Hitler Kalyana: ಮನೆಬಿಟ್ಟು ಟೆಂಟ್ ಸೇರಿದ ಅಜ್ಜಿ, ಈಗಲಾದ್ರೂ ಎಜೆ ಲೀಲಾ ಒಂದಾಗದೇ ವಿಧಿಯಿಲ್ಲ

By Suvarna News  |  First Published Jun 29, 2022, 1:12 PM IST

Hitler Kalyana Serial Update: ಹಿಟ್ಲರ್ ಕಲ್ಯಾಣ ಸೀರಿಯಲ್‌ನ ಸದ್ಯದ ಎಪಿಸೋಡ್‌ಗಳು ಸಖತ್ ಇಂಟರೆಸ್ಟಿಂಗ್ ಆಗಿ ಸಾಗುತ್ತಿವೆ. ಇನ್ನೇನು ಎಜೆ ಮತ್ತು ಲೀಲಾ ನಡುವೆ ಪ್ರೇಮವೊಂದು ಅರಳಿಕೊಳ್ಳೋದಕ್ಕೆ ನೆವವೊಂದು ಸಿಕ್ಕಿದೆ. ಆ ನೆವ ಅಜ್ಜಿ ರೂಪದಲ್ಲಿ ಬಂದಿದೆ. ಎಜೆ ತಾಯಿ ಸರೋಜಿನಿ ಮನೆ ಬಿಟ್ಟು ಟೆಂಟ್ ನಲ್ಲಿ ಕೂತು ಸತ್ಯಾಗ್ರಹ ಶುರು ಮಾಡಿದ್ದಾಳೆ.


ಸಖತ್ ಸೀರಿಯಸ್(Serious), ಎಮೋಶನಲ್(Emotional) ಆಗಿ ಸಾಗುತ್ತಿದ್ದ 'ಹಿಟ್ಲರ್ ಕಲ್ಯಾಣ'(Hitler Kalyana) ಇದೀಗ ನಗಿಸುವ, ಪ್ರೀತಿ ಅರಳಿಸುವ ಕತೆಯಾಗಿ ಬದಲಾಗ್ತಿದೆ. ಬರೀ ಅಳು, ರೊಮ್ಯಾನ್ಸ್(Romance), ದ್ವೇಷ ಸಾಧನೆಯಲ್ಲೇ ಎಪಿಸೋಡ್ ಮೇಲೆ ಎಪಿಸೋಡ್(Episode) ಪ್ರಸಾರವಾಗುತ್ತಿರುವ ಇತರೇ ಸೀರಿಯಲ್‌(Serial)ಗಳಿಗಿಂತ ಇದರ ಕತೆ ವಿಭಿನ್ನವಾಗಿ ಸಾಗುತ್ತಿದೆ. ಈ ಸೀರಿಯಲ್‌ನಲ್ಲೀಗ ಎಜೆ ಮತ್ತು ಲೀಲಾ ನಡುವೆ ಪ್ರೀತಿ ಅರಳುವ ಸೂಚನೆ ಸಿಕ್ಕಿದೆ. ಇದಕ್ಕೆ ನೆಪವೊಂದು ಸಿಕ್ಕಿದೆ. ಸುಮ್ನೆ ಬಿಟ್ರೆ ತನ್ನ ಮಗ, ಸೊಸೆ ಈ ಜನ್ಮದಲ್ಲಿ ಒಂದಾಗೋದಿಲ್ಲ ಅಂತ ಅಜ್ಜಿ ಸರೋಜಿನಿಗೆ ಅನಿಸಿಬಿಟ್ಟಿದೆ. ವಿದ್ಯಾಮೂರ್ತಿ ಈ ಪಾತ್ರವನ್ನು ಸೊಗಸಾಗಿ ಅಭಿನಯಿಸಿದ್ದಾರೆ. ಆ ಸನ್ನಿವೇಶವೂ ಸೀರಿಯಲ್‌ನಲ್ಲಿ ಸಖತ್ತಾಗಿ ಬಂದಿದೆ.

