ವಧು ಸೀರಿಯಲ್ನಲ್ಲಿ ಪ್ರಿಯಾಂಕಾ ಪಾತ್ರದಲ್ಲಿ ನಟಿಸ್ತಿರೋ ನಟಿ ಸೋನಿ ಅವರು ಈ ಸೀರಿಯಲ್ಗೆ ಆಯ್ಕೆಯಾಗಿದ್ದು ಹೇಗೆ? ರೋಚಕ ಪಯಣ ತೆರೆದಿಟ್ಟ ನಟಿ...
ಆಕೆ ವಧು. ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ಆಕೆಯ ಮನಸ್ಸು ಸಂಬಂಧಗಳನ್ನು ಪ್ರೀತಿಸುವಂಥದ್ದು ಜೊತೆಗೆ ಗೌರವಿಸುವಂಥದ್ದು. ಆದ್ದರಿಂದ ಯಾರೇ ಡಿವೋರ್ಸ್ಗೆ ಬಂದರೂ ಅವರಲ್ಲಿ ಸಾಮರಸ್ಯ ಮೂಡಿಸುವಲ್ಲಿ ಒಂದು ಹೆಜ್ಜೆ ಮುಮದು. ಮನುಷ್ಯ ಸಂಬಂಧಗಳ ಬಗ್ಗೆ ಅವಳಿಗಿರುವ ಗೌರವವೇ ಹಲವಾರು ಬಾರಿ ಈ ಡಿವೋರ್ಸ್ ಲಾಯರ್ ಅನ್ನು ವೃತ್ತಿಯಲ್ಲಿ ಹಿಂದುಳಿಯುವಂತೆ ಮಾಡಿದೆ. ಅದೇ ಇನ್ನೊಂದೆಡೆ, ಸಾರ್ಥಕ್. ಈತ ತನ್ನ ದಾಂಪತ್ಯದಲ್ಲಿ ಸೋತು, ಪತ್ನಿ ಪ್ರಿಯಾಂಕಾಳಿಂದ ಡಿವೋರ್ಸ್ ಬೇಕೆಂದು ಅರ್ಜಿ ಹಾಕಿ ಇದೇ ವಧು ಬಳಿ ಬರುತ್ತಾನೆ. ಈ ಮೂವರ ಸುತ್ತ ಈ ಸೀರಿಯಲ್ ಸುತ್ತುತ್ತದೆ. ಇವರಿಗೆ ಡಿವೋರ್ಸ್ ಆಗತ್ತಾ, ಅಥ್ವಾ ದಂಪತಿಯನ್ನು ಒಂದು ಮಾಡಲು ಹೋಗಿ ಇವರಿಬ್ಬರೇ ಲವ್ನಲ್ಲಿ ಬೀಳ್ತಾರಾ ಎನ್ನುವ ಕುತೂಹಲ ಈ ಸೀರಿಯಲ್ದ್ದು.
ಇದೀಗ ಪ್ರಿಯಾಂಕಾ ಪಾತ್ರಧಾರಿ ನಟಿ ಸೋನಿ ಮುಲೇವಾ ಈ ಸೀರಿಯಲ್ ಬಗ್ಗೆ ಮಾತನಾಡಿದ್ದಾರೆ. ತಮಗೆ ಈ ಸೀರಿಯಲ್ ಸಿಕ್ಕ ಬಗೆ ಹಾಗೂ ಅದು ಎಷ್ಟೊಂದು ಚಾಲೆಂಜಿಂಗ್ ಆಗಿದೆ ಎನ್ನುವ ಬಗ್ಗೆ ಯೂಟ್ಯೂಬ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. 'ಪಾರು ಸೀರಿಯಲ್ ಟೈಮ್ನಿಂದಲೂ ನನಗೆ ವಿದ್ಯಾ ಮತ್ತು ದಿಲೀಪ್ ಅವರ ಪ್ರೊಡಕ್ಷನ್ನಲ್ಲಿ ಕೆಲಸ ಮಾಡಬೇಕು ಎಂದು ಅಂದುಕೊಳ್ಳುತ್ತಲೇ ಇದ್ದೆ. ಎಷ್ಟೇ ಆಡಿಷನ್ ಕೊಟ್ಟಿದ್ದರೂ ಸೆಲೆಕ್ಟ್ ಆಗಿರಲಿಲ್ಲ. ಕೊನೆಗೆ ವಧು ಸೀರಿಯಲ್ನಲ್ಲಿ ಪ್ರಿಯಾಂಕಾ ರೋಲ್ ಸಿಕ್ಕಿತು. ಪ್ರಿಯಾಂಕಾ ಕ್ಯಾರೆಕ್ಟರ್ ಸಂಪೂರ್ಣ ವಿಭಿನ್ನ. ಈಗ ಇರುವಂತೆ ಆಗ ಇರಲ್ಲ ಅವಳು. ನಿಮಿಷಕ್ಕೊಂದು ವಿಚಿತ್ರ ನಡವಳಿಕೆ. ಆದ್ದರಿಂದ ಈ ಪಾತ್ರ ಸಕತ್ ಚಾಲೆಂಜಿಂಗ್ ಇದೆ. ಇಂಥ ರೋಲ್ ಸಿಕ್ಕಿರುವುದಕ್ಕೆ ತುಂಬಾ ಖುಷಿಯಿದೆ. ಜನರು ಕೂಡ ಇದನ್ನು ತುಂಬಾ ಇಷ್ಟಪಡುತ್ತಾರೆ ಎಂದು ಅಂದುಕೊಂಡಿದ್ದೇನೆ' ಎಂದಿದ್ದಾರೆ ನಟಿ ಸೋನಿ ಮುಲೇವಾ.
