ರಾಮಾಚಾರಿ ಸ್ಟೈಲ್‌ನಲ್ಲಿ ಬರ್ತಡೇ ಕೇಕ್ ಕ್ಯಾಂಡಲ್ ಹಚ್ಚಿದ ನಿವೇದಿತಾ. ಕಿರುತೆರೆ ಸೆಲೆಬ್ರಿಟಿಗಳ ಜೊತೆ ಐಷಾರಾಮಿ ಬರ್ತಡೇ ಪಾರ್ಟಿ...
ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ತಮ್ಮ ಹುಟ್ಟುಹಬ್ಬವನ್ನು ಬೆಂಗಳೂರಿನ ಐಷಾರಾಮಿ ಪಬ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಗಿಚ್ಚಿ ಗಿಲಿಗಿಲಿ ಧಾರಾವಾಹಿಯ ಇಡೀ ತಂಡವನ್ನು ಕರೆದು ಪಾರ್ಟಿ ಕೊಟ್ಟು ಚಂದನ್ ಮತ್ತು ನಿವಿ ಸೆಲೆಬ್ರೇಟ್ ಮಾಡಿದ್ದಾರೆ. ಹುಟ್ಟುಹಬ್ಬದ ವಿಡಿಯೋವನ್ನು ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೊದಲ್ಲಿ ನೆಟ್ಟಿಗರ ಗಮನ ಸೆಳೆದಿರುವುದು ನಿವಿ ಕೇಕ್ ಅಂಟಿಸಿರುವ ದೃಶ್ಯ....
ಬೆಂಗಳೂರಿನ ಪಬ್‌ನಲ್ಲಿ ಚಂದನ್ ಫುಲ್ ಬಲೂನ್‌ಗಳಿಂದ ಅಲಂಕಾರ ಮಾಡಿದ್ದಾರೆ. ಕಸ್ಟಮ್ ಡಿಸೈನ್ ಮಾಡಿಸಿರುವ ಕೇಕ್‌ನ ಕತ್ತರಿಸಿ ಎಂಜಾಯ್ ಮಾಡಿದ್ದಾರೆ. ಆನಂತರ ನಿವಿ ಕೈಗೆ ಒಂದು ಗಿಫ್ಟ್ ಕೊಟ್ಟು ಓಪನ್ ಮಾಡಲು ಹೇಳಿದ್ದಾರೆ. ತೆರೆಯುತ್ತಿದ್ದಂತೆ ಚಿನ್ನದ ಸರ ಕಾಣಿಸಿಕೊಂಡಿದೆ. ತಕ್ಷಣವೇ ಚಂದನ್ ಅದನ್ನು ನಿವಿ ಕೊರಳಿಗೆ ಎಲ್ಲರ ಎದುರು ಹಾಕಿದ್ದಾರೆ. ನನ್ನ ಡ್ರೆಸ್‌ಗೆ ಮ್ಯಾಚ್ ಆಗುತ್ತಿದೆ ನನಗೆ ಇಷ್ಟ ಆಯ್ತು ಎಂದು ಖುಷಿ ಪಟ್ಟಿದ್ದಾರೆ. ಸೃಜನ್ ಲೋಕೇಶ್, ಜಗಪ್ಪ, ಮಹಿತಾ, ಸುಶ್ಮಿತಾ, ಪ್ರಶಾಂತ್, ಜಾನವಿ, ವಿನೋದ್ ಗೊಬ್ಬರಗಾಲ, ನಿರಂಜನ್ ದೇಶಪಾಂಡೆ ಕುಟುಂಬ ಭಾಗಿಯಾಗಿದ್ದರು.
