ಸೀರಿಯಲ್‌ನಲ್ಲಿ ನಟಿಯರಿಗೆ ತುಂಬಾ ಕಾಂಪಿಟೇಷನ್ ಇದೆ; ನಾವೇ ಬದುಕು ಕಟ್ಟಿಕೊಳ್ಳಬೇಕು ಎಂದ 'ಹಿಟ್ಲರ್ ಕಲ್ಯಾಣ' ರಜಿನಿ!

Published : Jul 17, 2023, 10:10 AM ISTUpdated : Jul 17, 2023, 10:44 AM IST
ಸೀರಿಯಲ್‌ನಲ್ಲಿ ನಟಿಯರಿಗೆ ತುಂಬಾ ಕಾಂಪಿಟೇಷನ್ ಇದೆ; ನಾವೇ ಬದುಕು ಕಟ್ಟಿಕೊಳ್ಳಬೇಕು ಎಂದ 'ಹಿಟ್ಲರ್ ಕಲ್ಯಾಣ' ರಜಿನಿ!

ಸಾರಾಂಶ

ಶುಭಾ ಪುಂಜಾ ಮತ್ತು ರಜಿನಿ ಜೋಡಿಯಾಗಿ ನಟಿಸಿರುವ ಅಂಜುಬಾ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾ ಪ್ರಚಾರದ ವೇಳೆ ಸೀರಿಯಲ್‌ ಮತ್ತು ಸಿನಿಮಾ ವ್ಯತ್ಯಾಸ ಹೇಳಿದ ನಟಿ.... 

ಕನ್ನಡ ಕಿರುತೆರೆ ಜನಪ್ರಿಯ ಧಾರಾವಾಹಿ ಅಮೃತಾವರ್ಷಿಯಲ್ಲಿ ಹೆಸರು ಕೇಳಿದಾಗ ಮೊದಲು ನೆನಪಾಗುವುದು ನಟಿ ರಜಿನಿ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಮೃತಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಶುಭಾ ಪೂಂಜಾ ಜೊತೆ ಅಂಬುಜಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು ಪ್ರಸಾರದಲ್ಲಿ ಬ್ಯುಸಿಯಾಗಿರುವ ನಟಿ ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದರೂ ಸಿನಿಮಾ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಹಾಗೂ ಸೀರಿಯಲ್ ಮತ್ತು ಸಿನಿಮಾ ನಡುವೆ ಇರುವ ವ್ಯತ್ಯಾಸವೇನು? ಎಂದು ವಿವರಿಸಿದ್ದಾರೆ. 

'ಸೀರಿಯಲ್‌ನಲ್ಲಿ ನಾನು ಅಳುತ್ತಿದ್ದೆ ಎಂದು ನಿಜ ಜೀನದಲ್ಲೂ ನಾನು ಹಾಗೆ ಇರುವುದು ಎಂದು ಜನರು ಅಂದುಕೊಂಡಿದ್ದರು. ಅಳುತ್ತಲೇ ಇರುತ್ತಾಳೆ ಮೂರು ಹೊತ್ತು ಮಾಡೋಕೆ ಕೆಲಸನೇ ಇಲ್ಲ ಅನ್ನೋ ತರ ಜನರಿಗೆ ರೀಚ್ ಆಗಿತ್ತು. ಸೀರಿಲ್‌ಗಳಿಂದ ಬ್ರೇಕ್ ತೆಗೆದುಕೊಂಡು ಮಜಾ ಟಾಕೀಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದಾಗ ಜನರಿಗೆ ನನ್ನ ರಿಯಲ್ ವ್ಯಕ್ತಿತ್ವ ತಿಳಿಯಿತ್ತು ಅದರಿಂದ ನನ್ನ ಹೊಸ ಸಿನಿಮಾ ಅಂಬುಜಾದಲ್ಲಿ ಆ ಭಾವನೆಗಳು ಕ್ಯಾರಿ ಆಗಿದೆ' ಎಂದು ಖಾಸಗಿ ಕನ್ನಡ ಯುಟ್ಯೂಬ್ ಚಾನೆಲ್‌ನಲ್ಲಿ ರಜಿನಿ ಮಾತನಾಡಿದ್ದಾರೆ. 

ಚಂದನ್ ಹೆಂಡ್ತಿಗೆ ದೊಡ್ಡ ಬಟ್ಟೆ ಕೊಡ್ಸಪ್ಪ; ನಿವೇದಿತಾ ಡ್ಯಾನ್ಸ್‌ ವಿಡಿಯೋಗೆ ಹರಿದು ಬಂತು ಕಾಮೆಂಟ್ಸ್‌!

