
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಭಾಗವಹಿಸಿದ್ದ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಖ್ಯಾತಿಯ ನಟಿ ಹಂಸ ಈಗ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅವರ ಸಿನಿಮಾದಲ್ಲಿ ಹಂಸ ಅವರು ನಟಿಸುವ ಆಫರ್ ಗಿಟ್ಟಿಸಿಕೊಂಡಿದ್ದಾರೆ.
ಸಿನಿಮಾ ಮುಹೂರ್ತ ಆಯ್ತು!
ಸಂಚಿತ್ ಸಂಜೀವ್ ಅವರ ಮೊದಲ ಸಿನಿಮಾಕ್ಕೆ ಕಿಚ್ಚ ಸುದೀಪ್ ಬ್ಯಾನರ್ ಹಾಗೂ ಕೆಆರ್‌ಜಿ ಸ್ಟುಡಿಯೋ ಸೇರಿ ಹಣ ಹೂಡುತ್ತಿದೆ. ಈ ಚಿತ್ರದ ಟೈಟಲ್ ಸಾಂಗ್‌ಗೆ ಕಿಚ್ಚ ಸುದೀಪ್ ಮಗಳು ಸಾನ್ವಿ ಅವರು ಹಾಡಿದ್ದರು. ಇನ್ನು ಬೆಂಗಳೂರಿನ ಬಸವನಗುಡಿಯ ಗಣೇಶ ದೇವಸ್ಥಾನದಲ್ಲಿ ಈ ಸಿನಿಮಾದ ಮುಹೂರ್ತ ನಡೆದಿದೆ. ಕಿಚ್ಚ ಸುದೀಪ್ ಅವರ ಕುಟುಂಬ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಮುಹೂರ್ತಕ್ಕೆ ಬಂದು ಶುಭ ಹಾರೈಸಿದ್ದರು. ಆಗ ಹಂಸ ಕೂಡ ಭಾಗಿಯಾಗಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಇನ್ನು ಕಿಚ್ಚ ಸುದೀಪ್ ಕೂಡ ಭಾಗವಹಿಸಿ ಅಳಿಯನಿಗೆ ಶುಭ ಹಾರೈಸಿದ್ದಾರೆ.
ಪುಟ್ಟಕ್ಕನ ಮಗಳು ಸಹನಾ ಯಾರನ್ನು ಮದ್ವೆಯಾಗ್ತಿದ್ದಾಳೆ? ನಟಿ ಅಕ್ಷರಾ ಹೇಳಿದ್ದೇನು?
ಸಂಚಿತ್ ಸಿನಿಮಾದಲ್ಲಿ ಹಂಸ!
ಈ ಹಿಂದೆ ಸಿನಿಮಾವೊಂದರಲ್ಲಿ ಕಿಚ್ಚ ಸುದೀಪ್‌ಗೆ ತಂಗಿಯಾಗಿ ನಟಿಸಿದ್ದ ಹಂಸ, ಈಗ ಸಂಚಿತ್ ಸಂಜೀವ್ ಅವರ ಸಿನಿಮಾದಲ್ಲಿ ತಾಯಿಯಾಗಿ ನಟಿಸಿದ್ದಾರೆ. ʼಬಿಗ್ ಬಾಸ್ʼ ಮನೆಯಲ್ಲಿ ಫಿನಾಲೆವರೆಗೂ ಇರಬೇಕಿತ್ತು ಅಂತ ಅನಿಸುತ್ತದೆ ಎಂದು ಹಂಸ ಅವರು ಹೇಳಿದ್ದಾರೆ. “ನಾನು ಈ ಬಾರಿ ಬಿಗ್ ಬಾಸ್ ಫಿನಾಲೆಯಲ್ಲಿ ಇಲ್ಲ. ಯಾರು ಬೇಕಿದ್ರೂ ವಿನ್ ಆಗಲೀ, ಯಾರು ವಿನ್ ಆದರೂ ನನಗೆ ಒಂದು ರೂಪಾಯಿ ಸಿಗೋದಿಲ್ಲ” ಎಂದು ಹಂಸ ಅವರು ಹೇಳಿದ್ದಾರೆ.
ಹಂಸ ಹೇಳಿದ್ದೇನು?
