ಜೊತೆ ಜೊತೆಯಲಿ ಧಾರಾವಾಹಿ ಇಂದು ಮುಕ್ತಾಯ; ಅನು ಸಿರಿಮನೆ ಭಾವುಕ

By Kannadaprabha NewsFirst Published May 19, 2023, 10:41 AM IST
Highlights

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ ಇಂದು ಮುಕ್ತಾಯವಾಗುತ್ತಿದೆ. ಈ ವಿಚಾರ ತಿಳಿಸಿದ ಮೇಘಾ ಶೆಟ್ಟಿಈ ಧಾರಾವಾಹಿ ಜೊತೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡರು. ಅವರ ಮಾತುಗಳು ಇಲ್ಲಿವೆ.

ಕನ್ನಡ ಕಿರುತೆರೆ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲ್ಲಿ ಇಂದಿಗೆ ಮುಕ್ತಾಯವಾಗುತ್ತಿರುವುದು ಬೇಸರ ಸಂಗತಿ. ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಮತ್ತು ಹರೀಶ್‌ ರಾಜ್‌ನ ನೋಡಿದ್ದೀವಿ ಆದರೆ ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ ಒಬ್ಬರ ಕಾಣಿಸಿಕೊಂಡಿರುವುದು. ರಾಜ ನಂದಿನಿ ಪಾತ್ರದಲ್ಲಿ ಸೋನು ಗೌಡ ಸೇರಿದಂತೆ ಅನೇಕು ಅದ್ಭುತವಾಗಿ ನಟಿಸಿದ್ದಾರೆ. ಈ ನಾಲ್ಕು ವರ್ಷ ಜರ್ನಿ ಹೇಗಿತ್ತು ಎಂದು ಮೇಘಾ ಹೇಳಿಕೊಂಡಿದ್ದಾರೆ. 

- ಕಳೆದ ನಾಲ್ಕು ವರ್ಷಗಳಿಂದ ಈ ಧಾರಾವಾಹಿಯ ನಾಯಕಿಯಾಗಿ ನಟಿಸುತ್ತಿದ್ದೇನೆ. ನನಗೆ ಬದುಕಿನಲ್ಲಿ ಮರೆಯಲಾಗದ ಅನುಭವ ಕೊಟ್ಟಸೀರಿಯಲ್‌ ಇದು.

ಏನ್ ಅದು ಗರ್ಭನಾ ಇಲ್ಲಾ ಗೋಣಿ ಚೀಲನಾ?; ಅನು ಸಿರಿಮನೆ ಕಾಲೆಳೆದ ನೆಟ್ಟಿಗರು

- ಈ ಧಾರಾವಾಹಿಯ ಶೂಟಿಂಗ್‌ನಲ್ಲಿ ಮೊದಲು ತೆಗೆದ ಶಾಟ್‌ ನನ್ನದೇ ಆಗಿತ್ತು. ಇದೀಗ ಕೊನೆಯ ಶಾಟ್‌ ಸಹ ನನ್ನದೇ ಆಗಿದೆ. ಈ ಎರಡು ಶಾಟ್‌ಗಳ ಮಧ್ಯೆ ದೊಡ್ಡ ಅನುಭವವಿದೆ.
- ಹೆಚ್ಚಿನ ಯಾವ ನಿರೀಕ್ಷೆಗಳೂ ಇಲ್ಲದೇ ಆಕಸ್ಮಿಕವಾಗಿ ಈ ಧಾರಾವಾಹಿಗೆ ಎಂಟ್ರಿ ಕೊಟ್ಟೆ. ಅನು ಸಿರಿಮನೆ ಪಾತ್ರದ ಮೂಲಕ ಗುರುತಿಸಿಕೊಂಡೆ. ನನ್ನನ್ನು ಜನ ಅನು ಸಿರಿಮನೆ ಪಾತ್ರದ ಮೂಲಕವೇ ಗುರುತಿಸಲು ಶುರು ಮಾಡಿದರು. ಸಾಮಾನ್ಯಳಾಗಿದ್ದ ನಾನು ಕಲಾವಿದೆಯಾಗಿ ಗುರುತಿಸಿಕೊಂಡೆ. ಜನ ತಮ್ಮ ಮನೆ ಮಗಳಂತೆ ನೋಡತೊಡಗಿದರು.

ಗರ್ಭಿಣಿ ಅಂತೀರಾ ಹೊಟ್ಟೆನೇ ಕಾಣಿಸ್ತಿಲ್ಲ; 'ಜೊತೆ ಜೊತೆಯಲಿ' ಅನು ಸಿರಿಮನೆ ಮೇಲೆ ನೆಟ್ಟಿಗರ ಕಣ್ಣು

- ಈ ಧಾರಾವಾಹಿ ತಂಡಕ್ಕೆ ಸೇರಿಕೊಂಡಾಗ ನಾನು ಈ ಕ್ಷೇತ್ರಕ್ಕೇ ಹೊಸಬಳು. ಕ್ರಮೇಣ ಈ ಟೀಮ್‌ ಜೊತೆಗೆ ಎಷ್ಟುಗಾಢವಾದ ಒಡನಾಡ ಬೆಳೆಯಿತು ಅಂದರೆ ಇದು ನನ್ನ ಕುಟುಂಬದಷ್ಟೇ ಪ್ರಿಯವಾಯ್ತು.
- ಇದೀಗ ನಾಲ್ಕು ವರ್ಷಗಳ ಈ ಸೀರಿಯಲ್‌ ಜೊತೆಗಿನ ಪಯಣ ಕೊನೆಯಾಗುತ್ತಿದೆ. ನಾನು ಸಿನಿಮಾದತ್ತ ಮುಖ ಮಾಡಿದ್ದೇನೆ.

