ಸೀತಾರಾಮ ಸೀರಿಯಲ್ ನಲ್ಲಿ ಸುಬ್ಬಿ ಬಂದಾಗಿದೆ. ಅವಳ ಡ್ರೆಸ್, ಸ್ಟೈಲ್, ಡೈಲಾಗ್ ಸಿಹಿಗಿಂತ ಸಂಪೂರ್ಣ ಭಿನ್ನವಾಗಿದೆ. ಇದನ್ನು ನೋಡಿದ ಫ್ಯಾನ್ಸ್ ಯಾಕೋ, ಸುಬ್ಬಿ ಡೈಲಾಗ್ ಗೆ ಫುಲ್ ಮಾರ್ಕ್ಸ್ ನೀಡಲು ಸಿದ್ಧರಿಲ್ಲ.
ಝೀ ಕನ್ನಡದ ಸೀತಾ ರಾಮ ಸೀರಿಯಲ್ (Zee Kannada Seetharama Serial) ನಲ್ಲಿ ಸಿಹಿ ಸಾವಿನ ಕಥೆ ವೀಕ್ಷಕರನ್ನು ಭಾವುಕಗೊಳಿಸಿತ್ತು. ಸೀರಿಯಲ್ ಸಿಹಿಯಿಲ್ಲದೆ ಸೆಪ್ಪೆಯಾಗಿತ್ತು. ಆದ್ರೀಗ ಸುಬ್ಬಿ ಆಟ ಶುರುವಾಗಿದೆ. ಸಿಹಿ ಬದಲು ಸುಬ್ಬಿ ಎಂಟ್ರಿಕೊಟ್ಟಿದ್ದಾಳೆ. ಸಿಹಿ ಆತ್ಮ ಹಾಗೂ ಸುಬ್ಬಿ ಇಬ್ಬರನ್ನೂ ವೀಕ್ಷಕರು ನೋಡುವ ಅವಕಾಶ ಸಿಗ್ತಿದೆ. ಸಿಹಿಯನ್ನೇ ಹೋಲುವ ಸುಬ್ಬಿ ಈ ಹಿಂದೆ ತನ್ನ ಒಂದು ಝಲಕ್ ತೋರಿಸಿ ಹೋಗಿದ್ದಳು. ಈಗ ಖಡಕ್ ಲುಕ್ ಜೊತೆ ಸುಬ್ಬಿಯ ಎಂಟ್ರಿಯಾಗಿದೆ.
ಝೀ ಕನ್ನಡ (Promo) ಬಿಡುಗಡೆ ಮಾಡಿದ್ದು, ಶುರುವಾಯ್ತು ಸುಬ್ಬಿ ಆಟ, ಇಷ್ಟು ದಿನ ಒಂದು ಲೆಕ್ಕ, ಇನ್ಮುಂದೆ ಇರೋ ಲೆಕ್ಕನೇ ಬೇರೆ ಎಂದು ಶೀರ್ಷಿಕೆ ಹಾಕಿದೆ. ಈ ಪ್ರೋಮೋದಲ್ಲಿ ಸುಬ್ಬಿ ಎರಡು ಜುಟ್ಟು ಕಟ್ಕೊಂಡು, ಫ್ರಾಕ್ ಧರಿಸಿ, ಹೊಸ ಸ್ಟೈಲ್ ನಲ್ಲಿ ಬಂದಿದ್ದಲ್ಲದೆ, ರೌಡಿಗೆ ನಮಸ್ಕಾರ ಅಣ್ಣ ಎನ್ನುತ್ತಾಳೆ. ಅದಕ್ಕೆ ರೌಡಿ ರೆಸ್ಪಾನ್ಸ್ ಮಾಡಿಲ್ಲ ಅಂತ, ಸುಬ್ಬಿ ಅವಾಜ್ ಹಾಕಿದ್ದಾಳೆ. ನಮಸ್ಕಾರ ಅಂದ್ರೆ ವಾಪಸ್ ನಮಸ್ಕಾರ ಅಂತ ಹೇಳೋಕೆ ಗೊತ್ತಾಗಲ್ವಾ ಎಂದ ಸುಬ್ಬಿ, ಅಕ್ಕನ ಎಚ್ಚರಿಕೆ ಮಾತಿಗೂ ಹೆದರೋದಿಲ್ಲ. ಛೋಟ್ ಮೆಣಸಿನಕಾಯಿ ಅಂತ ರೌಡಿ ಕೂಗಾಡ್ತಿದ್ದಂತೆ ಕೋಪಗೊಳ್ಳುವ ಸುದ್ದಿ ಛೋಟ್ ಮೆಣಸಿನಕಾಯಿ ಅಲ್ಲ, ನನ್ನ ಹೆಸರು ಸುಬ್ಬಿ ಎನ್ನುತ್ತಾಳೆ. ಬುಲ್ಡೋಜರ್ ಹತ್ತಿರ ಬಂದ್ರೂ ಭಯಗೊಳ್ಳದೆ ಧೈರ್ಯವಾಗಿ ನಿಲ್ಲುವ ಸುಬ್ಬಿ, ಅದ್ರ ಮೇಲೆ ಹತ್ತಿ ಅಬ್ಬರಿಸ್ತಾಳೆ.