ಸದಾ ನಗು ಉಕ್ಕಿಸುವ ವಿಶ್ವರೂಪ್ ಈ ಸೀನ್‌ನಲ್ಲೂ ಹೊಟ್ಟೆ ಹಣ್ಣಾಗುವಂತೆ ನಗಿಸುತ್ತಾನೆ. ಆತ ಏಜೆಯ ಬಳಿ ಓಡಿ ಬಂದು ನಮ್ಮನೆ ಅಂಗಳಲದಲ್ಲಿ ಯಾರೋ ಟೆಂಟ್(Tent) ಹಾಕಿದ್ದಾರೆ ಅನ್ನೋ ಸುದ್ದಿ ಮುಟ್ಟಿಸುತ್ತಾನೆ. ಗಾಬರಿಯಲ್ಲಿ ಎಜೆ ಹಾಗೂ ಲೀಲಾ ಹೊರಬಂದು ನೋಡಿದರೆ ನಿಜಕ್ಕೂ ಹೊರಗೊಂದು ಟೆಂಟ್ ಇದೆ. ಯಾರೋ ಎಜೆಯ ಮನೆಯ ವಿಶಾಲ ಅಂಗಳದಲ್ಲೇ ಟೆಂಟ್ ಹಾಕಿ ಕೂತಿದ್ದಾರೆ. ಇದನ್ನು ನೋಡಿ ಎಜೆಗೆ ಶಾಕ್(Shock) ಆದರೆ ಲೀಲಾ ಅಲ್ಲೂ ಕನಸು ಕಾಣುತ್ತಾಳೆ. ಬೆಟ್ಟದ ಮೇಲೆ ಈ ಟೆಂಟ್ ಹಾಕಿ ಕೂತರೆ ಹೇಗಿರಬಹುದು ಅನ್ನೋದನ್ನು ಕಲ್ಪಿಸಿಕೊಂಡು ಬಾಯಿ ಬಿಟ್ಟೂ ಹೇಳಿ ಎಜೆಯ ಕೆಂಗಣ್ಣಿಗೆ ತುತ್ತಾಗುತ್ತಾಳೆ.

Tap to resize

Latest Videos

ಇದನ್ನೂ ಓದಿ: ಕಾಫಿ ವಿತ್‌ ಕರಣ್‌ ಶೋಗೆ ಬರಲು ಯಾರೂ ಸಿದ್ಧರಿಲ್ಲ, ಎಲ್ಲರ ಕಾಲಿಡೀತಿದ್ದಾರೆ ಕರಣ್‌ ಜೋಹರ್‌!

ಎಜೆ ಸಿಟ್ಟಲ್ಲಿ ಹೀಗೆ ಟೆಂಟ್ ಹಾಕಿದವರನ್ನು ಗದರಿಸುತ್ತಾನೆ, ಅವರಿಗೆ ತನ್ನ ಪವರ್(Power) ಏನು ಅನ್ನೋದನ್ನು ತೋರಿಸೋದಕ್ಕೆ ಮುಂದಾಗಿದ್ದಾನೆ. ಹೊರಗಿನಿಂದಲೇ ಸಾಕಷ್ಟು ಆವಾಜ್ ಹಾಕಿ ಇನ್ನೇನು ತಾನು ಆ ಟೆಂಟ್ ಒಳಗೆ ನುಗ್ಗಿ ಅಲ್ಲಿರುವ ವ್ಯಕ್ತಿಯನ್ನು ಹೊರ ಹಾಕಬೇಕು ಅನ್ನುವಾಗ ಆ ಟೆಂಟ್ ಒಳಗಿನಿಂದ ಒಬ್ಬ ವ್ಯಕ್ತಿ ಹೊರಬರುತ್ತಾರೆ. ಅವರು ಮತ್ಯಾರೂ ಅಲ್ಲ, ಏಜೆ ತಾಯಿ ಸರೋಜಿನಿ. ಎಜೆ, ಲೀಲಾ ಹೀಗೆ ಸಪರೇಟಾಗಿರೋದನ್ನು ತನ್ನಿಂದ ನೋಡಲಾಗುತ್ತಿಲ್ಲ. ಅವರಿಬ್ಬರೂ ಜೊತೆಯಾಗಿ ನಗು ನಗುತ್ತಾ ಬಾಳೋವರೆಗೂ ಹೀಗೆ ಅಂಗಳದಲ್ಲಿ ಟೆಂಟ್‌ನೊಳಗೇ ಇರುತ್ತೇನೆ ಅನ್ನೋದು ಅಜ್ಜಿ ಮಾತು. ಇದೀಗ ಎಜೆ ಹಾಗೂ ಲೀಲಾಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೇನು ಪರಿಹಾರ ಅನ್ನೋದು ಎಷ್ಟು ಯೋಚನೆ ಮಾಡಿದ್ರೂ ಅವರಿಗೆ ಹೊಳೆಯಲ್ಲ. ಆದರೆ ಈ ಇಡೀ ಎಪಿಸೋಡ್‌ನ ಸೂತ್ರಧಾರ ವಿಶ್ವರೂಪ್‌ಗೆ ಅದು ಗೊತ್ತು. ಆದರೆ ಅದಕ್ಕೆ ಎಜೆ ಮತ್ತು ಲೀಲಾ ಹೇಗೆ ಪ್ರತಿಕ್ರಿಯೆ ನೀಡ್ತಾರೆ ಅನ್ನೋದು ಗೊತ್ತಿಲ್ಲ.

