
ಇನ್ನೇನು ಎಲ್ಲವೂ ಗೊತ್ತಾಯಿತು, ವಿಲನ್ ಬಂಡವಾಳ ಬಯಲಾಯ್ತು. ಇನ್ನೇನು ಎಲ್ಲವೂ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿಯೇ ಅದಕ್ಕೊಂದು ಟ್ವಿಸ್ಟ್ ಕೊಟ್ಟು ಇನ್ನೊಂದೆರಡು ವರ್ಷ ಟಿಆರ್ಪಿಗೆ ಅನುಗುಣವಾಗಿ ಚ್ಯೂಯಿಂಗ್ ಗಮ್ನಂತೆ ಎಳೆಯುವುದೇ ಸೀರಿಯಲ್ಗಳು. ಈಗ ಬಹುತೇಕ ಧಾರಾವಾಹಿಗಳ ಸ್ಥಿತಿಯೂ ಅದೇ ಆಗಿದೆ. ವಿಲನ್ಗಳ ಬಂಡವಾಳ ಬಯಲಾಗಿದ್ದರೂ, ಅದನ್ನು ಪೆದ್ದು ನಾಯಕನಿಗೆ ಹೇಳುವ ಸ್ಥಿತಿಯಲ್ಲಿ ಮನೆಮಂದಿ ಇಲ್ಲ. ಇತ್ತ ಅಮೃತಧಾರೆಯಲ್ಲಿ ಶಕುಂತಲಾ ಬಗ್ಗೆ ಗೌತಮ್ಗೆ ಇನ್ನೂ ಗೊತ್ತಾಗಿಲ್ಲ, ಸೀತಾರಾಮದಲ್ಲಿ ಭಾರ್ಗವಿ ಬಗ್ಗೆ ರಾಮ್ಗೆ ವಿಷಯ ತಿಳಿದಿಲ್ಲ, ಶ್ರೀರಸ್ತು ಶುಭಮಸ್ತುವಿನಲ್ಲಿ ಶಾರ್ವರಿ ಬಗ್ಗೆ ಮಾಧವ್ಗೆ ತಿಳಿದಿಲ್ಲ, ಬ್ರಹ್ಮಗಂಟುವಿನಲ್ಲಿ ಸೌಂದರ್ಯ ಬಗ್ಗೆ ಚಿರುಗೆ ವಿಷ್ಯ ಗೊತ್ತಾಗಿಲ್ಲ... ಹೀಗೆ ಹೀರೋಗಳು ಎಂದರೆ ಮೂರ್ಖರು ಎಂದು ತೋರಿಸುವ ಸೀರಿಯಲ್ಗಳು ಸುತ್ತಿ ಸುತ್ತಿ ಒಂದೇ ರೀತಿಯ ಕಥೆಗಳನ್ನೇ ನೀಡುತ್ತಿವೆ.
ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್ ವಿಷ್ಯಕ್ಕೆ ಬರುವುದಾದರೆ ವಿಲನ್ ರಾಧಾ, ರಾಜಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಸ್ನೇಹಾ-ಕಂಠಿ ಮದ್ವೆನೂ ಆಗಿದೆ. ರಾಧಾ ಜೈಲುಪಾಲೂ ಆಗಿದ್ದಾಳೆ. ಇನ್ನೇನು ಸೀರಿಯಲ್ ಮುಗಿದೇ ಹೋಯ್ತು ಎನ್ನೋ ಹೊತ್ತಿನಲ್ಲಿಯೇ ಕಂಠಿ ಮುನಿಸಿಕೊಂಡು ಮನೆಬಿಟ್ಟು ಹೋದ ಹಾಗೆ ತೋರಿಸಿದ್ದರಿಂದ ಪ್ರೇಕ್ಷಕರು ಗೋಳೋ ಎನ್ನುತ್ತಿದ್ದರು. ಆದರು ಮುಂದೇನಾಗುತ್ತದೆ ಎಂದು ಸೀರಿಯಲ್ ನೋಡುವುದಂತೂ ಬಿಡುವುದಿಲ್ಲ ಬಿಡಿ, ಇದು ನಿರ್ದೇಶಕರಿಗೂ ಚೆನ್ನಾಗಿ ಗೊತ್ತಿರುತ್ತೆ. ಕೊನೆಗೆ ಸ್ನೇಹಾನೇ ಮರ್ಯಾದೆ ಬಿಟ್ಟು ಫಸ್ಟ್ ನೈಟ್ ಮಾಡಿದ್ರೆ ಎಲ್ಲಾ ಸರಿಯಾಗತ್ತೆ ಎಂದಿದ್ದರಿಂದ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಕಂಠಿ ಸ್ನೇಹಾ ಒಂದಾಗಿದ್ದಾರೆ. ಇನ್ನು ಮೊದಲ ರಾತ್ರಿ ಆಗೋದೊಂದೇ ಬಾಕಿ.
