ಮರೆಯಾದ ದಿಟ್ಟ ಭೂಮಿಕಾ, ಮಂಕಾದ ಸೀತಾರಾಮ ಟಿಆರ್‌ಪಿಯಲ್ಲಿ ಹಿನ್ನಡೆ , ಕಲರ್ಸ್ ಹಿಂದಿಕ್ಕಿದ ಜೀ!

By Gowthami K  |  First Published Aug 31, 2024, 2:13 PM IST

ಕನ್ನಡ ಕಿರುತೆರೆಯ ಟಿಆರ್‌ಪಿ ಪಟ್ಟಿಯಲ್ಲಿ ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿ ಮತ್ತೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಗ್ರಾಮೀಣ ಮತ್ತು ನಗರ ಎರಡೂ ಭಾಗಗಳಲ್ಲಿ 'ಲಕ್ಷ್ಮೀ ನಿವಾಸ' ಧಾರಾವಾಹಿ ಮೊದಲ ಸ್ಥಾನದಲ್ಲಿದೆ.


ಕನ್ನಡ ಕಿರುತೆರೆಗಳ ಟಿಆರ್‌ಪಿ ಹೊರಬಿದ್ದಿದೆ. ಹಳೆಯ ಸೀರಿಯಲ್‌ ಗಳನ್ನು ಹೊಸ ಸೀರಿಯಲ್‌ ಹಿಂದಿಕ್ಕಿದೆ.  ಟಾಪ್‌ 10 ಸೀರಿಯಲ್‌ ಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಜೀ ಕನ್ನಡ ಲಕ್ಷ್ಮೀ ನಿವಾಸ ನಂಬರ್‌ ಸ್ಥಾನ ಪಡೆದಿದೆ. ಗ್ರಾಮೀಣ ಭಾಗದಲ್ಲೂ ಕೂಡ  ಲಕ್ಷ್ಮೀ ನಿವಾಸ ನಂಬರ್‌ 1 ಸ್ಥಾನ ಪಡೆದಿದೆ. ಈ ಮೂಲಕ  ಜೀ ಕನ್ನಡವು ಈ ಬಾರಿ ಕರ್ನಾಟಕದ ನಂಬರ್ 1 ಚಾನೆಲ್‌ ಆಗಿದೆ. ಕಲರ್ಸ್ ಕನ್ನಡ ಎರಡನೇ ಸ್ಥಾನ ಪಡೆದಿದೆ. ಮೂರನೇ ಸ್ಥಾನವು ಸ್ಟಾರ್‌ ಸುವರ್ಣ ಪಡೆದುಕೊಂಡಿದೆ. ನಂತರದಲ್ಲಿ ಉದಯ ಟಿವಿ ಇದೆ.

ಇಲ್ಲಿ ಕಳೆದ ಮೂರು ವಾರಗಳಿಂದಲೂ ಲಕ್ಷ್ಮೀ ಬಾರಮ್ಮ ಟಾಪ್‌ ನಲ್ಲಿ ಬಂದಿದೆ. ಎರಡನೇ ಸ್ಥಾನವನ್ನು ಕಲರ್ಸ್ ಕನ್ನಡದ ರಾಮಾಚಾರಿ ಪಡೆದುಕೊಂಡಿದೆ.  ಇತ್ತೀಚೆಗೆ ಜೀ ಕನ್ನಡದಲ್ಲಿ ಆರಂಭವಾದ ಅಣ್ಣಯ್ಯ ಸೀರಿಯಲ್‌ ನಂ.3 ಸ್ಥಾನ ಪಡೆದಿರುವುದು ವಿಶೇಷಾಗಿದೆ. ಇನ್ನು ಲಕ್ಷ್ಮಿ ನಿವಾಸ ತುಂಬು ಕುಟುಂಬದ ಕಥೆಯಾಗಿದೆ. ಇಲ್ಲಿ ಕಥೆಯೇ ಧಾರವಾಹಿಯ ಮುಖ್ಯ ಕಥಾವಸ್ತು. ನಾಯಕ, ನಾಯಕಿಯಾಗಲಿ ಸೀರಿಯಲ್‌ ಗೆ ಇಲ್ಲ. ಹೀಗಾಗಿ ಪ್ರೇಕ್ಷಕರಿಗೆ ಕಥೆ ಹಿಡಿಸಿದೆ. ಮತ್ತು ಮೊದಲ ಸ್ಥಾನಕ್ಕೇರಿದೆ.