ಉರ್ಫಿಗೆ ಬಂತು ಇಂಥ ಆಫರ್! ತರಾಟೆ ತೆಗೆದುಕೊಂಡ ನಟಿ
ಈ ಪ್ರೋಮೋ ನೋಡಿದ ಫ್ಯಾನ್ಸ್ (Fans), ಸುಬ್ಬಿಯನ್ನು ಸ್ವಾಗತಿಸಿದ್ದಾರೆ. ಆದ್ರೆ ಸುಬ್ಬಿಯದ್ದು ಸ್ವಲ್ಪ ಓವರ್ ಆಕ್ಟಿಂಗ್ (Overacting) ಆಯ್ತು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಮಕ್ಕಳ ಕ್ಯಾರೆಕ್ಟರ್ ಗಿಂತ ಹೆಚ್ಚಾಯ್ತು ಸುಬ್ಬಿ ಆಕ್ಟಿಂಗ್, ಇಷ್ಟೊಂದು ಅವಶ್ಯಕತೆ ಇರಲಿಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್. ಸಿಹಿಯನ್ನೂ ಆರಂಭದಲ್ಲಿ ಹೀಗೆ ತೋರಿಸಿ, ಅವಳ ಕಥೆ ಮುಗಿಸಿದ್ದಾರೆ. ಈಗ ಸುಬ್ಬಿ ಸರದಿ. ಇಷ್ಟೊಂದು ಬಿಲ್ಡಪ್ ನೀಡಿ ನಂತ್ರ ಆಕೆ ಕಥೆಯನ್ನೂ ಮುಗಿಸಿದ್ರೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಇಷ್ಟು ಓವರ್ ಆಕ್ಟಿಂಗ್ ಡೈಲಾಗ್ ಮಾಡ್ಸಿ ಮಕ್ಕಳಿಗೆ ಏನು ಕಲಿಸ್ಬೇಕು ಅಂತಿದ್ದೀರಾ, ಬುದ್ಧಿ ಇಲ್ವಾ ಡೈರೆಕ್ಟರ್ ನಿಮ್ಗೆ, ಈ ತರ ಅಧಿಕಪ್ರಸಂಗ ಯಾವ ಮಕ್ಕಳು ಮಾಡ್ತಾರೆ,ಇದನ್ನು ನೋಡಿ ಮಕ್ಕಳೂ ಇದೇ ರೀತಿ ಮಾತನಾಡ್ತಾರೆ, ಮಕ್ಕಳ ರಕ್ಷಣಾ ವೇದಿಕೆ ಈಗ ಎಲ್ಲಿದೆ, ಮಕ್ಕಳ ಮುಗ್ಧತೆನಾ ಮಿಸ್ ಯುಸ್ ಮಾಡಿಕೊಳ್ಳಲಾಗ್ತಿದೆ ಎಂದು ಒಬ್ಬರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
undefined
ಡಾ. ರಾಜ್ ಕುಮಾರ್ ಮಕ್ಕಳಿಗೆ ಇದೆಂಥ ಶಿಕ್ಷೆ? ದೊಡ್ಮನೆಗೆ ಅನಾರೋಗ್ಯದ ಶಾಪ
ಸೀತಾರಾಮ ಸೀರಿಯಲ್ ನಲ್ಲಿ ಸೀತಾ ಹಾಗೂ ರಾಮ ಮುಖ್ಯ ಪಾತ್ರದಲ್ಲಿದ್ರೂ ಈಗ ಸಿಹಿ ಮತ್ತು ಸುಬ್ಬಿಯದ್ದೇ ಹವಾ. ಸಿಹಿ ಸಾವಿಗೆ ನ್ಯಾಯ ಸಿಗಬೇಕೇ ವಿನಃ ಸುಬ್ಬಿ ಅವಶ್ಯಕತೆ ಇರಲಿಲ್ಲ ಎಂದು ನಿರ್ದೇಶಕರಿಗೆ ವೀಕ್ಷಕರು ಸಲಹೆ ನೀಡಿದ್ದಾರೆ. ಮತ್ತೆ ಕೆಲವರಿಗೆ ಸುಬ್ಬಿ ಹಾಗೂ ಸಿಹಿಯನ್ನು ಒಟ್ಟಿಗೆ ನೋಡ್ತೇವೆ ಎಂಬ ಖುಷಿ ಇದೆ. ಸಿಹಿಯನ್ನು ಸಾಯಿಸದೆ ಸುಬ್ಬಿ ಎಂಟ್ರಿಯಾಗಿದ್ರೆ ಮತ್ತಷ್ಟು ಮಜವಾಗಿರುತ್ತಿತ್ತು ಎಂದ ಫ್ಯಾನ್ಸ್, ಸುಬ್ಬಿಯಾದ್ರೂ ಸೀತಾಗೆ ನ್ಯಾಯ ಕೊಡಿಸ್ತಾಳಾ ನೋಡೋಣ ಎಂದಿದ್ದಾರೆ. ಭಾರ್ಗವಿ ಕುತಂತ್ರದಿಂದ ಸಿಹಿ ಸಾವನ್ನಪ್ಪಿದ್ದಾಳೆ. ಮಗಳಿಲ್ಲದೆ ಸೀತಾ ಹುಚ್ಚಿಯಾಗ್ತಿದ್ದಾಳೆ. ಸಿಹಿ, ಸುಬ್ಬಿ ಮನವೊಲಿಸಿ ಹೇಗೆ ಸೀತಾ ಬಳಿ ಕರೆದುಕೊಂಡು ಬರ್ತಾಳೆ, ಭಾರ್ಗವಿಗೆ ಹೇಗೆ ಬುದ್ದಿ ಕಲಿಸ್ತಾಳೆ ಕಾದು ನೋಡ್ಬೇಕಿದೆ.