ತಣ್ಣೀರು ಸುರ್ಕೊಂಡು, ಉರುಳು ಸೇವೆಗೈದು, ನೆಲದಲ್ಲಿ ಡ್ರೋನ್ ಪ್ರತಾಪ್ ಊಟ: ಎಲ್ಲಾ ಗಗನಾಗೋಸ್ಕರವಂತೆ!
ಅದೇ ಇನ್ನೊಂದೆಡೆ, ಅಮೃತಧಾರೆ. ಇಲ್ಲಿ ಶಕುಂತಲಾ ವಿಲನ್ ಎನ್ನುವುದನ್ನು ಸಾಕ್ಷಿ ಸಮೇತ ಮಾಧವ್ಗೆ ತೋರಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ ಭೂಮಿಕಾ, ಆನಂದ್ ಮುಂತಾದವರು. ಸದ್ಯ ಶಕುಂತಲಾ ಹೆಸರು ಪಂಕಜಾ ಎನ್ನುವ ಕ್ಲೂ ಅವರಿಗೆ ಸಿಕ್ಕಿದೆ. ಪಂಕಜಾ ಹೆಸರು ಹೇಳಿಕೊಂಡು ಒಬ್ಬಾಕೆ ಕಾಲ್ ಮಾಡಿದ್ದಾಳೆ. ಫೋನ್ ಅನ್ನು ಶಕುಂತಲಾ ಎತ್ತಿದ್ದಾಳೆ. ಅದು ಭೂಮಿಕಾಗೆ ತಿಳಿದಿದೆ. ಆ ಮಹಿಳೆ ಶಕುಂತಲಾಳನ್ನು ಭೇಟಿಯಾಗಲು ಹೇಳಿದ್ದಾಳೆ. ಅವರು ಏನು ಮಾತನಾಡುತ್ತಾರೆ ಎಂದು ನೋಡಲು ಭೂಮಿಕಾ ಪತ್ತೆದಾರಿ ಕೆಲಸ ಮಾಡುತ್ತಿದ್ದಾಳೆ. ಒಟ್ಟಿನಲ್ಲಿ ಶಕುಂತಲಾಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಈ ಎರಡೂ ಸೀರಿಯಲ್ಗಳಲ್ಲಿ ಮುಹೂರ್ತ ಫಿಕ್ಸ್ ಮಾಡುವ ಮೂಲಕ ಟ್ವಿಸ್ಟ್ ನೀಡಲಾಗಿದೆ. ಪುಟ್ಟಕ್ಕನ ಮಕ್ಕಳುವಿನಲ್ಲಿ ಎಲ್ಲವೂ ಮುಗಿದ ಕಾರಣ, ಸೀರಿಯಲ್ ಮುಗಿಸುತ್ತಾರೆಯೋ ಎಂದು ವೀಕ್ಷಕರು ಕಾದಿದ್ದರೆ, ಅಮೃತಧಾರೆ ಸದ್ಯ ಮುಗಿಯುವ ಸೂಚನೆ ಇಲ್ಲ. ಶಕುಂತಲಾ ಇಷ್ಟು ಬೇಗ ಸಿಕ್ಕಾಕಿಕೊಳ್ಳಲು ನಿರ್ದೇಶಕರು ಬಿಡುವುದಿಲ್ಲ ಎನ್ನುವ ಸತ್ಯ ವೀಕ್ಷಕರಿಗೂ ಗೊತ್ತಿದೆ. ಒಟ್ಟಿನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾ ಜನರನ್ನು ರಂಜಿಸುತ್ತಿದ್ದಾರೆ ಸೀರಿಯಲ್ ತಾರೆಯರು.
ಬರ್ತ್ಡೇ ದಿನ ಹೇಳ್ಬೇಕಿತ್ತು, ತಡವಾಯಿತು ಎನ್ನುತ್ತಲೇ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಸಂಗೀತಾ ಶೃಂಗೇರಿ]
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.