ಜಾಸ್ತಿ ಆಯ್ತು, ಅವರಿಬ್ಬರೂ ದೂರ ಆಗ್ಬೇಕು ಅನ್ನಿಸ್ತಿತ್ತು; ಹೀಗಂದ್ರಾ ನಮ್ರತಾ ಗೌಡ!

By Shriram Bhat  |  First Published Jan 14, 2024, 12:53 PM IST

ಯಾವಾಗಲೂ ತುಕಾಲಿ ಅವರನ್ನು ವಿರೋಧಿಸುವ ನಮ್ರತಾ ಕೂಡ, ‘ಜಾಸ್ತಿ ನನಗೆ ಅನಿಸುತ್ತಿತ್ತು. ಇವರಿಬ್ಬರೂ ದೂರ ಆಗಬೇಕು ಎಂದು. ಆದರೆ ಈವತ್ತು…’ ಎಂದು ಹೇಳಿ ಹಾಗಾಗಬಾರದು ಎಂದು ತಲೆಯಾಡಿಸಿದ್ದಾರೆ. ಅವರ ಬಗ್ಗೆ ಕಿಚ್ಚ ಸುದೀಪ್ ಅವರೇ ಮನಃಪೂರ್ವಕವಾಗಿ ಹೊಗಳಿದ್ದಾರೆ. 


ಶುಕ್ರವಾರ ರಾತ್ರಿ ಬಿಗ್‌ಬಾಸ್‌ ಬಿನ್‌ಬ್ಯಾಗ್‌ ಮೇಲೆ ಕೂತಿದ್ದ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಇಬ್ಬರೂ ತಮ್ಮ ಜರ್ನಿಯನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದರು. ಇಬ್ಬರಲ್ಲಿ ಯಾರಾದರೂ ಹೊರಗೆ ಹೋದರೆ ಎಂದು ಅಂದುಕೊಂಡು ಪರಸ್ಪರ ಸಂತೈಸಿಕೊಂಡಿದ್ದರು. ಅವರ ಮಾತು ನಿಜವಾಗುವ ಗಳಿಗೆ ಸಮೀಪ ಬಂದಂತಿದೆ. ಈ ಬಗ್ಗೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ದೊರಕಿದೆ.

‘ಸೂಪರ್ ಸಂಡೆ ವಿತ್ ಸುದೀಪ್‌’ ಎಪಿಸೋಡ್‌ನಲ್ಲಿ ಸುದೀಪ್ ಸೇಫ್‌ ಆದ ಎಲ್ಲರನ್ನೂ ಹೇಳುತ್ತ ಕೊನೆಯಲ್ಲಿ, ವರ್ತೂರು ಸಂತೋಷ್ ಹಾಗು ತುಕಾಲಿ ಸಂತೋಷ್ ಅವರೇ ನಿಮ್ಮಿಬ್ಬರಲ್ಲಿ ಒಬ್ಬರನ್ನು ಈವತ್ತು ಹೊರಗಡೆ ಕಳಿಸಬೇಕಾಗಿದೆ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ಇಬ್ಬರ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಅಳುತ್ತಲೇ, ತುಕಾಲಿ ಸಂತೋಷ್, ‘ನಾನು ಹೊರಡಬೇಕಿದ್ದರೆ, ಚೆನ್ನಾಗಿ ಆಡಿ ಗೆದ್ಕೊಂಡು ಬಾ ಎಂದು ಹೇಳೋಕೆ ಇಷ್ಟಪಡ್ತೀನಿ’ ಎಂದು ಹೇಳಿದ್ರೆ, ವರ್ತೂರು ಸಂತೋಷ್ ಅವರು, ‘ಅವರು ಗೆಲ್ಲುವುದನ್ನು ನಾನು ನೋಡಬೇಕು’ ಎಂದು ಹೇಳಿದ್ದಾರೆ.

Tap to resize

Latest Videos

ಬಾಗಿಲು ತೆಗಿ ಭಾಗೀರಥಿ ಎಂದ್ರು ಪ್ರಶಾಂತ್ ಸಿದ್ಧಿ; 'ಮತ್ಸ್ಯಗಂಧ'ದ ಕಿಕ್ ಕೊಟ್ಟು ಎಲ್ಲಿಗೆ ಕರೀತಿದಾರೆ ನೋಡ್ರಿ!

ಯಾವಾಗಲೂ ತುಕಾಲಿ ಅವರನ್ನು ವಿರೋಧಿಸುವ ನಮ್ರತಾ ಕೂಡ, ‘ಜಾಸ್ತಿ ನನಗೆ ಅನಿಸುತ್ತಿತ್ತು. ಇವರಿಬ್ಬರೂ ದೂರ ಆಗಬೇಕು ಎಂದು. ಆದರೆ ಈವತ್ತು…’ ಎಂದು ಹೇಳಿ ಹಾಗಾಗಬಾರದು ಎಂದು ತಲೆಯಾಡಿಸಿದ್ದಾರೆ. ಅವರ ಬಗ್ಗೆ ಕಿಚ್ಚ ಸುದೀಪ್ ಅವರೇ ಮನಃಪೂರ್ವಕವಾಗಿ ಹೊಗಳಿದ್ದಾರೆ. ‘ಯಾರಲ್ಲಿಯೂ ನೋಡದ ಒಂದು ಭಾಂದವ್ಯವನ್ನು ನಿಮ್ಮಿಬ್ಬರಲ್ಲಿ, ಈ ಸೀಸನ್‌ನಲ್ಲಿ ನಾನು ನೋಡಿದ್ದೀನಿ. ನಿಷ್ಕಳಂಕವಾದ ಫ್ರೆಂಡ್‌ಷಿಪ್‌ ಅದು’ ಎಂದಿದ್ದಾರೆ. 

ಬೀಟ್ ಗುರೂಸ್ ಸಂಗೀತ ಸಂಸ್ಥೆಯ ಮ್ಯೂಸಿಕ್ ಮಸ್ತಿಗೆ ಜೈ; ಸ್ಯಾಂಡಲ್‌ವುಡ್‌ ಅಂಗಳದಲ್ಲೂ 'ಡಿಜೆಂಬೆ' ಕಲರವ!

ಹಾಗಾದರೆ ಸಂತು-ಪಂತು ಈ ಇಬ್ಬರಲ್ಲಿ ಯಾರಿಗೆ ಈ ವಾರ ಮನೆಯಿಂದ ಗೇಟ್‌ಪಾಸ್ ಸಿಗುತ್ತದೆ? ಯಾರು ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಳ್ಳುತ್ತಾರೆ? ಆಪ್ತಸ್ನೇಹಿತ ಇಲ್ಲದೆ ಮನೆಯೊಳಗೆ ಹೇಗಿರುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಂದಿನ ‘ಸೂಪರ್ ಸಂಡೆ ವಿತ್ ಸುದೀಪ್’ ಎಪಿಸೋಡ್‌ನಲ್ಲಿ ಸಿಗಲಿದೆ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಶನಿವಾರ-ಭಾನುವಾರದ ವಾರಾಂತ್ಯದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.00ಕ್ಕೆ ವೀಕ್ಷಿಸಬಹುದು. 

click me!