Sathya Serial: ಅಮೂಲ್ ಬೇಬಿ ನಡುದಾರೀಲಿ ಬಿಟ್ರೆ, ಮದ್ವೆ ಸೀರೆಯಲ್ಲೇ ಬೈಕ್ ಏರಿ ಬಂದ್ಲು ಸತ್ಯ!

By Suvarna News  |  First Published May 26, 2022, 2:55 PM IST

ಸತ್ಯಾಗೆ ಅಮೂಲ್ ಬೇಬಿ ಕಾರ್ತಿಕ್ ತಾಳಿ ಕಟ್ಟಿದ್ದಾಯ್ತು, ಮದುಮಗಳನ್ನು ನಡು ರೋಡಲ್ಲಿ ಬಿಟ್ ಬಂದಿದ್ದೂ ಆಯ್ತು, ಆದ್ರ ಸತ್ಯ ಅಷ್ಟಕ್ಕೇ ಸುಮ್ಮನಾಗ್ತಾಳಾ, ಮದುವೆಯ ಸೀರೆ ಮೇಲೆತ್ತಿ ಕಟ್ಟಿ ಬೈಕ್ ಏರಿ ಅಮೂಲ್ ಬೇಬಿ ಫಾಲೋ ಮಾಡ್ಕೊಂಡು ಬಂದೇ ಬಿಟ್ಲು!


ಸೀರಿಯಲ್ ಹೆಸರು ಸತ್ಯ (Sathya). ಜೀ 5 (Zee5)ನಲ್ಲಿ ಪ್ರಸಾರ. ಈ ಹೆಬ್ಬುಲಿ ಮೊದಲಾದ ಸೀರಿಯಲ್ ನಿರ್ದೇಶಿಸಿರುವ ಕೃಷ್ಣ(Krishna) ಅವರ ಹೋಮ್‌ ಬ್ಯಾನರ್‌ನಿಂದ ನಿರ್ಮಾಣವಾಗುತ್ತಿರುವ ಧಾರಾವಾಹಿ. ವರ್ಷದ ಹಿಂದಿಂದ ಪ್ರಸಾರವಾಗ್ತಿರೋ ಈ ಸೀರಿಯಲ್ ಕತೆಯೇ ವಿಶಿಷ್ಟವಾದದ್ದು. ಆ ಕಾರಣಕ್ಕೆ ಆಡಿಯನ್ಸ್‌ನ ಸಖತ್ತಾಗಿ ಸೆಳೆಯುತ್ತಿದೆ. ಇದೀಗ ಈ ಸೀರಿಯಲ್ ಕತೆ ಮತ್ತೊಂದು ದಿಕ್ಕಿಗೆ ಹೊರಳಿದೆ. ಸತ್ಯ ಪ್ರೀತಿಸುತ್ತಿದ್ದ ಅಮೂಲ್ ಬೇಬಿ ಜೊತೆ ಅವಳ ಮದುವೆ(Marriage) ಆಗಿದೆ. ಆದರೆ ಸತ್ಯಗೆ ಇದರಿಂದ ಸಂತೋಷ ಆಗಿಲ್ಲ. ಬದಲಾಗಿ ನೋವಾಗಿದೆ. ಕಾರಣ ಕಾರ್ತಿಕ್‌ ಗೆ ಈ ಮದುವೆ ಇಷ್ಟ ಇಲ್ಲ ಅನ್ನೋದು ಒಂದು ಕಾರಣ ಆದರೆ ಆತನಲ್ಲಿ ತನ್ನ ಬಗ್ಗೆ ಇರುವ ತಪ್ಪು ಅಭಿಪ್ರಾಯ ಇನ್ನೊಂದು. ಕಾರ್ತಿಕ್ ಮನಸ್ಸಲ್ಲಿ ಸದ್ಯಕ್ಕೆ ಇರೋದು ಸತ್ಯಾಳೇ ದಿವ್ಯಾ(Divya) ಜೊತೆಗಿನ ತನ್ನ ಮದುವೆ ತಪ್ಪಿಸಿ ಅವಳೇ ಮದುವೆ ಆಗಿದ್ದಾಳೆ ಅನ್ನೋದು, ಅವಳೊಬ್ಬ ರಾಕ್ಷಸಿಯಂಥಾ ಹುಡುಗಿ ಅಂತಲೂ ಆತ ಅಂದುಕೊಂಡಿದ್ದಾನೆ. ಆದರೆ ರಿಯಲ್‌ನಲ್ಲಿ ಆಗಿರುವ ಸತ್ಯ ಸಂಗತಿ ಅಮೂಲ್ ಬೇಬಿಗೆ ಗೊತ್ತಿಲ್ಲ. ಸದ್ಯಕ್ಕೆ ಆತನಿಗೆ ಸತ್ಯಾ ಜೊತೆ ಜೀವನ ನಡೆಸೋದಕ್ಕೆ ಇಷ್ಟ ಇಲ್ಲ. ಮದುಮಗಳಾಗಬೇಕಿದ್ದ ದಿವ್ಯಾ ಏಕಾಏಕಿ ಮದುವೆ ಮನೆಯಿಂದ ಓಡಿ ಹೋದ ಕಾರಣ ಆತ ಅನಿವಾರ್ಯವಾಗಿ ಸತ್ಯನಿಗೆ ತಾಳಿ ಕಟ್ಟುವ ಹಾಗಾಗಿದೆ.