“ಬಿಗ್ ಬಾಸ್ ಮನೆ ಅಂದರೆ ಚಾಲೆಂಜಿಂಗ್ ಅಂತ ಅನಿಸಿತ್ತು. ಆದರೆ ಅಷ್ಟು ಚಾಲೆಂಜಿಂಗ್ ಅಂತ ಗೊತ್ತಿರಲಿಲ್ಲ. ಬಿಗ್ ಬಾಸ್ ನೋಡೋದಕ್ಕೂ, ಆಟ ಆಡೋದಕ್ಕೂ ವ್ಯತ್ಯಾಸ ಇದೆ. ತುಂಬ ಮಾನಸಿಕ ಒತ್ತಡ ಇರುತ್ತದೆ. ಸ್ಪರ್ಧಿಗಳು ಹೇಗೆ ಇರುತ್ತಾರೆ? ನಾವು ಹೇಗೆ ಆಟ ಆಡಬೇಕು ಎಂದು ಅರ್ಥ ಮಾಡಿಕೊಳ್ಳುವ ಮೊದಲೇ ಏನೇನೋ ಆಗೋಯ್ತು. ಯಾರು ಎಷ್ಟೇ ನಿಂದಿಸಿದರೂ, ಮಾತನಾಡಿದರೂ ಕೂಡ ಅದನ್ನೆಲ್ಲ ಸಹಿಸಿಕೊಂಡು ಆಟ ಆಡಬೇಕು. ನಾನು ನಿಜಕ್ಕೂ ಬಿಗ್ ಬಾಸ್ ಶೋವನ್ನು ಮಿಸ್ ಮಾಡಿಕೊಳ್ತೀನಿ. ಎಷ್ಟೇ ಕೌಶಲ, ಸಾಮರ್ಥ್ಯ ಇದ್ದರೂ ಅದನ್ನು ಪ್ರದರ್ಶಿಸಿಕೊಳ್ಳಲು ಆಗಲಿಲ್ಲ” ಎಂದು ಹಂಸ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
BBK 11: ಮೋಕ್ಷಿತಾ ಪೈಗೆ ಯಾಕೆ ಹತ್ತಿರವಾಗಲಿಲ್ಲ? ಅದಕ್ಕೆ ಈ ವ್ಯಕ್ತಿಯೇ ಕಾರಣವೆಂದ ತ್ರಿವಿಕ್ರಮ್
ಜಗದೀಶ್ ಬಗ್ಗೆ ಏನಂದ್ರು?
“ಬಿಗ್ ಬಾಸ್ ಮನೆಯಲ್ಲಿ ಒಂದು ದಿನ ಇದ್ದರೂ, ನೂರು ದಿನ ಇದ್ದರೂ ಜನಪ್ರಿಯತೆ ಸಿಗುತ್ತದೆ. ಜಗದೀಶ್ ಅವರು ಕಂಟ್ರೋಲ್ ಆಗಿ ಆಟ ಆಡಿದ್ದರೆ ಅವರು ಇನ್ನೂ ಅಲ್ಲಿ ಇರುತ್ತಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಇಲ್ಲ ಅಂತ ಅವರಿಗೆ ಬೇಸರ ಇದೆ. ನನಗೂ ಆ ಬೇಸರ ಇದೆ. ಅಣ್ಣಮ್ಮ ದೇವರನ್ನು ರಸ್ತೆಯಲ್ಲಿ ಕೂರಿಸಿದರೆ ಸಮಸ್ಯೆ ಆಗುತ್ತದೆ. ಆದರೆ ಅದನ್ನು ಹೇಳಲು ಒಂದು ರೀತಿ ಇರುತ್ತದೆ. ಜಗದೀಶ್ ಅವರು ತಾಳ್ಮೆ ಕಳೆದುಕೊಂಡುಬಿಡುತ್ತಾರೆ” ಎಂದು ಹಂಸ ಹೇಳಿದ್ದಾರೆ.
“ಹನುಮಂತ ಮೊದಲು ಅಷ್ಟು ಆಡುತ್ತಿರಲಿಲ್ಲ. ಈಗ ಹನುಮಂತ ಅವರ ಮುಗ್ಧತೆಯೇ ಇಲ್ಲಿ ಪ್ಲಸ್ ಪಾಯಿಂಟ್ ಆಗಿರಬಹುದು. ಗ್ರಾಮೀಣ ಪ್ರತಿಭೆ, ಹಳ್ಳಿ ಹುಡುಗ ಅಂತ ಹೇಳಿ ಹನುಮಂತಗೆ ಸಿಂಪಥಿ ವರ್ಕ್ ಆಗಿರಬಹುದು ಅನಿಸುತ್ತದೆ. ಇದು ರಿಯಾಲಿಟಿ ಶೋ ಆಗಿದ್ದರಿಂದ ಈ ವಿಷಯ ಹೆಚ್ಚಾಗಿ ವರ್ಕ್ ಆಗಬಹುದು” ಎಂದು ಹಂಸ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.