ಎಕ್ಸರ್‌ಸೈಜ್‌ ಮೂಲಕವೇ 25 ಕೆಜಿ ತೂಕ ಇಳಿಸಿದ ಗೀತಾ ಭಟ್, ಸಾವಿಗೀಡಾದ ಚೇತನಾ ಅಂಥವರಿಗೆ ಯಾಕೆ ಸ್ಫೂರ್ತಿ ಆಗಲ್ಲ?

By Bhavani Bhat  |  First Published May 18, 2022, 6:38 PM IST

ಬೇಗ ಸೊಂಟದ ಬೊಜ್ಜು ಕರಗಿಸಬೇಕು ಅಂತ ಸರ್ಜರಿಗೆ ಮೊರೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ಚೇತನಾ ಥರದವರು ಗೀತಾ ಭಟ್ ನೋಡಿ ಕಲಿಯೋದು ಬಹಳಷ್ಟಿದೆ. ಗೀತಾ ವೈಟ್‌ಲಾಸ್ ಜರ್ನಿ ಹೀಗಿದೆ ನೋಡಿ..


ಗೀತಾ ಭಾರತಿ ಭಟ್(Geetha Bharathi Bhat) ಗುಂಡಮ್ಮ ಅಂತಲೇ ಕಿರುತೆರೆಯಲ್ಲಿ ಫೇಮಸ್(famouse) ಆದವರು. ಬಿಗ್‌ಬಾಸ್‌(Big boss)ನಲ್ಲೂ ಮಿಂಚಿದವರು. ನೂರಾರು ಕೆ ಜಿ ತೂಗುವ ಭಾರದ ದೇಹವನ್ನಿಟ್ಟುಕೊಂಡೂ ಮಗುವಿನಂತೆ ಮುಗ್ಧ ಮುಗುಳ್ನಗು ಬೀರುತ್ತಾ ಎಲ್ಲರ ಪ್ರೀತಿಗೆ ಪಾತ್ರರಾದವರು. ಇವರು ಕಳೆದ ಕೆಲವು ತಿಂಗಳಿಂದ ತೂಕ ಇಳಿಸೋದ್ರಲ್ಲಿ(Weight loss) ಸಖತ್ ಬ್ಯುಸಿ. ಜಿಮ್ ನಲ್ಲಿ ಸದಾ ಬೆವರಿಸುತ್ತಾ, ತೂಕವನ್ನು ಇಳಿಸುತ್ತಿದ್ದಾರೆ. ತೂಕ ಇಳಿಸೋವಲ್ಲಿ ಆಗುವ ಫ್ರರ್ಸ್ಟೇಶನ್‌ಗಳನ್ನು(Frustrations) ಫೇಸ್ ಮಾಡಿಯೂ ತನ್ನ ಗುರಿ ಕಡೆ ಗಮನ ನೆಟ್ಟವರು ಗೀತಾ. 'ಬ್ರಹ್ಮಗಂಟು' ಸೀರಿಯಲ್‌(Brahma gantu) ನೋಡಿ ಫಿದಾ ಆದವರು ಅದೆಷ್ಟು ಮಂದಿಯೋ, ಬಿಗ್‌ಬಾಸ್‌ನಲ್ಲಿ ಈಕೆಯ ಒಳ್ಳೆತನಕ್ಕೆ ಮಾರುಹೋದವರೂ ಬಹಳ ಮಂದಿ. ಆದರೆ ಬಿಗ್‌ಬಾಸ್‌ನಲ್ಲಿ ಇವರ ಒಳ್ಳೆಯತನವೇ ಇವರಿಗೆ ಮುಳುವಾಯ್ತು. ಇವರ ಸ್ವಭಾವದ ಜೊತೆಗೇ ಬಂದಿರುವ ಭಾವುಕತೆ, ಒಳ್ಳೆಯತನಗಳನ್ನೇ ಕೃತಕ ಅಂದುಕೊಂಡು ಅವರನ್ನು ಹೊರ ಹಾಕಲಾಯ್ತು. ಬಹುಶಃ ಆ ಒಳ್ಳೆತನಗಳನ್ನು ಕಳೆದುಕೊಂಡು ಬದುಕುತ್ತಿರುವ ಹೆಚ್ಚಿನವರಿಗೆ ನಮ್ಮಲ್ಲಿ ಇರಲೇಬೇಕಾದ ಒಳ್ಳೆತನಗಳು ಕೃತಕ, ಆರ್ಟಿಫೀಷಿಯಲ್(Artificial) ಅನಿಸಿದ್ದರಲ್ಲಿ ಅಂಥಾ ಆಶ್ಚರ್ಯ ಇಲ್ವೇನೋ..

