Bigg Boss: ಯಾವುದೇ ಭಾಷೆಯ ಬಿಗ್‌ ಬಾಸ್‌ ಆಗಲೀ ಸ್ಪರ್ಧಿಗಳ ಈ ಆಸೆ ಮಾತ್ರ ನೆರವೇರೋಲ್ಲ! ಏನದು?

Published : Jan 24, 2025, 04:33 PM ISTUpdated : Jan 24, 2025, 04:39 PM IST
Bigg Boss: ಯಾವುದೇ ಭಾಷೆಯ ಬಿಗ್‌ ಬಾಸ್‌ ಆಗಲೀ ಸ್ಪರ್ಧಿಗಳ ಈ ಆಸೆ ಮಾತ್ರ ನೆರವೇರೋಲ್ಲ! ಏನದು?

ಸಾರಾಂಶ

ಬಿಗ್‌ಬಾಸ್‌ ಒಬ್ಬ ವ್ಯಕ್ತಿಯಲ್ಲ, ತಂಡ. ಯಾರೂ ನೋಡದ ಈ ತಂಡವೇ ಶೋ ನಡೆಸುತ್ತದೆ. ಹನುಮಂತ ಬಿಗ್‌ಬಾಸ್‌ರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ಆದರೆ, ಬಿಗ್‌ಬಾಸ್‌ ಗುರುತು ಬಹಿರಂಗಪಡಿಸುವುದಿಲ್ಲ. ಧ್ವನಿ ಕಲಾವಿದರ ಗುರುತು ಕೂಡ ರಹಸ್ಯ. ಪ್ರತಿ ಸೀಸನ್‌ನಲ್ಲಿ ಧ್ವನಿ ಬದಲಾಗುತ್ತದೆ.

ʼಬಿಗ್‌ ಬಾಸ್ʼ‌ ಮನೆಗೆ ಹೋದವರೆಲ್ಲ ʼಬಿಗ್‌ ಬಾಸ್ʼ‌ ಯಾರು, ಅವರನ್ನು ಒಮ್ಮೆ ನೋಡಬೇಕು ಅಂತ ಹೇಳಿದ್ದಿದೆ. ಈ ಬಾರಿ ಕೂಡ ಹನುಮಂತ ಅವರು ನಾನು ʼಬಿಗ್‌ ಬಾಸ್ʼ‌ ನೋಡಬೇಕು ಅಂತ ಹೇಳಿದ್ದಾರೆ. ಆದರೆ ಇದು ಸಾಧ್ಯವೇ ಇಲ್ಲ.

ʼಬಿಗ್‌ ಬಾಸ್ʼ‌ ಕಾಣಿಸೋದಿಲ್ಲ! 
ಹೌದು, ʼಬಿಗ್‌ ಬಾಸ್‌ 13ʼ ಶೋನಲ್ಲಿ ಶೆಹನಾಜ್‌ ಗಿಲ್‌ ಅವರು ʼಕ್ರಿಶ್ʼ ಸಿನಿಮಾ ರೀತಿಯಲ್ಲಿ ನೀವು ಯಾಕೆ ನನ್ನ ಮುಂದೆ ಬರಬಾರದು? ಧೈರ್ಯ ಇದ್ದರೆ ನನ್‌ ಮುಂದೆ ಬನ್ನಿ ಬಿಗ್‌ ಬಾಸ್‌ ಅಂತ ಹೇಳಿದ್ದರು. ಇದನ್ನು ಎಲ್ಲರೂ ತಮಾಷೆಯಾಗಿ ಪರಿಗಣಿಸಿದ್ದರು. ಆದರೆ ʼಬಿಗ್‌ ಬಾಸ್ʼ‌ ಮಾತ್ರ ಯಾರ ಕಣ್ಣಿಗೂ ಕಾಣೋದಿಲ್ಲ. ಇದನ್ನು ರಹಸ್ಯವಾಗಿ, ಕುತೂಹಲವಾಗಿ ಇಡಲಾಗಿದೆ.

