ಸೋತರೂ ತುಕಾಲಿ ಸಂತು ಜತೆ ಕುಣಿದಾಡುತ್ತ ಬಂದ ತನಿಷಾ, ಪಿಸುಧ್ವನಿಯಲ್ಲಿ ಗೊಣಗಿದ ವಿನಯ್

By Shriram Bhat  |  First Published Nov 15, 2023, 5:23 PM IST

ಬಿಗ್ ಮನೆಯಲ್ಲಿ ನಡೆದ ಟಾಸ್ಕ್‌ ಒಂದರಲ್ಲಿ 'ಹತ್ತು ನಿಮಿಷದಲ್ಲಿ ಮೂರು ಆಟಗಳನ್ನು ಮುಗಿಸಿದರೆ ಮನೆಯ ಮೂರು ಸದಸ್ಯರು ತಮ್ಮ ಮನೆಯಿಂದ ಬಂದ ಲೆಟರ್‌ಗಳನ್ನು ಪಡೆಯುತ್ತಾರೆ' ಎಂದು ಬಿಗ್ ಬಾಸ್ ಹೇಳಿದ್ದಾರೆ. ವಿನಯ್ ಟೀಮ್‌ನ ಪ್ರತಿನಿಧಿಯಾಗಿ ಬಂದಿದ್ದ ತನಿಷಾ, ಟಾಸ್ಕ್‌ನಲ್ಲಿ ಸೋಲು ಅನುಭವಿಸಿದರು. 


ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಸ್ಪರ್ಧಿಗಳ ನಡುವೆ ಮನಸ್ತಾಪಗಳು ಹೆಚ್ಚುತ್ತಿವೆ ಎಂಬುದು ವೀಕ್ಷಕರು ಗಮನಿಸುತ್ತಿರುವ ಸಂಗತಿ. ವಿನಯ್ ಟೀಮ್ ಹಾಗೂ ಕಾರ್ತಿಕ್ ಟೀಮ್ ಎಂದು ಇಬ್ಭಾಗವಾಗಿದ್ದು, ವಿನಯ್ ಟೀಮ್‌ನ ಕೆಲವರು ಟಾಸ್ಕ್‌ನಲ್ಲಿ ಕಾರ್ತಿಕ್ ಟೀಮ್‌ಗೂ, ಕಾರ್ತಿಕ್ ಟೀಮ್‌ನ ಹಲವರು ವಿನಯ್ ಟೀಮ್‌ಗೂ ಶಿಫ್ಟ್ ಆಗುವ ಸಂದರ್ಭಗಳೂ ಎದುರಾಗುತ್ತವೆ. ಆಗೆಲ್ಲ ವಿನಯ್, ಡ್ರೋನ್ ಪ್ರತಾಪ್, ಸಂಗೀತಾ ಹಾಗೂ ತನಿಷಾ ಮಧ್ಯೆ ಜಟಾಪಟಿ ಸರ್ವೇ ಸಾಮಾನ್ಯ ಎಂಬಂತಾಗಿದೆ. 

ಬಿಗ್ ಮನೆಯಲ್ಲಿ ನಡೆದ ಟಾಸ್ಕ್‌ ಒಂದರಲ್ಲಿ 'ಹತ್ತು ನಿಮಿಷದಲ್ಲಿ ಮೂರು ಆಟಗಳನ್ನು ಮುಗಿಸಿದರೆ ಮನೆಯ ಮೂರು ಸದಸ್ಯರು ತಮ್ಮ ಮನೆಯಿಂದ ಬಂದ ಲೆಟರ್‌ಗಳನ್ನು ಪಡೆಯುತ್ತಾರೆ' ಎಂದು ಬಿಗ್ ಬಾಸ್ ಹೇಳಿದ್ದಾರೆ. ವಿನಯ್ ಟೀಮ್‌ನ ಪ್ರತಿನಿಧಿಯಾಗಿ ಬಂದಿದ್ದ ತನಿಷಾ, ಟಾಸ್ಕ್‌ನಲ್ಲಿ ಸೋಲು ಅನುಭವಿಸಿದರು. ಅದನ್ನು ನೋಡಿದ ವಿನಯ್ ಕೋಪ ನೆತ್ತಿಗೇರಿತು. ತನಿಷಾ ಸೋಲು ಅನುಭವಿಸಿ ಬಂದ ತಕ್ಷಣ ವಿನಯ್ ' ಇದನ್ನೇ ನಾವು ಮಾಡಿದ್ರೆ ಸುಮ್ನೇ ಇರ್ತಿದ್ರಾ?' ಎಂದು ವಿನಯ್ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Tap to resize