RIP chetana raj ಈ ರೀತಿಯ ಸರ್ಜರಿ ಯಾರೂ ಮಾಡಿಸಿಕೊಳ್ಳಬೇಡಿ, ಸಾವಿಗೀಡಾದ ಚೇತನಾ ಸ್ನೇಹಿತನ ಮನವಿ!

Tap to resize

Latest Videos

ಗೀತಾ ಭಟ್ ತೂಕದ ಕತೆಗೆ ಬರೋಣ. ಪುಟ್ಟ ಹುಡುಗಿಯಾಗಿದ್ದಾಗ ಗೀತಾ ಎಲ್ಲರ ಹಾಗೆ ಚಟುವಟಿಕೆಯಿಂದ ಓಡಾಡುತ್ತಿದ್ದ, ಸ್ಪೋರ್ಟ್ಸ್(sports) ನಲ್ಲಿ ಸದಾ ಮುಂದಿರುತ್ತಿದ್ದ ಹುಡುಗಿ. ಸ್ಪೋರ್ಟ್ಸ್‌ನಲ್ಲಿ ಎಷ್ಟು ಜಾಣೆ ಅಂದರೆ ಸ್ಟೇಟ್‌ ಲೆವೆಲ್‌ನಲ್ಲಿ ಗೋಲ್ಡ್‌ ಮೆಡಲ್(Gold medal) ಗೆಲ್ಲೋವಷ್ಟು. ಉಡುಪಿ ಮೂಲದ ಈ ಹುಡುಗಿ one bad day ಆಕಸ್ಮಿಕವಾಗಿ ಬಿದ್ದು, ಆಸ್ಪತ್ರೆಗೆ ದಾಖಲಾಗ್ತಾರೆ. ಅಲ್ಲಿ ನೀಡಿದ ಟ್ರೀಟ್‌ಮೆಂಟ್‌(Treatment) ಪರಿಣಾಮ ದೇಹ ಊದಿಕೊಳ್ಳುತ್ತಲೇ ಹೋಗುತ್ತೆ. ಸದಾ ಸ್ಪೋರ್ಟ್ಸ್‌ನಲ್ಲಿ ಮುಂದಿರುತ್ತಿದ್ದ ಚಟುವಟಿಕೆಯ ಹುಡುಗಿ ದಪ್ಪಗಾಗ್ತಾ ಹೋಗಿ ಸ್ಪೋರ್ಟ್ಸ್‌ ಕನಸಾಗೇ ಉಳಿಯುವ ಹಾಗಾಗುತ್ತೆ. ಸುತ್ತಮುತ್ತಲಿನ ಜನರು ಹಿಂದಿಂದ ನೋಡಿ ನಗೋದು, ಕೀಟಲೆ ಮಾಡೋದು, ವ್ಯಂಗ್ಯವಾಗಿ ಮಾತನಾಡೋದೆಲ್ಲ ಶುರುವಾಗುತ್ತೆ. ಆಗ ಹೈಸ್ಕೂಲ್‌ ಓದುತ್ತಿದ್ದ ಈ ಪುಟ್ಟ ಹುಡುಗಿ ಏನು ಮಾಡಬೇಕು ಅಂತ ಗೊತ್ತಾಗದೇ ಕಂಗಾಲಾಗಿ ಹೋಗ್ತಾಳೆ. ಆದರೆ ಆರಂಭದಿಂದಲೂ ಆತ್ಮವಿಶ್ವಾಸ ಮನೋಬಲವಿದ್ದ ಹುಡುಗಿ ಈಕೆ. ಒಂದಿನ ಆಕೆಯೇ ಡಿಸೈಡ್ ಮಾಡ್ತಾಳೆ, ದಪ್ಪವಾಗಿ ಬದುಕೋದು ನನ್ನ ಮುಂದಿರುವ ಆಯ್ಕೆ. ಅದನ್ನೇ ಚೆನ್ನಾಗಿ ಬದುಕೋಣ, ಕೊರಗಿದ್ರೆ ದೇಹ ಏನೂ ಕರಗಲ್ಲ. ಖುಷಿಯಾಗಿಯೇ ಸಿಕ್ಕಿದ್ದರಲ್ಲಿ ತೃಪ್ತಿ ಪಡೋಣ ಅಂತ. ಈ ನಿರ್ಧಾರದಿಂದ ಈಕೆಗೆ ಮತ್ತೆ ಓದಿನಲ್ಲಿ ಆಸಕ್ತಿ ಬೆಳೆಯುತ್ತೆ.

