ಮಗಳೇ ಗಂಡನನ್ನು ಬಿಟ್ಟುಬಿಡು ಎಂದ ಮಾವ... ಇಷ್ಟವಿಲ್ಲದ ಮದುವೆ ಮಾಡಿಸೋ ಮುನ್ನ ತಲೆ ಬೇಕಿತ್ತಲ್ವೆ?

By Suvarna NewsFirst Published Apr 18, 2024, 11:06 AM IST
Highlights

ಗಂಡನನ್ನು ಬಿಟ್ಟುಬಿಡು ಎಂದು ತಾಂಡವ್​ ಅಪ್ಪ ಭಾಗ್ಯಳಿಗೆ ಹೇಳುತ್ತಿದ್ದಾನೆ. ಅವನು ಹೇಳಿದ್ದು ಒಳ್ಳೆಯ ಉದ್ದೇಶಕ್ಕೇ ಇರಬಹುದು... ಆದರೆ..?
 

ಭಾಗ್ಯಲಕ್ಷ್ಮಿ ಈಗ ಕುತೂಹಲದ ಹಂತ ತಲುಪಿದೆ. ಖುದ್ದು ಮಾವನೇ ತನ್ನ ಮಗನಿಂದ ದೂರವಾಗು ಎಂದು ಭಾಗ್ಯಳಿಗೆ ಹೇಳುತ್ತಿದ್ದಾನೆ. ಹೌದು. ತಾಂಡವ್​ಗೆ ಯಾವುದೇ ಕಾರಣಕ್ಕೂ ಭಾಗ್ಯ ಬೇಡ. ಅವನಿಗೆ ಬೇಕಿರುವುದು ಶ್ರೇಷ್ಠಾ. ಇದೇ ಕಾರಣಕ್ಕೆ 16 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ಹೊರಟಿದ್ದಾನೆ. ಡಿವೋರ್ಸ್​ಗೆ ಸಜ್ಜಾಗಿದ್ದಾನೆ.  ಆದರೆ ಯಾವುದೇ ಕಾರಣಕ್ಕೂ ದಾಂಪತ್ಯ ಉಳಿಸಿಕೊಳ್ಳುವ ಪಣ ತೊಟ್ಟಿದ್ದಾಳೆ ಭಾಗ್ಯ. 16 ವರ್ಷಗಳ ಸಂಸಾರ... ಎರಡು ಬೆಳೆದು ನಿಂತಿರುವ ಮಕ್ಕಳು... ಈ ಹಂತದಲ್ಲಿ ಡಿವೋರ್ಸ್​ ಎಂದರೆ...? ಅದೂ ಭಾಗ್ಯಳಂಥ ಹೆಣ್ಣುಮಗಳಿಗೆ? ಸಾಧ್ಯವೇ ಇಲ್ಲ. ಮೇಲ್ನೋಟಕ್ಕೆ ಎಷ್ಟೇ ಗಟ್ಟಿಗಿತ್ತಿಯಾದರೂ ಸಂಸಾರ, ಮನೆ, ಮಕ್ಕಳು ಎನ್ನುವ ವಿಷಯ ಬಂದಾಗ ಬಹುತೇಕ ಹೆಣ್ಣುಮಕ್ಕಳು ಸೋಲಲೇಬೇಕಿರುವ ಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ತನ್ನ ಸಂಸಾರವನ್ನು ಹೇಗಾದರೂ ಉಳಿಸಿಕೊಂಡು, ಗಂಡನ ಮನಸ್ಸನ್ನು ಒಲಿಸಿಕೊಳ್ಳುವ ಅಂದುಕೊಳ್ಳುತ್ತಿರುವಾಗಲೇ ಮಾವನೇ ಖುದ್ದು ಮಗಳೇ ಗಂಡನನ್ನು ಬಿಟ್ಟುಬಿಡು ಎನ್ನುತ್ತಿದ್ದಾನೆ.

