ಬಿಗ್ ಬಾಸ್ 12 ಗೆಲ್ತಾನೆ ಗಿಲ್ಲಿ ನಟ, ಮಾತು ಸುಳ್ಳಾದರೆ 1 ಏಕರೆ ಕೊಡ್ತೀನಿ ಓಪನ್ ಚಾಲೆಂಜ್ ಎಂದ ರೈತ

Published : Jan 18, 2026, 05:13 PM IST
Bigg boss 12 kannada Farmer challenge

ಸಾರಾಂಶ

ಬಿಗ್ ಬಾಸ್ 12 ಗೆಲ್ತಾನೆ ಗಿಲ್ಲಿ ನಟ,, ಈ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ರೈತನೊಬ್ಬ ಯಾವನಾದ್ರೂ ಇದ್ರೆ ಚಾಲೆಂಜ್‌ಗೆ ಬನ್ನಿ 1 ಏಕರೆ ಜಮೀನು ಬರೆದುಕೊಡುತ್ತೇನೆ. ಈ ಬಾರಿ ಗಿಲ್ಲಿ ಗೆದ್ದೆ ಗೆಲ್ಲುತ್ತಾನೆ ಎಂದಿದ್ದಾನೆ. ಚಾಲೆಂಜ್ ಮಾಡಿ 1 ಏಕರೆ ಗೆಲ್ಲೋ ಪ್ಲಾನ್ ಇದೆಯಾ?

ಬೆಂಗಳೂರು (ಜ.18) ಬಿಗ್ ಬಾಸ್ ಕನ್ನಡ 12ನೇ ಆವೃತ್ತಿ ರೋಚಕ ಘಟ್ಟ ತಲುಪಿದೆ. ಆರು ಸ್ಪರ್ಧಿಗಳ ಪೈಕಿ ಗೆಲ್ಲುವ ಸ್ಪರ್ಧಿ ಯಾರು? ಅಭಿಮಾನಿಗಳು, ಬೆಂಬಲಿಗರು ತಮ್ಮ ನೆಚ್ಚಿನ ಸ್ಪರ್ಧಿಗಳ ಹೆಸರು ಹೇಳುತ್ತಿದ್ದಾರೆ. ಇತ್ತ ಬಿಗ್ ಬಾಸ್ ವೋಟಿಂಗ್‌ನಲ್ಲೂ ದಾಖಲೆ ಬರೆದಿದೆ. ಕೋಟಿ ಕೋಟಿ ಮತಗಳು ಹರಿದು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟ ಬಿಗ್ ಬಾಸ್ ವಿನ್ನರ್ ಎಂದು ಹೇಳಲಾಗುತ್ತಿದೆ. ಇತ್ತ ಸ್ಪರ್ಧಿಗಳ ಅಭಿಮಾನಿಗಳು ದೇವಸ್ಥಾನಗಳಲ್ಲಿ ಗೆಲುವಿಗಾಗಿ ಪೂಜೆ, ಅನ್ನದಾನ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ. ಇದೇ ವೇಳೆ ರೈತನೊಬ್ಬ ಈ ಬಾರಿಯ ಬಿಗ್ ಬಾಸ್ 12ನೇ ಆವೃತ್ತಿಯನ್ನು ಗಿಲ್ಲಿ ನಟ ಗೆದ್ದೇ ಗೆಲ್ಲುತ್ತಾನೆ. ಚಾಲೆಂಜ್ ಇದೆಯಾ ಎಂದು ಸವಾಲು ಹಾಕಿದ್ದಾರೆ. ಯಾವನಾದ್ರೂ ಇದ್ರೆ ಕರೆದುಕೊಂಡು ಬನ್ನಿ, ನನ್ನ ಜೊತೆ ಚಾಲೆಂಜ್ ಮಾಡಲಿ, ಈ ಬಾರಿ ಗಿಲ್ಲಿ ಗೆದ್ದೆ ಗೆಲ್ಲುತ್ತಾನೆ. 1 ಏಕರೆ ಜಮೀನು ಜಾಲೆಂಜ್ ಎಂದಿದ್ದಾರೆ.

ತಮ್ಮ ಜಮೀನಿನ 1 ಏಕರೆ ಚಾಲೆಂಜ್‌ಗೆ ಇಟ್ಟ ರೈತ

ಮಂಡ್ಯದ ರೈತನೊಬ್ಬನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಗ್ ಬಾಸ್ ಗೆಲುವಿನ ಕುರಿತು ಮಾತನಾಡಿದ ರೈತ, ಈ ಬಾರಿ ಗೆಲುವಿನಲ್ಲಿ ಯಾವುದೇ ಅನುಮಾನವಿಲ್ಲ. ಗಿಲ್ಲಿ ನಟ ಗೆಲ್ಲುತ್ತಾನೆ. ನನ್ನ ಮಾತು ಸುಳ್ಳಾದರೆ ಒಂದು ಏಕರೆ ಬರೆದುಕೊಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ರೈತ ಬಳಿ ವ್ಯಕ್ತಿಯೊಬ್ಬರು ಈ ಬಾರಿ ಅಶ್ವಿನಿ ಗೌಡ ಬಿಗ್ ಬಾಸ್ ವಿನ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೈತ, ಸಾಧ್ಯವೇ ಇಲ್ಲ. ಈ ಬಾರಿ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ. ಇವತ್ತು ಸಂಜೆ 5 ಗಂಟೆ ಒಳಗೆ ನನ್ನ ಮಾತಿಗೆ ಚಾಲೆಂಜ್ ಹಾಕುವವರು ಯಾರಾದರೂ ಇದ್ದರೆ ಕರೆದುಕೊಂಡು ಬಾ, ಮಾತು ಸುಳ್ಳಾದರೆ 1 ಏಕರೆ ಜಮೀನು ಬರೆದುಕೊಡುತ್ತೇನೆ. ಚಾಲೆಂಜ್ ಸ್ವೀಕರಿಸಲು ಯಾರದರು ಇದ್ದೀರಾ ಎಂದು ರೈತ ಸವಾಲು ಹಾಕಿದ್ದಾನೆ.