ಕಾಸ್ಮೆಟಿಕ್ಸ್‌ ಸರ್ಜರಿ ನನಗೆ ವರ್ಕ್ ಆಗಿಲ್ಲ, ಜೀವಕ್ಕೇ ಡೇಂಜರ್‌: ನೀತು!

ಇಷ್ಟೆಲ್ಲ ಆದರೂ ನಾನು ದಪ್ಪ, ಎಲ್ಲೂ ಗುರುತಿಸಿಕೊಳ್ಳದವಳು, ಬರೀ ಅಪಹಾಸ್ಯವಷ್ಟೇ ನನಗಿರೋದು ಅನ್ನೋದು ಸಣ್ಣಗೆ ಮನಸ್ಸಲ್ಲೇ ಚುಚ್ಚುತ್ತಿರುವಾಗ 'ಬ್ರಹ್ಮಗಂಟು' ಸೀರಿಯಲ್‌ನಲ್ಲಿ ನಟನೆಗೆ ಆಫರ್(offer) ಬರುತ್ತೆ. ಗೀತಾ ಭಾರತಿ ಭಟ್ ಈ ಅವಕಾಶ ಬಳಸಿಕೊಂಡು ತಾನೆಷ್ಟು ಪ್ರತಿಭಾವಂತೆ ಅನ್ನೋದನ್ನು ನಿರೂಪಿಸ್ತಾರೆ. ರಾತ್ರಿ ಕಳೆಯೋದ್ರೊಳಗೆ ಕನ್ನಡಿಗರ ಮನೆ ಮಾತಾಗ್ತಾರೆ. ಬಿಗ್‌ ಬಾಸ್‌ ನಂಥಾ ಕಾರ್ಯಕ್ರಮದಲ್ಲೂ ಭಾಗವಹಿಸ್ತಾರೆ. ದಪ್ಪ ಇದ್ದವರಿಗೂ ಒಳ್ಳೆ ಲೈಫಿದೆ ಅನ್ನೋದನ್ನು ತೋರಿಸಿಕೊಡ್ತಾರೆ.

ಸಣ್ಣಗಿದ್ದರೂ ದಪ್ಪಗಾದರೂ ಸೀರೆ ಧರಿಸಬಹುದು; ಸೀರೆ ಮಹತ್ವ ಸಾರಿದ ರಾಮಚಾರಿ ಧಾರಾವಾಹಿ!

ಇತ್ತೀಚೆಗೆ ಕೆಲವು ತಿಂಗಳಿಂದ ಗೀತಾ ಜಿಮ್‌ನಲ್ಲಿ ಬೆವರಳಿಸ್ತಿದ್ದಾರೆ. ಇವರ ಕೆಎಸ್‌ಎಫ್‌ ಟ್ರಾನ್ಸ್‌ಫರ್‌ಮೇಶನ್‌ ಸ್ಟುಡಿಯೋದ(Ksf Transformation Studio) ಕಿರಣ್ ಸಾಗರ್ (Kiran Sagar)ಇವರ ಫಿಟ್‌ನೆಸ್‌ ಟ್ರೈನರ್‌. ಕಳೆದ ಕೆಲವು ತಿಂಗಳಿಂದ ಇವರು ಗೀತಾ ಅವರ ತೂಕ ಇಳಿಸಲು ಸಹಕರಿಸುತ್ತಿದ್ದಾರೆ. ಆರಂಭದ ಕೆಲವೇ ತಿಂಗಳಲ್ಲಿ ಹದಿನೇಳು ಕೆಜಿ ಇಳಿಸಿದಕೊಂಡ ಇವರ ವೈಟ್‌ಲಾಸ್‌ ಜರ್ನಿ ಆಮೇಲೆ ಅಷ್ಟು ಸುಲಭ ಆಗಿರಲಿಲ್ಲ. ಆರಂಭದಲ್ಲಿ ಬೇಗ ಬೇಗ ತೂಕ ಇಳಿಯಿತು, ಆಮೇಲಾಮೇಲೆ ಇಷ್ಟು ಎಕ್ಸರ್‌ಸೈಸ್ ಮಾಡಿದ್ರೂ ತೂಕ ಅಂದುಕೊಂಡಷ್ಟು ಇಳಿಯುತ್ತಿರಲಿಲ್ಲ. ಇದೀಗ ಹತ್ತಿರ ಹತ್ತಿರ 25 ಕೆಜಿ ತೂಕ ಇಳಿಸಿದ್ದಾರೆ ಗೀತಾ. ಹೆಚ್ಚು ಕಡಿಮೆ ಇನ್ನೂ ಇಷ್ಟೇ ತೂಕ ಇವರು ಇಳಿಸಬೇಕಾಗಿದೆ.