BBK 11: ಮೋಕ್ಷಿತಾ ಪೈಗೆ ಯಾಕೆ ಹತ್ತಿರವಾಗಲಿಲ್ಲ? ಅದಕ್ಕೆ ಈ ವ್ಯಕ್ತಿಯೇ ಕಾರಣವೆಂದ ತ್ರಿವಿಕ್ರಮ್

ಹನುಮಂತನ ಈ ಆಸೆ ನೆರವೇರೋದಿಲ್ಲ..!
ಈ ಬಾರಿ ಕನ್ನಡ ಬಿಗ್‌ ಬಾಸ್‌ ಶೋನಲ್ಲಿ ಗ್ರ್ಯಾಂಡ್‌ ಫಿನಾಲೆ ತಲುಪಿದ ಸ್ಪರ್ಧಿಗಳಿಗೆ ನಿಮ್ಮ ಆಸೆಗಳನ್ನು ಹೇಳಿಕೊಳ್ಳಿ ಅಂತ ಹೇಳಲಾಗಿತ್ತು. ಆ ವೇಳೆ ಮೋಕ್ಷಿತಾ ಪೈ, ಹನುಮಂತ, ತ್ರಿವಿಕ್ರಮ್‌, ಭವ್ಯಾ ಗೌಡ, ಉಗ್ರಂ ಮಂಜು, ರಜತ್‌ ಅವರು ತಮ್ಮ ಮನದ ಆಸೆಯನ್ನು ಹೇಳಿಕೊಂಡಿದ್ದಾರೆ. ಆ ವೇಳೆ ಹನುಮಂತ ಅವರು ʼನನಗೆ ಬಿಗ್‌ ಬಾಸ್‌ ನೋಡಬೇಕುʼ ಎಂದಿದ್ದಾರೆ. ಬಹುತೇಕ ಎಲ್ಲ ಆಸೆಗಳನ್ನು ನೆರವೇರಿಸುವ ʼಬಿಗ್‌ ಬಾಸ್ʼ‌ ಹನುಮಂತನ ಈ ಆಸೆಯನ್ನು ನೆರವೇರಿಸೋದಿಲ್ಲ. 

BBK 11: ಭವ್ಯಾ ಗೌಡ ಪರ ಸಂಬಂಧಿಯೂ ಆಗಿರೋ ಸ್ಟಾರ್‌ ನಟಿ ದನಿಯೆತ್ತಿದ್ರೆ, ಕನ್ನಡ ಮಾತಾಡಿದ ತೆಲುಗು ನಟ! ಯಾರದು?

ಇದೊಂದು ರಿಯಾಲಿಟಿ ಶೋ! 
ʼಬಿಗ್‌ ಬಾಸ್ʼ‌ ಯಾರು? ಯಾಕೆ ʼಬಿಗ್‌ ಬಾಸ್ʼ‌ ಕಣ್ಣಿಗೆ ಕಾಣೋದಿಲ್ಲ ಎಂಬ ಪ್ರಶ್ನೆ ಕೆಲವರಿಗೆ ಇರಬಹುದು. ʼಬಿಗ್‌ ಬಾಸ್ʼ‌ ಓರ್ವ ವ್ಯಕ್ತಿಯಲ್ಲ. ಇದೊಂದು ಟೀಂ ಎನ್ನಬಹುದು. ʼಬಿಗ್‌ ಬಾಸ್ʼ‌ ಎನ್ನೋದು ಒಂದು ರಿಯಾಲಿಟಿ ಶೋ. ಅತಿ ದೊಡ್ಡ ರಿಯಾಲಿಟಿ ಶೋ ಎಂದು ಗುರುತಿಸಿಕೊಂಡಿದೆ. ʼಬಿಗ್‌ ಬಾಸ್ʼ‌ ಎಂದು ನಾವು ಕರೆಯುತ್ತೇವೆ, ಆದರೆ ಅವರು ʼಬಿಗ್‌ ಬಾಸ್ʼ‌ ಅಲ್ಲ.

ಧ್ವನಿ ಯಾರದ್ದು ಎಂದು ರಿವೀಲ್‌ ಮಾಡೋದಿಲ್ಲ!
ʼಬಿಗ್‌ ಬಾಸ್ʼ‌ ಎಂಬ ಹೆಸರಿನಲ್ಲಿ ಓರ್ವ ವ್ಯಕ್ತಿ ಧ್ವನಿ ನೀಡುತ್ತಾರೆ. ಇಲ್ಲಿಯವರೆಗೆ ಎಲ್ಲ ಭಾಷೆಯ, ಎಲ್ಲ ಸೀಸನ್‌ನಲ್ಲಿಯೂ ಕೂಡ ʼಬಿಗ್‌ ಬಾಸ್ʼ‌ ಧ್ವನಿ ಯಾರದ್ದು ಎಂದು ರಿವೀಲ್‌ ಮಾಡಲಾಗಿಲ್ಲ. ಕೆಲವೊಮ್ಮೆ ಲೀಕ್‌ ಆಗಿದ್ದಿರಬಹುದು. ಆದರೆ ʼಬಿಗ್‌ ಬಾಸ್ʼ‌ ಧ್ವನಿ ಕೊಡುವವರಿಗೆ ತಾವೇ ಈ ಶೋಗೆ ಧ್ವನಿ ಕೊಡುತ್ತಿರುವುದು ಎನ್ನುವ ವಿಚಾರವನ್ನು ರಿವೀಲ್‌ ಮಾಡಬಾರದು ಎಂಬ ನಿಯಮ ಇರುತ್ತದೆ, ಒಂದು ವೇಳೆ ಅದನ್ನು ಮುರಿದರೆ ಒಪ್ಪಂದ ಮುರಿದಂತೆ. 

