ಬಿಗ್‌ಬಾಸ್‌ ಕನ್ನಡ 11: ಈ ವಾರ 8 ಮಂದಿ ನಾಮಿನೇಟ್‌, ರಜತ್‌ ದುರಹಂಕಾರಕ್ಕೆ ಧನ್‌ರಾಜ್‌ ತಕ್ಕ ಉತ್ತರ

Published : Dec 11, 2024, 12:36 AM IST
ಬಿಗ್‌ಬಾಸ್‌ ಕನ್ನಡ 11: ಈ ವಾರ 8 ಮಂದಿ ನಾಮಿನೇಟ್‌, ರಜತ್‌ ದುರಹಂಕಾರಕ್ಕೆ ಧನ್‌ರಾಜ್‌  ತಕ್ಕ ಉತ್ತರ

ಸಾರಾಂಶ

ಬಿಗ್‌ಬಾಸ್‌ 11ರಲ್ಲಿ ಹಳೆಯ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಧನ್‌ರಾಜ್ ಮತ್ತು ರಜತ್ ನಡುವೆ ತೀವ್ರ ವಾಗ್ವಾದ ನಡೆಯಿತು. ಟಾಸ್ಕ್‌ನಲ್ಲಿ ಗೆಲುವಿನ ಕ್ರೆಡಿಟ್‌ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ, ಪರಸ್ಪರ ವೈಯಕ್ತಿಕ ನಿಂದನೆಗೆ ಆಯ್ತು. ರಜತ್‌ರ ದುರಹಂಕಾರದ ಬಗ್ಗೆ ಧನ್‌ರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

ಬಿಗ್‌ಬಾಸ್‌ ಕನ್ನಡ 11ರಲ್ಲಿ ಈ ವಾರ 10ನೇ ಸೀಸನ್‌ ಸ್ಪರ್ಧಿಗಳಿಗೆ ಮನೆಯೊಳಗೆ ಅತಿಥಿಗಳಾಗಿ ಬಂದು ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳಿಗೆ ಸಹಾಯ ಮಾಡುವ ಅವಕಾಶ ನೀಡಿದ್ದರು. ಡಿ.10ರ ಎಪಿಸೋಡ್ ನಲ್ಲಿ ಮನೆಯೊಳಗೆ ತುಕಾಲಿ ಸಂತೋಷ್ , ವರ್ತೂರು ಸಂತೋಷ್‌, ನಮ್ರತಾ ಗೌಡ ಮತ್ತು ಕೊನೆಯದಾಗಿ  ಕಳೆದ ಸೀಸನ್‌ ವಿನ್ನರ್‌ ಕಾರ್ತಿಕ್‌ ಬಂದಿದ್ದರು.

ಇನ್ನು 11ನೇ ವಾರ ಮನೆಯಿಂದ ಹೊರಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ, ಧನ್‌ರಾಜ್, ಶಿಶಿರ್, ರಜತ್‌, ಹನುಮಂತ, ಚೈತ್ರಾ, ಮೋಕ್ಷಿತಾ. ಕ್ಯಾಪ್ಟನ್‌ ಗೌತಮಿ ಅವರು ಮೋಕ್ಷಿತಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. 

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಸೀಕ್ರೆಟ್‌ ನಿಶ್ಚಿತಾರ್ಥ, ಮುಂದಿನ 6 ತಿಂಗಳಲ್ಲಿ ಮದುವೆ!

