ಬಿಗ್ಬಾಸ್ ಮನೆಯಲ್ಲಿ ಈ ವಾರ ವರ್ತೂರು ಸಂತೋಷ ಮತ್ತು ತುಕಾಲಿ ಸಂತೋಷ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಿದ್ದಾರೆ. ಯಾರದು?
ಬಿಗ್ ಬಾಸ್ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿ 13 ವಾರ ಕಳೆದಿವೆ. ಅಂತಿಮ ಘಟ್ಟದಲ್ಲಿ ಯಾರು ಫಿನಾಲೆ ತಲುಪಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಉಳಿದಿದ್ದು ಇನ್ನು ಎರಡು ಮತ್ತೊಂದು ವಾರ ಮಾತ್ರ. ಏಳು ಮಂದಿ ಸದ್ಯ ಫಿನಾಲೆ ತಲುಪುವ ಹಂತದಲ್ಲಿದ್ದಾರೆ. ಇದಾಗಲೇ ಸಂಗೀತಾ ಶೃಂಗೇರಿ ಅವರಿಗೆ ಫಿನಾಲೆ ಟಿಕೆಟ್ ಸಿಕ್ಕಿದ್ದು, ಉಳಿದ ಆರು ಮಂದಿಗಳಲ್ಲಿ ಯಾರು ಎಂಬುದೇ ಕುತೂಹಲವಾಗಿದೆ. ಫೆಬ್ರವರಿ 4 ರಂದು ಬಿಗ್ ಬಾಸ್ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎನ್ನಲಾಗಿದೆ. ಈ ಅಂತಿಮ ಘಟ್ಟದಲ್ಲಿ ಬಿಗ್ ಬಾಸ್ ಜರ್ನಿಯಲ್ಲಿ ಗೆಲ್ಲುವವರು ಯಾರು ಎನ್ನುವ ಲೆಕ್ಕಚಾರ ಕೂಡ ಶುರುವಾಗಿದೆ. ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಕಾಂಪಿಟೇಷನ್ ಶುರುವಾಗಿದೆ. ಪೋಸ್ಟರ್ಗಳ ಭರಾಟೆಯೂ ಸಕತ್ ಸ್ಟ್ರಾಂಗ್ ಆಗುತ್ತಲೇ ಸಾಗಿದೆ.
ಇದರ ನಡುವೆಯೇ ಕಿಚ್ಚ ಸುದೀಪ್ ಸಂತೋಷ್ ಫ್ಯಾನ್ಸ್ಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದೇನೆಂದರೆ ಈ ವಾರ ಒಬ್ಬರು ಸಂತೋಷ್ ಮನೆಯಿಂದ ಹೊರಹೋಗಲಿದ್ದಾರೆ. ಆದರೆ ಯಾವ ಸಂತೋಷ್ ಎನ್ನುವ ವಿಷಯ ಇನ್ನೂ ಬಹಿರಂಗಗೊಂಡಿಲ್ಲ. ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಮಧ್ಯೆ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಾರೆ ಎನ್ನುವ ಹಿಂಟ್ ಅನ್ನು ಕಿಚ್ಚ ಸುದೀಪ್ ಅವರು ಕೊಟ್ಟಿದ್ದು, ಅದರ ಪ್ರೊಮೋ ಬಿಡುಗಡೆಯಾಗಿದೆ. ಸಂತು-ಪಂತು ಜೋಡಿ ಎಂದೇ ಫೇಮಸ್ ಆಗಿರುವ ಇವರಿಬ್ಬರು ಮೊದಲಿನಿಂದಲೂ ಸ್ನೇಹಿತರಾಗಿಯೇ ಇದ್ದರು. ಇವರ ಗೆಳೆತನವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಆದರೆ ಇದರಲ್ಲಿ ಒಬ್ಬರು ಸಂತೋಷ್ ಹೊರಹೋಗಬೇಕಾದ ಅನಿವಾರ್ಯತೆ ಬಂದಿದೆ.
