ನಿಜಕ್ಕೂ ತ್ರಿವಿಕ್ರಮ್ ಎಲಿಮಿನೇಟ್ ಆಗಿಲ್ವಾ? ಬಿಗ್ ಬಾಸ್ ವೋಟಿಂಗ್ ಲೈನ್ಸ್ ಕ್ಲೋಸ್ ಮಾಡಿದ್ದು ನಿಜವೇ? ಸೋಮವಾರ ಕೂಡ ಸುದೀಪ್ ಬಂದಿದ್ರಾ?
ಬಿಗ್ ಬಾಸ್ ಸೀಸನ್ 11, 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಫಿನಾಲೆ ಬಿಸಿ ಸ್ಪರ್ಧಿಗಳಿಗೆ ಮುಟ್ಟಲಿದೆ ಅನ್ನೊಷ್ಟರಲ್ಲಿ ಬಾದ್ ಶಾ ಕಿಚ್ಚ ಸುದೀಪ್ ಟಫ್ ಸ್ಪರ್ಧಿ ತ್ರಿವಿಕ್ರಮ್‌ಗೆ ಬುದ್ಧಿ ಕಲಿಸಿದ್ದಾರೆ.ಈ ವಾರ ತಂಡದ ನಾಯಕನಾಗಿದ್ದ ತ್ರಿವಿಕ್ರಮ್ ತಮ್ಮ ತಂಡ ಮಾಡಿದ ತಪ್ಪನ್ನ ತನ್ನ ಮೇಲೆ ಹಾಕಿಕೊಂಡು ಸೆಲ್ಫ್ ನಾಮಿನೇಟ್ ಮಾಡಿಕೊಳ್ಳುತ್ತಾರೆ. ಭವ್ಯಾ ಗೌಡ ಮತ್ತು ರಜತ್ ಎಷ್ಟೇ ಬುದ್ಧಿ ಹೇಳಿದರೂ ತ್ರಿವಿಕ್ರಮ್ ಕೇರ್ ಮಾಡಲಿಲ್ಲ ಹೀಗಾಗಿ ವೀಕೆಂಡ್ ಕಾರ್ಯಕ್ರಮದಲ್ಲಿ ಸುದೀಪ್ ಸರಿಯಾಗಿ ಬುದ್ಧಿ ಕಲಿಸಿದ್ದಾರೆ ಅಂತಿದ್ದಾರೆ ವೀಕ್ಷಕರು.
ಬಾಟಮ್ 2 ಆಗಿ ಐಶ್ವರ್ಯ ಮತ್ತು ತ್ರಿವಿಕ್ರಮ್ ಬಂದಿದ್ದರು. ಆಗ ಐಶ್ವರ್ಯ ಸೇಫ್ ಆಗಿ ತ್ರಿವಿಕ್ರಮ್ ಔಟ್ ಆಗುತ್ತಾರೆ. ಐಶ್ವರ್ಯ ಸೇಫ್ ಆದೆ ಅನ್ನೋ ಖುಷಿಗಿಂತ ತ್ರಿವಿಕ್ರಮ್ ಹೋಗುತ್ತಿದ್ದಾರೆ ಅನ್ನೋ ಶಾಕ್‌ನಲ್ಲಿ ಇದ್ದರು. ಇಡೀ ಮನೆ ಒಂದು ಸಲ ಪಿನ್ ಡ್ರಾಪ್ ಸೈಲೆಂಟ್ ಆಗಿಬಿಡ್ತು. ಆದರೆ ಭವ್ಯಾ ಗೌಡ ಏನ್ ಮಾಡಿದರೂ ಅಳು ನಿಲ್ಲಿಸುತ್ತಿರಲಿಲ್ಲ. ಭವ್ಯಾರನ್ನು ಸಮಾಧಾನ ಮಾಡಲು ಯಾರಿಂದಲೂ ಆಗುತ್ತಿರಲಿಲ್ಲ. ಕಳೆದ ವಾರ ಹೊರ ಹೋಗಿದ್ದು ಗೋಲ್ಡ್ ಸುರೇಶ್‌ರನ್ನು ಕರೆಸಿ ಬಿಗ್ ಬಾಸ್ ಮಾತನಾಡಿಸಿ ಭಾನುವಾರ ಸಂಚಿಕೆ ಮುಗಿಸಿದ್ದರು. ಸೋಮವಾರ ಪ್ರಸಾರವಾದ ಎಪಿಸೋಡ್‌ನಲ್ಲಿ ಸುದೀಪ್‌ರವರ ಮುಂದುವರೆದ ಮಾತುಕತೆಯನ್ನು ಪ್ರಸಾರ ಮಾಡಿದ್ದರು.ಆಗ ಸತ್ಯವನ್ನು ರಿವೀಲ್ ಮಾಡುತ್ತಾರೆ.
