BBK 12: ಈ ಬಾರಿಯ ಬಿಗ್ ಬಾಸ್ ಇಷ್ಟೊಂದು ಪರ್ಸನಲ್‌ ಜಿದ್ದಾಜಿದ್ದಿಗೆ ಕಾರಣವಾಗಿದ್ದೇಕೆ? ಗುಟ್ಟು ರಟ್ಟಾಯ್ತು..!

Published : Jan 18, 2026, 08:15 PM IST
Gilli Nata Ashwini Gowda

ಸಾರಾಂಶ

ಈ ಸೀಸನ್‌ 12ರಲ್ಲಿ ಹೆಚ್ಚು ಸೌಂಡ್ ಮಾಡಿರುವ ಸ್ಪರ್ಧಿಗಳು ಇದ್ದಾರೆ ಎನ್ನೋದನ್ನ ಒಪ್ಪಬಹುದು. ಆದರೆ, ಅತ್ಯಂತ ಮುಖ್ಯ ಕಾರಣ ಎಂದರೆ ಈ ಸೀಸನ್ 12ರಲ್ಲಿ ಸ್ಪರ್ಧೆ ಕೇವಲ ಗೇಮ್‌ ಮಟ್ಟದಲ್ಲಿ ಇಲಿಲ್ಲ, ಇದೊಂಥರಾ ವೈಯಕ್ತಿಕ ಜಿದ್ದಾಜಿದ್ದಿನ ಮಟ್ಟಕ್ಕೆ ಹೋಗಿದೆ. ಕಾರಣ, ಉಳಿದ ಸೀಸನ್‌ಗಳಲ್ಲಿ ಇಲ್ಲದ್ದು ಇಲ್ಲಿದೆ.

ಪರ್ಸನಲ್ ವಾರ್ ಆಗೋಯ್ತಾ?

ಹೌದು, ಇದು ಬಿಗ್ ಬಾಸ್ ಕನ್ನಡ ಸೀಸನ್ 12. ಇಷ್ಟರವರೆಗೂ 11 ಸೀಸನ್‌ಗಳು ಮುಗಿದಿವೆ. ಹನ್ನೊಂದು ವಿನ್ನರ್‌ಗಳು ಸಹಜವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ, ಈ ಬಾರಿಯ ಬಿಗ್ ಬಾಸ್ ಸೀಸನ್ ಮಾತ್ರ ವೈಯಕ್ತಿಕ ಪ್ರತಿಷ್ಠೆ ಎಂಬಂತೆ ಬಿಂಬಿತವಾಗುತ್ತಿದೆ. ಅದ್ಯಾಕೆ ಈ ಬಿಗ್ ಬಾಸ್ ಸೀಸನ್ ಇಷ್ಟೊಂದು ಪರ್ಸನಲ್‌ ಪ್ರೆಸ್ಟೀಜ್ ಹಂತಕ್ಕೆ ತಲುಪಿದೆ? ಇದಕ್ಕೆ ಕಾರಣ ಇದೀಗ ಬಹಿರಂಗವಾಗಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲಿ ನೋಡಿದರೂ ಬಿಗ್ ಬಾಸ್‌ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಯೂಟ್ಯೂಬ್‌ ಚಾನೆಲ್‌ಗಳು, ಇನ್‌ಸ್ಟಾಗ್ರಾಂ ಹಾಗೂ ಪೇಸ್‌ಬುಕ್ ಪೇಜ್‌ಗಳು ಬಿಗ್ ಬಾಸ್ ಚರ್ಚೆಗಳಿಂದ ತುಂಬಿಹೋಗಿವೆ. ಕಟ್ಟೆ ಪುರಾಣಗಳಲ್ಲಿ ಸ್ವಲ್ಪ ಕಡಿಮೆ ಎನ್ನೋದು ಬಿಟ್ಟರೆ, ಸೋಷಿಯಲ್ ಮೀಡಿಯಾಗಳೆಲ್ಲವೂ ಸಂಪೂರ್ಣವಾಗಿ ಬಿಗ್‌ ಬಾಸ್‌ ಮಯವಾಗಿವೆ. ಹಾಗಿದ್ದರೆ ಈ ಸೀಸನ್‌ ಅಷ್ಟೊಂದು ಮುಖ್ಯವಾಗಲು ಕಾರಣ?