'ನನ್ನ ತಲೆಯಲ್ಲಿ ಸಿನಿಮಾ ಅನ್ನೋದು ಇರಲಿಲ್ಲ ಸೀರಿಯಲ್‌ನಲ್ಲಿ ಕಂಫರ್ಟ್ ಇತ್ತು ಆರಾಮ್‌ ಆಗಿ ತಿಂಗಳಲ್ಲಿ 20 ದಿನ ಶೂಟಿಂಗ್‌ ಇರುತ್ತೆ ಆಮೇಲೆ ನಾಲ್ಕೈದು ವರ್ಷ ನಡೆಯುತ್ತೆ ಹೀಗಾಗಿ ತಲೆ ಬಿಸಿ ಇಲ್ಲ . ಹೊಸ ಸಿನಿಮಾ ಬಂದಾಗ ಆ ತಂಡದ ಜೊತೆ ತುಂಬಾ ಕೆಲಸ ಇರುತ್ತೆ. ಅಮೃತಾವರ್ಷಿಣಿ ಧಾರಾವಾಹಿ ಸಮಯದಲಗಲಿ ತುಂಬಾ ಒಳ್ಳೆ ಸಿನಿಮಾಗಳ ಆಫರ್‌ ಬಂದಿತ್ತು ಆದರೆ ಆ ಸಮಯಲ್ಲಿ ನಟಿಸಲು ಆಗಲಿಲ್ಲ. ಹಿಟ್ಲರ್ ಕಲ್ಯಾಣ ಧಾರಾವಾಹಿಯಿಂದ ಹೊರ ಬಂದು ಏನಾದರೂ ಪ್ರಯತ್ನ ಮಾಡೋಣ ಅಂತ ಯೋಚನೆ ಮಾಡಿದಾಗ ಅಂಬುಜಾ ಸಿನಿಮಾ ಆಫರ್ ಬಂತ್ತು' ಎಂದು ರಜಿನಿ ಹೇಳಿದ್ದಾರೆ. 

ಫೇಸ್‌ಬುಕ್‌ನಲ್ಲಿ ಬೆತ್ತಲೆ ಫೋಟೋ; ಗರ್ಭಿಣಿ ಎಂದು ದೂರಿದ ಪೋಷಕರು, ಪರಿಹಾರ ಕೊಟ್ಟ ಜ್ಯೋತಿಷಿಯಿಂದ ಸಮಸ್ಯೆ!

'ಈಗ ಸೀರಿಯಲ್ ಮಾಡಿದರೆ ಒಂದು ಸಿನಿಮಾ ಮಾಡಿದ ಲೆಕ್ಕದ ಹಾಗೆ. ಸಿನಿಮಾನಾ ಸೀರಿಯಲಾ ಅಂತ ವ್ಯತ್ಯಾಸ ಹೇಳುವುದಕ್ಕೆ ಆಗಲ್ಲ ಸೆಟ್‌ ಅಷ್ಟು ಅದ್ಭುತವಾಗಿರುತ್ತದೆ ಹಾಗೆ ಸಿನಿಮಾ ರೀತಿ ಸೀರಿಯಲ್‌ನಲ್ಲಿ 70-80ಲಕ್ಷ ಹಣ ಖರ್ಚು ಮಾಡಿರುತ್ತಾರೆ. ಸಿನಿಮಾದಲ್ಲಿ ಇರುವಷ್ಟು ಕಾಂಪಿಟೇಷನ್‌ ಸೀರಿಯಲ್‌ ಲೋಕದಲ್ಲೂ ಇದೆ. ನಟಿಯರಿಗೆ ತುಂಬಾ ಕಾಂಪಿಟೇಷನ್‌ ಇರುತ್ತದೆ ಕೆಲವರು ಪ್ಯಾಷನ್‌ನಿಂದ ಬರುತ್ತಾರೆ ಆದರೆ ಕೆಲವರು ಇದ್ದನೇ ದುಡಿಮೆ ಮಾಡಿಕೊಳ್ಳಬೇಕು ಎಂದು ಬರುತ್ತಾರೆ. ಸೀರಿಯಲ್‌ನಲ್ಲಿ ನಾನು ಆಗ ಇದ್ದಿದ್ದಕ್ಕೂ ಈಗ ಇರುವುದಕ್ಕೂ ತುಂಬಾ ಬದಲಾಗಿರುವೆ. ಇಂಡಸ್ಟ್ರಿಗೆ ಕಾಲಿಟ್ಟಾಗ ನಾನು ಮೊದಲು ಕಲಿತ ಪಾಠವೇ ಸಮಯ ಪ್ರಜ್ಞೆ ಯಾರು ಬರಲಿ ಬಿಡಲಿ ನಾನು ಮೊದಲು ಸೆಟ್‌ಗೆ ಬಂದು ರೆಡಿಯಾಗಿ ನಿಂತಿರುವೆ' ಎಂದಿದ್ದಾರೆ ರಜಿನಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Cucumber-Sugar ತಿಂದ್ರೆ ಕಲ್ಲಂಗಡಿ ಟೇಸ್ಟ್, ಸೆಟ್ ನಲ್ಲಿ ರಾಘು ಮೇಲೆ ಝಾನ್ಸಿ ಪ್ರಯೋಗ
ಗಿಲ್ಲಿ- ಕಾವ್ಯಾ ಜೋಡಿ ಜಟಾಪಟಿಗೆ ರಿಯಲ್ ರೀಸನ್ ಏನು? ಸೋಷಿಯಲ್ ಮೀಡಿಯಾ ಏನ್ ಹೇಳ್ತಿದೆ?