
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಅಮೃತಧಾರೆʼ ಧಾರಾವಾಹಿಯಲ್ಲಿ ಸದ್ಯ ಶಾಕುಂತಲಾ-ಜಯದೇವ್, ಭೂಮಿ-ಗೌತಮ್ ಕುರಿತ ಎಪಿಸೋಡ್‌ಗಳು ಪ್ರಸಾರ ಆಗುತ್ತಿವೆ. ಇದರ ಮಧ್ಯೆ ಭಾಗ್ಯ-ಸುಧಾ ಪಾತ್ರಗಳ ಬಗ್ಗೆಯೂ ಕಥೆ ಸಾಗುತ್ತಿದೆ. ಹೀಗಿರುವಾಗ ಓರ್ವ ಪಾತ್ರ ಮಿಸ್ ಆದಂತಿದೆ.
ಅಶ್ವಿನಿ ಪಾತ್ರ ಎಲ್ಲೋಯ್ತು?
ಹೌದು, ಯಾವಾಗಲೂ ಶಕುಂತಲಾ ಜೊತೆಗೆ ಇರುತ್ತಿದ್ದ ಅಶ್ವಿನಿ ಪಾತ್ರ ಮಿಸ್ ಆಗುತ್ತಿದೆ. ಅನೇಕ ದಿನಗಳಿಂದ ಗೌತಮ್ ಮನೆಯಲ್ಲಿ ಅಶ್ವಿನಿ ಕಾಣಿಸ್ತಿಲ್ಲ, ಇನ್ನು ಅಶ್ವಿನಿ ತಂಗಿ ಮಹಿಮಾ ಹೊಸ ಮನೆಗೆ ಕಾಲಿಟ್ಟಾಗಲೂ ಅಲ್ಲಿ ಅಶ್ವಿನಿ ಸುಳಿವೇ ಇಲ್ಲ. ಧಾರಾವಾಹಿಯಲ್ಲಿ ಎಲ್ಲಿಯೂ ಅಶ್ವಿನಿ ಬಗ್ಗೆ ಒಂದು ಅಕ್ಷರವೂ ಪ್ರಸ್ತಾಪ ಆಗ್ತಿಲ್ಲ. ಹಾಗಾದರೆ ಏನಾಯ್ತು?
Amruthadhaare Serial: ರಾಜ್ಯವೇ ಖುಷಿಪಡುವ ಸುದ್ದಿ ಕೊಟ್ಟಳಾ ಭೂಮಿಕಾ? ಶಾಕುಂತಲಾಗೆ ಹೊಸ ತಲೆನೋವು!
ಅಶ್ವಿನಿ ಪಾತ್ರಧಾರಿ ಚಂದನಾ
ಅಶ್ವಿನಿ ಪಾತ್ರಕ್ಕೆ ಚಂದನಾ ಅವರು ಜೀವ ತುಂಬುತ್ತಿದ್ದರು. ಈಗ ಅವರು ಕಲರ್ಸ್ ಕನ್ನಡ ವಾಹಿನಿಯ ʼಬಾಯ್ಸ್ v/s ಗರ್ಲ್ಸ್ʼ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದೆ ಅವರು ʼಅಂತರಪಟʼ ಧಾರಾವಾಹಿಯಲ್ಲಿ ಕೂಟ ನಟಿಸುತ್ತಿದ್ದರು. ʼಅಂತರಪಟʼ ಮುಗಿಯುತ್ತಿದ್ದಂತೆ ಅವರು ಈ ರಿಯಾಲಿಟಿ ಶೋನಲ್ಲಿ ಭಾಗಿಯಾದರು.
ಗೌತಮ್ ಮಲತಾಯಿ ಅಲ್ಲವಾ ಶಕುಂತಲಾ? ಜೈದೇವ್ ಮಾತು ಕೇಳಿ ಬೆಕ್ಕಸ ಬೆರಗಾಗಿ ನ್ಯಾಯ ಬೇಕೆಂದ ವೀಕ್ಷಕರು!
ಚಂದನಾ ಎಲ್ಲಿ ನಾಪತ್ತೆ ಆದ್ರು?