ಬೋಟಿ ನೀನು ತುಂಬಾ ನಾಟಿ; 90ರ ದಶಕದಲ್ಲಿ ಸಿಗುತ್ತಿದ್ದ ಕುರುಕುಲು ತಿಂಡಿ ರುಚಿ ನೋಡಿದ ನಿವೇದಿತಾ ಗೌಡ ಮತ್ತು ಯಶಸ್ವಿನಿ
'ನನ್ನ ಬರ್ತಡೇ ಸೆಲೆಬ್ರೇಷನ್ ಅದ್ಧೂರಿಯಾಗಿ ನಡೆಯಿತ್ತು. ಬರ್ತಡೇ ಮುಗಿತ್ತು ಎಂದು ಬೇಜಾರ್ ಆಗುತ್ತಿದೆ. ನನ್ನ ಜೀವನದಲ್ಲಿ ಬೆಸ್ಟ್ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಿಕೊಂಡಿರುವೆ. ನನ್ನ ಯುಟ್ಯೂಬ್ ವೀಕ್ಷಕರು ನನಗೆ ಸಿಕ್ಕಾಪಟ್ಟೆ ಲವ್ ಕೊಡುತ್ತಿದ್ದಾರೆ ಇದೇ ರೀತಿ ಪ್ರೀತಿ ಕೊಡಿ' ಎಂದು ನಿವಿ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಸಿಕ್ಕಾಪಟ್ಟೆ ಅಕ್ಟಿವ್ ಆಗಿರುವ ಕಾರಣ ನೆಟ್ಟಿಗರ ಪ್ರಶ್ನೆಗಳು ಮತ್ತು ಟ್ರೋಲ್‌ಗಳು ಹೆಚ್ಚಿರುತ್ತದೆ. ಕಳೆದ ವಿಡಿಯೋದಲ್ಲಿ ಗೂಗಲ್‌ನಲ್ಲಿ ಜನರು ನಿವಿ ಬಗ್ಗೆ ಏನೆಂದು ಸರ್ಚ್ ಮಾಡುತ್ತಾರೆಂದು ಹುಡುಕಿ ಉತ್ತರ ಕೊಟ್ಟಿದ್ದರು. ಅದರಲ್ಲಿ ಒಬ್ಬರು ಹೇಗೆ ಫೇಮಸ್ ಆದರು ಎಂದು ಕೇಳಿದಕ್ಕೆ 'ಇದೊಂದು ಟ್ರಿಕಿ ಪ್ರಶ್ನೆ ಏಕೆಂದರೆ ನಾನು ಕಾಲೇಜ್‌ನಲ್ಲಿದ್ದಾಗ ತುಂಬಾ ಡಬ್‌ಸ್ಮ್ಯಾಶ್ ಮಾಡುತ್ತಿದ್ದೆ. ಟೈಂ ಪಾಸ್‌ಗೆ ಮಾಡುತ್ತಿದ್ದೆ ಆದರೆ ಅದರಿಂದ ನನಗೆ ಬಿಗ್ ಬಾಸ್‌ಗೆ ಹೋಗುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಫೇಮ್ ಬೆಳೆಯುತ್ತಿದೆ' ಎಂದು ಹೇಳಿದ್ದರು. ಅಷ್ಟೇ ಅಲ್ಲ ಪ್ರತಿ ತಿಂಗಳು ನಿವಿ ಪ್ರಗ್ನೆಂಟ್ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗುತ್ತದೆ 'ನಾನು ಪ್ರಗ್ನೆಂಟ್ ಅಲ್ಲ. ವರ್ಷದಲ್ಲಿ ಕನಿಷ್ಠ ಎರಡು ಮೂರು ಸಲ ಈ ಗಾಳಿ ಮಾತುಗಳು ಕೇಳಿ ಬರುತ್ತೆ. ನಿಜಕ್ಕೂ ನಾನು ಪ್ರಗ್ನೆಂಟ್ ಅದಾಗ ಯಾರೂ ನಂಬಲ್ಲ ಅನ್ಸುತ್ತೆ. ನಾನು ಪ್ರೆಗ್ನೆಂಟ್ ಆದಾಗ ನಾನೇ ಅನೌನ್ಸ್ ಮಾಡ್ತೀನಿ' ಎಂದಿದ್ದರು.
ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೊಂದು ಪೋಸ್ಟ್ ಹಾಕುವ ನಿವೇದಿತಾ; ಪೆಕ್ರು ಪೆಕ್ರು ಥರ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು
ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುವ ನಿವಿ ಪೋಸ್ಟ್‌ಗೆ ನೆಗೆಟಿವ್ ಕಾಮೆಂಟ್ ಹೆಚ್ಚಿಗೆ ಬರುತ್ತದೆ. ''ಪ್ರತಿಯೊಬ್ಬರ ಕಾಮೆಂಟ್‌ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತೇನು ಇಲ್ಲ ಆದರೆ ಇದೆಲ್ಲಾ ಒಂದು ರೀತಿ ವಿಚಿತ್ರವಾಗಿದೆ ಜನರಿಗೆ ಬೇಸಿಕ್ ಕಾಮನ್‌ಸೆನ್ಸ್ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರುತ್ತಾರೆ ಅವರಿಗೆ ಹಣ ಕೊಟ್ಟರೆ ಕ್ಲಿಕ್ ಮಾಡುತ್ತಾರೆ. ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ. ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡಿದ್ದರೆ ತಪ್ಪಲ್ಲ ಆದರೆ ಹುಡುಗಿ ಪ್ರವಾಸ ಮಾಡಿದ್ದರೆ ಮಾತ್ರ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ? ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ ದುಡಿಯುತ್ತಿರುವೆ ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಪತಿ ದುಡ್ಡು ವೇಸ್ಟ್ ಮಾಡುತ್ತಿರುವೆ ಎಂದು ಕಾಮೆಂಟ್ ಮಾಡುತ್ತಿರುವವರಿಗೆ ಒಂದು ಪ್ರಶ್ನೆ..ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ? ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್ ಸೆಟ್ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ಪತಿ ಹಣ ಖರ್ಚು ಮಾಡಿದ್ದರು ನಿಮಗೆ ಏನು ಸಮಸ್ಯೆ? ಇದು ನಿಮಗೆ ಸಂಬಂಧಿಸಿ ವಿಚಾರವಲ್ಲ' ಎಂದಿದ್ದಾರೆ ನಿವಿ.