ಅಬ್ಬಬ್ಬಾ..! ಕಾಫಿ ಎಸ್ಟೇಟ್‌, ಅಡಿಕೆ ತೋಟ, ಕಿಶನ್‌ ಬಿಳಗಲಿಯ ವಿಶಾಲವಾದ ಮನೆ ವೈಭವ ತೋರಿಸಿದ ನಮ್ರತಾ ಗೌಡ!

ಬಿಗ್‌ ಬಾಸ್‌ ಕನ್ನಡ ಶೋನಲ್ಲಿ ನಮ್ರತಾ ಗೌಡ, ಕಿಶನ್‌ ಬಿಳಗಲಿ ಕೂಡ ಭಾಗವಹಿಸಿದ್ದರು. ದಶಕಗಳಿಂದ ಇವರಿಬ್ಬರು ಸ್ನೇಹಿತರು. ಈಗ ಕಿಶನ್‌ ಮನೆಗೆ ನಮ್ರತಾ ಗೌಡ ಭೇಟಿ ಕೊಟ್ಟು, ಗ್ರಾಮೀಣ ಭಾಗದ ಸವಿಯನ್ನು ಸವಿದಿದ್ದಾರೆ. ಹೋಮ್‌ ಟೂರ್‌ ವಿಡಿಯೋ ಇಲ್ಲಿದೆ. 

bigg boss kannada 10 namratha gowda shares kishen bilagali home tour video

ಈ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ಡ್ಯಾನ್ಸ್‌ ಶೋ ಮಾಡಿದಾಗಿನಿಂದ ನಟಿ ನಮ್ರತಾ ಗೌಡ, ಕಿಶನ್‌ ಬಿಳಗಲಿ ಸ್ನೇಹಿತರು. ಅಂದಿನಿಂದ ಇಲ್ಲಿಯವರೆಗೆ ಇವರಿಬ್ಬರ ಸ್ನೇಹ ಮುಂದುವರೆದುಕೊಂಡು ಬಂದಿದೆ. ಈಗಾಗಲೇ ಇವರಿಬ್ಬರು ಕೆಲ ಡ್ಯಾನ್ಸ್‌ ವಿಡಿಯೋಗಳಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದರು. ಈಗ ಚಿಕ್ಕಮಗಳೂರಿನಲ್ಲಿರೋ ಕಿಶನ್‌ ಮನೆಗೆ ನಮ್ರತಾ ಗೌಡ ಭೇಟಿ ಕೊಟ್ಟಿದ್ದಾರೆ.‌ ನಮ್ರತಾ ಗೌಡ ಯುಟ್ಯೂಬ್‌ ಚಾನೆಲ್‌ನಲ್ಲಿ ಕಿಶನ್‌ ಮನೆಯ ಹೋಮ್‌ ಟೂರ್ ವಿಡಿಯೋ ಅಪ್‌ಲೋಡ್‌ ಆಗಿದೆ. 

ಮಣ್ಣಿನಲ್ಲೇ ಕಟ್ಟಿರೋ ಸುಂದರ ಮನೆ!
ಕಿಶನ್‌ ಮನೆಗೆ ಹೋಗಬೇಕು ಅಂದ್ರೆ ಜೀಪ್‌ನಲ್ಲಿಯೇ ಸಾಗಬೇಕು. ಐದು ವರ್ಷಗಳಿಂದ ಕಿಶನ್‌ ಮನೆಗೆ ಹೋಗಬೇಕು ಅಂತ ನಮ್ರತಾ ಗೌಡ ಅಂದುಕೊಂಡಿದ್ದರೂ ಕೂಡ ಆಗಿರಲಿಲ್ಲ. ಈ ಬಾರಿ ನಮ್ರತಾ ಗೌಡ ಅವರು ಕಿಶನ್‌ ಮನೆಗೆ ಹೋಗಿದ್ದಾರೆ. ಚಿಕ್ಕಮಗಳೂರಿನ ಬಿಳಗಲಿ ಎನ್ನುವ ಊರಿನಲ್ಲಿ ಹಳೆಯ ಕಾಲದಲ್ಲಿ ಮಣ್ಣಿನಲ್ಲಿ ಕಟ್ಟಿರೋ ಮನೆ ಇದಾಗಿದ್ದು, ಈ ಕಾಲಕ್ಕೆ ತಕ್ಕಂತೆ ಒಂದಷ್ಟು ಮಾಡರ್ನ್‌ ಟಚ್‌ ನೀಡಿದ್ದಾರೆ. ಇನ್ನು ಮನೆ ಕ್ಲೀನ್‌ ಮಾಡೋದು ತುಂಬ ಕಷ್ಟ ಎಂದು ಕಿಶನ್‌ ಅವರೇ ಹೇಳಿದ್ದಾರೆ. 5.7 ಕ್ಕಿಂತ ಹೆಚ್ಚು ಎತ್ತರ ಇರೋದು ಈ ಮನೆಯಲ್ಲಿ ತಲೆ ಬಗ್ಗಿಸಿಕೊಂಡು ಹೋಗಬೇಕು ಎಂದು ಕಿಶನ್‌ ಮೊದಲೇ ಎಚ್ಚರಿಕೆ ಕೊಟ್ಟಿದ್ದಾರೆ.

