ಉಪವಾಸ ಮಾಡಿ ಆಸ್ಪತ್ರೆ ಸೇರಿದ ಬಿಗ್ ಬಾಸ್ ಖ್ಯಾತಿಯ ಸೋಫಿಯಾ

By Shruiti G Krishna  |  First Published Jul 1, 2022, 11:00 AM IST

ಹಿಂದಿ ಬಿಗ್ ಬಾಸ್ 7 (Bigg Boss) ಖ್ಯಾತಿಯ ಸೋಫಿಯಾ ಹಯಾತ್ (Sofia Hayat) ಸದ್ಯ ಯುಕೆಯಲ್ಲಿದ್ದಾರೆ (UK).ದೇಹದಲ್ಲಿ ಉಪ್ಪಿನ ಪ್ರಮಾಣ ಕಡಿಮೆಯಾದ ಕಾರಣ ಸೋಫಿಯಾ ಹಯಾತ್ ಆಸ್ಪತ್ರೆಗೆ ದಾಖಲಾಗಿದ್ದರು. ಆಧ್ಯಾತ್ಮದ ಕಡೆವಾಲಿರುವ ನಟಿ ಸೋಫಿಯಾ 2016ರಲ್ಲಿ ಮನರಂಜನಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿದ್ದರು. 


ಹಿಂದಿ ಬಿಗ್ ಬಾಸ್ 7 (Bigg Boss) ಖ್ಯಾತಿಯ ಸೋಫಿಯಾ ಹಯಾತ್ (Sofia Hayat) ಸದ್ಯ ಯುಕೆಯಲ್ಲಿದ್ದಾರೆ (UK).ದೇಹದಲ್ಲಿ ಉಪ್ಪಿನ ಪ್ರಮಾಣ ಕಡಿಮೆಯಾದ ಕಾರಣ ಸೋಫಿಯಾ ಹಯಾತ್ ಆಸ್ಪತ್ರೆಗೆ ದಾಖಲಾಗಿದ್ದರು. ಆಧ್ಯಾತ್ಮದ ಕಡೆವಾಲಿರುವ ನಟಿ ಸೋಫಿಯಾ 2016ರಲ್ಲಿ ಮನರಂಜನಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿದ್ದರು. ಆಧ್ಯಾತ್ಮಿಕ ಉಪವಾಸ  (Spiritual Fasting) ಮಾಡುತ್ತಿದ್ದ ನಟಿ ಸೋಫಿಯಾ ಇದೀಗ ದೇಹಕ್ಕೆ ಕುತ್ತು ತಂದುಕೊಂಡಿದ್ದಾರೆ.  ಉಪವಾಸ ಮಾಡಲು ಆರಂಭಿಸಿದ ನಂತರ ನಟಿ ಮೂರ್ಛೆ ಹೋಗುತ್ತಿದ್ದರು. ಬಳಿಕ ವೈದ್ಯರನ್ನು ಸಂಪರ್ಕಿಸಿ ಸೋಫಿಯಾಗೆ ದೇಹದಲ್ಲಿ ಉಪ್ಪಿನ ಅಂಶ ಸಂಪೂರ್ಣವಾಗಿ ಕಡಿಮೆಯಾಗುರುವುದು ಗೊತ್ತಾಗಿದೆ. ತಕ್ಷಣ ಸೋಫಿಯಾ ಯುಕೆಯಲ್ಲಿ ಆಸ್ಪತ್ರೆಗೆ ದಾಖಲಾದರು. ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಸೋಫಿಯಾ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೋಫಿಯಾ ಆಂಗ್ಲ ಮಾಧ್ಯಮದ ಜೊತೆ ಮಾತಾಡಿದ್ದು ಅನಾರೋಗ್ಯದ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

ಹಿಂದಿ ಬಿಗ್ ಬಾಸ್ 7ರ ಸ್ಪರ್ಧಿ ಸೋಫಿಯಾ ಆಧ್ಯಾತ್ಮಿಕ ಉಪವಾಸ ಮಾಡುತ್ತಿದ್ದರು. ಉಪವಾಸದಲ್ಲಿದ್ದಾಗ ಆಕೆಯ ದೇಹದಲ್ಲಿ ಉಪ್ಪಿನ ಮಟ್ಟವು ತೀರ ಕಡಿಮೆ ಆಗಿದೆ. ಇದರಿಂದ ನಡುಕ ಮತ್ತು ತಲೆಸುತ್ತು ಬಂದಿದ್ದು ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರಿಗೆ 5 ಪ್ಯಾಕ್ ಉಪ್ಪು ನೀಡಲಾಗಿದೆ. ಉಪವಾಸವು ಸೋಫಿಯಾ ಅವರ ಆಧ್ಯಾತ್ಮದ ಭಾಗವಾಗಿದೆ. 

