ದೊರೆಸಾನಿ ಸೀರಿಯಲ್‌ನಲ್ಲಿ ಒಂದೇ ಬಗೆಯ ಕತೆ ನೋಡಿ ನೋಡಿ ಬೇಸತ್ತಿರುವ ಪ್ರೇಕ್ಷಕರು 'ಪುರುಷೋತ್ತಮ್ ಅವರೇ ಅದೆಷ್ಟು ಬಾರಿ ಎದೆ ಹಿಡ್ಕೊಂಡು ಕೂತ್ಕೊಳ್ತೀರಾ' ಅಂತಿದ್ದಾರೆ. ಹೊಸತನ ಇಲ್ಲದ ಕತೆಯೇ ಈ ಸೀರಿಯಲ್‌ಗೆ ಶತ್ರುವಾಗ್ತಿದೆ.
ರೂಪಿಕಾ, ಪೃಥ್ವಿ, ಜೈದೇವ್ ಮೋಹನ್, ಭವಾನಿ ಶಂಕರ್ ನಟನೆಯ 'ದೊರೆಸಾನಿ' ಪ್ರೀತಿಯ ಜೊತೆಗೆ ಅಪ್ಪ ಮಗಳ ಕತೆಯ ಸಂಬಂಧದ ಮೇಲೆ ಬಂದಿರುವ ಸೀರಿಯಲ್. ಮರ್ಯಾದೆಗೆ ಅಂಜುವ ಮಧ್ಯಮ ವರ್ಗದ ಪುರುಷೋತ್ತಮ್ ಹಡಗಲಿಗೆ ಮಗಳ ಮೇಲೆ ಬಹಳ ಪ್ರೀತಿ, ಅಭಿಮಾನ. ಅವಳೂ ಸಿಕ್ಕಾಪಟ್ಟೆ ಒಳ್ಳೆತನದ ಅಪ್ಪನಿಗಾಗಿ ಯಾವ ತ್ಯಾಗಕ್ಕೂ ಸಿದ್ಧ ಇರುವ ಮಗಳು. ಆದರೆ ಈ ಫ್ಯಾಮಿಲಿಯನ್ನು ಇಷ್ಟಪಡದ ಸತ್ಯವತಿಗೆ ಪುರುಷೋತ್ತಮ ಹಾಗೂ ಮಗಳು ದೀಪಿಕಾಗಳನ್ನು ಗೋಳು ಹೊಯ್ಯೋದೇ ಕೆಲಸ. ಎಲ್ಲಾ ಸೀರಿಯಲ್‌ಗಳಲ್ಲೂ ವಿಲನ್ ಇರೋಹಂಗೆ ಇದರಲ್ಲಿ ಈ ಸತ್ಯವತಿ ವಿಲನ್ನು.
ಈ ಸೀರಿಯಲ್ ಕತೆ ಶುರು ಶುರುವಿಗೆ ಲವಲವಿಕೆಯಿಂದ ಬರುತ್ತಿತ್ತು. ಆದರೆ ಈಗ ಈ ಸೀರಿಯಲ್‌ನಲ್ಲಿ ಲವಲವಿಕೆಯೇ ಮಾಯವಾಗಿದೆ. ಪುರುಷೋತ್ತಮ್‌ಗೆ ಹೃದಯ ಸಮಸ್ಯೆ ಇದೆ ಅನ್ನೋದನ್ನು ಶುರುವಲ್ಲೇ ತೋರಿಸಲಾಗಿದೆ. ಆದರೆ ಇದೀಗ ಈ ಹೃದಯ ಸಮಸ್ಯೆಯೇ ಪ್ರೇಕ್ಷಕರಿಗೆ ಇರಿಟೇಶನ್ ಕೊಡ್ತಿದೆ. ಏನೇ ಸಣ್ಣ ಘಟನೆ ನಡೆದರೂ ಈ ಪುರುಷೋತ್ತಮ್ ಎದೆ ಹಿಡ್ಕೊಂಡು ಕೂರೋದು, ಮಗಳು ರೂಪಿಕಾ ಅಪ್ಪನ ಈ ಸ್ಥಿತಿಗೆ ತಾನೇ ಕಾರಣ ಅಂತ ಅಳೋದು ತೀರಾ ಕಾಮನ್ ಆಗಿ ಬಿಟ್ಟಿದೆ. ಮನೆ ಮಂದಿ ಸೀರಿಯಲ್ ನೋಡುವಾಗ ಅತ್ತಿತ್ತ ಸುಳಿದಾಡೋ ಮನೆ ಮಗೂನೂ ಕೊಂಚ ಬೈಗುಳದ ಸೀನ್ ಬಂದ ಕೂಡಲೇ ನೋಡಿ ಈಗ ಈ ಅಂಕಲ್ ಎದೆ ಹಿಡ್ಕೊಂಡು ಬೀಳ್ತಾರೆ.. ಅಂತ ಹೇಳುತ್ತೆ. ಆ ಲೆವೆಲ್‌ಗೆ ಸೀರಿಯಲ್‌ನಲ್ಲಿ ಏಕತಾನತೆ ಬಂದಿದೆ.
Sathya Serial: ಅಮೂಲ್ ಬೇಬಿ ನಡುದಾರೀಲಿ ಬಿಟ್ರೆ, ಮದ್ವೆ ಸೀರೆಯಲ್ಲೇ ಬೈಕ್ ಏರಿ ಬಂದ್ಲು ಸತ್ಯ!