undefined
43 ವರ್ಷ ಆದ್ರೂ 4ನೇ ಮದ್ವೆಗೆ ರೆಡಿಯಾದ ಖ್ಯಾತ ನಟಿ ವನಿತಾ; ಈಗಲೂ ಮಕ್ಳು ಆಗುತ್ತಾ ಎಂದು ಕಾಲೆಳೆದ ನೆಟ್ಟಿಗರು
ಕಳೆದ ವಾರ ಗೋಲ್ಡ್ ಸುರೇಶ್ ಹೊರ ಹೋದ ಕಾರಣ ಈ ವಾರ ವೋಟಿಂಗ್ ಲೈನ್ಸ್‌ನ ಕ್ಲೋಸ್ ಮಾಡಲಾಗಿದೆ. ಹೀಗಾಗಿ ತ್ರಿವಿಕ್ರಮ್ ಔಟ್ ಆಗಿಲ್ಲ ಬಿಗ್ ಬಾಸ್ ತಂಡದವರು ಕಪ್ಪು ಬಟ್ಟೆಯನ್ನು ಕಟ್ಟಿ ಒಂದು ಗಂಟೆಗಳ ಕಾಲ ತ್ರಿವಿಕ್ರಮ್‌ರನ್ನು ಕೂರಿಸಿದ್ದಾರೆ. ಅವರು ವಾಸಪ್ ಬರುತ್ತಾರೆ. ಎಂದು ಈ ಮೂಲಕ ತಮ್ಮನ್ನು ತಾವು ನಾಮಿನೇಟ್ ಮಾಡಿಕೊಳ್ಳುವ ಸ್ಪರ್ಧಿಗಳಿಗೆ ಬುದ್ಧಿ ಕಲಿಸಿದ್ದರು. ಈ ವಾರ ತ್ರಿವಿಕ್ರಮ್ ನಾಮಿನೇಟ್ ಮಾಡಿಕೊಂಡಿದ್ದಕ್ಕೆ ಬಿಗ್ ಬಾಸ್ ಮನೆಯ ತ್ಯಾಗರಾಜ ಅನ್ನೋ ಟೈಟಲ್ ಕೊಟ್ಟಿದ್ದರು ಸುದೀಪ್. ಈಗ ಬಹುಷ ತ್ರಿವಿಕ್ರಮ್‌ಗೆ ಬುದ್ಧಿ ಬಂದಿರುತ್ತದೆ.
ಕಾಪರ್ Tಯಿಂದ ಮಕ್ಕಳಾಗುವುದನ್ನು ತಡಿಬೋದು; ಕಾಂಡೋಮ್‌ಗಿಂತ ಸ್ಟ್ರಾಂಗ್ ಅಂತಾರೆ ನಿಜವೇ?
ಭವ್ಯಾ ಗೌಡ ಜೊತೆ ಪ್ರೀತಿಯಲ್ಲಿ ಬಿದ್ಧು ಸರಿಯಾಗಿ ಆಟವಾಡುತ್ತಿರಲಿಲ್ಲ ಫೇಕ್ ಎಲಿಮಿನೇಷನ್ ಮಾಡಿ ಬಿಗ್ ಬಾಸ್ ಬುದ್ಧಿ ಕಲಿಸಿ ಬಿಸಿ ಮುಟ್ಟಿಸಿದ್ದು ಒಳ್ಳೆಯದು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
'ಶ್ರೀಲೀಲಾ ಮೈಬಣ್ಣವಲ್ಲ, ಆಕೆಯ ಮನಸ್ಸೇ ಗೋಲ್ಡ್..' ದಿವ್ಯಾಂಗ ಮಕ್ಕಳ ಜೊತೆ ಬ್ಯೂಟಿಯ ಬಿಂದಾಸ್ ಡೇ!