ಇದು ಸೀರಿಯಲ್​ ಇರಬಹುದು. ಆದರೆ ಇದರಲ್ಲಿ ಅದೆಷ್ಟು ಸತ್ಯ ಅಡಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಇಲ್ಲಿ ಎಲ್ಲರಿಗೂ ತಾಂಡವ್​ ವಿಲನ್​ ಆಗಿ ಕಾಣಿಸುತ್ತಾನೆ. ಅದು ನಿಜ ಕೂಡ. ಚಿನ್ನದಂಥ ಪತ್ನಿ, ಮುದ್ದಾದ ಇಬ್ಬರು ಮಕ್ಕಳು ಇರುವಾಗ ಮತ್ತೊಬ್ಬಳ ವಶವಾಗಿದ್ದಾನೆ. ಇಷ್ಟವಿಲ್ಲದ ಮದುವೆ ಎಂದೂ ಹೇಳುವುದು ಕಷ್ಟವೇ. ಏಕೆಂದರೆ ಇಬ್ಬರು ಮಕ್ಕಳಿದ್ದಾರೆ. ಆದರೂ ಭಾಗ್ಯಳನ್ನು ಕಂಡರೆ ಅವನಿಗೆ ಆಗಿ ಬರುವುದಿಲ್ಲ. ಈಕೆ ಹೆಚ್ಚು ಕಲಿತಿಲ್ಲ, ಅಳುಮುಂಜಿ... ಇತ್ಯಾದಿ ಇತ್ಯಾದಿ... ಕಾರಣ ಏನೇ ಇರಲಿ. ಮದುವೆಯಾಗುವುದೇ ಅವನಿಗೆ ಇಷ್ಟವಿರಲಿಲ್ಲ. ಆದರೆ ಮದುವೆಯಾದ  ಮೇಲೆ ಹೇಗೋ ಚೆನ್ನಾಗಿ ಇರುತ್ತಾರೆ ಎಂದುಕೊಂಡು ಮದುವೆ ಇಷ್ಟವಿಲ್ಲದಿದ್ದರೂ ಮಕ್ಕಳ ಮದುವೆ ಮಾಡಿರುವ ಎಷ್ಟೋ ಪಾಲಕರಿಗೆ ಈ ಸೀರಿಯಲ್​ ಒಂದು ಉದಾಹರಣೆ ಇದ್ದಂತೆ ಎನ್ನುವುದು ಬಹುತೇಕರ ಅಭಿಮತ.

ಇನ್ನೂ ಮದ್ವೆನೇ ಆಗ್ಲಿಲ್ಲ ಕಣ್ರೋ... ಫಸ್ಟ್​ನೈಟ್​ ಶುರು ಮಾಡಿಕೊಂಡುಬಿಟ್ರಾ ಎನ್ನೋದಾ ಫ್ಯಾನ್ಸ್​!

ಕಾರಣ ಇಷ್ಟೇ. ಇಲ್ಲಿ ಭಾಗ್ಯಳನ್ನು ಆತ ಪತ್ನಿ ಎಂದು ಒಪ್ಪಿಕೊಂಡೇ ಇಲ್ಲ. ಇದೇ ಮಾತನ್ನು ಈಗ ತಾಂಡವ್​ ಅಪ್ಪನೂ ಹೇಳುತ್ತಿದ್ದಾನೆ. ನೀನು ಪತ್ನಿಯಂತೆ ಅಲ್ಲ, ಗುಲಾಮಳಂತೆ ಬದುಕುತ್ತಿರುವಿ. ಇನ್ನು ಈ ನೋವು ಸಾಕು. ನಿನಗೆ ತಾಂಡವ್​ ಅರ್ಹನಲ್ಲ. ಆತನಿಂದ ನೀನು ಕಷ್ಟಪಟ್ಟಿದ್ದು ಸಾಕು. ಆತನಿಗಾಗಿ ನೀನು ಜೀವ ತೆತ್ತಿದ್ದು ಸಾಕು.ನೀನು ನಮ್ಮ ಸೊಸೆಯಲ್ಲ, ಮಗಳು ಇದ್ದಂತೆ. ನಿನ್ನ ನೆಮ್ಮದಿ ಮುಖ್ಯ. ತಾಂಡವ್​ ಜೊತೆ ನೀನಿದ್ದರೆ ನಿನಗೆ ಸುಖವಿಲ್ಲ. ಗುಲಾಮಳಂತೆ ಬದುಕಬೇಕು. ಆದ್ದರಿಂದ ಅವನನ್ನು ಬಿಟ್ಟುಬಿಡು ಮಗಳೇ ಎನ್ನುತ್ತಿದ್ದಾನೆ.