ಇದನ್ನೂ ಓದಿ: ನಟಿ ಮೀನಾ ಪತಿ ನಿಧನಕ್ಕೆ ಸಿನಿ ಗಣ್ಯರ ಕಂಬನಿ; ಮಧ್ಯಾಹ್ನ 2ಗಂಟೆಗೆ ವಿದ್ಯಾಸಾಗರ್ ಅಂತ್ಯಕ್ರಿಯೆ

ಅಜ್ಜಿಯನ್ನು ಹೇಗಾದರೂ ಒಳಗೆ ಕರ್ಕೊಂಡು ಬರಬೇಕು ಅಂದರೆ ಎಜೆ ಮತ್ತು ಲೀಲಾ ಅನ್ಯೋನ್ಯವಾಗಿರುವವರ ಹಾಗೆ ನಟನೆ ಮಾಡಬೇಕು. ಆ ನಟನೆಯನ್ನೇ ನಿಜವೆಂದು ನಂಬಿ ಸರೋಜಿನಿ ಒಳಗೆ ಬರ್ತಾರೆ ಅನ್ನೋದು ಆತನ ಯೋಚನೆ. ನೀವು ಮತ್ತು ಲೀಲಾ ಅನ್ಯೋನ್ಯ ದಂಪತಿ ಹಾಗೆ ಆಕ್ಟ್ ಮಾಡಬೇಕು ಅಂತ ಎಜೆಗೆ ಆತ ಈ ಪ್ಲ್ಯಾನ್ ಹೇಳಿದರೆ ಎಜೆ ಸಿಟ್ಟಿಗೆದ್ದು ಎರಡೇಟು ಹೊಡೆಯುತ್ತಾನೆ. ಆಮೇಲೆ ಎಜೆಗೆ ರಿಯಲೈಸ್(Realise) ಆಗುತ್ತೆ. ತಾನು ಬಹಳ ಪ್ರೀತಿಸುವ ಅಮ್ಮನನ್ನು ಮನೆಯ ಒಳಗೆ ಕರೆಸಲು ಇದು ಬೆಸ್ಟ್ ಪ್ಲಾನ್ ಅಂತ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

