'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ಹೊಸ ಹೊಸ ಟ್ವಿಸ್ಟ್ ಗಳು ಮೇಲಿಂದ ಮೇಲೆ ಬರ್ತಿವೆ. ಇದೀಗ ಆರ್ಯವರ್ಧನ್ ಸಮಸ್ತ ಆಸ್ತಿಯೂ ಹರ್ಷವರ್ಧನ್ ಪಾಲಾಗುವ ಸೂಚನೆ ಸಿಕ್ಕಿದೆ. ಇದು ಈಡೇರುತ್ತಾ?
'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ(Jothe jotheyali serial) ಹೊಸ ಹೊಸ ತಿರುವು, ಹೊಸ ಬಗೆಯ ಕತೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಿದೆ. ಇದೀಗ ಮತ್ತೊಂದು ತಿರುವು ಬರುತ್ತಿದ್ದು, ವೀಕ್ಷಕರು ಉಸಿರು ಬಿಗಿ ಹಿಡಿದು ಮುಂದಿನ ಎಪಿಸೋಡ್‌ಗಳಿಗೆ(Episode) ಕಾಯುವಂತಾಗಿದೆ. ಅನು ಸಿರಿಮನೆ (Anu sirimane) ಹಾಗೂ ಆರ್ಯವರ್ಧನ್(Arya varshan) ಲವ್ ಸ್ಟೋರಿ ಒಂದು ಹಂತದವರೆಗೆ ವೀಕ್ಷಕರ ಕುತೂಹಲ, ಭಾವನೆಗಳನ್ನು ಹಿಡಿದಿಟ್ಟುಕೊಂಡರೆ, ಅವರಿಬ್ಬರ ವಿವಾಹದ ಬಳಿಕದ ಎಪಿಸೋಡ್‌ಗಳು ಮತ್ತೊಂದು ಆಂಗಲ್ (angle)ಪಡೆದುಕೊಂಡಿವೆ. ಕೊಂಚ ಹಾರರ್, ಪೂರ್ವ ಜನ್ಮದ ಕತೆಗಳೆಲ್ಲ ಸೇರಿ ಇಡೀ ಸೀರಿಯಲ್ ಕುರ್ಚಿ ತುದಿಯಲ್ಲಿ ಕೂರುವ ಹಾಗೆ ಮಾಡಿದೆ.
ಆಗಲೇ ಹೇಳಿದಂತೆ ಮಧ್ಯಮ ವರ್ಗದ ಹುಡುಗಿ ಅನು ಸಿರಿಮನೆ ಮುಗ್ಧೆ, ಸುಂದರವಾದ ಇಪ್ಪತ್ತರ ಹರೆಯದ ಹುಡುಗಿ. ಈಕೆ ಕೆಲಸ ಮಾಡುವ ಕಂಪನಿಯ ಬಾಸ್(boss) ಆರ್ಯವರ್ಧನ್ ನಲವತ್ತೈದರ ಹರೆಯದ ಮಧ್ಯ ವಯಸ್ಸಿನ ವ್ಯಕ್ತಿ. ಈಕೆಗಿಂತ ದುಪ್ಪಟ್ಟು ವಯಸ್ಸಾಗಿದ್ದರೂ ಇಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ, ಪ್ರೇಮ ಬೆಳೆಯುತ್ತದೆ. ಆರ್ಯವರ್ಧನ್ ಮೊದಲ ಪತ್ನಿ ರಾಜ ನಂದಿನಿ(Raja Nandini). ಇಪ್ಪತ್ತು ವರ್ಷಗಳ ಹಿಂದೆಯೇ ಆಕೆ ಆಕಸ್ಮಿಕವಾಗಿ ತೀರಿಕೊಂಡಿದ್ದಾಳೆ. ಆಕೆಯ ಸಾವಿನ ಬಗ್ಗೆ ಹೆಚ್ಚು ವಿವರಗಳಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಒಂಟಿಯಾಗಿಯೇ ಬದುಕುತ್ತಿರುವ ಆರ್ಯವರ್ಧನ್‌ಮತ್ತೆ ಪ್ರೀತಿಯಲ್ಲಿ ಬೀಳುವುದು ಅನು ಜೊತೆಗೆ. ಆರ್ಯವರ್ಧನ್ ಜೊತೆಗಿನ ಈಕೆಯ ಸಂಬಂಧ ಅನೇಕ ಸಮಸ್ಯೆ ಹುಟ್ಟುಹಾಕಿದರೂ, ಇವರಿಬ್ಬರ ಸಂಬಂಧಕ್ಕೆ ಯಾರ್ಯಾರೋ ಅಡ್ಡಗಾಲು ಹಾಕಿದರೂ ಕೊನೆಯಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆಯುತ್ತೆ. ಮದುವೆ ಆಯ್ತು, ಇನ್ನೆಲ್ಲ ಸುಖಾಂತ್ಯ ಅನ್ನುವ ಹಾಗಿಲ್ಲ. ಇಲ್ಲಿ ಆರ್ಯವರ್ಧನ್ ಮೊದಲ ಹೆಂಡತಿ ರಾಜ ನಂದಿನಿಯ ಪ್ರವೇಶವಾಗುತ್ತೆ. ಸೋನು ಗೌಡ (Sonu Gowda)ಅವರು ಈ ಪಾತ್ರವನ್ನು ಅದ್ಭುತವಾಗಿ ನಟಿಸಿದ್ದರು. ಆಗಾಗ ಅನು ವಲ್ಲಿ ಆವಾಹನೆ ಆಗುತ್ತಿದ್ದ ರಾಜ ನಂದಿನಿ ಇದೀಗ ಅನುವೇ ಆಗಿ ಬದಲಾಗಿದ್ದಾಳೆ. ಅನು ತನ್ನ ಮನೆಗೆ ಹೋದರೆ ತನ್ನ ಅಪ್ಪ ಅಮ್ಮ ಮೊದಲಿನಷ್ಟು ಆಪ್ತ ಅನಿಸೋದಿಲ್ಲ. ಎಲ್ಲವೂ ಬದಲಾದ ಹಾಗೆ ಕಾಣುತ್ತದೆ. ಆದರೆ ಈ ಬದಲಾವಣೆಯನ್ನು ಪೂರ್ತಿಯಾಗಿ ತೋರಿಸುವ ಹಾಗೂ ಇಲ್ಲ. ಈ ಕಾಲದಲ್ಲೂ ಪುನರ್ಜನ್ಮ, ಆತ್ಮ ಅಂದರೆ ಜನ ಏಕಾಏಕಿ ನಂಬುವುದಿಲ್ಲ. ಆದರೆ ಎಲ್ಲರನ್ನೂ ಕನ್ವಿನ್ಸ್ ಮಾಡುವಂತೆ ಕತೆ ಸಾಗುತ್ತಿದೆ.
ಮದ್ವೆ ಫಿಕ್ಸಾಗೋದು ಒಬ್ಬರ ಜೊತೆ, ತಾಳಿ ಕಟ್ಟೋದು ಮತ್ತೊಬ್ರಿಗೆ, ಈ ಕನ್ನಡ ಸೀರಿಯಲ್‌ಗಳಿಗೇನಾಗಿದೆ?
ಆರ್ಯ ವರ್ಧನ್‌ನಿಂದ ತನ್ನ ಕುಟುಂಬಕ್ಕಾದ ಅನ್ಯಾಯವನ್ನು ಸರಿ ಮಾಡಬೇಕು ಅಂತ ಅನು ಅಂದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಅದನ್ನು ಕಾರ್ಯರೂಪಕ್ಕೆ ತರಲೂ ಪ್ರಯತ್ನಿಸಿದ್ದಾಳೆ. ಅದರ ಮೊದಲ ಹೆಜ್ಜೆಯಾಗಿ ಹರ್ಷನನ್ನು ಆರ್ಯವರ್ಧನ್ ಕೂರುತ್ತಿದ್ದ ಬಾಸ್ ಸೀಟ್ ಮೇಲೆ ಕೂರಿಸಿದ್ದಾಳೆ. ಈ ಹರ್ಷ ಅರ್ಥಾತ್ ಹರ್ಷವರ್ಧನ (Harshavardhan)ರಾಜನಂದಿನಿಯ ತಮ್ಮ. ಶಾರದಾದೇವಿಯ ಮಗ. ತನ್ನ ಪಿತ್ರಾರ್ಜಿತ ಆಸ್ತಿಯನ್ನು ಯಾರೋ ಅನುಭೋಗಿಸುವುದನ್ನು ನೋಡುತ್ತಿರುವ ನತದೃಷ್ಟ. ಆದರೆ ಆತನಿಗೆ ಅವನ ಆಸ್ತಿಯನ್ನು ಮತ್ತೆ ನೀಡಲು ಮುಂದಾಗಿದ್ದಾಳೆ ಅನು. ಇಲ್ಲಿಯವರೆಗೆ ಹರ್ಷನನ್ನು ಭಾವ ಎಂದು ಕರೆಯುತ್ತಿದ್ದ ಅನು ಇದೀಗ ಏಕಾಏಕಿ ಆತನ ಹೆಸರು ಹಿಡಿದು ಕರೆದಿದ್ದಾಳೆ. ಸ್ವತಃ ರಾಜ ನಂದಿನಿಯಂತೇ ಆತನ ಜೊತೆಗೆ ಅನು ವರ್ತನೆ ಇದೆ. ಅವಳೇ ಹರ್ಷನನ್ನು ಕರೆತಂದು ಆರ್ಯವರ್ಧನ ಕೂರುತ್ತಿದ್ದ ಸೀಟಿನ ಮೇಲೆ ಕೂರಿಸಿದ್ದಾಳೆ. ಇನ್ನು ಮೇಲೆ ಈ ಎಲ್ಲ ಅಧಿಕಾರವೂ ನಿನ್ನದೇ ಅಂದಿದ್ದಾಳೆ.
