Sumona Chakravarti: ನನ್ನ ತುಟಿಗಳ ಕುರಿತು ಕಪಿಲ್​ ಶರ್ಮಾ ಅಸಹ್ಯ ಮಾತನಾಡಿದರು ಎನ್ನುತ್ತಾ ಭಾವುಕರಾದ ನಟಿ

Published : Jul 15, 2023, 07:20 PM IST
Sumona Chakravarti: ನನ್ನ ತುಟಿಗಳ ಕುರಿತು ಕಪಿಲ್​ ಶರ್ಮಾ ಅಸಹ್ಯ ಮಾತನಾಡಿದರು ಎನ್ನುತ್ತಾ ಭಾವುಕರಾದ ನಟಿ

ಸಾರಾಂಶ

ದಿ ಕಪಿಲ್​ ಶರ್ಮಾ ಷೋನಲ್ಲಿ ತಮ್ಮ ತುಟಿಯ ಬಗ್ಗೆ ಕಪಿಲ್​ ಅವರು ಮಾತನಾಡಿ ಅವಮಾನ ಮಾಡಿರುವ ದಿನಗಳನ್ನು ನೆನೆದಿದ್ದಾರೆ ನಟಿ ಸುಮೋನಾ ಚಕ್ರವರ್ತಿ  

ನಟಿ ಸುಮೋನಾ ಚಕ್ರವರ್ತಿ (Sumona Chakravarti) ಟಿವಿ ಉದ್ಯಮದ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಕಪಿಲ್ ಶರ್ಮಾ ಎಂಬ ಕಾಮಿಡಿ ಷೋನಲ್ಲಿ ಕಪಿಲ್ ಶರ್ಮಾ ಅವರ ಪತ್ನಿ ಪಾತ್ರದಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಅವರು ದೀರ್ಘಕಾಲದವರೆಗೆ ಷೋನಲ್ಲಿ ನಟಿಸಿದ್ದಾರೆ. ಆದರೆ ಅದೊಮ್ಮೆ ತಾವು ಕಪಿಲ್​ ಅವರ  ಹಾಸ್ಯಕ್ಕೆ ಗುರಿಯಾಗಿ ಅವಮಾನ ಎದುರಿಸಿರುವ ಕುರಿತು ಈ ಬಹಿರಂಗಪಡಿಸಿದ್ದಾರೆ.  ಈ ಷೋನಲ್ಲಿ ಕಪಿಲ್ ಮತ್ತು ಸುಮೋನಾ ದಂಪತಿಯಾಗಿ ಆ್ಯಕ್ಟ್​ ಮಾಡಿದ್ದರು. ಅಷ್ಟಕ್ಕೂ ಸುಮೋನಾ ಮತ್ತು ಕಪಿಲ್ ಉತ್ತಮ ಸ್ನೇಹಿತರೇ. ಆದರೆ ಅದೊಮ್ಮೆ ತಮ್ಮ  ಬಾಯಿ ಮತ್ತು ತುಟಿಗಳ ಬಗ್ಗೆ ಕಪಿಲ್​ ಅವರು ಮಾತನಾಡಿ ಬಾಡಿ ಷೇಮಿಂಗ್​  ಮಾಡಿದ್ದರ ಬಗ್ಗೆ ಈಗ ಸಮೋನಾ ಅಸಮಾಧಾನ ಹೊರಹಾಕಿದ್ದಾರೆ. ಅವರು  ತಮಾಷೆ ಮಾಡುವ ಮೂಲಕ ತಮ್ಮ  ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು  ಎಂದು ಸುಮೋನಾ ಹೇಳಿದ್ದಾರೆ. 

ಈ ಷೋದ ಶೂಟಿಂಗ್​ ವೇಳೆ ಸುಮೋನಾ ಅವರು ತಮ್ಮ  ಮಾತನಾಡುವ ಸಾಲುಗಳನ್ನು ಮರೆತಿದ್ದರಂತೆ. ಆ ಸಮಯದಲ್ಲಿ  ಕಪಿಲ್ ಶರ್ಮಾ (The Kapil Sharma Show) ಅವರು ಸುಮೋನಾ ಅವರ ತುಟಿಗಳ ಮೇಲೆ ತಮಾಷೆ ಮಾಡಿರುವುದಾಗಿ ನಟಿ ಆರೋಪಿಸಿದ್ದಾರೆ. ಈ ಘಟನೆಯ ಬಳಿಕ ನನಗೆ ತೀವ್ರ ಅವಮಾನವಾಗಿ ಕುಸಿದು ಹೋದೆ. ಘಟನೆಯ ನಂತರ ಅರ್ಚನಾ ಪುರಣ್ ಸಿಂಗ್ ಅವರು ತಮ್ಮ  ಕೂರಿಸಿ ಸಮಾಧಾನಪಡಿಸಿದರು. ಆದರೂ ನನ್ನ ನೋವು ಕಡಿಮೆ ಆಗಿರಲಿಲ್ಲ ಎಂದು ಸುಮೋನಾ ಹೇಳಿದ್ದಾರೆ.  

Shweta Tiwari ಪ್ಯಾಂಟ್​ಲೆಸ್​ ಫೋಟೋ ಶೇರ್​: ತೊಡೆ ನೋಡಿ ಆ್ಯಕ್ಸಿಡೆಂಟ್​ ಆಗೋಯ್ತು ಎಂದ ಫ್ಯಾನ್​!

