ಸೀತಾರಾಮ ಸೀರಿಯಲ್ ಮದುವೆ ಶೂಟಿಂಗ್, ಸೆಟ್ ತಯಾರಿ ಹೇಗಿತ್ತು ಎಂಬ ಬಗ್ಗೆ ಮಾಹಿತಿ ನೀಡುತ್ತಲೇ ಅಗ್ನಿಸಾಕ್ಷಿಯನ್ನು ನೆನಪು ಮಾಡಿಕೊಂಡಿದ್ದಾರೆ ನಟಿ ವೈಷ್ಣವಿ
ಸಿನಿಮಾ ಆಗಿರಲಿ, ಸೀರಿಯಲ್ ಆಗಿರಲಿ ಎಲ್ಲ ದೃಶ್ಯಗಳಲ್ಲಿಯೂ ನೈಜತೆಯೇ ಇರುತ್ತದೆ. ಹಬ್ಬ-ಹರಿದಿನಗಳೇ ಇರಲಿ, ಯಾವುದೇ ಭರ್ಜರಿ ಕಾರ್ಯಕ್ರಮದ ಸನ್ನಿವೇಶವಿರಲಿ ಇಲ್ಲವೇ ಮದುವೆಯ ಸೀನ್ ಇರಲಿ ಶೂಟಿಂಗ್ ಸೆಟ್ ಆಗಿದ್ದರೂ ಅಸಲಿಯಂತೆ ಕಾಣಿಸುವುದು ಅನಿವಾರ್ಯ. ಅದೇ ರೀತಿ ಸೀತಾರಾಮ ಸೀರಿಯಲ್ನಲ್ಲಿ ಸೀತಾ ಮತ್ತು ರುದ್ರಪ್ರತಾಪ್ ಮದ್ವೆಯ ದೃಶ್ಯವನ್ನು ಅಸಲಿಯಂತೆ ತೋರಿಸಲಾಗಿದ್ದು, ಅದರ ಶೂಟಿಂಗ್ ದಿನ ಹೇಗಿತ್ತು ಎನ್ನುವುದನ್ನು ಸೀತಾ ಪಾತ್ರಧಾರಿ ವೈಷ್ಣವಿ ತೋರಿಸಿದ್ದಾರೆ. ಇದಾಗಲೇ ಅವರು ಸೀತಾರಾಮ ಸೆಟ್ನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಹಿಂದೆ ತೋರಿಸಿದ್ದರು. ಇದೀಗ ಮದ್ವೆಯ ಸೀನ್ ಹೇಗೆ ಇತ್ತು, ಅದಕ್ಕಾಗಿ ಹೇಗೆಲ್ಲಾ ರೆಡಿ ಮಾಡಲಾಗಿತ್ತು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.
ಸೀತಾ ಮತ್ತು ರುದ್ರಪ್ರತಾಪನ ಮದುವೆಗೆ ಭರ್ಜರಿ ಡೆಕೋರೇಷನ್ ಮಾಡಲಾಗಿತ್ತು. ಎಲ್ಲೆಡೆ ಲೈಟಿಂಗ್ಸ್ ಹಾಕಲಾಗಿತ್ತು. ಅಕ್ಷರಶಃ ಶೂಟಿಂಗ್ ಸೆಟ್ ಮದುವೆಯ ಮನೆಯಂತೆಯೇ ಕಂಗೊಳಿಸುತ್ತಿತ್ತು. ಇವೆಲ್ಲವನ್ನೂ ನಟಿ ವೈಷ್ಣವಿ ತೋರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಅಗ್ನಿಸಾಕ್ಷಿಯನ್ನೂ ನೆನಪು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ನಟಿ ವೈಷ್ಣವಿಗೆ ದೊಡ್ಡ ಬ್ರೇಕ್ ಕೊಟ್ಟ ಸೀರಿಯಲ್ ಅಗ್ನಿಸಾಕ್ಷಿ. ಈ ಸೀರಿಯಲ್ನಲ್ಲಿ ಕಿಶೋರ್ ಪಾತ್ರ ಮಾಡಿದ್ದ ಅಮಿತ್ ಅವರ ಪತ್ನಿ ರಶ್ಮಿ ಅವರು ತಮ್ಮ ಮದುವೆಯ ಸೀರೆಯನ್ನು ಡಿಸೈನ್ ಮಾಡಿರುವುದಾಗಿ ಈಗ ವೈಷ್ಣವಿ ನೆನಪು ಮಾಡಿಕೊಂಡಿದ್ದಾರೆ. ನವಿಲು ಹಸಿರು ಸೀರೆ ಹಾಗೂ ಕೆಂಪು ಬಣ್ಣದ ರವಿಕೆ ತೊಟ್ಟ ವೈಷ್ಣವಿ ಸೀತೆಯಾಗಿ ಮದುವೆಗೆ ರೆಡಿಯಾಗಿದ್ದಾರೆ. ಈ ಡಿಸೈನ್ ಅನ್ನು ರಶ್ಮಿ ಅವರು ಮಾಡಿರುವುದಾಗಿ ಅಗ್ನಿಸಾಕ್ಷಿ ಸೀರಿಯಲ್ ನೆನಪು ಮಾಡಿಕೊಂಡಿದ್ದಾರೆ. ಇದೇ ವೇಳೆ ಶೂಟಿಂಗ್ನಲ್ಲಿ ನಡೆದಿರುವ ಎಲ್ಲಾ ದೃಶ್ಯಗಳನ್ನು ತೋರಿಸಿದ್ದಾರೆ.
ಆದರೆ ಸೀತಾರಾಮ ಸೀರಿಯಲ್ ವಿಷಯಕ್ಕೆ ಬರುವುದಾದರೆ ಸೀತಾ ಮತ್ತು ರುದ್ರಪ್ರತಾಪ್ ಮದುವೆ ಮುರಿದು ಬಿದ್ದಿದೆ. ಲಾಯರ್ ರುದ್ರಪ್ರತಾಪನ ಮುಖವಾಡ ಕಳಚಿ ಬಿದ್ದಿದೆ. ಸೀತಾ ಹಾಗೂ ಆಕೆಯ ಮಗಳು ಸಿಹಿಯ ಮೇಲೆ ಜೀವವನ್ನೇ ಇಟ್ಟಿರುವ ರಾಮ್, ಸೀತಾಳಿಗೂ ಪ್ರೀತಿಯನ್ನು ತಿಳಿಸದೇ, ಮನಸ್ಸಿನಲ್ಲಿಯೇ ಪ್ರೀತಿಯನ್ನು ಅದುಮಿಟ್ಟುಕೊಂಡು ಸೀತಾಳ ಮದುವೆಯನ್ನೂ ನೋಡಲು ಮನಸ್ಸು ಮಾಡದೇ ಭಾರವಾರ ಮನಸ್ಸಿನಿಂದ ವಿದೇಶಕ್ಕೆ ತೆರಳಿದ್ದರೂ, ಸೀತಾಗೆ ಮೋಸ ಆಗುತ್ತಿರುವ ವಿಷಯ ತಿಳಿಯುತ್ತಲೇ ವಾಪಸಾಗಿದ್ದಾನೆ. ಸೀತಾಳನ್ನು ಮದುವೆಯಾಗುತ್ತಿದ್ದಂತೆಯೇ ಸಿಹಿಯನ್ನು ಅನಾಥಾಶ್ರಮಕ್ಕೆ ಸೇರಿಸುವ ಪ್ಲ್ಯಾನ್ ಮಾಡಿದ್ದ ಹಾಗೂ ಸೀತಾಳ ಮನೆಯನ್ನು ಆಕ್ರಮಿಸಿಕೊಳ್ಳುವ ಯೋಚನೆ ಮಾಡಿದ್ದ ರುದ್ರಪ್ರತಾಪನ ಮುಖವಾಡವನ್ನು ರಾಮ್ ಬಯಲು ಮಾಡಿದ್ದಾನೆ.
