ಈಗಷ್ಟೇ ಶುರುವಾದ ಸೀತಾ-ರಾಮ ಪ್ರೀತಿಗೆ 200ರ ಸಂಭ್ರಮ: ಅರಳುವ ಮುನ್ನವೇ ಕಮರಿಹೋಗುವುದೇ ಖುಷಿ?

By Suvarna News  |  First Published Apr 17, 2024, 5:13 PM IST

ಸೀತಾ ಮತ್ತು ರಾಮ್‌ ಪಯಣ 200 ಸಂಚಿಕೆ ಪೂರೈಸಿದೆ. ಈಗಷ್ಟೇ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಆದರೆ ಇವರ ಖುಷಿಗೆ ಇದಾಗಲೇ ಕಣ್ಣುಬಿದ್ದಾಗಿದೆ, ಮುಂದೆ?
 


ಸೀತಾ-ರಾಮ ಪಯಣಕ್ಕೆ ಇನ್ನೂರರ ಸಂಭ್ರಮ. ಜೀ ಕನ್ನಡ ವಾಹಿನಿ ಈ ಕುರಿತು ವಿಶೇಷ ಪ್ರೊಮೋ ಬಿಡುಗಡೆ ಮಾಡಿದೆ. ಇನ್ನೂರು ಎಪಿಸೋಡ್‌ಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಇನ್ನೂರು ಕಂತುಗಳ ಬಳಿಕ ಕೊನೆಗೂ ಸೀತಾ ರಾಮನ ಮದುವೆಗೆ ಎಲ್ಲರ ಅಂಕಿತ ಬಿದ್ದಾಗಿದೆ. ಏನೋ ತಂತ್ರಗಾರಿಕೆ ಹೆಣೆಯುತ್ತಿದ್ದಾಳೆ ಚಿಕ್ಕಮ್ಮ ಭಾರ್ಗವಿ. ಆದರೂ ಏನೋ ಕುತಂತ್ರದಿಂದಲೇ ಸೀತಾ ಮತ್ತು ರಾಮ್​ನನ್ನು ಒಂದುಮಾಡುವ ಹಾಗೆ ಸದ್ಯ ಮಾಡಿದ್ದಾಳೆ. ಪ್ರಿಯಾ ಮತ್ತು ಅಶೋಕ್‌ ಮದ್ವೆ ಅತ್ತ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ ಇತ್ತ ರಾಮ್‌ನ ಮದುವೆಯನ್ನೂ ನಿರ್ಧಾರ ಮಾಡುವೆ ಎಂದಿದ್ದ ಚಿಕ್ಕಮ್ಮ ಭಾರ್ಗವಿ ಚಾಂದನಿ ಬದಲು ಸೀತಾಳನ್ನೇ ಸೆಲೆಕ್ಟ್​ ಮಾಡಿದ್ದಾಳೆ!  ತನ್ನ ಹೆಸರನ್ನು ಹೇಳುತ್ತಾಳೆ ಎಂದು ಖುಷಿಪಟ್ಟಿದ್ದ  ಚಾಂದನಿಗೆ ಇಂಗು ತಿಂದ ಮಂಗನ ಅನುಭವ.  ಅದೇ ವೇಳೆ ತಾತ ಕೂಡ ನಾನು ರಾಮ್‌ನ ಮದುಮಗಳನ್ನು ನಿರ್ಧಾರ ಮಾಡಿರುವುದಾಗಿ ಹೇಳಿದ್ದ. ಆದರೆ ಭಾರ್ಗವಿ ಸೀತಾಳ ಹೆಸರನ್ನು ಹೇಳುತ್ತಿದ್ದಂತೆಯೇ ತಾತ ಕೂಡ ಖುಷಿಯಿಂದ ಸೀತಾಳನ್ನು ಒಪ್ಪಿಕೊಂಡಿದ್ದಾನೆ.  

ಇಷ್ಟಾಗುತ್ತಿದ್ದಂತೆಯೇ ಸೀತಾ ಮತ್ತು ರಾಮ್​ ಲವ್​ಸ್ಟೋರಿ ಮತ್ತೆ ಶುರುವಾಗಿದೆ. ಹೂವಿನ ಹಾಸಿಗೆಯ ಮೇಲೆ ಇಬ್ಬರೂ ರೊಮ್ಯಾನ್ಸ್​ ಮಾಡುತ್ತಿದ್ದಾರೆ. ಪ್ರೀತಿಯಲ್ಲಿ ತೇಲಿ ಹೋಗಿದ್ದಾರೆ. ಇದರ ಪ್ರೊಮೋ ನೋಡಿದ ಅಭಿಮಾನಿಗಳು ಅಯ್ಯೋ ಕಣ್ರೋ ಇಬ್ಬರ ಮದ್ವೆ ಫಿಕ್ಸ್​ ಆಗಿದೆ ಅಷ್ಟೇ. ಫಸ್ಟ್​ನೈಟೇ ಶುರುವಿಟ್ಟುಕೊಂಡು ಬಿಟ್ರಾ ಎಂದು ತಮಾಷೆ ಮಾಡುತ್ತಿದ್ದಾರೆ. ಆದರೂ ನಿಮ್ಮ ಜೋಡಿ ನೋಡೋಕೆ ಚೆಂದ ಎನ್ನುತ್ತಿದ್ದಾರೆ ಇನ್ನು ಕೆಲವರು. ಅದೇನೇ ಇದ್ದರೂ ಇಬ್ಬರೂ ಪ್ರೀತಿಯಲ್ಲಿ ತೇಲಿಹೋಗಿದ್ದಾರೆ. ಇಬ್ಬರ ನಡುವೆ ಹುಸಿ ಮುನಿಸು ಕೂಡ ಶುರುವಾಗಿದೆ. 