Latest Videos

undefined

ಕಿಚ್ಚ ದಿಢೀರ್ ಸುದ್ದಿಗೋಷ್ಠಿ: ಬಿಗ್‌ಬಾಸ್‌ ಕನ್ನಡ 11 ನಿರೂಪಣೆ ಬಗ್ಗೆ ಗೊಂದಲದ ಹೇಳಿಕೆ!

ಅಮೃತಧಾರೆ ಮತ್ತು ಸೀತಾರಾಮ ಸೀರಿಯಲ್‌ ಬಗ್ಗೆ ವೀಕ್ಷಕರಿಗೆ ತುಂಬಾ ಭರವಸೆ ಹುಟ್ಟಿಸಿದ ಧಾರವಾಹಿಯಾಗಿತ್ತು. ಆದರೆ ಇತ್ತೀಚೆಗೆ ಕಥೆಯ ಪಥ ಬದಲಾಗಿದ್ದು, ಸೀರಿಯಲ್‌ ರೇಟಿಂಗ್ ಇಳಿಕೆಗೆ ಕಾರಣವಾಗಿದೆ.  ಅಮೃತಧಾರೆಯಲ್ಲಿ ಭೂಮಿಕಾಳನ್ನು ದಿಟ್ಟ ಹೆಣ್ಣಾಗಿ ತೋರಿಸಲಾಗಿತ್ತು. ಇದೀಗ ತಂಗಿಯ ಮದುವೆ ಬಳಿಕ ಭೂಮಿಕಾ ಮಂಕಾಗಿದ್ದು, ಅತ್ತೆ ಶಕುಂತಳಾ ತಂಗಿಯನ್ನು ಭೂಮಿಕಾ ವಿರುದ್ಧ ಛೂ ಬಿಟ್ಟಿರುವುದು ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಎಲ್ಲಾ ಧಾರವಾಹಿಗಳಂತೆ ಕಥೆ ಸಾಗುತ್ತಿದೆ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ.

ಇನ್ನು ಸೀತಾರಾಮದಲ್ಲೂ ಅಷ್ಟೇ ಕಥೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ.  ಭಾರ್ಗವಿ ಹುನ್ನಾರ ಸೀತಾಗೆ ಬೇಗ ಗೊತ್ತಾಗುವಂತೆ ಕಥೆ ಹೆಣೆಯಿರಿ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ.

ದರ್ಶನ್‌ಗೆ ಬಳ್ಳಾರಿ ಬೇಡ ತಿಹಾರ್ ಜೈಲಿಗೆ ಕಳುಹಿಸಿ, ಅತ್ಯಂತ ಕೆಟ್ಟ ಸೆರೆಮನೆ ಕಿರಣ್ ಬೇಡಿಯಿಂದ ಬದಲಾಯ್ತು

ಇನ್ನು ಕಲರ್ಸ್ ಕನ್ನಡದಲ್ಲಿ ಮೊದಲಿನಿಂದಲೂ ಲಕ್ಷ್ಮಿ ಬಾರಮ್ಮ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ಧಾರವಾಹಿ, ರಾಮಾಚಾರಿ ಮದುವೆ ಇತ್ತೀಚೆಗೆ ನಡೆದು ಧಾರವಾಹಿ ರೇಟಿಂಗ್‌ ಏರಿಕೆ ಕಂಡಿದೆ. ಇನ್ನು ಜನ ಹೆಚ್ಚು ಇಷ್ಟಪಡುವುದು ಕರಿಮಣಿ ಮತ್ತು ನಿನಗಾಗಿ ಈ ಸೀರಿಯಲ್‌ ಗಳು ಇತ್ತೀಚೆಗೆ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದೃಷ್ಠಿ ಬೊಟ್ಟು ಸದ್ಯದಲ್ಲೇ ಬರುತ್ತಿದ್ದು, ಉತ್ತಮ ಕಥೆ ಇರಬಹುದೆಂದು ಜನರಲ್ಲಿ ನಿರೀಕ್ಷೆ ಹುಟ್ಟಿಸಿದೆ. 