ಮಂಡ್ಯ ಮಾತ್ರವಲ್ಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಬಿಗ್ ಬಾಸ್ 12ರ ವಿನ್ನರ್ ಗಿಲ್ಲಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಗಿಲ್ಲಿ ನೀಡಿದ ಮನರಂಜನೆ, ಸ್ಪರ್ಧೆಗೆ ಆತನೇ ಗೆಲ್ಲಬೇಕು ಎಂದು ಹಲವರು ಹಾರೈಸಿದ್ದಾರೆ. ಪೈಪೋಟಿ ತೀವ್ರಗೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್‌ಗಳು ಹರಿದಾಡುತ್ತಿದೆ. ಗಿಲ್ಲಿ ಗೆದ್ದಾಗಿದೆ, ಅಧಿಕೃತ ಘೋಷಣೆ ಮಾತ್ರ ಬಾಕಿ ಎಂಬ ಮಾತುಗಳು ಹರಿದಾಡುತ್ತಿದೆ.

ಮಾಜಿ ರನ್ನರ್ ಅಪ್‌ನಿಂದ ಗಿಲ್ಲಿ ವಿನ್ನರ್ ಪೋಸ್ಟರ್

ಬಿಗ್ ಬಾಸ್ ನಾಲ್ಕನೇ ಆವೃತ್ತಿಯ ರನ್ನರ್ ಅಪ್ ಕಿರಿಕ್ ಕೀರ್ತಿ ಇದೀಗ ಬಿಗ್ ಬಾಸ್ 12 ವಿನ್ನರ್ ಭವಿಷ್ಯ ನುಡಿದಿದ್ದಾರೆ. ಗಿಲ್ಲಿ ನಟ ಈ ಬಾರಿಯ ಬಿಗ್ ಬಾಸ್ ವಿನ್ನರ್ ಎಂದು ಫಿನಾಲೆ ಆರಂಭಕ್ಕೂ ಮೊದಲೇ ಘೋಷಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ವಿನ್ನರ್ ಎಂದು ಪೋಸ್ಟ್ ಮಾಡಿದ್ದಾರೆ. ಇದೇ ರೀತಿ ಗಿಲ್ಲಿ ಅಭಿಮಾನಿಗಳು ಆತ್ಮವಿಶ್ವಾಸದಲ್ಲಿ ಕುಣಿದಾಡುತ್ತಿದ್ದಾರೆ. ಇತ್ತ ರಕ್ಷಿತಾ ಶೆಟ್ಟಿ, ಕಾವ್ಯ, ರಘು, ಧನುಷ್, ಅಶ್ವಿನಿ ಗೌಡ ಪರ ಅಭಿಮಾನಿಗಳು ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಗೆಲುವಿನ ಕುತೂಹಲ ತೀವ್ರಗೊಂಡಿದೆ.

ವಿಕಿಪೀಡಿಯಾದಲ್ಲೂ ಗಿಲ್ಲಿ ವಿನ್ನರ್ ಎಂದು ಎಡಿಟ್

ವಿಕಿಪೀಡಿಯಾದಲ್ಲೂ ಗಿಲ್ಲಿ ನಟ ವಿನ್ನರ್ ಎಂದು ಪೇಜ್ ಎಡಿಟ್ ಮಾಡಲಾಗಿದೆ. ಫಿನಾಲೆ ಹಾಗೂ ಅಧಿಕೃತ ಘೋಷಣೆಗೂ ಮೊದಲೇ ಈ ರೀತಿಯ ಪ್ರಯತ್ನವನ್ನು ಯಾರೋ ಮಾಡಿದ್ದಾರೆ. ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಎಡಿಟ್ ಮಾಡಲು ಅವಕಾಶವಿದೆ. ಹೀಗಾಗಿ ವಿಕಿಪೀಡಿಯಾ ಮಾಹಿತಿಯನ್ನು ಅಧಿಕೃತ ಎಂದು ಹೇಳಲು ಸಾಧ್ಯವಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಭೇಷ್... ಆರಂಭದಿಂದ ಕೊನೇವರೆಗೂ... Gilli Nata ಈ ಗುಣವನ್ನು ಬದಲಾಯಿಸಿಕೊಳ್ಳಲೇ ಇಲ್ಲ!
BBK 12: ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದಕ್ಕೆ 100% ಕಾರಣ ಏನು? ಈ ಸೀಕ್ರೆಟ್ ಈಗ ಬಹಿರಂಗ ಆಯ್ತು!