬ್ರೇಕ್ ತೆಗೆದುಕೊಳ್ಳದೆ ಚಿತ್ರೀಕರಣ ಮಾಡಿದೆ. ಬ್ಯಾಕಪ್‌ ಎಪಿಸೋಡ್‌ ಕೂಡ ಇರಲಿಲ್ಲ. ಇಡೀ ತಂಡ ನನಗೆ ಸಪೋರ್ಟ್ ಮಾಡಿದ್ದರು.  ತೆರೆ ಮೇಲೆ ನನ್ನ ಅರ್ಧ ಮುಖ ಮಾತ್ರ ತೋರಿಸುತ್ತಿದ್ದರು ಹೀಗಾಗಿ ಜನರಿಗೆ ಇದರ ಬಗ್ಗೆ ಗೊತ್ತಗಲಿಲ್ಲ. ವೈದ್ಯರು ಕೊಡುತ್ತಿದ್ದ ಸ್ಟಿರಾಯ್ಡ್‌ ತುಂಬಾ ಹಿಂಸೆ ಆಗುತ್ತಿತ್ತು, ಅದಕ್ಕಿಂತ ದೊಡ್ಡ ಹಿಂಸೆ ಮಾನಸಿವಾಗಿ ನಮ್ಮನ್ನು ನಾವು ಎದುರಿಸಿಕೊಳ್ಳುವುದು ಏಕೆಂದರೆ ನಟಿಯಾಗಿ ನನಗೆ ಮುಖ ತುಂಬಾನೇ ಮುಖ್ಯ. ಒಂದು ತಿಂಗಳು ನಾನ್‌ ಸ್ಟಾಪ್‌ ಚಿಕಿತ್ಸೆಯಿಂದ ನಾನು ಚೇತರಿಸಿಕೊಂಡಿರುವೆ ಹೀಗಾಗಿ ಜಸ್ಟಿನ್ ಬೀಬರ್‌ ಕೂಡ ಚೇತರಿಸಿಕೊಂಡು ಸಂಗೀತ ಕಾರ್ಯಕ್ರಮ ಶುರು ಮಾಡಲಿದ್ದಾರೆ ಎಂದಿದ್ದಾರೆ ಐಶ್ವರ್ಯ.

Brain Computer: ಮೆದುಳಿನಲ್ಲಿ ಅಳವಡಿಸಿದ ಮೈಕ್ರೋಚಿಪ್ ಬಳಸಿ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ಟ್ವೀಟ್!

ರಾಮ್ಸೇ ಹಂಟ್ ಸಿಂಡ್ರೋಮ್ ಎಂದರೇನು ?
ಜಸ್ಟಿನ್ ಬೀಬರ್ ಸದ್ಯ ಬಳಲುತ್ತಿರುವ ಈ ಅಪರೂಪದ ಕಾಯಿಲೆಯ ಹೆಸರು ರಾಮ್ಸೆ ಹಂಟ್ ಸಿಂಡ್ರೋಮ್. ಸಂಗೀತ ಸೂಪರ್‌ಸ್ಟಾರ್ ಜಸ್ಟಿನ್ ಬೈಬರ್ ಅವರು ಅಪರೂಪದ ನರವೈಜ್ಞಾನಿಕ ಕಾಯಿಲೆಯಾದ ರಾಮ್‌ಸೆ ಹಂಟ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ವೈರಸ್‌ನಿಂದ ನನ್ನ ಕಿವಿ, ನನ್ನ ಮುಖದ ನರಗಳ ಮೇಲೆ ದಾಳಿ ಮಾಡುತ್ತದೆ ಮತ್ತು ನನ್ನ ಮುಖವು ಪಾರ್ಶ್ವವಾಯುವಿಗೆ ಕಾರಣವಾಗಿದೆ" ಎಂದು ಬೈಬರ್ ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ,

ಕಾಯಿಲೆ ಚಿಕನ್‌ ಫಾಕ್ಸ್ ಮತ್ತು ಸರ್ಪಸುತ್ತು ಎರಡನ್ನೂ ಉಂಟುಮಾಡುತ್ತದೆ ಎಂದು ಅಮೇರಿಕನ್ ಅಕಾಡೆಮಿ ಆಫ್ ಓಟೋಲರಿಂಗೋಲಜಿ ಹೆಡ್ ಮತ್ತು ನೆಕ್ ಸರ್ಜರಿ ವಿವರಿಸುತ್ತದೆ. ಇದು ತುಂಬಾ ಅಪರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆಯಾಗಿದೆ. ಅಸ್ವಸ್ಥತೆಗಳ ರಾಷ್ಟ್ರೀಯ ಸಂಘಟನೆಯ ಪ್ರಕಾರ, ಪ್ರತಿ 100,000 ಜನರಿಗೆ ಕೇವಲ ಐದು ಜನರು ವಾರ್ಷಿಕವಾಗಿ ರಾಮ್ಸೆ ಹಂಟ್ ಸಿಂಡ್ರೋಮ್‌ ಸಮಸ್ಯೆಯನ್ನು ಎದುರಿಸುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