ಗ್ರಾಮೀಣ ಟಿವಿಪಿಯಲ್ಲಿ ಜೀ ಕನ್ನಡ 5 ಮತ್ತು ಕಲರ್ಸ್ ಕನ್ನಡದ 5 ಧಾರವಾಹಿಗಳು ಟಾಪ್‌ 10 ರಲ್ಲಿ ಸ್ಥಾನ ಪಡೆದಿದೆ. ಕ್ರಮವಾಗಿ ಇಂತಿದೆ
ಲಕ್ಷ್ಮೀ ನಿವಾಸ -8.6 TVR (ಜೀ ಕನ್ನಡ)
ರಾಮಾಚಾರಿ - 8.3 TVR (ಕಲರ್ಸ್ ಕನ್ನಡ)
ಅಣ್ಣಯ್ಯ -8.2 TVR  (ಜೀ ಕನ್ನಡ)
ಶ್ರಾವಣಿ ಸುಬ್ರಮಣ್ಯ - 7.9 TVR (ಜೀ ಕನ್ನಡ) 
ಲಕ್ಷ್ಮಿ ಬಾರಮ್ಮ- 7.4 TVR (ಕಲರ್ಸ್ ಕನ್ನಡ)
ಸೀತಾ ರಾಮ - 6.9 TVR  (ಜೀ ಕನ್ನಡ)
ಅಮೃತಧಾರೆ - 6.9 TVR  (ಜೀ ಕನ್ನಡ)
ನಿನಗಾಗಿ 6.6TVR (ಕಲರ್ಸ್ ಕನ್ನಡ)
ಭಾಗ್ಯಲಕ್ಷ್ಮಿ 6.4 TVR (ಕಲರ್ಸ್ ಕನ್ನಡ)
ಕರಿಮಣಿ 5.5 TVR (ಕಲರ್ಸ್ ಕನ್ನಡ)
ಶ್ರೀಗೌರಿ 5.4 TVR (ಕಲರ್ಸ್ ಕನ್ನಡ)

ಇನ್ನು ನಗರದ ಟಿವಿಪಿಯಲ್ಲಿ ಕೂಡ ಜೀ ಕನ್ನಡ ಧಾರವಾಹಿಗಳು ಮೇಲುಗೈ ಸಾಧಿಸಿದೆ.  ಜೀ ಕನ್ನಡ 6 ಮತ್ತು ಕಲರ್ಸ್ ಕನ್ನಡದ 4 ಧಾರವಾಹಿಗಳು ಟಾಪ್‌ 10 ರಲ್ಲಿ ಸ್ಥಾನ ಪಡೆದಿದೆ. ಕ್ರಮವಾಗಿ ಇಂತಿದೆ
ಲಕ್ಷ್ಮೀ ನಿವಾಸ -7.6 TVR (ಜೀ ಕನ್ನಡ)
ಶ್ರಾವಣಿ ಸುಬ್ರಮಣ್ಯ- 7.1 TVR  (ಜೀ ಕನ್ನಡ) 
ಅಣ್ಣಯ್ಯ -7.1 TVR  (ಜೀ ಕನ್ನಡ)
ರಾಮಾಚಾರಿ 6.8 TVR (ಕಲರ್ಸ್ ಕನ್ನಡ)
ಸೀತಾ ರಾಮ 6.6 TVR  (ಜೀ ಕನ್ನಡ)
ಲಕ್ಷ್ಮಿ ಬಾರಮ್ಮ 6.5 TVR (ಕಲರ್ಸ್ ಕನ್ನಡ)
ಅಮೃತಧಾರೆ 6.3 TVR  (ಜೀ ಕನ್ನಡ)
ಭಾಗ್ಯಲಕ್ಷ್ಮಿ 5.7 TVR (ಕಲರ್ಸ್ ಕನ್ನಡ)
ನಿನಗಾಗಿ 5.5 TVR (ಕಲರ್ಸ್ ಕನ್ನಡ)
ಪುಟ್ಟಕ್ಕನ ಮಕ್ಕಳು 5.4TVR (ಜೀ ಕನ್ನಡ)
ಕರಿಮಣಿ 4.9 TVR (ಕಲರ್ಸ್ ಕನ್ನಡ)

click me!