Kannadathi Serial Update: ಕನ್ನಡತಿ ಸೀರಿಯಲ್‌ನಲ್ಲಿ ಹರ್ಷ ಭುವಿ ಮದುವೆ ವಿಜೃಂಭಣೆಯಿಂದ ನಡೆದಿದೆ. ರಾಮಾಚಾರಿ ಸೀರಿಯಲ್ ನಾಯಕ ರಾಮಾಚಾರಿಯೇ ಮುಂದೆ ನಿಂತು ಈ ಮದುವೆ ನೆರವೇರಿಸಿದ್ದಾನೆ. ಈ ಪಾತ್ರವನ್ನು ಋತ್ವಿಕ್ ಕೃಪಾಕರ್ ಎಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ ಅಂದರೆ ನಿಜವಾದ ಪುರೋಹಿತರನ್ನೇ ಮೀರಿಸುವಂತೆ ಕಾಣ್ತಿದ್ದಾರೆ. ವೀಕ್ಷಕರು ಇವರಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
ಕನ್ನಡತಿ ಸೀರಿಯಲ್ (Kannadathi)ನಲ್ಲಿ ಮದುವೆ (Wedding)ಯ ಸಂಭ್ರಮ. ಕನ್ನಡದಲ್ಲೇ ಮದುವೆ ಆಗ್ತೀವಿ ಅನ್ನೋದು ಭುವಿ ಹರ್ಷ ಕಂಡ ಕನಸು. ಆ ಕನಸು ಇದೀಗ ನನಸಾಗಿದೆ. ಇದಕ್ಕೆ ಮುಖ್ಯ ಕಾರಣವಾಗಿರುವುದು 'ರಾಮಾಚಾರಿ' ಸೀರಿಯಲ್ (Ramchari serial) ನಾಯಕ ರಾಮಾಚಾರಿ. ಈ ಪಾತ್ರವನ್ನು ಋತ್ವಿಕ್ ಕೃಪಾಕರ್ (Ruthwik Krupakar) ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಜನರೆಲ್ಲ ಇವರೇ ನಿಜವಾದ ಪುರೋಹಿತರೇನೋ ಅನ್ನೋ ಹಾಗೆ ಇವರ ಅಭಿನಯವನ್ನು ನೋಡಿದ್ದಾರೆ. ಅಷ್ಟು ಸಹಜ, ನೈಜ ಇವರ ಅಭಿನಯ. ಹಾಗಂತ ಋತ್ವಿಕ್ ಪುರೋಹಿತ ಮನೆತನದವರಲ್ಲ. ಆದರೆ 'ರಾಮಾಚಾರಿ' ಸೀರಿಯಲ್‌ಗೆ ಇವರ ಡೆಡಿಕೇಶನ್ (Dedication) ಎಷ್ಟು ದೊಡ್ಡದು ಅಂದರೆ ಈ ಸೀರಿಯಲ್‌ನಲ್ಲಿ ಪುರೋಹಿತರ ಮನೆಯ ಕುಡಿಯಾಗಿರುವ ಕಾರಣ, ಮಂತ್ರ, ಜಪ, ತಪ ಮಾಡಬೇಕಿರುವ ಹಿನ್ನೆಲೆಯಲ್ಲಿ ಇವರು ಮಾಂಸಾಹಾರವನ್ನೇ ತ್ಯಜಿಸಿದ್ದಾರೆ. ಮಾಂಸಾಹಾರ ಸೇವಿಸುತ್ತಿದ್ದರೆ ಮಂತ್ರ ಹೇಳೋದು ಕಷ್ಟವಾಗುತ್ತೆ ಅನ್ನೋ ಮಾತನ್ನು ಋತ್ವಿಕ್ ಈ ಹಿಂದೆ ಹೇಳಿದ್ದರು. ಹಾಗೇ ಈ ಸೀರಿಯಲ್‌ನಲ್ಲಿ ಇವರ ಅಪ್ಪನ ಪಾತ್ರ ನಿರ್ವಹಿಸಿರುವ ಶಂಕರ್ ಅಶ್ವತ್ಥ್ ಅವರಿಂದ ಮಂತ್ರಾಭ್ಯಾಸವನ್ನೂ ಮಾಡುತ್ತಿದ್ದಾರೆ. ಇದು ಇವರ ಉಚ್ಛರಣೆ ಮೇಲೆ, ಅಭಿನಯ ನೈಜವಾಗಿ ಬರಲು ಕಾರಣವಾಗ್ತಿದೆ.
ಆದರೆ ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿ ಒಂದು ಮದುವೆ ನಡೆಸಿರುವ ಉದಾಹರಣೆ ಇದ್ದರೂ ಅದು ಗಡಿಬಿಡಿಯಲ್ಲಿ ನಡೆದ ಮದುವೆ.
