ʼಒಂದು ಮಚ್ಚಿನ ಕಥೆ ನೋಡಿದ್ರಿ, ನನ್ನ ಕುಟುಂಬಕ್ಕೆ ತೊಂದರೆಯಾಗಿದೆʼ- Bigg Boss Vinay Gowda ಮೊದಲ ರಿಯಾಕ್ಷನ್

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ವಿನಯ್‌ ಗೌಡ ಸದ್ಯ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದಕ್ಕೆ ವಿನಯ್‌ ಗೌಡ ವಿರುದ್ಧ ದೂರು ದಾಖಲಾಗಿತ್ತು. 
 

Vinay Gowda has apologized for making reels with a machete

ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದಾರೆ ಎನ್ನುವ ಆರೋಪದಡಿ ವಿನಯ್‌ ಗೌಡ, ರಜತ್‌ ಕಿಶನ್‌ ಅವರ ವಿರುದ್ಧ ದೂರು ದಾಖಲಾಗಿತ್ತು. ಈಗ ಇಬ್ಬರಿಗೂ ಜಾಮೀನು ಸಿಕ್ಕಿದೆ. ಈಗ ವಿನಯ್‌ ಗೌಡ ಅವರು ಕ್ಷಮೆ ಕೇಳಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ವಿನಯ್‌ ಗೌಡ ಕ್ಷಮೆ!
“ಎಲ್ಲರಿಗೂ ನಮಸ್ಕಾರ. ಇಡೀ ನಾಡಿನ ಜನತೆ, ನನ್ನ ಅಭಿಮಾನಿಗಳು, ಸ್ನೇಹಿತರಿಗೆ ಕ್ಷಮೆ ಕೇಳುತ್ತೇನೆ. ನೀವು ಒಂದು ಮಚ್ಚಿನ ಕತೆಯನ್ನು ನೋಡುತ್ತಿದ್ದೀರಿ. ನಾವು ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದೆವು. ಇದರಿಂದ ತುಂಬ ಜನರಿಗೆ ಸಮಸ್ಯೆ ಆಗಿದೆ. ನಮ್ಮನ್ನು ಹೊರಗಡೆ ಕರೆದುಕೊಂಡು ಬರಲು ನನ್ನ ಕುಟುಂಬ, ಸ್ನೇಹಿತರು ಒದ್ದಾಡಿದ್ದಾರೆ. ಪೊಲೀಸ್‌ ಠಾಣೆ, ಕೋರ್ಟ್, ಕೇಂದ್ರ ಕಾರಾಗೃಹ ಎಂದು ಹಗಲು-ರಾತ್ರಿ ಓಡಾಡಿದ್ದಾರೆ. ರಜತ್‌ಗೆ ಕೊಟ್ಟಿದ್ದ ಪ್ರಾಪರ್ಟಿ ಅದಾಗಿತ್ತು, ನಾನು ತಗೊಂದು 18 ಸೆಕೆಂಡ್‌ ರೀಲ್ಸ್‌ ಮಾಡಿದ್ದೇನೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ಇರಲಿ” ಎಂದು ವಿನಯ್‌ ಗೌಡ ಅವರು ಹೇಳಿದ್ದಾರೆ. 

Latest Videos

ಮಚ್ಚು ಹಿಡಿದು ರೀಲ್ಸ್‌ ಪ್ರಕರಣ; ವಿನಯ್‌ ಗೌಡ, ರಜತ್‌ಗೆ ಎಷ್ಟು ವರ್ಷ ಶಿಕ್ಷೆ ಆಗಬಹುದು?