ಇದನ್ನು ತನ್ನ ಪತ್ನಿ ಮಾನಸಿಗೆ ಹರ್ಷ ವಿವರಿಸಿದ್ದಾನೆ. ಸ್ವತಃ ಅಕ್ಕನೇ ತನ್ನನ್ನು ಬಾಸ್ ಸೀಟ್‌ನಲ್ಲಿ ಕೂರಿಸಿದಂತಾದ ಅನುಭವವನ್ನು, ಅದನ್ನೆಲ್ಲ ನೋಡಿ ತನ್ನಲ್ಲಿ ಗೂಸ್ ಬಂಪ್ಸ್ (Goosebumps)ಬಂದಿದ್ದನ್ನೂ ಅವಳಿಗೆ ಹೇಳಿದ್ದಾನೆ. ಮಾನಸಿ(Manasi) ಪುನರ್ಜನ್ಮವನ್ನೆಲ್ಲ ನಂಬದಿದ್ದರೂ ಗಂಡನಿಗೆ ಮತ್ತೆ ಆಸ್ತಿ ಬಂದಿದ್ದಕ್ಕೆ ಖುಷಿಯಾಗಿದ್ದಾಳೆ.
ಡ್ಯಾನ್ಸ್ ರಿಯಾಲಿಟಿ ಶೋಯಿಂದ ಪುಟ್ಟಗೌರಿ ಔಟ್; ಕಾರಣ ಪ್ರಸಾರ ಮಾಡಿಲ್ಲ ಯಾಕೆ?
ಸದ್ಯಕ್ಕೀಗ ವಿದೇಶದಿಂದ ಆರ್ಯವರ್ಧನ್ ಮರಳಿದ್ದಾನೆ. ಆತ ಮನೆಯೊಳಗೆ ಬಂದಾಗ ಅನು ಮೆಟ್ಟಿಲಿಳಿದು ಬರುತ್ತಿರುವುದು ಅವನಿಗೆ ಸಾಕ್ಷಾತ್ ರಾಜನಂದಿನಿಯನ್ನೇ ಕಂಡ ಹಾಗಾಗಿದೆ. ಆದರೆ ಅನು ಮುಖದಲ್ಲಿ ಸಣ್ಣ ನಗೆಯಿದ್ದರೂ ಕಠಿಣತೆ ಇದೆ. ಆರ್ಯವರ್ಧನ್ ಎದುರು ಹಾಕಿಕೊಂಡು ಹರ್ಷನನ್ನು ಬಾಸ್ ಆಗಿ ಮಾಡುವ ಛಲವಿದೆ.
ಸೊಂಟ ದಪ್ಪ ಅಂತ ಫ್ಯಾಟ್ ಸರ್ಜರಿ ಒಳಗಾದ ಕಿರುತೆರೆ ನಟಿ ಚೇತನಾ ರಾಜ್ ನಿಧನ!
ಇದನ್ನೆಲ್ಲ ಕಂಡ ಆರ್ಯವರ್ಧನ್ ಪ್ರತಿಕ್ರಿಯೆ ಹೇಗಿರುತ್ತೆ? ತನ್ನೆಲ್ಲ ಆಸ್ತಿಯನ್ನು ಏಕಾಏಕಿ ಹರ್ಷನಿಗೆ ನೀಡಿದ್ದನ್ನು ಅವನು ಹೇಗೆ ಸ್ವೀಕರಿಸುತ್ತಾನೆ? ಮುಂದಿನ ಕತೆ ಹೇಗೆಲ್ಲ ತಿರುವು ಪಡೆಯಬಹುದು ಅನ್ನೋದನ್ನು ನೆನೆಸಿಕೊಂಡರೆ ಪ್ರೇಕ್ಷಕರಲ್ಲೂ ಗೂಸ್ ಬಂಪ್ಸ್ ಏಳುತ್ತೆ. ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ, ಅನು ಪಾತ್ರದಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ.