ಕಲರ್ಸ್ ಕನ್ನಡದಲ್ಲಿ ಎರಡೆರಡು ಹೊಸ ಸೀರಿಯಲ್ಸ್, ಗಿಣಿರಾಮನೂ ಮುಗಿಯುತ್ತಾ?

Published : May 17, 2023, 01:17 PM IST
ಕಲರ್ಸ್ ಕನ್ನಡದಲ್ಲಿ ಎರಡೆರಡು ಹೊಸ ಸೀರಿಯಲ್ಸ್, ಗಿಣಿರಾಮನೂ ಮುಗಿಯುತ್ತಾ?

ಸಾರಾಂಶ

ಸಾಲು ಸಾಲು ಸೀರಿಯಲ್ ಗಳು ವೈಂಡ್‌ಅಪ್ ಆಗ್ತಿವೆ. ಆ ಸಾಲಿಗೆ ಗಿಣಿರಾಮನೂ ಸೇರ್ತಿದೆಯಂತೆ. ಯಾಕೆ ಈ ಸಡನ್ ಮುಕ್ತಾಯ?

ಗಿಣಿರಾಮ ಎಂಬ Kannada ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದೆ. ಇದೀಗ ಆ ಸೀರಿಯಲ್ ವೈಂಡ್‌ಅಪ್ ಆಗ್ತಿದೆ ಅನ್ನೋದು ಲೇಟೆಸ್ಟ್ ಸುದ್ದಿ. ಹಾಗೆ ನೋಡಿದರೆ ಇದು ಕಿರುತೆರೆಯಲ್ಲಿ ಕ್ಲೀನಿಂಗ್ ಟೈಮ್ ಏನೋ. ಟಿಆರ್ ಪಿ ಇಲ್ಲದ ಹಳೆಯ ಸೀರಿಯಲ್‌ಗಳನ್ನಲ್ಲ ಗುಡಿಸಿ ಚೊಕ್ಕ ಮಾಡಿ ಹೊಸ ಸೀರಿಯಲ್‌ಗಳನ್ನು ರಂಗೋಲೆ ಹಾಕಿ ವೆಲ್‌ ಕಂ ಮಾಡೋ ಟೈಮ್‌ ಇದು ಅಂತಿದ್ದಾರೆ ವೀಕ್ಷಕರು. ಒಂದು ಕಡೆ ನಾಲ್ಕು ವರ್ಷಗಳಿಂದ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಜೊತೆ ಜೊತೆಯಲಿ ವೈಂಡ್‌ಅಪ್ ಆಗ್ತಿದೆ. ಅದರ ಜೊತೆಗೆ ವೈಂಡ್‌ ಅಪ್‌ ಆಗಲು ಕೌಂಟ್‌ಡೌನ್ ಶುರು ಮಾಡಿರೋ ಇನ್ನೊಂದು ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಗಿಣಿರಾಮ. ಕಿರುತೆರೆ ವೀಕ್ಷಕರು ಜನಪ್ರಿಯ ಧಾರಾವಾಹಿಗಳು ಹೀಗೆ ಒಂದರ ಹಿಂದೊಂದು ಎಂಡ್ ಆಗುತ್ತಿರೋ ಶಾಕಿಂಗ್ ಸುದ್ದಿಯನ್ನು ಅರಗಿಸಿಕೊಳ್ಳಬೇಕಿದೆ. ಗಿಣಿರಾಮ ಸೀರಿಯಲ್ ಕೂಡ ಇದೀಗ ಕೊನೆಯಾಗೋ ಹಂತದಲ್ಲಿದೆ. ಇದಕ್ಕೆ ಒಂದು ಕಾರಣವೂ ಇದೆ.

ಗಿಣಿರಾಮ ಉತ್ತರ ಕರ್ನಾಟಕ ಭಾಷೆಯಲ್ಲಿ ಪ್ರಸಾರ ಆಗ್ತಿದ್ದ ಸೀರಿಯಲ್. ಈಗಾಗಲೇ ಧಾರಾವಾಹಿ ತಂಡ ಕ್ಲೈಮ್ಯಾಕ್ಸ್ ಸಂಚಿಕೆಯ ಶೂಟಿಂಗ್ ನ ತಯಾರಿಯಲ್ಲಿದ್ದು ಈ ಧಾರಾವಾಹಿ ಆದಷ್ಟು ಬೇಗ ಮುಕ್ತಾಯಗೊಳ್ಳಲಿದೆ. ಅಷ್ಟಕ್ಕೂ ಸಡನ್ ಆಗಿ ಈಗ ಈ ಸೀರಿಯಲ್ ಕೊನೆಗೊಳ್ಳಲು ಏನು ಕಾರಣ ಅಂದರೆ ಉತ್ತರ ಬಹಳ ಸಿಂಪಲ್. ಟಿಆರ್ ಪಿ. ಹೌದು, ಸೀರಿಯಲ್‌ಗಳ ಅಳಿವು ಉಳಿವಿನಲ್ಲಿ ಬಹುಮುಖ್ಯ ಪಾತ್ರ ವಹಿಸೋದು ಟಿಆರ್‌ಪಿ ಅನ್ನೋ ಮಾನದಂಡ. ಎಲ್ಲ ಲೆಕ್ಕಾಚಾರಗಳನ್ನು ತಲೆ ಕೆಳಕಾಗಿಸಿ ಟಿಆರ್‌ಪಿ ಬೇಸ್‌ ಮೇಲೆ ಸಿರಿಯಲ್‌ ಉಳಿಯಬೇಕೋ ಕಿತ್ತೆಸೆಯಬೇಕೋ ಅನ್ನೋದು ಡಿಸೈಡ್ ಆಗುತ್ತೆ.

ಈ ಶುಕ್ರವಾರವೇ ಜೊತೆ ಜೊತೆಯಲಿ ವೈಂಡ್‌ಅಪ್, ಮೇಘಾ ಶೆಟ್ಟಿ ಈ ಬಗ್ಗೆ ಏನಂತಾರೆ?

ಇದೀಗ ಟಿಆರ್‌ಪಿ ಕಾರಣಕ್ಕೆ ಕೊನೆಯಾಗ್ತಿರೋ ಸೀರಿಯಲ್ ಗಿಣಿರಾಮ. ಆದರೆ ಈ ಬಗ್ಗೆ ಚಾನೆಲ್‌ನಿಂದ, ಸೀರಿಯಲ್ ಟೀಮ್‌ನಿಂದ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. 'ಗಿಣಿರಾಮ' 'ಮರಾಠಿ' ಧಾರಾವಾಹಿಯೊಂದರ ರಿಮೇಕ್ . ಕನ್ನಡದ ನೇಟಿವಿಟಿಗೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡು ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು. ಆಗಸ್ಟ್ 17, 2020ರಂದು 'ಗಿಣಿರಾಮ' ತನ್ನ ಪಯಣ ಶುರು ಮಾಡಿತ್ತು. ಈಗ' ಗಿಣಿರಾಮ'ನಿಗೆ ಇದೀಗ ಮೂರರ ಹರೆಯ. ಈ ಧಾರಾವಾಹಿಯಲ್ಲಿ ಕನ್ನಡತನ ಎದ್ದು ಕಾಣುತ್ತಿತ್ತು. ಉತ್ತರ ಕರ್ನಾಟಕದ ಭಾಷೆಯ ಈ ಸೀರಿಯಲ್ ಮನರಂಜನೆ ನೀಡೋದ್ರಲ್ಲೇನೋ ಹಿಂದೆ ಬಿದ್ದಿರಲಿಲ್ಲ. ಹೀಗಾಗಿ ಈಗಾಗಲೇ ಯಶಸ್ವಿಯಾಗಿ 740 ಸಂಚಿಕೆ ಪೂರೈಸಿದೆ.