ಗಿಲ್ಲಿ ನಟ / ಅಶ್ವಿನಿ ಗೌಡ ಜಾತಿ ವಾರ್?

ಹೌದು, ಈ ಸೀಸನ್‌ನಲ್ಲಿ ಹೆಚ್ಚು ಸೌಂಡ್ ಮಾಡಿರುವ ಸ್ಪರ್ಧಿಗಳು ಇದ್ದಾರೆ ಎನ್ನೋದನ್ನ ಒಪ್ಪಬಹುದು. ಆದರೆ, ಅತ್ಯಂತ ಮುಖ್ಯ ಕಾರಣ ಎಂದರೆ ಈ ಸೀಸನ್ 12ರಲ್ಲಿ ಸ್ಪರ್ಧೆ ಕೇವಲ ಗೇಮ್‌ ಮಟ್ಟದಲ್ಲಿ ಇಲ್ಲ, ಇದೊಂಥರಾ ವೈಯಕ್ತಿಕ ಜಿದ್ದಾಜಿದ್ದಿನ ಮಟ್ಟಕ್ಕೆ ಹೋಗಿದೆ. ಕಾರಣ, ಉಳಿದ ಸೀಸನ್‌ಗಳಲ್ಲಿ ಇಲ್ಲದ ಜಾತಿ ಮಟ್ಟದ ಸ್ಪರ್ಧೆ ಇಲ್ಲಿ ಉಂಟಾಗಿದೆಯಾ? ಹೌದು ಎನ್ನುತ್ತಿವೆ ಮೂಲಗಳು.

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕುರುಬ ಜನಾಂಗದಿಂದ ಗಿಲ್ಲಿ ನಟ ನಟರಾಜ್ (Gilli Nata Nataraj) ಅವರು ಸ್ಪರ್ಧಿಯಾಗಿದ್ದಾರೆ. ಹಾಗೇ ಗೌಡರಾಗಿರುವ ಅಶ್ವಿನಿ ಗೌಡ (Ashwini Gowda) ಅವರೂ ಇದ್ದಾರೆ. ಇವರಿಬ್ಬರ ಅಭಿಮಾನಿಗಳ ಮಧ್ಯೆ ಬಿಗ್ ಬಾಸ್ ಸ್ಪರ್ಧೆಗಿಂತ ಹೆಚ್ಚಾಗಿ ಜಾತಿ ಸ್ಪರ್ಧೆ ಇದೆ ಎನ್ನುತ್ತಿವೆ ಮೂಲಗಳು. ಬಿಗ್ ಬಾಸ್ ವೀಕ್ಷಕರ ಮಧ್ಯೆ ಆಟಕ್ಕಿಂತ ಹೆಚ್ಚಾಗಿ 'ಗೌಡ/ಕುರುಬ' ಎಂಬ ವಾರ್ ಹೆಚ್ಚು ಪ್ರಚಲಿತದಲ್ಲಿ ಇದೆ ಎನ್ನಲಾಗುತ್ತಿದೆ. ಕುರುವ ಪ್ರತಿನಿಧಿ ಗಿಲ್ಲಿ ನಟ, ಗೌಡ್ರ ಪ್ರತಿನಿಧಿ ಅಶ್ವಿನಿ ಗೌಡ ಎಂಬಂತೆ, ಬಿಗ್ ಬಾಸ್ ಮನೆಯ ಹೊರಗಡೆ 'ಮಹಾಯುದ್ಧ' ನಡೆಯುತ್ತಿದೆ. ಇದು ಆಟದ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಾರಣ, ವೋಟಿಂಗ್ ಹೊರಗಡೆ ನಡೆಯುವುದು ತಾನೇ?

