ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಪೂರ್ಣಿ ಈಗ ತಾಯಿಯಾಗಿ ಬಡ್ತಿ ಪಡೆದಿದ್ದಾಳೆ. ಹೀಗಿರುವಾಗ ದೊಡ್ಡ ಪ್ರಶ್ನೆ ಕಾಡ್ತಿದೆ.
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಮಗಳು ಈಗ ಪೂರ್ಣಿ ಪಾಲಾಗಿದೆ. ಪೂರ್ಣಿಯೇ ಈಗ ಮಗುವಿನ ಜವಾಬ್ದಾರಿ ಹೊತ್ತುಕೊಳ್ಳಬೇಕು, ತಾಯಿ ಆಗಬೇಕು, ತಾಯ್ತನವನ್ನು ಸವಿಯಬೇಕು ಅಂತ ತುಳಸಿ ಅಂದುಕೊಂಡಿದ್ದಾಳೆ. ಆದರೆ ಈಗ ಇಲ್ಲೊಂದು ಮಿಲಿಯನ್ ಡಾಲರ್ ಪ್ರಶ್ನೆ ಎದುರಾಗಿದೆ.
ಆ ಮಗು ತುಳಸಿಯನ್ನು ಏನಂತ ಕರೆಯುತ್ತಾಳೆ?
ಈ ಧಾರಾವಾಹಿಯಲ್ಲಿ ಅತ್ತೆಯೇ ಮಗುವನ್ನು ಹೆತ್ತು ಸೊಸೆಗೆ ಕೊಟ್ಟಿದ್ದಾಳೆ. ಹೀಗಾಗಿ ಆ ಮಗುವಿಗೆ ತುಳಸಿ ತಾಯಿಯಾಗ್ತಾಳಾ? ಅಜ್ಜಿ ಆಗ್ತಾಳಾ? ಮಗು ದೊಡ್ಡವಳಾದ ಬಳಿಕ ತುಳಸಿಗೆ ಅಮ್ಮಾ ಅಂತ ಕರೆಯುತ್ತಾಳಾ? ಅಜ್ಜಿ ಅಂತ ಕರೆಯುತ್ತಾಳಾ? ನಿಜಕ್ಕೂ ಇದೀಗ ಮಿಲಿಯನ್ ಡಾಲರ್ ಪ್ರಶ್ನೆ ಆಗುವುದು.
Shrirasthu Shubhamasthu Serial: ಈಗ ತಾನೇ ಹುಟ್ಟಿದ ಹಸುಗೂಸಿಗೆ ಹಾಲುಣಿಸದ ತುಳಸಿ! ಇಂಥ ಕಲ್ಲು ಹೃದಯ ಯಾಕೆ?
ಪೂರ್ಣಿಗೆ ಮಗು ಕೊಟ್ಟಿದ್ದು ಯಾಕೆ?
ತುಳಸಿಗೆ ಸಮರ್ಥ್, ಸಂಧ್ಯಾ, ಅಭಿ, ಅವಿನಾಶ್ ಎಂಬ ಮಕ್ಕಳಿದ್ದಾರೆ. ಮಗ ಅವಿನಾಶ್‌ಗೆ ತುಳಸಿ ತಾನು ಹೆತ್ತ ಮಗುವನ್ನು “ನಿನ್ನ ಮಗಳು ಇವಳು” ಎಂದು ನೀಡಿದ್ದಾಳೆ. ಮಕ್ಕಳಿಲ್ಲ ಅಂತ ಅವಿನಾಶ್-ಪೂರ್ಣಿ ಒದ್ದಾಡುತ್ತಿದ್ದರು. ಎಲ್ಲ ಪ್ರಯತ್ನಗಳು ಫಲ ಕೊಡದಿದ್ದಾಗ ಬೇರೆ ಮಗುವನ್ನು ದತ್ತು ಪಡೆಯುವ ಆಲೋಚನೆಯಲ್ಲಿದ್ದರು. ಹೀಗಿರುವಾಗ ತುಳಸಿ ಗರ್ಭಿಣಿಯಾದಳು. ಈ ವಯಸ್ಸಿನಲ್ಲಿ ಗರ್ಭ ಧರಿಸಿದ ತುಳಸಿಗೆ ತನ್ನ ಮಗುವನ್ನು ಪೂರ್ಣಿಗೆ ಕೊಟ್ಟರೆ ಚೆನ್ನ ಎಂಬ ಯೋಚನೆ ಬಂದಿದೆ. ಹೀಗಾಗಿ ಅವಳು ಆ ಮಗುವಿನ ಸಂಪೂರ್ಣ ಜವಾಬ್ದಾರಿ, ಹಕ್ಕನ್ನು ಪೂರ್ಣಿಗೆ ನೀಡಿದ್ದಾಳೆ.
ಏನಾಗಬಹುದು?
ಮುಂದೆ ಆ ಮಗುವನ್ನು ಬೆಳೆಸುವಾಗ ಆ ಮಗುವಿಗೆ ತುಳಸಿ ತನ್ನ ತಾಯಿಯೋ, ಅಜ್ಜಿಯೋ ಎಂಬ ಸಂದೇಹ ಬರಬಹುದು. ಆ ಮಗು ತುಳಸಿಗೂ, ಪೂರ್ಣಿ ಇಬ್ಬರಿಗೂ ಅಮ್ಮಾ ಅಂತ ಕರೆಯಬಹುದು. ಇಲ್ಲವೇ ಸೀರಿಯಲ್ ತಂಡ ಯಾವ ರೀತಿಯ ಟ್ವಿಸ್ಟ್ ಕೊಡಲಿದೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ.
ಗಜಗರ್ಭವನ್ನೂ ಮೀರಿಸಿದ ಮಹಿಳೆ; ಗರ್ಭ ಧರಿಸಿ 3.5 ವರ್ಷಗಳ ಬಳಿಕ ಅಂತೂ ಹೆರಿಗೆಯಾಯ್ತು!
ತುಳಸಿಯ ಮಹಾತ್ಯಾಗ
ತುಳಸಿಯು ತನ್ನ ಮಗುವನ್ನು ಪೂರ್ಣಿಗೆ ಕೊಟ್ಟಿದ್ದಾಳೆ. ಆ ಮಗು ಅತ್ತರೂ ಕೂಡ ಹಾಲುಣಿಸುತ್ತಿಲ್ಲ. ತನ್ನ ಮಗು ನೋವಿನಿಂದ ಅತ್ತರೂ, ನಕ್ಕಿದರೂ ಕೂಡ ತುಳಸಿ ಅದರ ಆರೈಕೆ ಮಾಡುತ್ತಿಲ್ಲ. ತನ್ನ ಮಗಳು ಎಂಬ ಮಮಕಾರ, ಪ್ರೀತಿ ಇದ್ದರೂ ಕೂಡ ಅದನ್ನು ಅವಳು ಬದಿಗೆ ಇಟ್ಟಿದ್ದಾಳೆ.
ಪಾತ್ರಧಾರಿಗಳು
ಸುಧಾರಾಣಿ ಅವರು ತುಳಸಿಯಾಗಿ, ಅಜಿತ್ ಹಂದೆ ಅವರು ಮಾಧವ್ ಆಗಿ, ಲಾವಣ್ಯಾ ಭಾರದ್ವಾಜ್ ಅವರು ಪೂರ್ಣಿಯಾಗಿ ನಟಿಸುತ್ತಿದ್ದಾರೆ.