ಅಮೃತಧಾರೆ ಸೀರಿಯಲ್ನ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ವಿಲನ್ ಶಕುಂತಲಾ ಸೀರೆ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ. ಪ್ರತಿದಿನ ಈಕೆ ಸ್ನಾನ ಮಾಡಲ್ವಾ ಅಂತ ಕೇಳ್ತಿರೋದ್ಯಾಕೆ?
ತನಗೆ ಮಕ್ಕಳಾಗಲ್ಲ ಎಂದು ಕುತಂತ್ರಿ ಅತ್ತೆಯ ಮಾತು ಕೇಳಿ, ಗಂಡನನ್ನು ಬೇರೆ ಮದುವೆ ಮಾಡಿಸಲು ಹೊರಟಿದ್ದಳು ಭೂಮಿಕಾ. ಆದರೆ ಪತ್ನಿಯೇ ಸರ್ವಸ್ವ ಎಂದುಕೊಂಡಿರೋ ಗೌತಮ್ ಹಾಗೆ ಮಾಡಲು ಸಾಧ್ಯನಾ? ಆ ಮದುವೆಯಾಗಲು ಬಂದಿರುವ ಹುಡುಗಿಯ ಜೊತೆ ಮೊದಲೇ ಪ್ಲ್ಯಾನ್ ಮಾಡಿ ಸೀರಿಯಲ್ ವೀಕ್ಷಕರಿಗೆ ಟೆನ್ಷನ್ ಕೊಟ್ಟಿದ್ದ ಗೌತಮ್. ಮದುವೆಯಾಗಲು ರೆಡಿಯಾಗುವಂತೆ ಮಾಡಿ, ಕೊನೆಗೆ ಮದುವೆಗೆ ತಾಳಿ ಕಟ್ಟುವ ಸಮಯದಲ್ಲಿ ತನ್ನ ಪತ್ನಿ ಭೂಮಿಕಾಗೇ ಮರುಮಾಂಗಲ್ಯ ಮಾಡಿದ್ದ. ನೀವೇ ನನ್ನ ಸರ್ವಸ್ವ ಎನ್ನುವ ಮೂಲಕ ಅಬ್ಬಾ ಇದ್ದರೆ ಇಂಥ ಗಂಡ ಇರಬೇಕು ಎನ್ನುವಂಥ ಪಾತ್ರ ಮಾಡಿದ್ದ ಗೌತಮ್. ಅದಾದ ತಕ್ಷಣವೇ ಭೂಮಿಕಾಗೆ ತಲೆಸುತ್ತಿತು. ಅಲ್ಲಿಯೇ ಇದ್ದ ವೈದ್ಯೆ ಆಕೆ ಗರ್ಭಿಣಿ ಎಂದು ಹೇಳುವ ಮೂಲಕ ಎಲ್ಲರನ್ನೂ ಖುಷಿಗೊಳಿಸಿದ್ದಾರೆ. ಈಗೇನಿದ್ದರೂ ವಿಲನ್ಗಳಾಗಿರುವ ಶಕುಂತಲಾ, ಜೈದೇವ ಎಲ್ಲಾ ಸೇರಿ ಏನು ಮಾಡುತ್ತಾರೋ ನೋಡುವುದು ಒಂದೇ ಬಾಕಿ ಇದೆ.
ಇದರ ನಡುವೆಯೇ, ತನ್ನ ಸರದಲ್ಲಿ ಮೈಕ್ ಅಳವಡಿಸಿರುವುದು ಭೂಮಿಕಾಗೆ ತಿಳಿದಿದ್ದು, ಗಂಡ ಗೌತಮ್ಗೂ ಹೇಳಿದ್ದಾಳೆ. ಆದರೆ ವಿಚಿತ್ರ ಎಂದರೆ, ತನ್ನ ಅತ್ತೆ ಕುತಂತ್ರಿ ಎನ್ನುವುದು ತಿಳಿದಿದ್ದರೂ ಭೂಮಿಕಾಗೆ ಈ ಕುತಂತ್ರ ಮಾಡಿರುವುದು ತನ್ನ ಅತ್ತೆನೇ ಎನ್ನುವುದು ತಿಳಿಯಲಿಲ್ಲ. ಇನ್ನು ಗೌತಮ್ಗೆ ಇದು ತಿಳಿಯಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ಈಗ ಮನೆಯಲ್ಲಿ ಎಲ್ಲೆಲ್ಲಿ ಕ್ಯಾಮೆರಾ ಫಿಕ್ಸ್ ಆಗಿದೆ ಎನ್ನುವುದನದ್ನು ತಿಳಿಯಲು ಎಕ್ಸ್ಪರ್ಟ್ ಕರೆಸುವ ಚಿಂತನೆ ನಡೆಸಿದ್ದಾರೆ ದಂಪತಿ.