ದಿ ಹ್ಯಾಬಿಟ್ ಕೋಚ್‌ಗೆ ನೀಡಿದ ಸಂದರ್ಶನದಲ್ಲಿ, ಸುಮೋನಾ ಹಿಂದಿನ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.  'ಆರಂಭಿಕ ದಿನಗಳು ಸ್ವಲ್ಪ ಸವಾಲಾಗಿತ್ತು. ನನಗೆ ನಟನೆ ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ನಾನು ಹೇಳಬೇಕಿರುವ ವಾಕ್ಯಗಳನ್ನು ಮರೆತಿದ್ದೆ. ಆಗ ಕಪಿಲ್​ ಅವರು ನನ್ನ ಬಾಯಿ ಮತ್ತು ತುಟಿಗಳನ್ನು ಗೇಲಿ ಮಾಡಿದರು.  ಅವರು ನನ್ನ ಬಾಯಿಯಲ್ಲಿ ಹಾಸ್ಯವನ್ನು ಸಿಡಿಸಲು ಮೊದಲ ಸಂಚಿಕೆಯಲ್ಲಿ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಿರಲಿಲ್ಲ.  ನಂತರ ಅವರು ಅದನ್ನು ಕೈಬಿಟ್ಟರು. ಆದರೆ ನನ್ನ ತುಟಿ ಮತ್ತು ಬಾಯಿಗೆ ಅಪಹಾಸ್ಯ ಮಾಡಿದರು. ಆದರೆ ನಂತರದ ಸಂಚಿಕೆಗಳಲ್ಲಿ ನಾನು ಹಾಸ್ಯ ಮಾಡುವುದನ್ನು ಕಲಿತೆ. ಆದರೆ ಈ ಅವಮಾನ ಮತ್ತು ಕೆಟ್ಟ ಅನುಭವ ಮಾತ್ರ ಇದುವರೆಗೆ ಮರೆತಿಲ್ಲ ಎಂದಿದ್ದಾರೆ.  
 
ತಾವು ಹಾಸ್ಯ ಮಾಡಲು ಸೋತಾಗ ಅವರು ನಾನು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅಲ್ಲ. ನಾನು ಅಂತಹ ತಮಾಷೆಯ ಹಾಸ್ಯಗಳೊಂದಿಗೆ ಬರಲು ಸಾಧ್ಯವಿಲ್ಲ ಎನ್ನುವುದನ್ನೂ ನೋಡಲಿಲ್ಲ.  ನಾನು ತಮಾಷೆ ಮಾಡಿದರೆ, ಯಾರೂ ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನನಗೆ ಅರಿವಿತ್ತು. ಆದ್ದರಿಂದ ಅದನ್ನು ಕಲಿಯಲು ಸ್ವಲ್ಪ ಸಮಯ ತೆಗೆದುಕೊಂಡೆ. ಆದರೆ ಅಷ್ಟರಲ್ಲಿಯೇ ಕಪಿಲ್​ ಅವರು ನನ್ನನ್ನು ಹಾಸ್ಯ ಮಾಡಿದ್ದರು ಎಂದಿದ್ದಾರೆ.  'ಯಾರಾದರೂ ನಿಮ್ಮನ್ನು ನೋಡಿ ನಗುತ್ತಿದ್ದರೆ, ಅದು ಅವಮಾನ ಆಗುತ್ತದೆ. ಅದೂ ನನ್ನ  ತುಟಿ ಅಥವಾ ಬಾಯಿಯ ಬಗ್ಗೆ ಅಸಹ್ಯ ಕಮೆಂಟ್​ ಮಾಡಿದ್ದಾರೆ. ಇದನ್ನು ನಾನು ಜೀವನ ಪೂರ್ತಿ ಮರೆಯುವುದಿಲ್ಲ ಎಂದಿದ್ದಾರೆ ಸುಮೋನಾ. 

Ganavi Lakshman: ತೆಲಗುವಿನ ರುದ್ರಂಗಿಯಲ್ಲಿ 'ಮಗಳು ಜಾನಕಿ': ವಿಡಿಯೋ ಶೇರ್​ ಮಾಡಿದ ನಟಿ

ಕಪಿಲ್ ಶರ್ಮಾ ಅವರೊಂದಿಗೆ ತೆರೆಮರೆಯಲ್ಲಿ ಎಲ್ಲವೂ ಮೋಜು ಮತ್ತು ಆಟವಾಗಿರುತ್ತದೆ. ಆದರೆ ಅವರಿಗೆ ಎಲ್ಲವೂ ಹಾಸ್ಯವಾಗಿಯೇ ಕಾಣುವುದು ದುರದೃಷ್ಟಕರ. ಏನೂ ಸಿಗದಾಗ ಅವರು ನನ್ನ ಶರೀರದ ಭಾಗವನ್ನು ಗೇಲಿ ಮಾಡಿದ್ದರು.  ಇದು  ಸ್ತ್ರೀದ್ವೇಷವನ್ನು ತೋರಿಸುತ್ತದೆ.   ನಾನು ಸಭ್ಯವಾಗಿ ಕಾಣುವ ಹುಡುಗಿ. ನನಗೆ ಒಳ್ಳೆಯ ಬಾಯಿ ಇದೆ. ಆದರೆ ಅವರು ಈ ರೀತಿ ಕಮೆಂಟ್ (Comment)​ ಮಾಡಿರುವ ಬಗ್ಗೆ ಎಲ್ಲರೂ ಆಡಿಕೊಳ್ಳುವಂತಾಗಿದೆ ಎಂದು ಭಾವುಕರಾದರು ಸುಮೋನಾ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