ಕರ್ನಾಟಕದಲ್ಲಿದ್ರೂ ನಾಡಗೀತೆ ಕಲಿತಿಲ್ಲ: ಯಮುನಾ ಆರೋಪಕ್ಕೆ ಗೌತಮಿ ತಿರುಗೇಟು

ʼಬಿಗ್‌ ಬಾಸ್ʼ‌ ಯಾರು?
ಈ ಮೊದಲೇ ಹೇಳಿದಂತೆ ಇದೊಂದು ತಂಡವಾಗಿ ಕೆಲಸ ಮಾಡುತ್ತದೆ. ಈ ತಂಡದಲ್ಲಿದ್ದವರು ಒಟ್ಟಾರೆಯಾಗಿ ಚರ್ಚೆ ಮಾಡಿ ನಿರ್ಧಾರಗಳನ್ನು ತಗೊಳ್ಳುತ್ತಾರೆ. ಇದೊಂದು ಟೀಂನ್ನು ಒಕ್ಕೊರಲಿನಿಂದ ʼಬಿಗ್‌ ಬಾಸ್ʼ‌ ಎನ್ನಬಹುದು. ಹೀಗಾಗಿ ʼಬಿಗ್‌ ಬಾಸ್ʼ‌ ಯಾರು ಎಂದು ಕೇಳಿದರೆ ಹೇಳಲಾಗೋದಿಲ್ಲ. ಅಷ್ಟೇ ಅಲ್ಲದೆ ಈ ತಂಡದಲ್ಲಿದ್ದವರು ಸೀಸನ್‌ನಿಂದ ಸೀಸನ್‌ಗೆ ಬದಲಾಗಬಹುದು. ಹೀಗಾಗಿ ಇವರೇ ʼಬಿಗ್‌ ಬಾಸ್ʼ‌ ಎಂದು ಹೇಗೆ ಹೇಳುತ್ತೀರಿ? ಕಲರ್ಸ್‌ ಕನ್ನಡ ವಾಹಿನಿಯ ಭಾಗವಾದವರಲ್ಲಿ ಕೆಲವರು ಈ ಶೋನ ಭಾಗವಾಗುತ್ತಾರೆ. 

ಕನ್ನಡದಲ್ಲಿಯೇ ಒಟ್ಟಾರೆಯಾಗಿ ಯಶಸ್ವಿ 11 ಸೀಸನ್‌ಗಳು ನಡೆದಿವೆ. 11ನೇ ಸೀಸನ್‌ನ ಮುಕ್ತಾಯ ಹಂತದಲ್ಲಿದ್ದೇವೆ. ಜನವರಿ 25, 26ರಂದು ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಇಷ್ಟು ಸೀಸನ್‌ಗಳಲ್ಲಿ ಎಲ್ಲ ಸೀಸನ್‌ನ ʼಬಿಗ್‌ ಬಾಸ್ʼ‌ ಧ್ವನಿ ಒಂದೇ ಥರ ಇಲ್ಲ, ಬದಲಾಗಿದ್ದುಂಟು. ಅಂದರೆ ʼಬಿಗ್‌ ಬಾಸ್ʼ‌ ಶೋಗೆ ಧ್ವನಿ ಕೊಡುವವರು ಬದಲಾಗುತ್ತಾರೆ. ಪ್ರದೀಪ್‌ ಬಡಕ್ಕಿಲ ಅವರು ಎಪಿಸೋಡ್‌ಗೆ ಸಮಯ ಮುಂತಾದ ವಿಚಾರಗಳಿಗೆ ಧ್ವನಿ ಕೊಡುತ್ತಾರೆಯೇ ವಿನಃ ಅಸಲಿ ʼಬಿಗ್‌ ಬಾಸ್ʼ‌ ಧ್ವನಿ ಬೇರೆಯವರದ್ದಾಗಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!