ಅಪ್ಪು ಪರಿಚಯಿಸಿದ 'ಡಿವೋರ್ಸ್ ಲಾಯರ್' ಕನಸಿನ ಹುಡುಗ ಹೀಗಿರ್ಬೇಕಂತೆ! ನಟಿಯ ಮಾತಿಗೆ ಫ್ಯಾನ್ಸ್ ಫುಲ್ ಖುಷ್...
ಇದೇ ವೇಳೆ, ಪ್ರಿಯಾಂಕಾ ಗಂಡ ಸಾರ್ಥಕ್ ರೋಲ್ನಲ್ಲಿ ನಟಿಸುತ್ತಿರುವ ಅಭಿಷೇಕ್ ಶ್ರೀಕಾಂತ್ ಮತ್ತು ತಾವು ಇದಾಗಲೇ ಒಂದು ಸಿನಿಮಾದಲ್ಲಿಯೂ ಕೆಲಸ ಮಾಡುತ್ತಿರುವುದಾಗಿ ನಟಿ ಸೋನಿ ಹೇಳಿದ್ದಾರೆ. ಆದರೆ ಸಿನಿಮಾದಲ್ಲಿ ಶೂಟಿಂಗ್ ಮುಗಿಸಿ ಬರ್ತಿದ್ವಿ. ಇಷ್ಟೊಂದು ಬಾಂಡಿಂಗ್ ಇರಲಿಲ್ಲ. ಆದರೆ ಸೀರಿಯಲ್ನಲ್ಲಿ ತಿಂಗಳಿಗೆ ಏನಿಲ್ಲವೆಂದರೂ ಕನಿಷ್ಠ 15 ದಿನ ಒಟ್ಟಿಗೇ ಇರ್ತೇವೆ. ಆದ್ದರಿಂದ ಧಾರಾವಾಹಿಗಳಲ್ಲಿ ಕ್ಲೋಸ್ ಆಗಿದ್ದೇವೆ ಎಂದಿದ್ದಾರೆ. ವಧು ಸೀರಿಯಲ್ನಲ್ಲಿ ಕಾಸ್ಟ್ಯೂಮ್ ಸಿಕ್ಕಾಪಟ್ಟೆ ಹೆವ್ವಿ ಇರುತ್ತೆ. ಶೂಟಿಂಗ್ ಮುಗಿಸಿ ಅದನ್ನು ಬಿಚ್ಚಿದ ಮೇಲೆ ಅಬ್ಬಾ ಎನ್ನಿಸುತ್ತೆ, ಸೋ ಬಟ್ಟೆಯಲ್ಲಿಯೂ ಈ ಕ್ಯಾರೆಕ್ಟರ್ ಚಾಲೆಂಜಿಂಗ್ ಆಗಿದೆ ಎಂದಿದ್ದಾರೆ.
ಅಷ್ಟಕ್ಕೂ ನಟಿ ಸೋನಿ ಮುವೇಲಾ ಅವರು ಮೂಲತಃ ರಾಜಸ್ಥಾನದವರು. ಅಪ್ಪ ಹಾಗೂ ಅಜ್ಜ ಎಲ್ಲರೂ ಅಲ್ಲಿಯವರೇ. ಆದರೆ ಇವರು ಹುಟ್ಟಿರುವುದು ಮೈಸೂರಿನಲ್ಲಿ. ಚಿಕ್ಕವಯಸ್ಸಿನಿಂದಲೇ ಕನ್ನಡದ ನಟಿಯಾಗಬೇಕೆಂಬ ಆಸೆ ಇದ್ದುದರಿಂದ ಹೈಸ್ಕೂಲ್ನಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದರು. ಜರ್ನಲಿಸಂನಲ್ಲಿ ಬಿಎ ಪದವಿ ಪಡೆದಿದ್ದಾರೆ. ಥಿಯೇಟರ್ ಆರ್ಟ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ನಟಿ, ರಂಗಭೂಮಿ ಕಲಾವಿದೆ. ಇದಾಗಲೇ ನಟಿ, ಗಟ್ಟಿಮೇಳ ಸೀರಿಯಲ್ನಲ್ಲಿ ನಾಯಕ ವೇದಾಂತ್ ವಸಿಷ್ಠ ಮಾಜಿ ಲವರ್ ಆಗಿ ಕಾಣಿಸಿಕೊಂಡಿದ್ದರು. ಮುದ್ದುಮಣಿ ಸೀರಿಯಲ್‌ನಲ್ಲಿಯೂ ನಟಿಸಿದ್ದರು. ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿರುವ ಇವರು, ಜೆರ್ಸಿ ನಂ. 10 ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.
'ಅಮೃತಧಾರೆ' ಶಕುಂತಲಾ ಸೀರೆ ಮೇಲೆ ನೆಟ್ಟಿಗರ ಕಣ್ಣು! ಆಗರ್ಭ ಶ್ರೀಮಂತೆ ಪ್ರತಿದಿನ ಸ್ನಾನನೇ ಮಾಡಲ್ವಾ?