ಅವಳಿ ಮಕ್ಕಳನ್ನು ಗ್ರೂಮಿಂಗ್ಗೆ ಕರೆದುಕೊಂಡು ಬಂದ ನಟಿ ಸುಧಾರಾಣಿ! ಅಭಿಮಾನಿಗಳಿಗೆ ಕನ್ನಡಕದ ಗುಟ್ಟು ರಟ್ಟು ಮಾಡಿದ್ದಾರೆ ನಟಿ.
ಸುಧಾರಾಣಿ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. 54 ವರ್ಷದ ನಟಿ, ಸೀರಿಯಲ್ನಲ್ಲಿ ಮದುವೆಯಾದ ಮಕ್ಕಳ ಅಮ್ಮ. ಇನ್ನೇನು ಅಜ್ಜಿಯಾಗುವ ಕಾಲ. ಆದರೆ ರಿಯಲ್ ಆಗಿ ಅವರನ್ನು ನೋಡಿದರೆ ಅವರಿನ್ನೂ ಸಿಂಪಲ್ ಬ್ಯೂಟಿ. ವಯಸ್ಸು ಎನ್ನುವುದು ಒಂದು ಸಂಖ್ಯೆಯಷ್ಟೇ ಎನ್ನುವುದು ಸುಧಾರಾಣಿ ಅವರಿಗೆ ನೋಡಿದರೆ ತಿಳಿಯುತ್ತದೆ. ತಮ್ಮ ಅದ್ಭುತ ನಟನೆಯಿಂದ ಮನಸೂರೆಗೊಳ್ಳುತ್ತಿದ್ದಾರೆ ನಟಿ ಸುಧಾರಾಣಿ. ಶೂಟಿಂಗ್ನಿಂದ ಬಿಡುವು ಸಿಕ್ಕಾಗ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿಯೂ ಆ್ಯಕ್ಟೀವ್ ಆಗಿರುತ್ತಾರೆ ನಟಿ. ಇದಾಗಲೇ ಕೆಲವು ವಿಡಿಯೋಗಳನ್ನು ಅವರು ಶೇರ್ ಮಾಡಿಕೊಂಡಿದ್ದು, ಇವುಗಳಿಗೆ ಸಕತ್ ರೆಸ್ಪಾನ್ಸ್ ಸಿಗುತ್ತಿದೆ.
ಇದೀಗ ನಟಿ ಶೂಟಿಂಗ್ ಇಲ್ಲದ ಒಂದು ದಿನ ತಮ್ಮ ಅವಳಿ ಮಕ್ಕಳಾದ ಮಿಕ್ಕಿ ಮತ್ತು ಮಿನಿ ನಾಯಿ ಮರಿಗಳನ್ನು ಗ್ರೂಮಿಂಗ್ಗೆ ಕರೆದುಕೊಂಡು ಬಂದಿದ್ದು, ಆಗ ಕಾರಿನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಒಳಗೆ ನನ್ನ ಅವಳಿ ಮಕ್ಕಳು ಗ್ರೂಮಿಂಗ್ ಮಾಡಿಕೊಳ್ಳುತ್ತಿದ್ದಾರೆ. ಕಾರಿನಲ್ಲಿ ಕುಳಿತು ಬೋರ್ ಆದ ಕಾರಣ, ಸುಮ್ಮನೇ ಎಲ್ಲರ ಜೊತೆ ಮಾತನಾಡುತ್ತಿರುವುದಾಗಿ ನಟಿ ಹೇಳಿದ್ದಾರೆ. ಮಮ್ಮಿ ಮತ್ತು ಬೇಬೀಸ್ ಡೇ ಔಟ್ ಇವತ್ತು. ನಾನೇ ಡ್ರೈವ್ ಮಾಡಿಕೊಂಡು ಕರ್ಕೊಂಡು ಬಂದಿದ್ದೇನೆ. ಮಕ್ಕಳ ಹೆಸರು ಮಿಕ್ಕಿ ಮತ್ತು ಮಿನಿ ಎಂದಿದ್ದಾರೆ. ಇದೇ ವೇಳೆ, ತಮ್ಮ ಕನ್ನಡಕದ ಗುಟ್ಟನ್ನು ನಟಿ ಹೇಳಿದ್ದಾರೆ. ಸದಾ ತಲೆಯ ಮೇಲೆ ಕನ್ನಡಕ ಯಾಕೆ ಹಾಕ್ಕೊಂಡು ಇರ್ತೀರಾ ಎಂದು ತುಂಬಾ ಮಂದಿ ಕೇಳ್ತಾರೆ. ನೋಡಿ ಈಗ ಕನ್ನಡಕವನ್ನು ಕಣ್ಣಿಗೇ ಹಾಕಿಕೊಂಡಿದ್ದೇನೆ ಎಂದಿರುವ ಸುಧಾರಾಣಿ, ತಮಗೆ ಪವರ್ ಇರುವ ಕಾರಣ, ಕನ್ನಡಕ ಬೇಕೇ ಬೇಕು ಎಂದಿದ್ದಾರೆ. ಕಣ್ಣಿನ ಮೇಲೆ ಇರದಿದ್ದರೂ ತಲೆಯ ಮೇಲೆ ಕನ್ನಡಕ ಇರಲೇಬೇಕು. ಇಲ್ಲದಿದ್ದರೆ ಏನೋ ಮಿಸ್ಸಿಂಗ್ ಅನಿಸತ್ತೆ. ನಾನು ನಾನೇ ಅಲ್ಲ ಅಂತ ಎನಿಸಿಬಿಡುತ್ತೆ. ಇದೇ ಕಾರಣಕ್ಕೆ ಕನ್ನಡಕ ಇಲ್ಲದೇ ಹೊರಗೆ ಹೋಗುವುದಿಲ್ಲ ಎಂದಿದ್ದಾರೆ. ಬಹುಶಃ ಶೂಟಿಂಗ್ ಸಮಯದಲ್ಲಿ ಮಾತ್ರ ಕನ್ನಡಕ ಇಲ್ಲದೇ ಕಾರ್ಯ ನಿರ್ವಹಿಸುತ್ತಿದ್ದಾರೆ ಸುಧಾರಾಣಿ.
ಸುಧಾರಾಣಿ ಅಣ್ಣ ನಾಗರಹಾವು ಸಾಕಿದ್ರಂತೆ! ತೆಂಗಿನಚಿಪ್ಪಲ್ಲಿ ಹಾಲು ಕುಡೀತಿದ್ದ ಅಚ್ಚರಿ ವಿಷ್ಯ ರಿವೀಲ್
ಇನ್ನು ಸುಧಾರಾಣಿ ಅವರ ಕುರಿತು ಹೇಳುವುದಾದರೆ, ಈಕೆ ಭರತನಾಟ್ಯ ಕಲಾವಿದೆ ಕೂಡ ಹೌದು. ಭರತನಾಟ್ಯ ಮಾತ್ರವಲ್ಲದೇ ಕೂಚುಪುಡಿ ಕಲಾವಿದೆ ಕೂಡ. ಇವರು ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ. 'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿರುವ ಇವರು ಕೂಚಿಪುಡಿ ಹಾಗೂ ಭರತನಾಟ್ಯ ಕಲಾವಿದೆ. ತಮ್ಮ 13ನೇ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ನಟನೆಯ 'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.
ಸುಧಾರಾಣಿ ಮತ್ತು ಗೋವರ್ಧನ್ ವಿವಾಹ 2000 ನೇ ಇಸವಿಯಲ್ಲಿ ನಡೆಯಿತು. 2001ರಲ್ಲಿ ಜನಿಸಿದ ಪುತ್ರಿ ನಿಧಿ ಜನಿಸಿದ್ದು, ಕಳೆದ ವರ್ಷವಷ್ಟೇ ಅವರ ಭರತನಾಟ್ಯ ರಂಗಪ್ರವೇಶ ಆಗಿದೆ. ಸುಧಾರಾಣಿಯವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸುಬ್ಬಿ ಕುಟ್ಟಿ ಎನ್ನುತ್ತಾರೆ. ಸಂಗೀತ, ನೃತ್ಯದಲ್ಲಿ ಪ್ರವೀಣೇಯಾಗಿದ್ದಾರೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಸುಧಾರಾಣಿಯವರು ಮಗ ಅಭಿಗಾಗಿ ಡ್ರೈವಿಂಗ್, ನೃತ್ಯ, ಇಂಗ್ಲಿಷ್ ಎಲ್ಲಾ ಕಲಿತು ಸೀರಿಯಲ್ ಪ್ರೇಮಿಗಳ ಮನಸ್ಸನ್ನು ಕದಿಯುತ್ತಿದ್ದಾರೆ. ಮಗನಿಗಾಗಿ ಮನೆ ಬಿಡಲು ರೆಡಿಯಾಗಿರೋ ತುಳಸಿಯನ್ನು ನೋಡಿ ಹಾಗೆ ಮಾಡಬೇಡಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ಪಾರ್ವತಮ್ಮನವ್ರು ಹಾಗೆ ಯಾಕೆ ಮಾಡಿದ್ರಂತ ಕೊನೆಗೂ ಗೊತ್ತಾಗ್ಲೇ ಇಲ್ಲ! ಸುಧಾರಾಣಿ ಹೇಳಿದ್ದೇನು?