ಅಯ್ಯಯ್ಯೋ... ಡಾನ್ಸ್ ಮಾಡ್ತಾ ಮಾಡ್ತಾ ಭಾಗ್ಯಳ ಅಮ್ಮಂಗೆ ಇದೇನಾಗೋಯ್ತು? ವಿಡಿಯೋಗೆ ಫ್ಯಾನ್ಸ್ ಶಾಕ್!
ಆದರೆ ಇದರ ನಡುವೆಯೇ, ಇದೀಗ, ಶಕುಂತಲಾಳ ಸೀರೆಯ ಮೇಲೆ ನೆಟ್ಟಿಗರ ಕಣ್ಣು ಹೋಗಿದೆ. ಅದೇನೆಂದರೆ, ಶಕುಂತಲಾ ಮೂರ್ನಾಲ್ಕು ಸೀರೆ ಮಾತ್ರ ಧರಿಸೋದು ಎಂದು ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ. ಆಗರ್ಭ ಶ್ರೀಮಂತೆಯಾಗಿರುವ ಶಕುಂತಲಾ ಡೇಲಿ ಸ್ನಾನ ಮಾಡಲ್ವಾ? ಪದೇ ಪದೇ ಅದೇ 3-4 ಸೀರೆ ಉಡೋದು ಯಾಕೆ? ಬೇರೆ ಸೀರೆನೇ ಅವಳ ಬಳಿ ಇಲ್ವಾ ಎಂದು ತಮಾಷೆ ಮಾಡುತ್ತಿದ್ದಾರೆ. ಗೌತಮ್ ಆದ್ರೂ ಪಾಪ ಅಮ್ಮನಿಗೆ ಬೇರೆ ಸೀರೆ ಕೊಡಿಸಬೇಕಿತ್ತು ಎಂದು ಕೆಲವರು ಹೇಳಿದರೆ, ಕುತಂತ್ರ ಮಾಡುತ್ತಾ ಇರ್ತಾಳಲ್ಲ, ಅದಕ್ಕೆ ಸ್ನಾನ ಮಾಡಲು, ಬಟ್ಟೆ ಚೇಂಜ್ ಮಾಡಲು ಟೈಮ್ ಸಿಗ್ತಿಲ್ಲ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಸೀರಿಯಲ್ ಪ್ರೇಮಿಗಳು ಪ್ರತಿಯೊಂದನ್ನೂ ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ಎನ್ನುವುದನ್ನು ಸೀರಿಯಲ್ನವರೂ ತಿಳಿದುಕೊಳ್ಳಬೇಕಿದೆ. ಶಕುಂತಲಾ ಪಾತ್ರಧಾರಿಯಾಗಿರುವ ವನಿತಾ ವಾಸು ಅವರು ಒಂದೇ ರೀತಿಯ ಬೇರೆ ಬೇರೆ ಸೀರೆ ಧರಿಸುತ್ತಾರೋ ಗೊತ್ತಿಲ್ಲ, ಆದರೆ ನೆಟ್ಟಿಗರ ಕಣ್ಣು ಮಾತ್ರ ಯಾಕೋ ಅವರ ಸೀರೆಯ ಮೇಲೆ ನೆಟ್ಟಿದೆ. ಮ್ಯಾಚಿಂಗ್ ಇರೋದು ಈ ಸೀರೆಗಳಿಗೆ ಮಾತ್ರ ಅನ್ನಿಸತ್ತೆ ಎಂದು ಕೆಲವರು ತಮಾಷೆ ಕೂಡ ಮಾಡಿದ್ದಾರೆ. ಅದೇ ವೇಳೆ ಸರದಲ್ಲಿರುವ ಮೈಕ್ ಬಗ್ಗೆ ಗೊತ್ತಾಗದ ಭೂಮಿಕಾಳ ಪೆದ್ದುತನಕ್ಕೂ ಅಯ್ಯೋ ಎನ್ನುತ್ತಿದ್ದಾರೆ. ಅದೇ ಇನ್ನೊಂದೆಡೆ ಈ ಹೊಸ ಮಲ್ಲಿಗೆ ಮಲ್ಲಿ ಕ್ಯಾರೆಕ್ಟರ್ ಸರಿ ಕಾಣಿಸುವುದಿಲ್ಲ ಎನ್ನುವುದೂ ಹಲವರ ಅಭಿಮತ. ಅದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದು, ಇದರ ಬಗ್ಗೆ ನಿರ್ದೇಶಕರನ್ನು ಕೇಳಬೇಕು, ನಟರನ್ನು ಅಲ್ಲ ಎನ್ನುತ್ತಿದ್ದಾರೆ.
ಸಂಸಾರದ ನೊಗ ಹೊತ್ತು ಸುಸ್ತಾಗೋದ ಭಾಗ್ಯ ಈ ಪರಿ ಸೊಂಟ ಬಳುಕಿಸೋದಾ? ಬೇಡ ಕಣಮ್ಮಿ ಅಂತಿರೋ ಫ್ಯಾನ್ಸ್