ಆದರೆ, ಬಿಗ್ ಬಾಸ್ ಮನೆಯಲ್ಲಿ ಇರುವ ಅಶ್ವಿನಿ ಗೌಡ ಅವರಿಗಾಗಲೀ ಅಥವಾ ಗಿಲ್ಲಿ ನಟ ನಟರಾಜ್ ಅವರಿಗಾಗಲೀ ಈ 'ಜಾತಿ-ಸಮುದಾಯ'ದ ಸ್ಪರ್ಧೆ, ಯುದ್ಧದ ಬಗ್ಗೆ ಅರಿವು ಇರಲಿಕ್ಕಿಲ್ಲ. ಸಹಜವಾಗಿ ಅವರಿಬ್ಬರಿಗೂ ಇರೋದು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಅಷ್ಟೇ. ಆದರೆ, ಅವರಿಬ್ಬರ ಅಭಿಮಾನಿಗಳು ಮಾತ್ರ 'ಕುರುಬ/ಗೌಡ' ಜನಾಂಗದ ಸ್ಪರ್ಧೆ ಎಂಬಂತೆ ನೋಡಿ ವೋಟ್ ಮಾಡಿದ್ದಾರೆ ಎನ್ನುತ್ತಿವೆ ಸುದ್ದಿ ಮೂಲಗಳು.

ಆಟವನ್ನು ಆಟವಾಗಿ ಮಾತ್ರ ನೋಡಬೇಕು

ಒಮ್ಮೆ ಈ ಮಾತು ನಿಜವೇ ಆಗಿದ್ದರೆ.. ಆಟವನ್ನು ಆಟವಾಗಿ ಮಾತ್ರ ನೋಡಬೇಕು. ಅಲ್ಲಿ ಜಾತಿ, ಸಮುದಾಯ-ಪಂಗಡಗಳ ಪಾತ್ರ ಇರಬಾರದು ಎಂದು ಹಲವರು ಅದೇ ಸೋಷಿಯಲ್ ಮಿಡಿಯಾಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗೌಡರಾಗಲೀ, ಕುರುಬರಾಗಲೀ ಅಲ್ಲಿ, ಅಂದರೆ ಬಿಗ್ ಬಾಸ್ ಮನೆಯಲ್ಲಿ ರಿಯಾಲಿಟಿ ಶೋ ಒಂದಕ್ಕೆ ಬಂದಿರುವ ಸ್ಪರ್ಧಿಗಳು. ಅಲ್ಲಿ ಗೆಲುವಿಗಾಗಿ ಹೋರಾಟ ಸಹಜ. ಅದು ಜಾತಿಗಳ ಮಧ್ಯೆ ನಡೆಯುತ್ತಿರುವ ಸಂಘರ್ಷವೇನೂ ಅಲ್ಲ. ಹೀಗಾಗಿ ವೀಕ್ಷಕರು ಆಟಗಾರರಿಗಿಂತ ಭಿನ್ನವಾಗಿ ಮನೆಯ ಹೊರಗೆ ಯೋಚಿಸುವ, ಪ್ಲಾನ್ ಮಾಡುವ ಅಗತ್ಯವೇ ಇಲ್ಲ ಎನ್ನುವ ಒಪಿನಿಯನ್‌ ವ್ಯಕ್ತಪಡಿಸುತ್ತಿದ್ದಾರೆ ಹಲವರು. ಈ ಅಭಿಪ್ರಾಯ ಸರಿ ಎನ್ನಬಹುದು ಕೂಡ. ನೀವೇನಂತೀರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅರ್ಹರು Bigg Boss ಗೆದ್ದಿಲ್ಲ, ಗಿಲ್ಲಿ ನಟನೂ ಗೆಲ್ಲಲ್ಲ: ಖ್ಯಾತ ಜ್ಯೋತಿಷಿ ಪ್ರಶಾಂತ್‌ ಕಿಣಿ ಭವಿಷ್ಯ!
BBK 12: ನನ್ನ ಮಗ ಟಾಪ್‌ 6 ಅಲ್ಲ, ಕಿಚ್ಚ ಸುದೀಪ್‌ ಮುಂದೆ ಗೋಳಿಟ್ಟು, ಧನುಷ್‌ ಗೌಡ ತಾಯಿ ಅಸಮಾಧಾನ ಹೊರಹಾಕಿದ್ರು!