ಲಕ್ಷ್ಮೀ ಬಾರಮ್ಮಾ ಕೀರ್ತಿಯ ಭವಿಷ್ಯ, ಬಾಲೆಯಾಗಿದ್ದಾಗಲೇ ನುಡಿದಿದ್ದ ನಟ ದ್ವಾರಕೀಶ್: ವಿಡಿಯೋ ವೈರಲ್
ಇದನ್ನು ಹೇಳುತ್ತಿದ್ದಂತೆಯೇ ಇಬ್ಬರೂ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಮುಂದುವರೆಯುವುದು ನೀನೇ ಆಗಿದ್ದರೆ ತುಂಬಾ ಚೆನ್ನಾಗಿ ಆಡು, ಬಿಗ್ಬಾಸ್ ಗೆದ್ದು ಬಾ ಎಂದು ಪರಸ್ಪರರು ಹೇಳಿಕೊಂಡಿದ್ದಾರೆ. ನಂತರ ತಬ್ಬಿಕೊಂಡು ಅತ್ತಿದ್ದಾರೆ. ವರ್ತೂರು ಸಂತೋಷ್ ಎಲಿಮಿನೇಟ್ ಆಗುತ್ತಾರೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ತುಕಾಲಿ ಸಂತೋಷ್ ಅವರು ಅಳುತ್ತಾ ಕೂತಿದ್ದರು. ಈ ಇಬ್ಬರು ಸಂತೋಷ್ ಅವರು ಪರಸ್ಪರ ತುಂಬಾ ಆತ್ಮೀಯ ಸ್ನೇಹಿತರಾಗಿದ್ದಾರೆ. ಅವರಿಬ್ಬರ ಗೆಳೆತನದ ಬಗ್ಗೆ ಕಿಚ್ಚ ಸುದೀಪ್ ಅವರೂ ಹೊಗಳಿದ್ದಾರೆ. ಆದರೆ ಇದೀಗ ಇಬ್ಬರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದು ಸೀಕ್ರೇಟ್ ಆಗಿದೆ.
ಅದೇ ಇನ್ನೊಂದೆಡೆ, ಸೋಮವಾರ ಸಂಕ್ರಾಂತಿ ಹಬ್ಬ ಇರುವ ಹಿನ್ನೆಲೆಯಲ್ಲಿ ಎಲಿಮಿನೇಷನ್ ರೌಂಡ್ ಇಲ್ಲ ಎನ್ನಲಾಗುತ್ತಿದೆ. ಇದೇ ವೇಳೆ ಕಾರ್ತಿಕ್ ಹೆಗಲೇರಿದ ಶನಿಯ ಬಗ್ಗೆಯೂ ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ಮಾತನಾಡಿದ್ದಾರೆ. ಈ ಪದ ಯಾಕೆ ಬಳಕೆಯಾಯ್ತು ಹಾಗೂ ಆ ಪಟ್ಟ ಯಾರಿಗೆ ಸಿಕ್ಕಿತ್ತು ಎಂಬುದನ್ನು ವರ್ತೂರು ಸಂತೋಷ್ ಮತ್ತು ಕಾರ್ತಿಕ್ ಬಳಿ ಸುದೀಪ್ ಪ್ರಶ್ನಿಸಿದ್ದಾರೆ. ಈ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಶನಿ ಎಂದು ಕಾರ್ತಿಕ್ ಹೇಳಿದ್ದನ್ನು ವರ್ತೂರು ಕಿಚ್ಚನ ಮುಂದೆ ವಿವರಿಸಿದ್ದಾರೆ.
ಮಿಸ್ಟರಿ ಮ್ಯಾನ್ ಜೊತೆ ನಟಿ ಕಂಗನಾ ರಣಾವತ್! ಕೈಕೈಹಿಡಿದು ನಡೆದ ಈ ವಿದೇಶಿಗ ಯಾರು?