ಇತ್ತ ಮುನಿಸಿಕೊಂಡ ಅಮ್ಮನನ್ನು ಒಲಿಸಿಕೊಳ್ಳಲು ಎಜೆ ಮತ್ತು ಲೀಲಾ ಮಾಡುವ ಪ್ರಯತ್ನ ಏನಿರಬಹುದು ಅನ್ನುವ ಪ್ರಶ್ನೆಯನ್ನು ಸೀರಿಯಲ್ ಟೀಮ್ ವೀಕ್ಷಕರ ಮುಂದಿಟ್ಟಿದೆ. ಬಹುತೇಕರು ಅವರು ಪ್ರೀತಿಸಿದಂತೆ ನಟನೆ ಮಾಡಿ ಆಮೇಲೆ ನಿಜಕ್ಕೂ ಪ್ರೀತಿಸುವಂತಾಗುತ್ತೆ ಅನ್ನೋ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್ಚಿನ ವೀಕ್ಷಕರಿಗೆ ಎಜೆ ಮತ್ತು ಲೀಲಾ ನಡುವೆ ಒಂದಿಷ್ಟು ರೊಮ್ಯಾಂಟಿಕ್ ಎಪಿಸೋಡ್‌ಗಳು ಬರಲಿ ಅನ್ನುವ ಆಸೆ ಇದೆ. ಈ ಸನ್ನಿವೇಶವನ್ನೇ ನೆವವಾಗಿಟ್ಟುಕೊಂಡು ಆ ಥರದ ತಿರುವು ಸೀರಿಯಲ್‌ನಲ್ಲಿ ಬರಬಹುದು, ಬರಲಿ ಅನ್ನೋ ನಿರೀಕ್ಷೆ ವೀಕ್ಷಕರದ್ದು. ಆದರೆ ಏಜೆ ಮನೆಯಲ್ಲಿರುವ ಮೂವರು ಸೊಸೆಯರಿಗೆ ಏಜೆ, ಲೀಲಾ ಒಂದಾಗೋದು ಬೇಕಿಲ್ಲ. ದುಡ್ಡಿನ ಭೂತ ಹೊಕ್ಕಿರುವ ಲೀಲಾ ಅಮ್ಮನಿಗೆ ಲೀಲಾ ಬಗ್ಗೆ ಭಯವಿದೆಯಾದರೂ ಹಣದ ಆಸೆಯೂ ಬಹಳ ಇದೆ. ಮಗಳ ಡಿವೋರ್ಸ್ ಆದರೆ ತಮ್ಮ ಮನೆಗೆ ಹಣ ಬರುತ್ತೆ ಅನ್ನೋ ಆಸೆ ಇನ್ನೂ ಅವಳನ್ನು ಬಿಟ್ಟು ಹೋಗಿಲ್ಲ.

ಇದನ್ನೂ ಓದಿ: ನರೇಶ್ ಬಾಬು, ಪವಿತ್ರಾ ಲೋಕೇಶ್ ಹೀಗೆ ಮಾಡ್ತಾರೆ ಅಂತ ಗೊತ್ತಿರ್ಲಿಲ್ಲ!

ಇತ್ತ ವಿಶ್ವರೂಪ್ ಡೈರೆಕ್ಷನ್‌(Direction)ನಲ್ಲಿ ಲೀಲಾ ಗಂಡನ ಜೊತೆಗೆ ಅನ್ಯೋನ್ಯವಾಗಿ ನಟಿಸೋಕೆ ಶುರು ಮಾಡಿದ್ದಾಳೆ. ಇದು ಆರಂಭದಲ್ಲಿ ಎಜೆಗೆ ಇರಿಸುಮುರಿಸು ತಂದರೂ ಅಮ್ಮನನ್ನು ಒಳ ಕರೆಸಿಕೊಳ್ಳಲು ಇದು ನಾಟಕ ಅಂತ ಗೊತ್ತಾದಮೇಲೆ ಆತನೂ ಲೀಲಾ ಜೊತೆ ಸೇರಿ ನಾಟಕ ಮಾಡುವ ಪ್ರಯತ್ನ ಮಾಡುತ್ತಾನೆ. ಇದೆಲ್ಲ ಎಲ್ಲಿ ಹೋಗಿ ಮುಟ್ಟಬಹುದು ಅನ್ನುವ ಕುತೂಹಲ ಹೆಚ್ಚಿದೆ.

ತುಂಟ ಆದರೆ ಪ್ರಬುದ್ಧ ಅಮ್ಮ, ಅಜ್ಜಿ ಸರೋಜಿನಿ ಪಾತ್ರದಲ್ಲಿ ವಿದ್ಯಾಮೂರ್ತಿ ಸಖತ್ತಾಗಿ ನಟಿಸಿದ್ದಾರೆ. ಮಲೈಕಾ ವಸುಪಾಲ್ ಲೀಲಾ ಪಾತ್ರದಲ್ಲಿ ಮಿಂಚಿದರೆ, ಮಿ. ಪರ್ಫೆಕ್ಟ್ (Mr. Perfect) ಎಜೆ ಪಾತ್ರದಲ್ಲಿ ಕಾಣಿಸಿಕೊಂಡು ಈ ಸೀರಿಯಲ್‌ನ ನಿರ್ಮಾಣವನ್ನೂ ಮಾಡುತ್ತಿರುವುದು ದಿಲೀಪ್ ರಾಜ್‌(Dilip Raj).

click me!