ನಟ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಇತ್ತೀಚೆಗೆ ವಿಚ್ಛೇದನದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಡ್ರೆಸ್ ತೊಟ್ಟ ಡಾನ್ಸ್ ವಿಚ್ಛೇದನಕ್ಕೆ ಕಾರಣ ಎಂದು ಕೆಲವರು ಹೇಳಿದ್ದಕ್ಕೆ ಯಶಸ್ವಿನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಮದುವೆಗಳು ಹೊಸದಲ್ಲ, ವಿಚ್ಚೇದನಗಳು ಹೊಸತಲ್ಲ. ಆದರೆ, ಕೆಲವೊಂದು ಜೋಡಿಗಳ ವಿಚಾರದಲ್ಲಿ ವಿಚ್ಛೇದನದ ಕುರಿತಾಗಿ ಬರುವ ಮಾಹಿತಿಗಳು ಆರಂಭದಲ್ಲಿ ರೂಮರ್ ಆಗಿಯೇ ಇರುತ್ತವೆ. ಬಳಿಕ ನಿಜವಾಗುತ್ತದೆ. ಅಂಥದ್ದೇ ಒಂದು ಸಂಗತಿ ನಟ ಮಾಸ್ಟರ್ ಆನಂದ್ ಫ್ಯಾಮಿಲಿ ವಿಚಾರವಾಗಿ ಬಂದಿತ್ತು. ಮಾಸ್ಟರ್ ಆನಂದ್ ಪತ್ನಿ ವಿಚ್ಛೇದನದ ಬಗ್ಗೆ ಕಾಮೆಂಟ್ ಮಾಡಿದ್ದ ಮಹಿಳೆಯೊಬ್ಬಳಿಗೆ ಕಾಮೆಂಟ್ ಸೆಕ್ಷನ್‌ನಲ್ಲಿಯೇ ಪತ್ನಿ ಯಶಸ್ವಿನಿ ಜಾಡಿಸಿದ್ದಾರೆ. ಆ ಮೂಲಕ ವಿಚ್ಛೇದನದ ಸುದ್ದಿ ಕೇವಲ ವದಂತಿ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ.ಮಾಸ್ಟರ್ ಆನಂದ್ ಬಹಳ ಆಧ್ಯಾತ್ಮಕ ವ್ಯಕ್ತಿ, ಇನ್ನು ಮಾಸ್ಟರ್ ಆನಂದ್ ಪುತ್ರ ವಂಶಿಕಾ ಬಗ್ಗೆ ಇಡೀ ಕರ್ನಾಟಕದವರಿಗೆ ಗೊತ್ತಿದೆ. ಆದರೆ, ಅವರ ಪತ್ನಿ ಯಶಸ್ವಿನಿ ಈಗ ಇನ್ಸ್‌ಟಾಗ್ರಾಮ್‌ನಲ್ಲಿ ಫುಲ್ ವೈರಲ್ ಆಗಿದೆ. ಹಾಟ್ ಡ್ರೆಸ್ ತೊಟ್ಟು ಅವರು ಮಾಡುವ ರೀಲ್ಸ್‌ಗಳು ವೈರಲ್ ಆಗುತ್ತಿವೆ. ಅಂಥದ್ದೆ ಒಂದು ರೀಲ್ಸ್‌ಅನ್ನು ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದರು.
ಕಪ್ಪು ಬಣ್ಣದ ಚಿಕ್ಕ ಶಾರ್ಟ್ಸ್ ಹಾಗೂ ನೀಲಿ ಬಣ್ಣದ ಟಾಪ್ ತೊಟ್ಟು,'ಈ ಹಾರ್ಟಿಗೆ ಏನಾಗಿದೆ..' ಅನ್ನೋ ಹಾಡಿಗೆ ಮಾದಕವಾಗಿ ಡಾನ್ಸ್ ಮಾಡಿದ್ದರು. ಇದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಒಂದು ಕಾಮೆಂಟ್‌ನಲ್ಲಿ ಮಹಿಳೆಯೊಬ್ಬಳು, 'ಶೀಘ್ರದಲ್ಲಿಯೇ ಇನ್ನೊಂದಿ ಡೈವೋರ್ಸ್ ಆಗಲಿದೆ' ಎಂದು ಬರೆದಿದ್ದಳು. ಈ ಕಾಮೆಂಟ್‌ಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿರುವ ಯಶಸ್ವಿನಿ ಆನಂದ್, 'ಮೇಡಂ..ಅದು ಎಂದಿಗೂ ಸಾಧ್ಯವಿಲ್ಲ. ನಾನು ನನ್ನ ಮಕ್ಕಳಿಗಿಂತಲೂ ಜಾಸ್ತಿ ನನ್ನ ಗಂಡನನ್ನೇ ಪ್ರೀತಿಸುತ್ತೇನೆ. ಇಂಥದ್ದನ್ನ ದಯವಿಟ್ಟು ಹೇಳಬೇಡಿ ಮತ್ತು ಇಲ್ಲಸಲ್ಲದ್ದನ್ನ ರೂಮರ್ ಮಾಡಬೇಡಿʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಇಂದು ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ , ʼತಾವು ಪತಿ ಆನಂದ್ ಅವರೊಂದಿಗೆ ಇರುವ ಹಳೇ ಫೋಟೋವನ್ನ ಹಂಚಿಕೊಂಡಿದ್ದಾರೆʼ. ಈ ಫೋಟೋ ನೋಡಿ ಕಣ್ಣೀರು ಬಂತು ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ.