 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Zee Kannada (@zeekannada)

ಹಿರಿಯರ ಮಾತಿಗೆ ಬೆಲೆ ಕೊಟ್ಟು ಅಮೂಲ್ ಬೇಬಿ ಕಾರ್ತಿಕ್ ಸತ್ಯಳಿಗೇನೋ ತಾಳಿ ಕಟ್ಟಿದ. ಆದರೆ ಅವಳನ್ನು ಹೆಂಡತಿ ಅಂತ ಒಪ್ಪಿಕೊಳ್ಳೋದಕ್ಕೆ ಆತ ಸುತಾರಾಂ ರೆಡಿ ಇಲ್ಲ. ಏನೋ ಅನಿವಾರ್ಯತೆಗೆ ಬಿದ್ದು ಮದುವೆ ಮಂಟಪದಲ್ಲಿ ಅವಳ ಕೊರಳಿಗೆ ಮೂರು ಗಂಟು ಬಿಗಿದಿದ್ದಾಯ್ತು. ಆದರೆ ಮದುವೆ ಆದ ಮೇಲೆ ಸತ್ಯಾ ಜೊತೆಗಿರಬೇಕಾದದ್ದು ಅನಿವಾರ್ಯ ಅಂತ ಆತನಿಗೇನೂ ಅನಿಸಿಲ್ಲ. ಹೀಗಾಗಿ ಮದುವೆ ಮುಗಿಸಿ ಹೊರಟು ದಾರಿ ಮಧ್ಯಕ್ಕೆ ಬಂದಾಗಲೇ ಸತ್ಯಳನ್ನು ಕಾರಿಂದ ಇಳಿಸಿದ್ದಾನೆ. ಅವಳಿಗೂ ತನಗೂ ಸಂಬಂಧವೇ ಇಲ್ಲ, ಇನ್ಮೇಲೆ ಅವಳ್ಯಾರೋ, ತಾನ್ಯಾರೋ ಅನ್ನೋ ಬಗೆಯ ಮಾತನ್ನಾಡಿ ಅವಳನ್ನು ಮಧ್ಯ ದಾರಿಯಲ್ಲೇ ಬಿಟ್ಟು ತನ್ನ ಪಾಡಿಗೆ ತಾನು ಮನೆ ಕಡೆ ಹೊರಟಿದ್ದಾನೆ. ಇನ್ಯಾವತ್ತೂ ಅವಳು ತನ್ನ ಬಳಿ ಬರೋದಿಲ್ಲ. ಅವಳ ಮನೆಯಲ್ಲಿ ಮೊದಲಿನ ಹಾಗೆ ಇದ್ದು ಬಿಡುತ್ತಾಳೆ ಅನ್ನೋದು ಕಾರ್ತಿಕ್(Karthik) ಊಹೆ. ಆದರೆ ಆರಂಭದಿಂದ ಇಂದಿನವರೆಗೂ ಅಮೂಲ್ ಬೇಬಿಯನ್ನು ಊಹೆಯನ್ನು ತಲೆ ಕೆಳಗಾಗಿಸಿದ್ದಾಳೆ ಸತ್ಯಾ. ಈ ಬಾರಿಯೂ ಅದು ಚೇಂಜ್(Change) ಆಗೋದಿಲ್ಲ. ಸತ್ಯಳನ್ನು ಅಮೂಲ್ ಬೇಬಿ ನಡು ರಸ್ತೆಯಲ್ಲಿ ಬಿಟ್ಟಾಗ ಅವಳ ಹುಡುಗರಿಗೆ ಚಿಂತೆ ಆಗುತ್ತೆ. ತಾವೇ ನಿಂತು ತಮ್ಮ ನಾಯಕಿ ಸತ್ಯ ಹಾಗೂ ಕಾರ್ತಿಕ್ ಮದುವೆ ಮಾಡಿ ಆಗಿದೆ. ಇದೀಗ ಎಲ್ಲ ಸುಖಾಂತ್ಯವಾಯಿತು ಅನ್ನುವಾಗ ಕಾರ್ತಿಕ್ ಅವಳನ್ನು ಬಿಟ್ಟು ಹೋದದ್ದು ಅವರಿಗೂ ನುಂಗಲಾರದ ತುತ್ತು.

Sathya serial: ಸ್ಪಾನರ್ ಹಿಡಿಯೋ ಕೈಯಲ್ಲಿ ಸೌಟು ಹಿಡೀತಾಳಾ ಸತ್ಯಾ?

ಸತ್ಯಾಗೆ ಅಮ್ಮ ಹೇಳಿದ ಮಾತು ಕಿವಿಯಲ್ಲಿದೆ. ಗಂಡನ ಮನೆಯ ಸಂಸ್ಕಾರ ಕಲಿತು, ಅವರ ಮನೆಗೆ ಗೌರವ ತರುವ ಹಾಗೆ ಬಾಳಬೇಕು ಅಂತ ಅಮ್ಮ ಹೇಳಿದ್ದಾಳೆ. ಸತ್ಯ ಹಾಗೇ ಬಾಳುವುದಾಗಿ ಅಮ್ಮನಿಗೆ ಮಾತು ಕೊಟ್ಟಿದ್ದಾಳೆ. ಅವಳಿಗೀಗ ಅಮ್ಮನಿಗೆ ಕೊಟ್ಟ ಮಾತು ಉಳಿಸೋದೇ ಮುಖ್ಯ ಆಗುತ್ತೆ.

ಕನ್ನಡತಿ ಸೀರಿಯಲ್‌ ಮುಗಿದೇ ಹೋಗ್ತಿದೆಯಾ? ಸೀರಿಯಲ್ ಫ್ಯಾನ್ಸ್‌ಗೆ ಬಿಗ್‌ ಶಾಕ್‌!

ಸೀರೆ ಮೇಲೆತ್ತಿ ಕಟ್ಟಿ ಬೈಕ್ ಏರಿ ಆಕ್ಸಿಲೇಟರ್ ತಿರುವಿದ್ದಾಳೆ. ಶಾರ್ಟ್ ಕಟ್‌(shortcut)ನಲ್ಲಿ ಅಮೂಲ್ ಬೇಬಿ ಕಾರನ್ನು ಹಿಂಬಾಲಿಸಿ ಕೆಜಿಎಫ್(KGF) ಹೀರೋ ಲೆವೆಲ್‌ನಲ್ಲಿ ಬಂದಿದ್ದಾಳೆ. ಅವಳು ಕಾರ್ತಿಕ್(Karthik) ಕಾರ್ ಪಕ್ಕದಲ್ಲಿ ಬರುವಾಗ ಸಿಗ್ನಲ್(Signal) ಬಿದ್ದಿದೆ. ಆಕಸ್ಮಿಕವಾಗಿ ಆಚೆ ತಿರುಗುವ ಅಮೂಲ್ ಬೇಬಿ ಮದುಮಗಳ ಉಡುಗೆಯಲ್ಲೇ ತನ್ನ ಎಂದಿನ ಸ್ಟೈಲ್‌ನಲ್ಲಿ(style) ಬೈಕ್ ಏರಿ ಬಂದ ಸತ್ಯಳನ್ನು ನೋಡಿ ಮೂರ್ಛೆ ಹೋಗೋದೊಂದು ಬಾಕಿ! ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಲಿ ಅನ್ನೋ ಹಾಗೆ ಸತ್ಯ ಕಣ್ಣಿಗೆ ಬಿದ್ದಿದ್ದಾಳೆ. ಅವನು ಅವಳನ್ನು ಬಿಟ್ಟರೂ ಅವಳು ಅವನನ್ನು ಬಿಡುತ್ತಿಲ್ಲ. ಮುಂದೆ ಅಮೂಲ್ ಬೇಬಿ ಕತೆ ಏನು, ಸತ್ಯ ತನ್ನ ಗಟ್ಟಿತನ ಇಟ್ಟುಕೊಂಡೂ ಹೇಗೆ ಆತನ ಜೊತೆಗೆ ಬಾಳ್ತಾಳೆ ಅನ್ನೋದು ಈ ಸೀರಿಯಲ್‌ ಬಗೆಗಿನ ಇಂಟರೆಸ್ಟ್(interest) ಹೆಚ್ಚಿಸಿದೆ.

Hina Khan ಬೋಲ್ಡ್‌ ಆಂಡ್ ಗ್ಲಾಮರಸ್‌ ಫೋಟೋ ವೈರಲ್‌

click me!