ಇನ್ನು ಮನೆಯಲ್ಲಿ ಧನ್‌ರಾಜ್‌ ಮತ್ತು ರಜತ್‌ ಗಲಾಟೆ ಮಾಡಿಕೊಂಡಿದ್ದಾರೆ.  ಗ್ರೋಸರಿ ಟಾಸ್ಕ್ ಧನ್‌ರಾಜ್-ರಜತ್‌ ಇದ್ದ ಟೀಂ ವಿನ್‌ ಆಗಿತ್ತು. ಈ ಟಾಸ್ಕ್ ಗೆಲ್ಲೋಕೆ ರಜತ್ ಕಾರಣ ಎಂದು ತ್ರಿವಿಕ್ರಮ್ ಹೇಳಿದ್ದರು. ಮನೆಯೊಳಗೆ ಬಂದ ರಜತ್ ಟೀಂ ಬಳಿ ತ್ರಿವಿಕ್ರಮ್ ಏನೋ ಹೇಳ್ತಾನೆ ಇದು ಟೀಂ ಗೆಲುವು ಎಂದರು. ಇದರಿಂದ ಧನರಾಜ್ ಬೇಸರಗೊಳ್ತಾರೆ. ರಜತ್ ವಿರುದ್ಧ ತಿರುಗಿ ಬಿದ್ದು ನಾಮಿನೇಷನ್‌ ಮಾಡಿದ್ದಾರೆ. 

ಒಳಗಡೆ ಹೇಳುವ ಬದಲು ತ್ರಿವಿಕ್ರಮ್‌ ಹೇಳಿದ ತಕ್ಷಣವೇ ಟೀಂ ಗೆಲುವು ಎಂದು ಹೇಳಬಹುದಿತ್ತು ಎಂಬುದು ಧನ್‌ರಾಜ್ ವಾದ ಇದನ್ನೇ ನಾಮಿನೇಷನ್‌ ಗೂ ಕಾರಣ ಕೊಡುತ್ತಾರೆ. ಈ ವೇಳೆ ರಜತ್‌  ಅವರು ಧನುವನ್ನು ಮಗು ಎಂದು ಸಂಭೋದಿಸುತ್ತಾರೆ. ಇದಕ್ಕೆ ಕೋಪಗೊಂಡ ಧನು ಅಂಕಲ್‌ ಎಂದು ಕರೆಯುತ್ತಾರೆ. ಇದರ ಜೊತೆಗೆ ಟಾಸ್ಕ್‌ ಒಂದರಲ್ಲಿ ಧನುವನ್ನು ರಜತ್‌ ಹುಚ್ಚ ಎಂದು ಕರೆದಿದ್ದು ಕೂಡ ಕೋಪ ತರಿಸಿದೆ, ನಮ್ಮ ಅಭಿಪ್ರಾಯವನ್ನು ಹೇಳುವ ಹಕ್ಕು ನಮಗಿದೆ, ನೀವು ನಮ್ಮ ಮೇಲೆ ನಿಮ್ಮ ಅಭಿಪ್ರಾಯವನ್ನು ಹೇರಬೇಡಿ ಎಂದು ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ.

ಪುಷ್ಪ 2 ಚಿತ್ರದ 7 ತಾರೆಯರು ಎಷ್ಟು ಓದಿದ್ದಾರೆ? ಯಾರು ಹೆಚ್ಚು ವಿದ್ಯಾವಂತರು?

ಇದಕ್ಕೆ ಪ್ರತಿಕ್ರಿಯೆ ನೀಡಿದ ರಜತ್‌ , ನಿನಗೆ ನೀನಿಲ್ಲಿ ಉಳಿಬೇಕು ಅನ್ನುವ ಕಾರಣದಿಂದ ಯಾರ ಕಾಲು ಬೇಕಾದರೂ ಹಿಡಿದುಕೋ, ಆದ್ರೆ ನಾನು ಹಿಡಿದುಕೊಳ್ಳುವುದಿಲ್ಲ. ಇದು ನಾನು, ನನ್ನ ದೌಲತ್ತು. ನನ್ನ ದುರಹಂಕಾರದಲ್ಲೇ ನಾನು ಬದುಕಿರುವುದು, ನಾನು ಯಾರ ಕಾಲು ಹಿಡಿಯುದಿಲ್ಲ. ನಿನಗೆ ಬೇಕಾ ಯಾರ ಕಾಲು ಬೇಕಾದ್ರೂ ಹಿಡಿ, ನನಗೆ ಸ್ವಾಭಿಮಾನ ಅಂತ ಬಂದ್ರೆ, ನಾನು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದರು.

