ಸೀತಾರಾಮ ಧಾರಾವಾಹಿ 200 ಎಪಿಸೋಡ್ ಪೂರೈಸಿರುವ ಹಿನ್ನೆಲೆಯಲ್ಲಿ ನೆನಪಿನಂಗಳದಿಂದ ಅಶೋಕನ ಪಾತ್ರಧಾರಿ ರಾಮ್ ತಮ್ಮ ಶರ್ಟ್ ಕಿತ್ತು ಹಾಕುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ರಾಮನವಮಿಯ ಅದ್ಭುತ ದಿನವೇ ಸೀತಾರಾಮ 200 ಎಪಿಸೋಡ್ಸ್ ಪೂರೈಸಿದೆ. ಈ ಸಂದರ್ಭದಲ್ಲಿ ರಾಮ್ ಗೆಳೆಯ ಅಶೋಕ್ ತಮ್ಮ ಧಾರಾವಾಹಿ ಚಿತ್ರೀಕರಣದ ಸಂದರ್ಭದ ಅಪರೂಪದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಈ ಒಂದು ವರ್ಷದಲ್ಲಿ ಧಾರಾವಾಹಿ ಹಲವಾರು ನೆನಪುಗಳನ್ನು ಕೊಟ್ಟಿದ್ದು, ಅದರಲ್ಲಿ ಇದೂ ಒಂದು ಎಂದು ರಾಮ್ ಪಾತ್ರಧಾರಿ ಗಗನ್ ಚಿನ್ನಪ್ಪ ಅಶೋಕ್ ಅವರನ್ನು ಅಟ್ಟಿಸಿಕೊಂಡು ಹೋಗಿ ಒತ್ತಾಯದಿಂದ ಶರ್ಟ್ ಬಿಚ್ಚುತ್ತಿದ್ದಾರೆ. ಬಳಿಕ ಆಪ್ತಮಿತ್ರ ಅಶೋಕನನ್ನು ರಾಮ್ ಸ್ವಿಮ್ಮಿಂಗ್ ಪೂಲ್‌ಗೆ ಎಳೆದುಕೊಳ್ಳುತ್ತಾರೆ. ವಿಡಿಯೋಗೆ ಅಶೋಕ್, 'ನಾನು ಮಾತ್ರ ನೀರಲ್ಲಿ ಯಾಕೆ ನೆನಿಬೇಕು ನೀನೂ ನೆನೀ ಮಗನೇ' ಎಂದು ಗಗನ್ ಚಿನ್ನಪ್ಪ ಒತ್ತಾಯಿಸಿದ ಕ್ಷಣ ಎಂದು ವಿವರಿಸಿದ್ದಾರೆ.
ಧಾರಾವಾಹಿಯಲ್ಲಿ ಆಪ್ತ ಸ್ನೇಹಿತರಾಗಿರುವ ಇವರಿಬ್ಬರೂ ನಿಜ ಜೀವನದಲ್ಲಿಯೂ ಅದೇ ರೀತಿಯ ಸ್ನೇಹ ಕಾಪಾಡಿಕೊಂಡಿರುವುದನ್ನು ವಿಡಿಯೋ ತೋರಿಸುತ್ತದೆ. ಈ ರಾಮ ಅಶೋಕರ ಸ್ನೇಹ ಜನರ ನೆನಪಲ್ಲಿ ಬಹಳ ಕಾಲ ಇರುತ್ತದೆ ಎಂದು ಭಾವಿಸುತ್ತೇನೆ ಎಂದು ಅಶೋಕ್ ಹೇಳಿದ್ದು, ಅಭಿಮಾನಿಗಳ ಪ್ರೀತಿಗೆ ತಾವು ಚಿರಋಣಿ ಎಂದಿದ್ದಾರೆ.
ಸೀರಿಯಲ್ ವಿಷಯಕ್ಕೆ ಬರುವುದಾದರೆ, ಪ್ರಿಯಾ ಮತ್ತು ಅಶೋಕ್ ಮದ್ವೆ ಅತ್ತ ಭರ್ಜರಿಯಾಗಿ ನಡೆದಿದೆ. ಈ ಜೋಡಿಯನ್ನು ಜನ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಇದರ ಜೊತೆಗೇ ರಾಮ ಸೀತೆಯ ಪ್ರೀತಿ ವಿಷಯವೂ ರಾಮನ ಮನೆಯಲ್ಲಿ ಗೊತ್ತಾಗಿದೆ. ಧಾರಾವಾಹಿಯಲ್ಲಿ ಪ್ರಿಯಾ ಅಶೋಕ್ ಜೋಡಿಯನ್ನು ಮೆಚ್ಚಿಕೊಂಡ ಹಾಗೇ ರಾಮ್ ಮತ್ತು ಅಶೋಕನ ಸ್ನೇಹವನ್ನು ಕೂಡಾ ಜನ ಇಷ್ಟಪಟ್ಟಿದ್ದಾರೆ. ಹಾಗಾಗಿ, ಅಶೋಕ್ ಈಗ ಶೇರ್ ಮಾಡಿರುವ ಇವರಿಬ್ಬರ ಸ್ನೇಹದ ವಿಡಿಯೋ ಹಲವರಿಗೆ ಸಂತಸ ತಂದಿದೆ.