Latest Videos

ಹಂಚಿನ ಮನೆ! 
ಇನ್ನು ಕಿಶನ್‌ ಅವರ ಮನೆಯ ಟೂರ್‌ನ್ನು ಯುಟ್ಯೂಬ್‌ ಚಾನೆಲ್‌ನಲ್ಲಿ ತೋರಿಸಲಾಗಿದೆ. ಈ ಮನೆ ತುಂಬ ದೊಡ್ಡದಾಗಿದ್ದು, ಸಂಪೂರ್ಣ ಹಂಚಿನ ಮನೆ ಇದಾಗಿದೆ. ಇನ್ನು ಇಡೀ ಮನೆ ತುಂಬ ನ್ಯಾಚುರಲ್‌ ಲೈಟ್‌ ಹೆಚ್ಚಿದೆ. ಕೊಟ್ಟಿಗೆಯ ಜೊತೆಗೆ ಒಂದಷ್ಟು ನಾಯಿಗಳು ಕೂಡ ಇವೆ. ಕಾಫಿ ಸೀಸನ್‌ ಟೈಮ್‌ನಲ್ಲಿ ಉತ್ತರ ಕರ್ನಾಟಕದಿಂದ ಒಂದಷ್ಟು ಕೆಲಸಗಾರರು ಬಂದು, ಕಿಶನ್‌ ಮನೆಯಲ್ಲಿಯೇ ಉಳಿಯುತ್ತಾರೆ. ಅವರಿಗೆಂದು ಇನ್ನೊಂದು ಸಣ್ಣ ಮನೆ ಕಟ್ಟಿಸಿಕೊಡಲಾಗಿದೆ. 

ವಿಶಾಲವಾದ ಮನೆ! 
ಕಾಫಿ, ಅಡಿಕೆ ಒಣಗಿಸಲು ದೊಡ್ಡ ಅಂಗಳವನ್ನು ಮಾಡಲಾಗಿದೆ. ಇಡೀ ಊರಿನಲ್ಲಿ ಪರ್ವತಗಳಿಂದ ಸಿಗುವ ನೀರನ್ನು ಬಳಸುತ್ತಾರೆ. ಕಿಶನ್‌ ಅವರ ಮನೆ ಊರು ಮನೆ ಎಂದು ಪ್ರಸಿದ್ಧಿಯಾಗಿದೆಯಂತೆ, ಊರಿಗೊಂದು ದೇವಸ್ಥಾನ ಇರುತ್ತದೆ. ತುಂಬ ದೊಡ್ಡ ಮನೆ, ಇನ್ನು ವಿಶಾಲವಾದ ಅಂಗಳ ಇಲ್ಲಿದೆ.

ಇಲ್ಲಿ ಅಕ್ಕ-ಪಕ್ಕದಲ್ಲಿ ಮನೆ ಇರೋದಿಲ್ಲ. ಇನ್ನು ಮೂರು ಕಿಲೋ ಮೀಟರ್‌ಗೊಂದು ಒಂದು ಮನೆ ಇದೆ. ಅಲ್ಲೆಲ್ಲವೂ ಎಲ್ಲ ಕಡೆ ಕಿಶನ್‌ ಅವರ ಸಂಬಂಧಿಕರ ಮನೆಯೇ ಇರೋದು ಎನ್ನೋದು ಇನ್ನೊಂದು ವಿಶೇಷ. ಕಿಶನ್‌ ಅವರ ಮನೆಯಲ್ಲಿ ಹೋಮ್‌ ಸ್ಟೇ ಕೂಡ ಇದೆಯಂತೆ.  

ಬಿಗ್‌ ಬಾಸ್‌ ಶೋನಲ್ಲಿ ನಮ್ರತಾ ಗೌಡ, ಕಿಶನ್!‌ 
ಹಿಂದಿಯ ʼಡ್ಯಾನ್ಸ್‌ ದೀವಾನೆʼ ಶೋನಲ್ಲಿ ಮಾಧುರಿ ದೀಕ್ಷಿತ್‌ ಅವರಿಂದಲೇ ಮೆಚ್ಚುಗೆ ಪಡೆದಿದ್ದ ಕಿಶನ್‌ ಅವರು ಕನ್ನಡದ ಡ್ಯಾನ್ಸ್ ರಿಯಾಲಿಟಿ‌ ಶೋನಲ್ಲಿ ಕಾಣಿಸಿಕೊಂಡಿದ್ದರು, ಕನ್ನಡದ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 8ʼ ಶೋನಲ್ಲಿ ಭಾಗವಹಿಸಿದ್ದರು. ಇನ್ನು ದಿವ್ಯಾ ಉರುಡುಗ, ರಿತ್ವಿಕ್‌ ಮಠದ್‌ ನಟನೆಯ ʼನಿನಗಾಗಿʼ ಧಾರಾವಾಹಿಯಲ್ಲಿ ಕಿಶನ್‌ ನಟಿಸಿದ್ದರು. ಇಲ್ಲಿ ಇವರು ವಿಲನ್‌ ಪಾತ್ರ ಮಾಡಿದ್ದರು. ಇದಾದ ಬಳಿಕ ನಮ್ರತಾಗೂ ಬಿಗ್‌ ಬಾಸ್‌ ಮನೆಗೆ ಹೋಗೋಕೆ ಒಂದಷ್ಟು ಸಲಹೆಯನ್ನು ಕೂಡ ನೀಡಿದ್ದರಂತೆ.  ʼನಾಗಿಣಿ 2ʼ, ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ನಟಿಸಿದ್ದ ನಮ್ರತಾ ಗೌಡ ಅವರು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋನಲ್ಲಿ ಕೂಡ ಭಾಗವಹಿಸಿದ್ದರು.  
 

vuukle one pixel image
click me!