ನಿಜಕ್ಕೂ ಏನಾಗಿತ್ತು? 
ʼಬಾಯ್ಸ್ ವರ್ಸಸ್ ಗರ್ಲ್ಸ್ʼ ರಿಯಾಲಿಟಿ ಶೋನಲ್ಲಿ ರಜತ್ ಅವರು ನಟ ದರ್ಶನ್ ಅವರ ಪಾತ್ರ ಮಾಡಿದ್ದರು. ಇನ್ನು ವಿನಯ್ ಗೌಡ ಅವರು ಅಲ್ಲು ಅರ್ಜುನ್‌ ಅಭಿನಯದ ʼಪುಷ್ಟʼ ಸಿನಿಮಾದಲ್ಲಿನ ಪುಷ್ಪರಾಜ್‌ ಪಾತ್ರ ಮಾಡಿದ್ದರು. ಮಂಜು ಪಾವಗಡ ಅವರು ರವಿಚಂದ್ರನ್ ಪಾತ್ರ ಮಾಡಿದ್ದರು. ‌

ಸ್ಟುಡಿಯೋದಲ್ಲಿ ರೀಲ್ಸ್
ರಿಯಾಲಿಟಿ ಶೋ ವೇದಿಕೆಯ ಹೊರಗಡೆ ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ರಜತ್‌, ವಿನಯ್‌ ಗೌಡ ಅವರು ಮಚ್ಚು ಹಿಡಿದು ಹದಿನೆಂಟು ಸೆಕೆಂಡ್‌ಗಳ ರೀಲ್ಸ್‌ ಮಾಡಿದ್ದರು. ಇದರ ಬಗ್ಗೆ ಬಸವೇಶ್ವರನಗರ ಠಾಣಾ PSI ಭಾನು ಪ್ರಕಾಶ್ ನೀಡಿದ ದೂರಿನ ಪ್ರಕಾರ ಎಫ್ಐಆರ್ ದಾಖಲಾಗಿತ್ತು. ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್‌ ಅವರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ರೀಲ್ಸ್ ಅಪ್‌ಲೋಡ್‌ ಮಾಡಿದ್ದರು. ಲಾಂಗ್ ಹಿಡಿದು, ಭಯದ ವಾತಾವರಣ ಸೃಷ್ಟಿಯಾಗುವ ರೀತಿ ರೀಲ್ಸ್ ಮಾಡಿದ್ದರು ಎಂದು ಆರೋಪ ಮಾಡಿದ್ದರು.

Bigg Boss Kannada ವಿನಯ್‌ ಗೌಡ, ರಜತ್‌ ಕಿಶನ್‌ ವಿರುದ್ಧ ದೂರು ದಾಖಲು! ಏನಾಯ್ತು?

ಸಿನಿಮಾಗಳಲ್ಲಿ ಬ್ಯುಸಿ! 
ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಾರೆ. ಸಾರ್ವಜನಿಕರ ಶಾಂತಿ ಹಾಗೂ ನೆಮ್ಮದಿಗೆ ಭಂಗ ಆಗುವ ಕೆಲಸ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಮಚ್ಚು ಹಿಡಿದು ಇವರಿಬ್ಬರು ಸ್ಟೈಲ್‌ ಆಗಿ ನಡೆದುಕೊಂಡು ರೀಲ್ಸ್ ಮಾಡಿದ್ದರು. ಈ ವಿಡಿಯೋವನ್ನು ಬುಜ್ಜಿ ಎಂಬ ರಜತ್‌ ಕಿಶನ್‌ ಅವರ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ನಿಷೇಧಿತ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದಾರೆ ಎನ್ನೋದು ಈ ಪ್ರಕರಣದ ಮೂಲ ಎನ್ನಬಹುದು.  ಮೂರು ದಿನಗಳ ನಂಗರದಲ್ಲಿ ಇವರಿಬ್ಬರಿಗೂ ಜಾಮೀನು ಸಿಕ್ಕಿದೆ. ʼಬಿಗ್‌ ಬಾಸ್ʼ‌ ಮನೆಯಿಂದ ಹೊರಗಡೆ ಬಂದ್ಮೇಲೆ ವಿನಯ್‌ ಗೌಡ ಅವರು ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ನಟ ದರ್ಶನ್‌ ಅಭಿನಯದ ʼದಿ ಡೆವಿಲ್‌ʼ ಸಿನಿಮಾದಲ್ಲಿ ಇವರು ನಟಿಸಿದ್ದಾರೆ. 
 

vuukle one pixel image
click me!