72 ನೇ ದಿನ ಮನೆಯಲ್ಲಿ ಧನ್‌ರಾಜ್ ಮತ್ತು ಹನುಮಂತ ಕುಳಿತುಕೊಂಡು ಮಾತನಾಡುತ್ತಿದ್ದರು. ರಜತ್‌ ಅವರು ಯಾರನ್ನು ಗೆಲ್ಲಿಸಲು ಬಂದಿಲ್ಲ ಅಂತಾರೆ, ಮತ್ತೆ ಎಲ್ಲರ ಬಳಿ ಹೋಗಿ ನೀನು ಹಾಗಿರಬೇಡ, ಹೀಗಿರಬೇಡ ಅಂತ ಹೇಳ್ತಾರೆ. ತ್ರಿವಿಕ್ರಮ್‌ ಎನೂ ಇಲ್ಲ ಬರೇ ಪುಕ್ಕಲ. ವೈಲ್ಡ್‌ ಕಾರ್ಟ್ ಎಂಟ್ರಿ ರಜತ್‌ ಬಂದಾಗ ಯಾರೋ ಇವನು ಪೆಕ್ರು ಅಂತ ಅಂದವರು ಈಗ ಕೈಕಟ್ಟಿ ಕುಳಿಕೊಳ್ಳುತ್ತಾರೆ. ನಿನ್ನ ಮುಂದೆ ನಾನು ಎನೂ ಅಲ್ಲ ಅಂತ ಹೇಳಬಹುದಿತ್ತು. ರಜತ್‌ ಸ್ಟ್ರಾಟರ್ಜಿ ಕ್ಲೀನ್‌ ವರ್ಕ್ ಆಗುತ್ತಿದೆ. ಅದ್ರೆ ಈ ನನ್ನ ಮಕ್ಕಳಿಗೆ ಯಾರಿಗೂ ಗೊತ್ತಾಗುತ್ತಿಲ್ಲ. ಒಂದು ಮನೆಯನ್ನೇ ಆಕ್ರಮಿಸುತ್ತಾರೆ ಎಂದಾಗ ಇವರೆಲ್ಲ ಯಾಕೆ ಸುಮ್ಮನಿದ್ದರೆ ಎಂದು ಗೊತ್ತಾಗುತ್ತಿಲ್ಲ.

ಇದಾದ ನಂತರ ರಜತ್‌ ಮತ್ತು ಧನ್‌ರಾಜ್ ನಡುವೆ ನಾಮಿನೇಶನ್‌ನಲ್ಲಿ ನೀಡಿದ ಕಾರಣ ಹಿಡಿತು ಗಲಾಟೆ ನಡೆಯಿತು. ನಿನ್ನ ಯೋಗ್ಯತೆ ಅಷ್ಟೇ ಅಂತ ರಜತ್ ಮಾತನಾಡಿದ್ದು, ಯೋಗ್ಯತೆ ಬಗ್ಗೆ ನೀವು ಮಾತನಾಡುವುದು ಬೇಡ, ನಿಮ್ಮ ಯೋಗ್ಯತೆ ನಿಮಗೆ ಗೊತ್ತಿದೆ ನನ್ನ ಯೋಗ್ಯತೆ ನನಗೆ ಗೊತ್ತು. ಇದು ಗಲಾಟೆ ಜೋರಾಗಿ ಪರಸ್ಪರ ಹೊಡೆದುಕೊಳ್ಳುವ ರೇಂಜ್ ಗೆ ಜಗಳ ನಡೆದಿದ್ದು, ನನ್ನಿಂದಲೇ ನೀನು ಕ್ಯಾಪ್ಟನ್‌ ಆಗಿದ್ದು ಎಂದು ರಜತ್ ಹೇಳಿದ್ದಾನೆ. ಬಳಿಕ ಗಲಾಟೆ ಜಾಸ್ತಿಯಾಗದಂತೆ ಮನೆಯವರು ಜಗಳವನ್ನು ಬಿಡಿಸಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