ಆದರೆ ಕನ್ನಡತಿ ಮದುವೆ ಹಾಗಲ್ಲ. ಅದು ಶಾಸ್ತ್ರ ಪ್ರಕಾರವಾಗಿ, ಅಷ್ಟೇ ಅರ್ಥಪೂರ್ಣವಾಗಿ ಕನ್ನಡದಲ್ಲೇ ಪ್ರತೀ ವಿಧಿಯನ್ನೂ ಆಚರಿಸುವ ಮೂಲಕ ನಡೆದ ಅರ್ಥಪೂರ್ಣ ಮದುವೆ. ಸಂಸ್ಕೃತ ಶ್ಲೋಕವನ್ನು ಸರಿಯಾಗಿ ಉಚ್ಛರಿಸುವ ಜೊತೆಗೆ ಕನ್ನಡದಲ್ಲೂ ಅಷ್ಟೇ ಅರ್ಥಪೂರ್ಣವಾಗಿ ಇದನ್ನು ವಿವರಿಸಬೇಕು. ಹಾಗಂತ ಇದೆಲ್ಲದಕ್ಕೂ ಸ್ಕ್ರಿಪ್ಟ್(Script) ಇದ್ದೇ ಇರುತ್ತದೆ. ಆದರೆ ಆ ಸ್ಕ್ರಿಪ್ಟ್‌ನಲ್ಲಿರುವ ಇಂಥಾ ಸನ್ನಿವೇಶದಲ್ಲಿ ಮದುವೆಯಂಥಾ ಕಾರ್ಯ ಮಾಡಿಸಲು ನಿಜಕ್ಕೂ ಸಾಮಾನ್ಯದವರಿಂದ ಸಾಧ್ಯವಿಲ್ಲ. ಅಂಥ ಕೆಲಸವನ್ನು ಋತ್ವಿಕ್ ಮಾಡಿರೋದು ಇದೀಗ ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.
ಇದನ್ನೂ ಓದಿ: Kannadathi : ರಾಮಾಚಾರಿ ಪೌರೋಹಿತ್ಯ, ಆಸ್ಪತ್ರೆಯಲ್ಲೇ ಹವಿ ಮದ್ವೆ!
'ರಾಮಾಚಾರಿಯ ಪೌರೋಹಿತ್ಯ ಬಹಳ ಚೆನ್ನಾಗಿತ್ತು, ಆತನ ಮಾತಿನ ಸ್ಪಷ್ಟತೆ ಅದ್ಭುತ' ಎಂದು ಒಬ್ಬರು ಕಮೆಂಟ್(t)Commen ಮಾಡಿದರೆ, 'ರಾಮಾಚಾರಿಗೆ ದೊಡ್ಡ ಚಪ್ಪಾಳೆ. ಅಬ್ಬಾ, ಪ್ರತಿಯೊಂದನ್ನೂ ಬಿಡಿಸಿ ಬಿಡಿಸಿ ಎಷ್ಟು ಸ್ಪಷ್ಟವಾಗಿ ಸರಾಗವಾಗಿ ಕನ್ನಡ ಮತ್ತು ಸಂಸ್ಕೃತದಲ್ಲಿ ಮಂತ್ರ ಹೇಳಿದರು, ನಿಜಕ್ಕೂ ಸೂಪರ್' ಎಂತ ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. 'ರಾಮಾಚಾರಿಯ ಮಾತಿನ ಸ್ಪಷ್ಟತೆ ಜೊತೆಗೆ ಅವರ ಆತ್ಮವಿಶ್ವಾಸವೂ ಬಹಳ ಇಷ್ಟವಾಯ್ತು' ಅಂತ ಮಗದೊಬ್ಬರು ಕ್ಲಾಪ್(Clap) ಮಾಡಿದ್ದಾರೆ. 'ನೀವು ಕನ್ನಡತಿಗೆ ಸೂಕ್ತವಾದ ಪುರೋಹಿತರು' ಅಂತ ಋತ್ವಿಕ್‌ಗೆ ಕನ್ನಡತಿ ಅಭಿಮಾನಿ ಚಪ್ಪಾಳೆ ಹೊಡೆದಿದ್ದಾರೆ.
ಇದನ್ನೂ ಓದಿ: Big Boss: ಯಾವಾಗಿಂದ ಶುರುವಾಗುತ್ತೆ ಕನ್ನಡ ಬಿಗ್ ಬಾಸ್ ಸೀಸನ್ 9 ?
ಹೀಗೆ ಸೋಷಿಯಲ್ ಮೀಡಿಯಾ(Social Media)ದಲ್ಲಿ ಒಂದೆಡೆ ಹವಿ ಮದುವೆಗೆ ಖುಷಿ, ವಿರೋಧದ ಕಮೆಂಟ್‌ಗಳೆಲ್ಲ ಬಂದರೆ, ಇನ್ನೊಂದೆಡೆ ರಾಮಾಚಾರಿಯ ಪೌರೋಹಿತ್ಯಕ್ಕೆ ಶಹಭಾಸ್‌ಗಿರಿ ಹೆಚ್ಚೆಚ್ಚು ಬರುತ್ತಿದೆ. ಬಹುಶಃ ತಾನು ಮಾಡುತ್ತಿರುವ ಸೀರಿಯಲ್ ಬಿಟ್ಟು ಮತ್ತೊಂದು ಸೀರಿಯಲ್‌ನಲ್ಲಿ ಅತಿಥಿ ನಟನಾಗಿ ಹೋಗಿ ಆ ಸೀರಿಯಲ್‌ನ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆಯುವುದು ಬಹಳ ಅಪರೂಪ. ಋತ್ವಿಕ್ ಅಂಥಾ ಮೆಚ್ಚುಗೆ ಪಡೆದ ಪ್ರತಿಭಾವಂತ.