ಕ್ರಿಕೆಟಿಗನಿಗೆ ನಗ್ನ ಚಿತ್ರ ಸಮರ್ಪಿಸಿದ್ದ ನಟಿ ಗಣೇಶನ ಭಕ್ತೆಯಾಗಿದ್ದು ಹೀಗೆ!

Tap to resize

Latest Videos

ಈ ಬಗ್ಗೆ ಮಾತನಾಡಿರುವ ಸೋಫಿಯಾ, 'ನಾನು ಉಪವಾಸದ ಮೂಲಕ ದೇಹವನ್ನು ಶುದ್ಧೀಕರಿಸುವ ಅಭ್ಯಾಸವನ್ನು ಮಾಡುತ್ತಿದ್ದೆ. ಶುದ್ಧೀಕರಣ ಪ್ರಕ್ರಿಯೆಯಲ್ಲಿ ನಾನು ದೇಹದಿಂದ ಬಹಳಷ್ಟು ಲವಣ ಅಂಶ ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಕಳೆದುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇಂದು ತುಂಬಾ ಅಪಾಯಕಾರಿಯಾಗಿ ಕಡಿಮೆಯಾಗಿದೆ. ಐದು ಪ್ಯಾಕೆಟ್‌ ಉಪ್ಪು ಪಡೆಯಲು ನಾನು ನರ್ಸ್‌ಗೆ ಕೇಳಿದೆ. ಉಪ್ಪು ನನ್ನನ್ನು ಉಳಿಸಿತು. ಈ ಸ್ಥಿತಿಯು ನನ್ನನ್ನು ಆಸ್ಪತ್ರೆಗೆ ಸೇರುವಂತೆ ಮಾಡಿತು. ನಾನು ನಡುಗುತ್ತಿದ್ದೆ, ನಾನು ಆಸ್ಪತ್ರೆಯಿಂದ ನನ್ನ ಸ್ನೇಹಿತನೊಂದಿಗೆ ಮಾತನಾಡಿದೆ. ಅರಾಮಾಗಿ ಇದ್ದೀನಿ' ಎಂದು ಹೇಳಿದರು. 

ರೋಹಿತ್ ಶರ್ಮಾಗೆ ನಗ್ನ ಚಿತ್ರ ಸಮರ್ಪಿಸಿದ್ದ ಬಿಗ್ ಬಾಸ್ ಸುಂದರಿ ಸಿಡಿಸಿದ ಬಾಂಬ್!

ಓ, ಅಂತಿಮವಾಗಿ ನಾನು ಉಪವಾಸವನ್ನು ಮುರಿಯಬೇಕಾಯಿತು ಮತ್ತು ನನ್ನ ದೇಹಕ್ಕಾಗಿ ನಾನು ಆಹಾರವನ್ನು ತಿನ್ನಬೇಕಾಯಿತು. ನನ್ನ ದೇಹವು ಈ ಸಮಯದಲ್ಲಿ ಉಪವಾಸ ಮಾಡಲು ಬಯಸುವುದಿಲ್ಲ. ಆದರೆ, ಈ ಬಾರಿ ನನ್ನ ಆರೋಗ್ಯವು ಏಕೆ ಬಳಲುತ್ತಿದೆ ಎಂದು ನನಗೆ ಖಚಿತವಿಲ್ಲ. ಏಕೆಂದರೆ ನಾನು ಇದನ್ನು ಹಿಂದೆಯೂ ಮಾಡಿದ್ದೆ, ಪ್ರತಿ ಬಾರಿಯೂ ಮಾಡುತ್ತೇನೆ. ಕೊನೆಯ ಬಾರಿ 2014ರಲ್ಲಿ ಮಾಡಿದಾಗ ನಾನು ಚೆನ್ನಾಗಿಯೇ ಇದ್ದೆ' ಎಂದು ಹೇಳಿದರು. 

ಈ ಬಗ್ಗೆ ಸೋಫಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.  ಸದ್ಯ ಚೇತರಿಸಿಕೊಳ್ಳುತ್ತಿದ್ದು ಸರಿಯಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.  ಇನ್ನು ಮುಂದೆ ಉಪವಾಸ ಮಾಡುವುದಿಲ್ಲ ಎಂದು ಸೋಫಿಯಾ ಬಹಿರಂಗ ಪಡಿಸಿದ್ದಾರೆ. 

click me!