Latest Videos

ನಮ್ಮಪ್ಪಂಗೆ ನಾನೇ ಹುಟ್ಟಿರೋದು, ನೀವ್ಯಾರಾದ್ರೂ ಹುಟ್ಟಿದ್ರೆ ಬಂದು ಶೋಕಿ ಮಾಡಿ; ಹೀಗೆ ಹೇಳಿದ್ರಾ ವರ್ತೂರು ಸಂತೋಷ್ 

ವಿನಯ್ ಹಾಗೆ ಹೇಳಿದ್ದರೂ ತನಿಷಾ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡು ಜಗಳವನ್ನೇನೂ ಮಾಡಿಲ್ಲ. ಬದಲಾಗಿ ಚಿಕ್ಕಮಗುವಿನಂತೆ ತುಕಾಲಿ ಸಂತು ಜತೆ ಕುಣಿದಾಡುತ್ತ ಸೋಲನ್ನು ಕೂಡ ಎಂಜಾಯ್ ಮಾಡಿದ್ದಾರೆ. ಈ ಸಂಗತಿ ಹೆಚ್ಚಿನ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. 'ಎಲ್ಲಾ ಟಾಸ್ಕ್‌ಗಳಲ್ಲೂ ತನಿಷಾ ಮಾತ್ರವೇ ಯಾಕೆ ಗೆಲ್ಲಬೇಕು' ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಹಾಕುವ ಮೂಲಕ ಹಲವರು ವಿನಯ್ ವಿರುದ್ಧ, ತನಿಷಾ ಪರವಾಗಿ ನಿಂತಿದ್ದಾರೆ. ಚಿಕ್ಕ ಪಾಪು ತರ ತುಂಟಾಟ ಆಡಿದ ನಟಿ ತನಿಷಾ ನೋಡುವುದೇ ಚೆಂದ ' ಎಂದು ಹಲವರು ಕಾಮೆಂಟ್ ಹಾಕಿದ್ದಾರೆ. 

ಸಂಗೀತಾ ಶೃಂಗೇರಿ ನಟಿಯಾಗುವ ಮೊದಲಿನ ರಹಸ್ಯ ರಿವೀಲ್; ಈಕೆ ಶಾರದಾಂಬೆ ಸನ್ನಿಧಿಯ ಕುವರಿ!

ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ವಿನಯ್ ಹಾಗೂ ತನಿಷಾ ಮಧ್ಯೆ ಕೋಲ್ಡ್ ವಾರ್ ಹಾಗೇ ಮುಂದುವರಿದಿದೆ ಎನ್ನಬಹುದು. ಟಾಸ್ಕ್, ಮಾತುಕತೆ ಮೂಲಕ ಅವರಿಬ್ಬರ ಮನಸ್ತಾಪ ಆಗಾಗ ಹೊರಜಗತ್ತಿಗೆ ಕಾಣಿಸುತ್ತಿದ್ದರೂ ಅದು ಯಾವತ್ತೂ ಇದೆ ಎಂಬುದು ಸೀಕ್ರೆಟ್ ಆಗಿ ಉಳಿದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ನೋಡಲು ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಹಾಗು ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

click me!