
ಕಳೆದ ಕೆಲವು ದಿನಗಳಿಂದ ಬಾರ್ಬಿ ಡಾಲ್ ನಿವೇದಿತಾ ಗೌಡ ಸಕತ್ ಸುದ್ದಿಯಲ್ಲಿದ್ದಾರೆ. ನಟಿ ಏನೇ ಮಾಡಿದ್ರೂ ಅದು ಸುದ್ದಿಯಾಗ್ತಿದೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್ಗಳ ಸುರಿಮಳೆಯೇ ಆಗುತ್ತದೆ. ಈ ಚಂದನವನದಲ್ಲಿ ನಟಿ ನಿವೇದಿತಾ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್ ಆಗಿದ್ದಾರೆ. ಇತ್ತೀಚೆಗಷ್ಟೇ ನೀರಿನ ಒಳಗೆ ಈ ಜೋಡಿ ರೊಮ್ಯಾಂಟಿಕ್ ಆಗಿ ಕಾಲ ಕಳೆದು ಅದರ ವಿಡಿಯೋ ಶೇರ್ ಮಾಡಿದ್ದರು. ಇದಕ್ಕೆ ಲಕ್ಷಾಂತರ ಮಂದಿ ಲೈಕ್ಸ್ ಮಾಡಿದ್ದರು. ಗಂಡ-ಹೆಂಡತಿ ನಡುವಿನ ರೊಮ್ಯಾನ್ಸ್ ಖಾಸಗಿಯಾಗಿ ಇರಬೇಕು, ಇದನ್ನೆಲ್ಲ ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರೂ ಈ ಜೋಡಿಯ ಫ್ಯಾನ್ಸ್ ಅಂತೂ ಫಿದಾ ಆಗಿದ್ದರು. ಇದರ ಬೆನ್ನಲ್ಲೇ ನಟಿ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕಾರಣಕ್ಕೆ ನಿವೇದಿತಾ ಗೌಡ (Niveditha Gowda) ಹೆಚ್ಚಾಗಿ ರೀಲ್ಸ್ ಮಾಡಿ ಫ್ಯಾನ್ಸ್ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಕಲರ್ಫುಲ್ ಫೋಟೋಶೂಟ್ ಮಾಡಿಸಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಕೆಲವೊಮ್ಮೆ ಚಿತ್ರ ವಿಚಿತ್ರ ರೀಲ್ಸ್ಗಳಿಂದ ಟ್ರೋಲ್ ಆಗುವುದೂ ಇದೆ. ಆದರೆ ಗೊಂಬೆ ಎಂದೇ ಕರೆಸಿಕೊಳ್ಳುವ ನಿವೇದಿತಾ ಅವರಿಗೆ ಅಪಾರ ಪ್ರಮಾಣದ ಫ್ಯಾನ್ಸ್ ಇದ್ದು ಸದಾ ತಮ್ಮ ನೆಚ್ಚಿನ ನಟಿ ಏನು ಶೇರ್ ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ. ಒಳ್ಳೆಯ ಕಮೆಂಟ್ಸ್ ಮಾಡುವ ನೆಟ್ಟಿಗರಿಗೆ ಥ್ಯಾಂಕ್ಸ್ ಹೇಳುತ್ತಾ ಟ್ರೋಲ್ಗಳಿಗೆ ತಲೆ ಕೆಡಿಸಿಕೊಳ್ಳದವರಲ್ಲಿ ನಿವೇದಿತಾ ಗೌಡ ಕೂಡ ಒಬ್ಬರು. ಬಿಗ್ ಬಾಸ್ ಬಳಿಕ ಈಗ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ಮೂಲಕ ಮನೆ ಮಾತಾಗಿರುವ ನಟಿ, ವಿಭಿನ್ನ ಸ್ಕಿಟ್‍ಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ.
Viral Video ನೋಡಿ, ಕನ್ನಡ ಅಂದ್ರೆ ಬಾರ್ಬಿ ಡಾಲ್ ನಿವೇದಿತಾಗೆ ಆಗಿ ಬರಲ್ವಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್!