 

ಗೀತಾ ಇತ್ತೀಚೆಗೆ ಎಫ್‌ಎಂ(Fm)ನಲ್ಲಿ ಆಮೆ, ಮೊಲದ ಕತೆ ಹೇಳ್ತಿದ್ರು. 'ಆಮೆ, ಮೊಲ ರೇಸ್ ಮಾಡಿದ್ದು, ಮೊಲ ಫಾಸ್ಟಾಗಿ ಓಡಿ ಒಂದು ಕಡೆ ಮಲಗಿಕೊಂಡಿದ್ದು, ಆಮೆ ನಿಧಾನಕ್ಕೆ ಓಡಿ ಗುರಿ ತಲುಪಿದ ಈ ಕಥೆ ನಾವೆಲ್ಲ ಕೇಳ್ತಿರ್ತೀವಿ. ಆದರೆ ಯಾವತ್ತೂ ಇದು ಹೇಳೋ ನೀತಿಯನ್ನೇ ಮರೀತೀವಿ. ಸ್ಲೋ ಆಂಡ್ ಸ್ಟಡಿ ಆದಷ್ಟೂ ನಮ್ಮ ಕೆಲಸ ಬಹುಕಾಲದವರೆಗೆ ಉಳಿಯುತ್ತವೆ. ನಾನು ಶುರುವಲ್ಲಿ ಮೊಲದ ಥರ ಬೇಗ ಬೇಗ ಸಣ್ಣ ಆಗಬೇಕು ಅಂತ ಎಕ್ಸರ್‌ಸೈಸ್‌ ಮಾಡಿದ್ದೇ ಮಾಡಿದ್ದು. ರಿಸಲ್ಟೂ ಅಷ್ಟೇ ಫಾಸ್ಟಾಗಿ ಬಂತು. ಆದರೆ ಹಂತದಲ್ಲಿ ಏನೇ ಮಾಡಿದರೂ ತೂಕ ಇಳಿಯೋದು ಬಹಳ ನಿಧಾನವಾಯ್ತು. ಆಗಲೇ ಅಂದುಕೊಂಡೆ, ನಾನು ಅಷ್ಟು ಗಡಿಬಿಡಿ ಮಾಡಬೇಕಿರಲಿಲ್ಲ. Slow and study ಆಗಿ ತೂಕ ಇಳಿಸಬಹುದಿತ್ತು. ಸದ್ಯಕ್ಕೀಗ ವೈಟ್ ಲಾಸ್‌ ಸ್ಲೋ ಆಂಡ್ ಸ್ಟಡಿ' ಅನ್ನೋ ಲೈಫಿನ ಪಾಠ ಕಲಿಸಿದೆ' ಅಂತಾರೆ.

ಬೇಗ ಸೊಂಟದ ಬೊಜ್ಜು ಕರಗಿಸಬೇಕು ಅಂತ ಸರ್ಜರಿಗೆ ಮೊರೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ಚೇತನಾ (Chethana Raj)ಥರದವರು ಗೀತಾ ಭಟ್ ನೋಡಿ ಕಲಿಯೋದು ಬಹಳಷ್ಟಿದೆ.

click me!