ಸೀತಾ ಮದ್ವೆ ನಿಲ್ಲಿಸಲು ರಾಮನ ಭರ್ಜರಿ ಫೈಟಿಂಗ್! ಶೂಟಿಂಗ್ ಮಾಡಿದ್ದು ಹೀಗೆ ನೋಡಿ: ವಿಡಿಯೋ ವೈರಲ್
ಇತ್ತ ಮುಹೂರ್ತ ಮೀರಿ ಹೋಗುತ್ತಿರುವ ಕಾರಣ ವರಮಾಲೆ ಬದಲಾಯಿಸಿಕೊಳ್ಳುವಂತೆ ಎಲ್ಲರೂ ಮಾಡಿದ ಒತ್ತಾಯದ ಮೇರೆಗೆ ರುದ್ರಪ್ರತಾಪನಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಸಿನಿಮಾದಲ್ಲಿ ಆಗುವಂತೆ ರಾಮನ ಎಂಟ್ರಿ ಆಗಿದ್ದು ಮದುವೆ ಮುರಿದು ಬಿದ್ದಿದೆ. ರುದ್ರಪ್ರತಾಪ್ ಕಡೆಯ ಗೂಂಡಾಗಳು ರಾಮ್ನನ್ನು ಹೊಡೆಯಲು ಬಂದಿದ್ದಾರೆ. ರಾಮ್ ಭರ್ಜರಿ ಫೈಟಿಂಗ್ ಮಾಡಿದ್ದಾನೆ. ಗೂಂಡಾಗಳನ್ನು ಸದೆ ಬಡಿದಿದ್ದಾನೆ. ಇನ್ನೇನು ಸೀತಾ ಮತ್ತು ರಾಮ ಒಂದಾಗುವ ಕಾಲ ಹತ್ತಿರ ಬಂದಾಗಿದೆ.
ಈ ಮಧ್ಯೆಯೇ, ಈ ಫೈಟಿಂಗ್ ದೃಶ್ಯವನ್ನು ಹೇಗೆ ಶೂಟಿಂಗ್ ಮಾಡಲಾಗಿದೆ ಎಂಬ ಬಗ್ಗೆ ಜೀ ಕನ್ನಡ ವಾಹಿನಿ ವಿಡಿಯೋ ಶೇರ್ ಮಾಡಿಕೊಂಡಿದೆ. ಫೈಟಿಂಗ್ ದೃಶ್ಯದ ಮೇಕಿಂಗ್ ವಿಡಿಯೋ ಇದಾಗಿದೆ. ಇದರಲ್ಲಿ ಶೂಟಿಂಗ್ ತಂಡವನ್ನೂ ನೋಡಬಹುದು, ಜೊತೆಗೆ ಫೈಟಿಂಗ್ ಮಾಡುವ ವೇಳೆ ಏನೆಲ್ಲಾ ಆಗಿತ್ತು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಬಗ್ಗೆ ವಿವರಣೆ ನೀಡಿರುವ ಸೀತಾ ಅಂದ್ರೆ ವೈಷ್ಣವಿ ಗೌಡ ಅವರು ಫೈಟಿಂಗ್ ದೃಶ್ಯ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಎಲ್ಲರೂ ತುಂಬಾ ಚೆನ್ನಾಗಿ ಫೈಟ್ ಮಾಡಿದ್ದಾರೆ. ಇದನ್ನು ನೋಡುತ್ತಿರುವಾಗ ನಮಗೇ ಒಂಥರಾ ಭಯವಾಗ್ತಿತ್ತು. ಅವರು ಹೇಗೇಗೋ ಬೀಳ್ತಾ ಇದ್ದರು. ಏನಾಗುತ್ತದೆಯೋ ಎನ್ನುವ ಭಯ ಕಾಡುತ್ತಿತ್ತು ಎಂದಿದ್ದಾರೆ.
ಮತ್ತೆ ಮುನ್ನೆಲೆಗೆ ಬಂತು ಮೀ ಟೂ: ಕಮಲ ಹಾಸನ್ ವಿರುದ್ಧ ಖ್ಯಾತ ಗಾಯಕಿ ಚಿನ್ಮಯಿ ಕೆಂಡಾಮಂಡಲ!