ಇದೀಗ ನಟಿ ನಿವೇದಿತಾ ಪತಿ ಚಂದನ್ ಶೆಟ್ಟಿ ಜೊತೆ ಅಮೆರಿಕ ಟೂರ್ ಎನ್ಜಾಯ್ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅಮೆರಿಕದ ಟೂರ್ನಲ್ಲಿರುವ ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ವಿದೇಶ ಪ್ರಯಾಣದ ಮೂಡ್ನಲ್ಲಿ ಇರುವ ನಿವೇದಿತಾ ಕೆಲ ದಿನಗಳ ಹಿಂದೆ ಅಮೆರಿಕದಲ್ಲಿರುವ ಸೇಂಟ್ ಮೇರಿ ಚರ್ಚ್ಗೆ ಭೇಟಿ ಕೊಟ್ಟಿದ್ದು ಅದರ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ (instagram) ಶೇರ್ ಮಾಡಿಕೊಂಡಿದ್ದರು. ತುಂತುರು ಮಳೆ ಬೀಳುತ್ತಿರುವಾಗ ಹೀಗೊಂದು ವಾಕಿಂಗ್ಗೆ ಬಂದಿರುವುದಾಗಿ ನಿವೇದಿತಾ ಬರೆದುಕೊಂಡಿದ್ದರು. ಅಮೆರಿಕದ ಹವಾಮಾನವನ್ನು ಸಕತ್ ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಅಮೆರಿಕದಲ್ಲಿರುವ ಸೇಂಟ್ ಮೇರಿ ಚರ್ಚ್ಗೆ ಚರ್ಚ್ ಎದುರು ನಿಂತಿರುವ ನೀರಿನಲ್ಲಿ ಹಾರಿ ಚಿಕ್ಕಮಕ್ಕಳಂತೆ ನಿವೇದಿತಾ ಕುಣಿದಾಡಿದ್ದನ್ನು ಕಂಡು ಆಕೆಯ ಅಭಿಮಾನಿಗಳು ಫಿದಾ ಆಗಿದ್ದರು. ಇದಾದ ಬಳಿಕ ಅಮೆರಿಕದ್ದೇ ಇನ್ನೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಸೂರ್ಯನ ಬೆಳಕಿಯನ ಬ್ಯಾಕ್ಗ್ರೌಂಡ್ನಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋ ಇದಾಗಿತ್ತು. ಇದರಲ್ಲಿ ಕೂಡ ನಿವೇದಿತಾ ಸಕತ್ ಕ್ಯೂಟ್ ಆಗಿ ಕಾಣಿಸುತ್ತಿದ್ದರು.
ಇದೀಗ ಪತಿಯ ಜೊತೆ ಅಮೆರಿಕದ ನಯಾಗರ ಫಾಲ್ಸ್ನಲ್ಲಿ (Naigara falls) ಹಾಡೊಂದಕ್ಕೆ ಸಕತ್ ಸ್ಟೆಪ್ ಹಾಕಿದ್ದಾರೆ. ಹಿಂದೆ ನಯಾಗರ್ ಫಾಲ್ಸ್ ಕಾಣಿಸುತ್ತಿದ್ದು, ಅದರ ನೀರು ಇವರ ಮೈಮೇಲೆ ಬೀಳುತ್ತಿದೆ. ಆ ನೀರಿನಲ್ಲಿಯೇ ದಂಪತಿ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರೂ ರೇನ್ಕೋಟ್ ಧರಿಸಿದ್ದಾರೆ. ಆದರೆ ತಲೆ ಎಲ್ಲಾ ಒದ್ದೆ ಮಾಡಿಕೊಂಡು ಡಾನ್ಸ್ ಮಾಡುತ್ತಿರುವ ವಿಡಿಯೋ ಸಕತ್ ವೈರಲ್ ಆಗಿದೆ. ನಮ್ಮ ನೆಚ್ಚಿನ ತಾರೆಯರನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಮಾಮೂಲಿನಂತೆ ಕೆಲವರು ಈ ವಿಡಿಯೋ ನೋಡಿ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಈ ಜೋಡಿ ಮದುವೆಯಾಗಿ ಮೂರು ವರ್ಷ ಆದರೂ ಇನ್ನೂ ಮಕ್ಕಳಾಗಿಲ್ಲ ಎನ್ನುವುದು. ಡಾನ್ಸ್ ಸಾಕು, ಮೊದ್ಲು ಮಕ್ಕಳು ಮಾಡಿಕೊಳ್ಳಿ ಎಂದು ಅಭಿಮಾನಿಯೊಬ್ಬ ಹೇಳಿದ್ದರೆ, ಅದಕ್ಕೆ ಇನ್ನೊಬ್ಬರು ಸಕತ್ ಕಿಡಿ ಕಾರಿದ್ದಾರೆ. ಅದು ಅವರಿಷ್ಟ, ಹೇಳಲು ನೀವ್ಯಾರು ಎಂದು. ಇದು ಒಂದೆಡೆಯಾದರೆ ಸಕ್ಕರೆ ಬೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತ ಫ್ಯಾನ್ ಒಬ್ಬ, ಪ್ಲೀಸ್ ಮಳೆಯಲ್ಲಿ ಹೀಗೆಲ್ಲಾ ನೆನೆಯಬೇಡಿಯಪ್ಪಾ ಸಕ್ಕರೆ ಬೊಂಬೆ, ಕರಗಿ ಹೋಗ್ತಿಯಾ ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋಗೆ ತುಂಬಾ ರೆನ್ಸ್ಪಾನ್ಸ್ ಬರುತ್ತಿದೆ.
ಸಾಯುವ ಭಯದ ಮಾತನಾಡಿ ಅಮೆರಿಕಕ್ಕೆ ಹಾರಿದ ನಟಿ ನಿವೇದಿತಾ ಗೌಡ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.