ಇನ್ನೊಂದು ಕಡೆ ಹರ್ಷ ಭುವಿ ಮದುವೆ ಆಟ ಮುಕ್ತಾಯದ ಹಂತದಲ್ಲಿದೆ. ಇನ್ನು ಸೀರಿಯಲ್ ಮುಗಿಯುತ್ತೆ ಅಂತ ಬೇಜಾರಲ್ಲಿರೋರಿಗೆ ಸಿಹಿ ಸುದ್ದಿ. ಕೊನೆಗೂ ಹರ್ಷ ಭುವಿ ಮದುವೆ ಮುಗೀತು, ಮುಂದೆ ಇವ್ರಿಬ್ರು ಖುಷಿಯಿಂದಿರ್ತಾರೆ ಅನ್ನೋರಿಗೆ ಕಹಿ ಸುದ್ದಿಯೊಂದು ಮುಂದಿರುವಂತಿದೆ. ಇನ್ನೊಂದೆಡೆ ಅಮ್ಮಮ್ಮ ಉಳಿಯೋದೇ ಅನುಮಾನ ಎನ್ನುವ ಸನ್ನಿವೇಶ ನಿರ್ಮಾಣ ಆಗಿದೆ. ಹೀಗೆ ಖುಷಿ, ಬೇಸರ, ದ್ವೇಷ ಮೂರನ್ನೂ ಹೊತ್ತು ಈ ಸೀರಿಯಲ್ ಮುಂದುವರಿಯುವ ಎಲ್ಲ ಸೂಚನೆಗಳನ್ನೂ ಸದ್ಯ ಸೀರಿಯಲ್ ಟೀಮ್ ನೀಡುತ್ತಿದೆ.
ಇದನ್ನೂ ಓದಿ: 3 ಕೋಟಿ ಜನರ ಪ್ರೀತಿ ಪಡೆದ ಜೊತೆ ಜೊತೆಯಲಿ ಶೀರ್ಷಿಕೆ ಗೀತೆ!
ಹರ್ಷ ಭುವಿ ಮದುವೆ ಶಾಸ್ತ್ರಗಳು ಮುಂದುವರಿಯುತ್ತಿವೆ. ರಾಮಾಚಾರಿ ಸಾರಥ್ಯದಲ್ಲಿ ಆಸ್ಪತ್ರೆಯಲ್ಲಿ ಹೂ ಹಾರ ಬದಲಿಸಿಕೊಂಡು, ಅಲ್ಲೇ ತಾಳಿ ಕಟ್ಟುವ ಶಾಸ್ತ್ರವನ್ನೂ ಮುಗಿಸಿರುವ ಜೋಡಿ ಮದುವೆ ಮನೆಯಲ್ಲಿ ಉಳಿದೆಲ್ಲ ಶಾಸ್ತ್ರಗಳನ್ನೂ ಪೂರೈಸುತ್ತಿದ್ದಾರೆ. ಇತ್ತ ಅಮ್ಮಮ್ಮ ಹಠದಲ್ಲಿ ಶಾಸ್ತ್ರ ನೋಡಲು ಬಂದು ಕೂತರೂ ಅವರು ಮಧ್ಯದಲ್ಲೇ ನಿರ್ಗಮಿಸುವ ಎಲ್ಲ ಸೂಚನೆ ಕಾಣುತ್ತಿದೆ. ಮತ್ತೊಂದು ಕಡೆ ಹರ್ಷನ ಮದ್ವೆ ಭುವಿ ಜೊತೆಗೆ ಆದ್ಮೇಲೂ ನಾನು ಹೀರೋನ ಬಿಡಲ್ಲ ಅಂತಿದ್ದಾಳೆ ವರೂ. ಅವಳನ್ನು ಕೆಣಕಿ ರೊಚ್ಚಿಗೆಬ್ಬಿಸೋದಕ್ಕೆ ಸಾನಿಯಾ ಇದ್ದಾಳೆ.
ಹೀಗೆ ಕನ್ನಡತಿ ಸೀರಿಯಲ್ ರೋಚಕವಾಗಿ ಮುಂದುವರಿಯುತ್ತಿದೆ. ಸೀರಿಯಲ್ ತಂಡಕ್ಕೆ ಮೆಚ್ಚುಗೆ ಜೊತೆಗೆ ಹುಸಿ ಮುನಿಸೂ ವ್ಯಕ್ತವಾಗುತ್ತಿದೆ. ಆದರೆ ಮುಂದಿನ ಎಪಿಸೋಡಿಗೆ ಕುತೂಹಲವನ್ನಂತೂ ಉಳಿಸಿದ್ದಾರೆ.