
ಅದು ಹಿಂದಿಯ ʼಬಿಗ್ ಬಾಸ್ 13ʼ ಶೋ. ಶೆಹನಾಜ್ ಗಿಲ್, ಸಿದ್ದಾರ್ಥ್ ಶುಕ್ಲಾ, ಪಾರಸ್ ಛಾಬ್ರಾ, ಆಸಿಮ್ ರಿಯಾಜ್, ಮಹಿರಾ ಶರ್ಮಾ, ಆರತಿ ಸಿಂಗ್, ರೇಷ್ಮಾ ದೇಸಾಯಿಯಂತಹ ಘಟಾನುಘಟಿಗಳು ಇದ್ದ ಶೋ. ಈ ಶೋನಲ್ಲಿ ನಡೆದಿದ್ದ ಘಟನೆಯೊಂದು ಈಗ ಕನ್ನಡದ ʼಬಿಗ್ ಬಾಸ್ʼ ಶೋನಲ್ಲಿ ಮರುಕಳಿಸಿದೆ. ಹೌದು, ಗ್ರ್ಯಾಂಡ್ ಫಿನಾಲೆಗೆ ಎರಡು ದಿನ ಇರುವಾಗಲೇ ರೋಮಾಂಚನವಾದ ಘಟನೆ ನಡೆದಿದೆ.
ಅತಿ ಹೆಚ್ಚು ಟಿಆರ್‌ಪಿ ಪಡೆದ ಸೀಸನ್ ಇದು!
ಹೌದು, ʼಬಿಗ್ ಬಾಸ್ 13’ ಶೋನಲ್ಲಿ ಗ್ರ್ಯಾಂಡ್ ಫಿನಾಲೆಗೆ ಎರಡು ದಿನ ಇರುವಾಗ ಅವರ ಅಭಿಮಾನಿಗಳ ಜೊತೆ ಸಮಾಗಮ ಮಾಡಿಸಲಾಗಿತ್ತು. ಯಾವುದೇ ಭಾಷೆಯ ಬಿಗ್ ಬಾಸ್ ಸೀಸನ್‌ನಲ್ಲಿ ಬಹುತೇಕ ಎಲ್ಲ ಸ್ಪರ್ಧಿಗಳನ್ನು ಇಷ್ಟಪಡುವವರು ಇರುತ್ತಾರೆ. ಹಾಗೆಯೇ ಹಿಂದಿಯಲ್ಲಿಯೂ ಅಭಿಮಾನಿಗಳಿದ್ದರು. ಸಿದ್ದಾರ್ಥ್ ಶುಕ್ಲಾ, ಶೆಹನಾಜ್ ಗಿಲ್, ಆಸಿಮ್ ರಿಯಾಜ್ ಅವರನ್ನು ಇಷ್ಟಪಡುವಂತಹ ಲಕ್ಷಗಟ್ಟಲೇ ವೀಕ್ಷಕರಿದ್ದರು. ಸಿದ್-ಶೆಹನಾಜ್ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇತ್ತು. ಅತಿ ಹೆಚ್ಚು ಟಿಆರ್‌ಪಿ ತಂದುಕೊಟ್ಟ ಸೀಸನ್ ಇದು.
BBK 11: ಮೋಕ್ಷಿತಾ ಪೈಗೆ ಯಾಕೆ ಹತ್ತಿರವಾಗಲಿಲ್ಲ? ಅದಕ್ಕೆ ಈ ವ್ಯಕ್ತಿಯೇ ಕಾರಣವೆಂದ ತ್ರಿವಿಕ್ರಮ್
ಸನಾ-ಸಿದ್ ವಿಶೇಷ ವಿಡಿಯೋ ಪ್ಲೇ ಆಯ್ತು!
ಸನಾ-ಸಿದ್ ಜೋಡಿಯನ್ನು ಅನೇಕರು ಇಷ್ಟಪಟ್ದಿದ್ದರು. ಹೀಗಾಗಿ Sid-Naz ಎಂದು ಹ್ಯಾಶ್‌ಟ್ಯಾಗ್ ಕ್ರಿಯೇಟ್ ಮಾಡಲಾಗಿತ್ತು. ಗ್ರ್ಯಾಂಡ್ ಫಿನಾಲೆಗೆ ಎರಡು ದಿನ ಇರುವಾಗ ಅಭಿಮಾನಿಗಳನ್ನು ಕರೆಸಲಾಗಿತ್ತು. ಫಿನಾಲೆ ತಲುಪಿದ ಸ್ಪರ್ಧಿಗಳ ಬಗ್ಗೆ ʼಬಿಗ್ ಬಾಸ್ʼ ವಿಶೇಷವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲದೆ ವಿಶೇಷ ವಿಡಿಯೋ ಪ್ಲೇ ಮಾಡಲಾಗಿತ್ತು. ಅದರಲ್ಲಿಯೂ ಸಿದ್ದಾರ್ಥ್ ಶುಕ್ಲ, ಶೆಹನಾಜ್ ಅಭಿಮಾನಿಗಳ ಪ್ರೀತಿಯ ಬಗ್ಗೆ ಮಾತಿನಲ್ಲಿ, ಪದಗಳಲ್ಲಿ ಹೇಳಲಾಗದು. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯನ್ನು ನೋಡಿ ತುಂಬ ಖುಷಿಪಟ್ಟಿದ್ದರು. ನಮ್ಮನ್ನು ಇಷ್ಟೆಲ್ಲ ವೀಕ್ಷಕರು ಇಷ್ಟಪಡ್ತಾರೆ ಅಂತ ತಿಳಿದು ಸ್ಪರ್ಧಿಗಳ ಸಂತೋಷ ಮುಗಿಲುಮುಟ್ಟಿತ್ತು. ಈ ಘಳಿಗೆ ಮತ್ತೆ ಕನ್ನಡದಲ್ಲಿ ರಿಪೀಟ್ ಆಗಿತ್ತು.