ಆದರೆ ಕ್ರಮೇಣ 'ಗಿಣಿರಾಮ' ಧಾರಾವಾಹಿಯು TRP ಕಡಿಮೆಯಾಗುತ್ತಿದೆ. ಈ ಕಾರಣದಿಂದಾಗಿ ಇನ್ನು ಮುಂದೆ ತನ್ನ ಪ್ರಸಾರ ನಿಲ್ಲಿಸುತ್ತಿದೆ ಎನ್ನಲಾಗಿದೆ. ಇದರಲ್ಲಿ ಉತ್ತರ ಕರ್ನಾಟಕ ಭಾಗದ ಹುಡುಗ ಹುಡುಗಿ ಪ್ರೇಮದ ಕಥೆಯ (Love Story) ಜೊತೆಗೆ ಅಲ್ಲಿನ ಪಾಳೇಗಾರಿಕೆ, ಅಧಿಕಾರಕ್ಕಾಗಿನ ಹೊಡೆದಾಟಗಳನ್ನು ಸೀರಿಯಲ್‌ನಲ್ಲಿ ತರಲಾಗಿದೆ. ಬೇರೆಯವರು ಮಾಡಿದ ಮೋಸಕ್ಕೆ ಒಳಗಾಗಿ ನಾಯಕಿ ಮಹತಿ ಮದುವೆಯಾಗಬೇಕಿದ್ದ ಹುಡುಗ ಸಾವನ್ನಪ್ಪುತ್ತಾನೆ. ಮೊಟ್ಟ ಮೊದಲಿನಿಂದಲೂ ತಾನು ದ್ವೇಷಿಸುತ್ತಿದ್ದ ನಾಯಕ ಶಿವರಾಮ್‌ನಿಂದ ತಾಳಿ ಕಟ್ಟಿಸಿಕೊಳ್ಳುವ ಪರಿಸ್ಥಿತಿ ಮಹತಿಗೆ ಬರುತ್ತದೆ. ಇಷ್ಟವಿಲ್ಲದೆ ಅವರಿಬ್ಬರೂ ಒಂದಾಗುತ್ತಾರೆ. ಮುಂದೆ ಮಹತಿ ಹಾಗೂ ಶಿವರಾಮ್ ಅವರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಯಾಗಿ ಬದಲಾಗುತ್ತದೆ. ತಾನು ದೇವರಕ್ಕಿಂತಲೂ ಜಾಸ್ತಿ ಎಂದೇ ಭಾವಿಸುತ್ತಿದ್ದ ಆಯಿ ಸಾಹೇಬ್‌ಳ ಕರಾಳ ಮುಖವನ್ನು ಕೂಡಾ ಮಹತಿ ಪರಿಚಯಿಸುತ್ತಾಳೆ. ಇದೀಗ ಧಾರಾವಾಹಿ ಮುಗಿಯುವ ಹಂತಕ್ಕೆ (windup) ಬಂದಿದ್ದು ಆಯಿಸಾಹೇಬರ ಮಗಳು ಮಹತಿ ಎಂಬ ಸುದ್ದಿ ಹೊರಬರಲಿದೆ. ಅಲ್ಲಿಗೆ ಸೀರಿಯಲ್(serial) ಕೊನೆಯಾಗಲಿದೆ.

Hitler Kalyana serial : ಮುಗ್ಧ ಲೀಲಾ ಕೊಲೆಯಾಗ್ತಾಳಾ? ಎತ್ತ ಸಾಗುತ್ತೆ ಸೀರಿಯಲ್?

ಈ ಸೀರಿಯಲ್ ಜಾಗದಲ್ಲಿ ಮತ್ಯಾವ ಸೀರಿಯಲ್ ಬರುತ್ತಿದೆ ಅಂತ ವೀಕ್ಷಕರು ಎದುರು ನೋಡುವಂತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್