undefined
ಇನ್ನು ಈ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಹಲವರು ಯಶಸ್ವಿನಿ ಆನಂದ್ ಮಾತನ್ನು ಮೆಚ್ಚಿದ್ದಾರೆ. 'ಇಂದು ಹೇಗಾಗಿದೆ ಎಂದರೆ, ಮದುವೆಯಾದ ಯುವತಿಯೊಬ್ಬಳು ಮಾಡರ್ನ್ ಡ್ರೆಸ್ ಧರಿಸಿ, ರೀಲ್ಸ್ ಮಾಡಿದರೆ, ಅದು ಡೈವೋರ್ಸ್ ಆಗೋದು ಪಕ್ಕಾ ಎನ್ನುವ ಮಾತಿಗೆ ಬಂದು ನಿಲ್ಲುತ್ತದೆ. ಎಂಥಾ ಕೆಟ್ಟ ಇಂಟೆನ್ಶನ್' ಎಂದು ಬರೆದಿದ್ದಾರೆ.
'ಯಶಸ್ವಿನಿ ಅವರೇ ಆಡ್ಕೊಂಡವರ ಬಾಯಿಗೆ ತುತ್ತಾಗಬಾರದು. ಅದೇ ನೀವು ಸೀರೆ ಉಟ್ಟು ಡಾನ್ಸ್ ಮಾಡಿ ನೋಡಿ. ರೆಸ್ಪಾನ್ಸ್ ಹೆಂಗಿರುತ್ತೆ ಅಂಥ. ಚಿಕ್ಕ ಚಿಕ್ಕ ಬಟ್ಟೆ ಹಾಕ್ಕೊಂಡು ಪಬ್ಲಿಕ್ ಮೀಡಿಯಾದಲ್ಲಿ ಇದೆಲ್ಲಾ ತುಂಬಾ ಜನ ನೋಡತಾರೆ. ಎಲ್ಲರ ಯೋಚನೆನೂ ಒಂದೇ ತರ ಇರಲ್ಲ ಅಲ್ವಾ. ನಿಮಗೆ ಅದೆಲ್ಲಾ ಇಷ್ಟ ಅಂದ್ರೆ ಫ್ಯಾಮಿಲಿ ಗ್ರೂಪ್‌ನಲ್ಲಿ ಫ್ರೆಂಡ್ಸ್ ಗ್ರೂಪ್‌ನಲ್ಲಿ ಹಾಕಿ. ಯಾಕಂದ್ರೆ ಕೆಲವೊಂದ್ಸಲ ನಾವು ಮಾಡೋ ಗೊತ್ತಿಲ್ಲದ ತಪ್ಪಿಗೆ ಮನೆಯವರಿಗೂ ಮಾತು ಬರುತ್ತೆ. ಗಂಡದ್ರು ತಲೆ ಎತ್ತಿ ನಡಿಬೇಕಾದ್ರೆ ನಾವು ಕೆಲವೊಂದ್ಸಲ ತಲೆ ಬಗ್ಸೋದು ತಪ್ಪೇನಿಲ್ಲ. ಇದು ನನ್ನ ಅಭಿಪ್ರಾಯ' ಎಂದು ಸಲಹೆ ನೀಡಿದ್ದಾರೆ.
Digital Arrest: 18 ದಿನದ ಅಂತರದಲ್ಲಿ 11.8 ಕೋಟಿ ರೂಪಾಯಿ ಕಳೆದುಕೊಂಡ ಬೆಂಗಳೂರು ಟೆಕ್ಕಿ!
ಇನ್ನು ಕಾಮೆಂಟ್ ಮಾಡಿದ ಮಹಿಳೆ ಹೀಗೆ ಹೇಳೋದಕ್ಕೆ ಕಾರಣವೂ ಇದೆ. ಗಂಡ-ಹೆಂಡತಿ ಅಂದ್ರೆ ಹಿಂಗಿರಬೇಕು ಅನ್ನೋ ರೀತಿಯಲ್ಲಿದ್ದು, ರೀಲ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದ ಸಾಕಷ್ಟು ಸೆಲೆಬ್ರಿಟಿಗಳು ಈಗ ದೂರದೂರವಾಗಿದ್ದಾರೆ. ಅದಕ್ಕೆ ಉದಾಹರಣೆ ಎನ್ನುವಂತೆ ಕಿರಿಕ್ ಕೀರ್ತಿ, ಜಯಶ್ರೀ ಆರಾಧ್ಯ, ಪವಿ, ಚಂದನ್ ಶೆಟ್ಟಿ-ನಿವೇದಿತಾ ಗೌಡ ಇನ್ನು ಹಲವರ ಡಿವೋರ್ಸ್ ನಮ್ಮ ಕಣ್ಣ ಮುಂದೆ ಇದೆ.
ಬೆಂಗಳೂರು ಮೂಲದ ಫಿನ್‌ಟೆಕ್ ಸ್ಟಾರ್ಟ್‌ಅಪ್ ಅಡ್ವೈಸರ್ ಶ್ರೀರಾಮ್ ಕೃಷ್ಣನ್ ಈಗ ಟ್ರಂಪ್‌ಗೆ AI Advisor!