ಪುರುಷೋತ್ತಮ್ ಮಧ್ಯಮವರ್ಗದ ಪ್ರೇಕ್ಷಕರನ್ನು ಪ್ರತಿನಿಧಿಸುತ್ತಾರೆ ಅಂತಿಟ್ಟುಕೊಂಡರೂ ಈ ಪಾತ್ರದ ಮೂಲಕ ಈ ಸೀರಿಯಲ್ ಅದೇನ್ ಹೇಳೋದಕ್ಕೆ ಹೊರಟಿದೆ ಅನ್ನೋದೇ ಗೊತ್ತಾಗ್ತಿಲ್ಲ. ಈ ಸೀರಿಯಲ್ ನೋಡುವ ಮಿಡಲ್ ಕ್ಲಾಸ್ ಜನಾನೂ, ಅಯ್ಯೋ ದೇವ್ರೇ, ನಾವೂ ಮಿಡಲ್ ಕ್ಲಾಸ್ ಜನ, ಈ ವರ್ಗದಲ್ಲಿ ಹುಟ್ಟಿರೋದೇ ತಪ್ಪು ಅನ್ನೋ ಹಾಗೆ ಈ ಸೀರಿಯಲ್‌ನಲ್ಲಿ ತೋರಿಸ್ತಿದ್ದಾರಲ್ಲ ಅಂದುಕೊಂಡು ಚಾನೆಲ್ ಚೇಂಜ್ ಮಾಡ್ತಾರೆ. ಒಮ್ಮೆ ತಪ್ಪಿದರೆ ಎರಡು ಸಲ ಇಂಥಾ ಸೀನ್ ತೋರಿಸೋದು ಸರಿ, ಆದರೆ ಪದೇ ಪದೇ ಎದೆ ಹಿಡ್ಕೊಂಡು ಕೂರೋದು ಬೇಕಾ. ಬೀದಿಲಿ ಹೋಗೋ ಜನರೋ, ಹೊರಗಿನವರೋ ಏನೋ ಮಾತಾಡಿದ್ದಕ್ಕೆ ಹಾಗೆ ಎದೆ ಹಿಡ್ಕೊಳ್ಳೋ ಹಾಗೆ ಪಾತ್ರವನ್ನು ತೋರಿಸೋದು ಎಷ್ಟು ಸರಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ಕಮೆಂಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ನಾಯಕಿ ದೀಪಿಕಾ ಪಾತ್ರವನ್ನು ತೀರಾ ಅಳುಮುಂಜಿಯಾಗಿ ಚಿತ್ರಿಸಿರೋದೂ ಜನರಿಗೆ ಸಿಟ್ಟು ತರಿಸಿದೆ. ಆ ನಾಯಕಿಯನ್ನು ಬಾಯಿ ಬರದ ಮೂಕಿ ಹಾಗೆ ಯಾಕೆ ನಿಲ್ಲಿಸುತ್ತೀರಿ, ಅವಳಿಗೆ 'ಅಪ್ಪನ ಈ ಸ್ಥಿತಿಗೆ ನಾನೇ ಕಾರಣ' ಅನ್ನೋದು ಬಿಟ್ಟರೆ ಬೇರೆ ಮಾತನ್ನೇ ಯಾಕೆ ಕೊಡ್ತಾ ಇಲ್ಲ, ಯಾಕೆ ನಾಯಕಿ ಪಾತ್ರವನ್ನು ಇಷ್ಟು ದುರ್ಬಲ ಮಾಡ್ತಿದ್ದೀರಿ ಅಂತ ಜನ ಕೇಳ್ತಿದ್ದಾರೆ.
Sathya serial: ಸ್ಪಾನರ್ ಹಿಡಿಯೋ ಕೈಯಲ್ಲಿ ಸೌಟು ಹಿಡೀತಾಳಾ ಸತ್ಯಾ?
ಸೀರಿಯಲ್ ಪಾತ್ರವನ್ನು ಜನ ನೋಡ್ತಾರೆ. ತಮ್ಮ ಜೊತೆ ರಿಲೇಟ್ ಮಾಡಿಕೊಳ್ತಾರೆ. ಹೀಗಿರುವಾಗ ಮುಖ್ಯ ಪಾತ್ರಗಳನ್ನು ಸ್ವಲ್ಪ ಸ್ಟ್ರಾಂಗ್ ಆಗಿ ತೋರಿಸಬೇಕು. ಗಟ್ಟಿತನದಿಂದ ಕೂಡಿದ ಡೈಲಾಗ್‌ಗಳು ಆ ಪಾತ್ರಗಳಿಗೆ ಇರಬೇಕು. ಬರೀ ಸೋಬರ್ ಆದ ಒಂದೆರಡು ಡೈಲಾಗ್ ಕೊಟ್ಟು ಎದುರಿರುವ ಪಾತ್ರಕ್ಕೆ ಪೂರಾ ಬಿಲ್ಡಪ್ಪು ಕೊಟ್ಟರೆ ಮುಖ್ಯ ಪಾತ್ರಗಳು ದುರ್ಬಲ ಆಗುತ್ತವೆ. ಪುರುಷೋತ್ತಮ ಎದೆ ಹಿಡ್ಕೊಂಡಿದ್ದು ಸಾಕು, ಅವರ ಮಗಳು ರೂಪಿಕಾ ಅಳುಮುಂಜಿಯಾಗಿ ಹೇಳಿದ ಡೈಲಾಗನ್ನೂ ನೂರಾರು ಸಲ ಹೇಳೋದು ಸಾಕು, ಹೊಸತೇನಾದ್ರೂ ಕೊಡಿ ಅಂತ ಪ್ರೇಕ್ಷಕರು ಕೇಳ್ತಿದ್ದಾರೆ.
ಕನ್ನಡತಿ ಸೀರಿಯಲ್ ಮುಗಿದೇ ಹೋಗ್ತಿದೆಯಾ? ಸೀರಿಯಲ್ ಫ್ಯಾನ್ಸ್‌ಗೆ ಬಿಗ್ ಶಾಕ್!