ಅಶ್ವಿನಿ ಪಾತ್ರದಲ್ಲಿ ಇನ್ನೂ ಚಂದನಾ ನಟಿಸುತ್ತಿದ್ದಾರಾ? ಅಥವಾ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರಾ ಎಂಬ ಬಗ್ಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಅಶ್ವಿನಿ ಪಾತ್ರ ಕಾಣಿಸಬಹುದು. ʼಅಮೃತಧಾರೆʼ ಧಾರಾವಾಹಿಯಲ್ಲಿ ದೊಡ್ಡ ಮಟ್ಟದ ತಾರಾ ಬಳಗವಿದೆ. ಗೌತಮ್ ದಿವಾನ್ ಕುಟುಂಬದಲ್ಲಿ ಸಾಕಷ್ಟು ಕಲಾವಿದರು ಇರುತ್ತಾರೆ, ಅಂದಹಾಗೆ ಗೌತಮ್ ಗೆಳೆಯ ಆನಂದ್ ಮನೆಯಲ್ಲಿಯೂ ಒಂದಿಷ್ಟು ಕಲಾವಿದರು ಇರುತ್ತಾರೆ. ಇನ್ನೊಂದು ಕಡೆ ಗೌತಮ್ ತಂಗಿ ಮಹಿಮಾ ಕುಟುಂಬ, ಗೌತಮ್ ಶತ್ರುಗಳ ಕುಟುಂಬವನ್ನು ಕೂಡ ತೋರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಕಲಾವಿದರಿಗೂ ತಿಂಗಳಿನಲ್ಲಿ ನಟಿಸಲು ಜಾಸ್ತಿ ಅವಕಾಶ ಸಿಗೋದಿಲ್ಲ. ಈ ಬಗ್ಗೆ ವಾಹಿನಿ ಅಥವಾ ಚಂದನಾ ಅವರು ಪ್ರತಿಕ್ರಿಯೆ ಕೊಡಬೇಕಿದೆ.
ಈ ಧಾರಾವಾಹಿ ಕತೆ ಏನು?
ಅಂದಹಾಗೆ ಗೌತಮ್ ದಿವಾನ್ ಆಗರ್ಭ ಶ್ರೀಮಂತ. ಅವನಿಗೆ ಶಕುಂತಲಾ ಎಂಬ ಮಲತಾಯಿ ಇದ್ದಾಳೆ. ತಡವಾಗಿ ಗೌತಮ್ ಮದುವೆ ಆಗ್ತಾನೆ. ಭೂಮಿಕಾ ಎನ್ನುವವಳ ಜೊತೆ ಗೌತಮ್ ಮದುವೆ ಆಗುತ್ತದೆ. ಆದರೆ ಶಕುಂತಲಾ ಬಗ್ಗೆ ಅವನಿಗೆ ನಿಜವಾದ ವಿಷಯ ತಿಳಿಯೋದಿಲ್ಲ. ಭೂಮಿ ಎಲ್ಲ ವಿಚಾರವನ್ನು ತುಂಬ ಸೂಕ್ಷ್ಮವಾಗಿ ಗಮನಿಸೋ ಹುಡುಗಿ. ಅವಳು ಮುಂದಿನ ದಿನಗಳಲ್ಲಿ ಏನು ಮಾಡ್ತಾಳೆ? ಮುಚ್ಚಿಟ್ಟಿರೋ ಸತ್ಯಗಳನ್ನೆಲ್ಲವನ್ನು ಅವಳು ಬಯಲಿಗೆಳೆಯುತ್ತಾಳಾ ಎಂದು ಕಾದು ನೋಡಬೇಕಿದೆ. ಇಲ್ಲಿ ವಯಸ್ಕರ ಲವ್‌ಸ್ಟೋರಿಯೂ ಇದೆ, ಸಂಗಾತಿ ಯಾಕೆ ಅಗತ್ಯ ಎನ್ನೋದನ್ನು ಕೂಡ ಒತ್ತಿ ಹೇಳಲಾಗಿದೆ. ಒಟ್ಟಿನಲ್ಲಿ ಸಾಕಷ್ಟು ವಿಷಯಗಳನ್ನು ಹೇಳುತ್ತಿರೋ ಈ ಸೀರಿಯಲ್ ಒಳ್ಳೆಯ ಟಿಆರ್‌ಪಿ ಪಡೆಯುತ್ತಿದೆ.
Amruthadhaare Serial: ಭೂಮಿಕಾ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಲ ಪ್ರೇಕ್ಷಕರು! ಯಾಕೆ? ಏನಾಯ್ತು?
ಪಾತ್ರಧಾರಿಗಳು
ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿ ಪಾತ್ರದಲ್ಲಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು, ಜಯದೇವ್ ಪಾತ್ರದಲ್ಲಿ ರಾಣವ್, ಅಶ್ವಿನಿ ಪಾತ್ರದಲ್ಲಿ ಚಂದನಾ, ಕರ್ಣ ಪಾತ್ರದಲ್ಲಿ ಕರಣ್, ಅಪೇಕ್ಷಾ ಪಾತ್ರದಲ್ಲಿ ಅಮೃತಾ ನಾಯ್ಕ್ ಅವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.