
ಭಾಗ್ಯಲಕ್ಷ್ಮಿಯ ಬಳಿಯಿದ್ದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ ಗಂಡ ತಾಂಡವ್. ಐದು ತಿಂಗಳು ಮನೆಯ ಇಐಎಂ ಕಟ್ಟದೇ ಎಲ್ಲರನ್ನೂ ಬೀದಿಗೆ ತರುವ ಪ್ಲ್ಯಾನ್ ಮಾಡಿದ್ದ ಆತ. ಅದಕ್ಕಾಗಿ ಭಾಗ್ಯ ಮತ್ತು ಅಪ್ಪ-ಅಮ್ಮನ ಕೈಯಲ್ಲಿ ಬಿಡಿಕಾಸೂ ಇರದಂತೆ ನೋಡಿಕೊಳ್ಳುತ್ತಿದ್ದಾನೆ. ಅಪ್ಪ ಕೂಡಿಟ್ಟ ಹಣವನ್ನೂ ಲಪಟಾಯಿಸಿದ್ದಾನೆ. ಭಾಗ್ಯ ಸೇರಿ ಎಲ್ಲರೂ ಒಡವೆಗಳನ್ನು ಮಾರಿ ಇಐಎಂ ಹಣ ಕಟ್ಟೋಣ ಎಂದುಕೊಂಡು ಎಲ್ಲ ಒಡವೆ ತೆಗೆದಿಟ್ಟಾಗ ಶ್ರೇಷ್ಠಾ ಸಹಿತ ಬಂದಿರುವ ತಾಂಡವ್, ಆ ಒಡವೆಗಳು ನನ್ನ ಹಣದಿಂದ ತಂದಿರುವುದು, ಅವೆಲ್ಲವೂ ಶ್ರೇಷ್ಠಾಳಿಗೆ ಸಿಗಬೇಕು ಎಂದು ಹೇಳಿ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಹಣ ಕಟ್ಟಲು ಯಾವ ದಾರಿಯೂ ಉಳಿದಿಲ್ಲ. ದಿಕ್ಕೇ ತೋಚದ ಭಾಗ್ಯ ಏನಾದರೊಂದು ಮಾಡುವುದಾಗಿ ಹೇಳಿ ಮನೆಬಿಟ್ಟು ಹೊರಟಿದ್ದಾಳೆ. ಒಂದೇ ದಿನ ಅವರಿಗೆ ಇರುವ ಗಡುವು. ಮರುದಿನ ದುಡ್ಡು ಕಟ್ಟಿಲ್ಲದಿದ್ದರೆ ಮನೆ ಖಾಲಿ ಮಾಡಿ ಬೀದಿಗೆ ಬರಬೇಕು. ಇಂಥ ಸಂದರ್ಭದಲ್ಲಿ ಅಡುಗೆ ಮಾಡುವ ಕಾರ್ಯವೊಂದು ಅವಳಿಗೆ ಸಿಕ್ಕಿತು.
ಆದರೆ, ಒಬ್ಬಳೇ ಅಷ್ಟು ಮಂದಿಗೆ ಅಡುಗೆ ಮಾಡಲು ಸಾಧ್ಯವಿಲ್ಲದ ಕಾರಣ, ಅತ್ತೆ ಮತ್ತು ಪೂಜಾಳನ್ನು ಕರೆದುಕೊಂಡು ಬಂದಿದ್ದಳು. ಆದರೆ ಅತ್ತೆಯ ಕಾಲ ಮೇಲೆ ಬಿಸಿನೀರು ಬಿದ್ದು ಆಕೆ ಹಾಸಿಗೆ ಹಿಡಿದಿದ್ದಾಳೆ. ಇದು ಭಾಗ್ಯಳನ್ನು ಮತ್ತಷ್ಟು ಕಂಗೆಡಿಸಿತು. ಅಲ್ಪ ಸಮಯದಲ್ಲಿ ಅಡುಗೆ ಮಾಡುವುದು ಹೇಗೆ ಎನ್ನುವ ಚಿಂತೆ ಮಾಡುತ್ತಿದ್ದಾಗ, ಕಲರ್ಸ್ ಕನ್ನಡದ ಬೇರೆ ಬೇರೆ ಸೀರಿಯಲ್ ನಾಯಕಿಯರು ಭಾಗ್ಯಳಿಗೆ ಸಾಥ್ ಕೊಟ್ಟರು. ಅಡುಗೆ ಮನೆಗೆ ಬಂದ ವಿವಿಧ ಸೀರಿಯಲ್ ನಾಯಕಿಯರು ಭಾಗ್ಯಳಿಗೆ ನಿಗದಿತ ಸಮಯದಲ್ಲಿ ಅಡುಗೆ ಮಾಡಲು ಸಹಾಯ ಮಾಡಿದರು. ಈ ರೀತಿಯಾಗಿ ವಿಭಿನ್ನ ರೀತಿಯಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್ ಅನ್ನು ಚಿತ್ರಿಸಲಾಗಿದೆ.
ಅಬ್ಬಾ! ಬೆಟ್ಟದ ತುದಿಗೆ ಹೋಗಿ ಹೇಗಪ್ಪಾ ಶೂಟಿಂಗ್ ಮಾಡ್ತಾರೆ ಅಂದುಕೊಂಡ್ರಾ? ಅಸಲಿ ವಿಡಿಯೋ ಇಲ್ಲಿದೆ ನೋಡಿ
ಎಲ್ಲಾ ಸೀರಿಯಲ್ ನಾಯಕಿಯರು ಶೂಟಿಂಗ್ಗೆ ಬಂದ ಸಮಯದಲ್ಲಿ ಏನಾಯ್ತು? ಹೇಗೆ ಶೂಟಿಂಗ್ ನಡೆಯಿತು ಎನ್ನುವ ಬಗ್ಗೆ ಭಾಗ್ಯ ಪಾತ್ರದಾರಿ ಸುಷ್ಮಾ ಕೆ.ರಾವ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಭಾಗ್ಯ ಹಲವು ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಭಾಗ್ಯಲಕ್ಷ್ಮಿ ಶೂಟಿಂಗ್ ಬಗ್ಗೆಯೂ ಆಗಾಗ್ಗೆ ಕೆಲವು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಈಗಲೂ ಹಲವು ನಟಿಯರು ಒಟ್ಟಿಗೇ ಬಂದಾಗ, ನಡೆದ ಶೂಟಿಂಗ್, ಅಡುಗೆ ಮಾಡಿದ ಶೈಲಿಯ ಕುರಿತು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ಮದ್ವೆ ಸೀನ್ ಮಾಡಲ್ಲ ಎಂದು ಭಾಗ್ಯಲಕ್ಷ್ಮಿ ಶೂಟಿಂಗ್ ಸೆಟ್ನಲ್ಲೇ ಶ್ರೇಷ್ಠಾ ಕಣ್ಣೀರು! ಅಷ್ಟಕ್ಕೂ ಆಗಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.