ಈ ಡೈಲಾಗ್​ ಕೇಳಲು ಚೆನ್ನಾಗಿ ಕಾಣಿಸುತ್ತದೆ, ಅದೂ ಮಾವನೇ ಖುದ್ದಾಗಿ ಸೊಸೆಗೆ ಹೀಗೆ ಹೇಳುವಾಗ ಎಲ್ಲವೂ ಚೆನ್ನ.ಆದರೆ ಇದೇ ಬುದ್ಧಿ ಮೊದಲೇ ಇದ್ದಿದ್ದರೆ ಇಷ್ಟವಿಲ್ಲದ ಮದುವೆ ಮಾಡುವ ಮುನ್ನ ಇದೇ ಯೋಚನೆ ಮಾಡಿದ್ದರೆ, ಹೆಣ್ಣಿನ ಜೀವನ ಸರ್ವನಾಶ ಆಗುವುದು ತಪ್ಪುತ್ತಿತ್ತವೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇಷ್ಟವಿಲ್ಲದ ಪತ್ನಿ ಜೊತೆಯಲ್ಲಿ ಇದ್ದಾಗ, ಇನ್ನೊಂದು ಹೆಣ್ಣಿಗೆ ಆಕರ್ಷಿತನಾಗಿದ್ದಾನೆ ತಾಂಡವ್​. ಗಂಡಸರಿಗೆ ಇದು ಬಲು ಸುಲಭ. ಅದರಲ್ಲಿಯೂ ಶ್ರೇಷ್ಠಾಳಂತ ಹೆಣ್ಣುಮಕ್ಕಳಿಗೂ ಕೊರತೆಯೇನಿಲ್ಲ. ಪರ ಪುರುಷನನ್ನು ಗಾಳಕ್ಕೆ ಹಾಕಿಕೊಳ್ಳುವ ಅದೆಷ್ಟೋ ಉದಾಹರಣಗಳೂ ಇವೆ. ಇಲ್ಲಿ ತಪ್ಪು-ಒಪ್ಪುಗಳ ಪ್ರಶ್ನೆ ಮಾಡುವ ಬದಲು ಇಷ್ಟವಿಲ್ಲದ ಮದುವೆ ಮಾಡಿ, ಕೊನೆಗೆ ಮುಗ್ಧ ಹೆಣ್ಣುಮಗಳನ್ನು ನರಕಕ್ಕೆ ದೂಡಬೇಡಿ ಎಂದು ಕೆಲವು ಭಾಗ್ಯಲಕ್ಷ್ಮಿ ಫ್ಯಾನ್ಸ್​ ಹೇಳುತ್ತಿದ್ದಾರೆ. 

ಸೊಂಟದ ಭಾಗ ಜೀರೋಸೈಜ್‌, ಉಳಿದ ಭಾಗ ದೊಡ್ಡದಾಗಿಸಲು ಶಸ್ತ್ರಚಿಕಿತ್ಸೆ: ನಟಿ ಪ್ರಿಯಾಮಣಿ ಹೇಳಿದ್ದೇನು?

click me!