ವೀಕ್ಷಕರು ಆಸಕ್ತಿ ಕಳೆದುಕೊಂಡಿದ್ದೇಕೆ?
20ರ ಹರೆಯದ ಕಾಲೇಜು ಹುಡುಗಿ ಜೊತೆ 45 ವರ್ಷ ವಯಸ್ಸಿನ ಉದ್ಯಮಿಯೊಬ್ಬ ವರಿಸುವ ಕತೆ ವೀಕ್ಷಕರನ್ನು ಮೊದ ಮೊದಲು ಸೆರೆ ಹಿಡಿಯುವುದರಲ್ಲಿ ಯಶಸ್ವಿಯಾಗಿತ್ತು. ಬಹಳ ಜನ ಯುವತಿಯರಿಗೆ ಅಪ್ಪನ ವಯಸ್ಸಿನ ವ್ಯಕ್ತಿಯೊಟ್ಟಿಗೆ ಕ್ರಶ್ ಆಗಿದ್ದು ಸುಳ್ಳಲ್ಲ. ತಮ್ಮ ವರ್ತನೆಗೆ ಸಮರ್ಥನೆ ಕೊಡುವಂತಿತ್ತು ಈ ಸೀರಿಯಲ್. ಆದರೆ ಬತ್ತಾ ಇಂಥದ್ದೆ ಕಥಾ ಹಂದರವುಳ್ಳ ಅನೇಕ ಧಾರಾವಾಹಿಗಳು ಪ್ರಸಾರವಾಗಲು ಶುರುವಾದ್ದರಿಂದ ಸಹಜವಾಗಿಯೇ ವೀಕ್ಷಕರಿಗೆ ಈ ಸೀರಿಯಲ್ ಬೋರ್ ಅನಿಸಲು ಶುರುವಾಯಿತು. ಅಲ್ಲದೇ ಹೀರೋನೇ ದೊಡ್ಡ ವಿಲನ್ ಎಂಬುವುದು ರಿವೀಲ್ ಆಗುತ್ತಾ ಹೋದಂತೆ ಸೀರಿಯಲ್ ಬೋರಪ್ಪಾ ಎನ್ನುವ ಕಮೆಂಟ್ಸ್ ಹೆಚ್ಚಾಯಿತು. ಜೊತೆಗೆ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅನಿರುದ್ಧ ಜಾಟ್ಕರ್‌ ಭಾವಾಭಿನನಯಕ್ಕೆ ವೀಕ್ಷಕರು ಮಾರು ಹೋಗಿದ್ದರು. ವಿವಾದಗಳೊಂದಿಗೆ ಅವರು ಈ ಪಾತ್ರದಿಂದ ದೂರವಾದಾಗ ಬರ್ತಾ ಬರ್ತಾ ಜೊತೆ ಜೊತೆಯಲಿ ಸೀರಿಯಲ್‌ಗೆ ವೀಕ್ಷಕರು ಕಡಿಮೆಯಾಗುತ್ತಾ ಹೋದರು. 

ಈ ಜೊತೆ ಜೊತೆಯಲಿ ಹೇಗೆ ಅಂತ್ಯ ಕಾಣುತ್ತೆ? 
ಅನು ಸಿರಿಮನೆಯನ್ನು ಅಂತ್ಯದಲ್ಲಿ ದೇವರೇ ಆರ್ಯವರ್ಧನನ ಜೊತೆ ಸೇರಿಸಿ ಆಶೀರ್ವಾದ ಮಾಡುವಂತೆ ಸೀರಿಯಲ್ ಕೊನೆಯಾಗಲಿದೆ.. ಇಪ್ಪತ್ತರ ಹರೆಯದ ಅನು ಸಿರಿಮನೆ, ನಲವತ್ತೈದು ದಾಟಿದ ಮಧ್ಯ ವಯಸ್ಕ ಆರ್ಯವರ್ಧನ್ Love, ವಿರಹ, ವಿರಸ, ಅಗಲಿಕೆ ಇತ್ಯಾದಿಗಳಿಂದ ತಿರುವು ಮೇಲೆ ತಿರುವು(Twist) ಪಡೆಯುತ್ತಿದ್ದ ಜೊತೆ ಜೊತೆಯಲಿ ಕಡಿಮೆ ಎಂದರೆ ಸಾವಿರ ಎಪಿಸೋಡ್ಸ್ ದಾಖಲಿಸುವ ಗುರಿ ಹೊಂದಿತ್ತು. TRP ಕುಸಿತ, ವೀಕ್ಷಕರ ನೆಗೆಟಿವ್ ಅಭಿಪ್ರಾಯ, ಇನ್ನೂ ಕೆಲವು ಕಾರಣಗಳಿಂದ ಅಂದುಕೊಂಡಂತೆ ಯಾವುದೂ ಮುಂದೆ ಸಾಗಲಿಲ್ಲ. ನಾಲ್ಕು ವರ್ಷ ಒಂದು ಸೀರಿಯಲ್ ರನ್ ಆಗೋದು ದೊಡ್ಡ ವಿಷಯವೇ. ಇಂಥ ಕಾರ್ಯವೆಸಗಿದ ಸೀರಿಯಲ್ ಟೀಂ ಅನ್ನು ಶ್ಲಾಘಿಸಲೇ ಬೇಕು. 

click me!