ಕನ್ನಡದಲ್ಲಿಯೂ ಸೃಷ್ಟಿ
ಈಗ ಗ್ರ್ಯಾಂಡ್ ಫಿನಾಲೆ ಆರಂಭ ಆಗಲು ಎರಡು ದಿನ ಇದೆ. ಈಗ ಫಿನಾಲೆ ತಲುಪಿದ ಸ್ಪರ್ಧಿಗಳು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಆಗ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ, ಹೊಗಳಿದ್ದಾರೆ, ಟ್ರೋಫಿ ಗೆಲ್ತೀರಾ ಅಂತ ಆಶ್ವಾಸನೆ ಕೊಟ್ಟಿದ್ದಾರೆ. ಆದರೆ ಇಲ್ಲಿ ವಿಡಿಯೋ ಬದಲು ವಿಶೇಷ ಫೋಟೋಗಳನ್ನು ಹಂಚಿಕೊಳ್ಳಲಾಗಿತ್ತು. ಓರ್ವ ಸ್ಪರ್ಧಿಗೆ ಅಭಿಮಾನಿಗಳ ಜೊತೆ ಸಮಯ ಕಳೆಯಲು ಹಿಂದಿಯಲ್ಲಿ ಕೊಟ್ಟಷ್ಟು ಸಮಯವನ್ನು ಮಾತ್ರ ಕನ್ನಡದಲ್ಲಿ ಕೊಟ್ಟಿರಲಿಲ್ಲ. ಅದನ್ನು ಬಿಟ್ಟರೆ ಕನ್ನಡ ಬಿಗ್ ಬಾಸ್‌ನಲ್ಲಿ ಇದು ಅಪರೂಪ ಎನ್ನಬಹುದು.
BBK 11: ಭವ್ಯಾ ಗೌಡ ಪರ ಸಂಬಂಧಿಯೂ ಆಗಿರೋ ಸ್ಟಾರ್ ನಟಿ ದನಿಯೆತ್ತಿದ್ರೆ, ಕನ್ನಡ ಮಾತಾಡಿದ ತೆಲುಗು ನಟ! ಯಾರದು?
ಗ್ರ್ಯಾಂಡ್ ಫಿನಾಲೆ
ಜನವರಿ 25, 26ರಂದು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಗ್ರ್ಯಾಂಡ್ ಫಿನಾಲೆ ನಡೆಯುವುದು. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದೆ. ಭವ್ಯಾ ಗೌಡ, ತ್ರಿವಿಕ್ರಮ್, ಉಗ್ರಂ ಮಂಜು, ಮೋಕ್ಷಿತಾ ಪೈ, ಹನುಮಂತ, ರಜತ್ ನಡುವೆ ಯಾರು ಗೆಲ್ತಾರೆ ಎಂದು ಕಾದುನೋಡಬೇಕಿದೆ. ಅಂದಹಾ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿರುವವರು ಕನ್ನಡದ ʼಬಿಗ್ ಬಾಸ್ʼ ಫಿನಾಲೆಗೆ ತಲುಪಿದ್ದು ಇದೇ ಮೊದಲು ಎನ್ನಬಹುದು. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ರಜತ್, ಹನುಮಂತ ಅವರು ಆಟದ ರೂಪವನ್ನೇ ಬದಲಾಯಿಸಿದರು ಎಂದು ಹೇಳಬಹುದು. ಒಟ್ಟಿನಲ್ಲಿ ಈ ಸೀಸನ್ ಆರಂಭದಲ್ಲಿ ಜಗಳದಿಂದ ಕೂಡಿದ್ದು, ಕೊನೆಯಲ್ಲಿ ಹೆಚ್ಚು ಹಾಸ್ಯ ಸೃಷ್ಟಿ ಮಾಡಿತು ಎಂದು ಹೇಳಬಹುದು. ಅಂದಹಾಗೆ ಕಿಚ್ಚ ಸುದೀಪ್ ಅವರು ಈ ಸೀಸನ್ ನಿರೂಪಣೆಯ ನಂತರ ಮತ್ತೆ ʼಬಿಗ್ ಬಾಸ್ʼ ನಿರೂಪಣೆ ಮಾಡೋದಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.