Tap to resize

Latest Videos

ಇನ್ನೂ ಮದ್ವೆನೇ ಆಗ್ಲಿಲ್ಲ ಕಣ್ರೋ... ಫಸ್ಟ್​ನೈಟ್​ ಶುರು ಮಾಡಿಕೊಂಡುಬಿಟ್ರಾ ಎನ್ನೋದಾ ಫ್ಯಾನ್ಸ್​!

ಆದರೆ... ಈ ಪ್ರೀತಿ ಇಲ್ಲಿಗೆ ಕಮರಿ ಹೋಗುವುದೇ ಎನ್ನುವ ಆತಂಕ ಕಾಣುತ್ತಿದೆ. ಇದಕ್ಕೆ ಕಾರಣ, ಸಿಹಿಯನ್ನು ಮುಂದಿಟ್ಟುಕೊಂಡು ಈ ಪ್ರೀತಿಯನ್ನು ಮುರಿಯಲು ನೋಡಿದ್ದಾಳೆ ಭಾರ್ಗವಿ. ಮೊದಲಿನಿಂದಲೂ ಅಂದುಕೊಂಡಂತೆ ಇದೇ ಅವಳ ಪ್ಲ್ಯಾನ್‌ ಆಗಿತ್ತು. ಇದೀಗ ಆ ಯೋಜನೆನ್ನು ಮುಂದುವರೆಸುವ ಪ್ರಯತ್ನ ಮಾಡಿದ್ದಾಳೆ. ರಾಮ್‌ ತಾತನಿಗೆ ಎದೆನೋವು ಬರಿಸುವಂತೆ ಮಾಡಿ ಸೀತಾ ಮತ್ತು ರಾಮ್‌ರನ್ನು ದೂರ ಮಾಡುವುದು ಅವಳ ತಂತ್ರ. ಅದನ್ನು ಶುರುವಿಟ್ಟುಕೊಂಡಿದ್ದಾಳೆ ಆಕೆ.

ಅರಳುವ ಮುನ್ನವೇ ಕಮರಿ ಹೋಗುವುದೇ ಪ್ರೀತಿ ಎನ್ನುವುದು ಸದ್ಯದ ಸ್ಥಿತಿ. ಅದೇ ಇನ್ನೊಂದೆಡೆ ರಾಮ್​ ತನಗೆ ಸಿಗುವುದಿಲ್ಲ ಎಂದು ತಿಳಿದರೂ ಸೀತಾಳನ್ನು ಹೇಗಾದರೂ ಮಾಡಿ ರಾಮ್​ನಿಂದ ದೂರ ಮಾಡುವ ಯೋಚನೆ ಅವಳದ್ದು. ಅದಕ್ಕೆ ತಕ್ಕಂತೆ ಚಿಕ್ಕಮ್ಮ ಭಾರ್ಗವಿ ಕುತಂತ್ರ ಬೇರೆ. ಪ್ರಿಯಾ ಮತ್ತು ಅಶೋಕ್​ ಮದುವೆ ಮುಗಿಯುವುದರೊಳಗೆ ಅವರಿಬ್ಬರನ್ನೂ ಬೇರೆ ಮಾಡುತ್ತೇನೆ ಎಂದಿದ್ದಾಳೆ ಭಾರ್ಗವಿ. ಇದನದ್ನೇ ನಂಬಿಕೊಂಡಿದ್ದಾಳೆ ಚಾಂದನಿ. ಈ ಮಧ್ಯೆಯೇ ಸೀತಾಳಿಗೆ ರಾಮ್​ ಕೊಡಿಸಿರೋ ಸೀರೆ ಮೇಲೆ ಚಾಂದನಿ ಕಣ್ಣು ಬಿದ್ದಿದೆ. ಅದನ್ನು ತನ್ನದು ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಅದು ಸಾಧ್ಯವಾಗಿರಲಿಲ್ಲ. ಅದಕ್ಕೆ ರಾಮ್​ ಕೊಡಿಸಿದ ಸೀರೆ ನಿನಗೆ ಸಿಕ್ಕಿದೆ, ಆದರೆ ರಾಮ್​ ಸಿಗಲ್ಲ ಎಂದಿದ್ದಳು. ಆದರೆ ಎಲ್ಲವೂ ಉಲ್ಟಾ ಆಗಿದೆ. ಚಿಕ್ಕಮನಿಗೆ ಚಾಂದನಿ ಇಷ್ಟವಿಲ್ಲದಿದ್ದರೂ ಸೀತಾ ಮತ್ತು ರಾಮ್‌ರನ್ನು ದೂರ ಮಾಡುವುದು ಮಾತ್ರ ಬೇಕಿದೆ. ಇದರ ನಡುವೆಯೇ ಇಬ್ಬರ ಮದುವೆಗೆ ಒಪ್ಪಿಕೊಂಡಿದ್ದಾಳೆ. ಮುಂದೇನಾಗುತ್ತದೆ ಎನ್ನುವುದು ಈಗಿರುವ ಪ್ರಶ್ನೆ. 

ಸೊಂಟದ ಭಾಗ ಜೀರೋಸೈಜ್‌, ಉಳಿದ ಭಾಗ ದೊಡ್ಡದಾಗಿಸಲು ಶಸ್ತ್ರಚಿಕಿತ್ಸೆ: ನಟಿ ಪ್ರಿಯಾಮಣಿ ಹೇಳಿದ್ದೇನು?


click me!