ಬಿಗ್ಬಾಸ್ ಬಳಿಕ ಸಕತ್ ಫೇಮಸ್ ಆಗಿರೋ ಡ್ರೋನ್ ಪ್ರತಾಪ್, ಬೀದಿಗೆ ಬಂದು ವ್ಯಾಪಾರ ಮಾಡುವುದನ್ನು ನೋಡಿ ಅವರ ಫ್ಯಾನ್ಸ್ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಡ್ರೋನ್ ಪ್ರತಾಪ್ ಸದ್ಯ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನ ಖುಷಿಯಲ್ಲಿದ್ದಾರೆ. ಕಳೆದ ವಾರವಷ್ಟೇ ಡ್ರೋನ್ ಪ್ರತಾಪ್ ಇದೇ ರಿಯಾಲಿಟಿ ಷೋನ ವೇದಿಕೆಯ ಮೇಲೆ ಮತ್ತೋರ್ವ ಸ್ಪರ್ಧಿ ಗಗನಾ ಅವರಿಗೆ ತಾಳಿ ಕಟ್ಟಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟಿ ರಚಿತಾ ರಾಮ್ ಅವರ ಸಮ್ಮುಖದಲ್ಲಿ ತಾಳಿ ಕಟ್ಟಲಾಗಿತ್ತು. ಮದುಮಗನ ಗೆಟಪ್‌ನಲ್ಲೇ ಬಂದು ಮದುವೆ ಮಾಡಿಕೊಂಡಿದ್ದರು. ಅಷ್ಟಕ್ಕೂ ಇದು ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾದ ಮದುವೆ ಸೀನ್ ರಿಕ್ರೇಟ್ ಮಾಡಲಾಗಿತ್ತು. ಡ್ರೋನ್ ಪ್ರತಾಪ್ ಅವರ ರವಿಚಂದ್ರನ್ ಗೆಟಪ್‌ನಲ್ಲಿ ಮದುಮಗ ಆಗಿದ್ರೆ, ಮಾಲಾಶ್ರೀ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಬಂದಿದ್ದರು. ಸಿನಿಮಾದಲ್ಲಿ ಥೇಟ್ ರವಿಚಂದ್ರನ್ ಅವರು ಪೆದ್ದನಂತೆ ಬಂದು ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್ ಕೂಡ ಗಗನಾ ಕೊರಳಿಗೆ ತಾಳಿ ಕಟ್ಟಿ ಭೇಷ್ ಭೇಷ್ ಎನ್ನಿಸಿಕೊಂಡಿದ್ದರು. ಮದುವೆಯ ಬಳಿಕ ಈಗ ಡ್ರೋನ್ ಪ್ರತಾಪ್ ಬೀದಿಗೆ ಬಂದಿದ್ದಾರೆ!
ಹೌದು. ಡ್ರೋನ್ ಪ್ರತಾಪ್ ಬೀದಿಗೆ ಬಂದು ವ್ಯಾಪಾರ ಮಾಡಿದ್ದಾರೆ. ಇದು ಗಗನಾಗೋಸ್ಕರ ಎಂದು ಅವರ ಫ್ಯಾನ್ಸ್ ಪೇಜ್ನಲ್ಲಿ ಶೇರ್ ಮಾಡಲಾಗಿದೆ. ಬೀದಿಗೆ ಬಂದು ಭರ್ಜರಿ ಬ್ಯಾಚುಲರ್ಸ್ನ ಬ್ಯಾಗ್ ಅನ್ನು ಮಾರಾಟ ಮಾಡಿದ್ದಾರೆ. ಜೊತೆಗೆ ಬಟ್ಟೆ ಅಂಗಡಿಯಲ್ಲಿಯೂ ಕೆಲಸ ಮಾಡಿದ್ದಾರೆ. ಬಳೆ, ಕಿವಿಯೋಲೆಯನ್ನೂ ಮಾರಿದ್ದಾರೆ ಡ್ರೋನ್ ಪ್ರತಾಪ್ರನ್ನು ನೋಡಿ ಹಲವರಿಗೆ ಅಚ್ಚರಿಯಾಗಿದೆ. ಬಿಗ್ಬಾಸ್ನ ರನ್ನರ್ ಅಪ್ಗೆ ಇದೇನಾಗೋಯ್ತು ಎಂದು ಬಹುತೇಕ ಮಂದಿ ಅಚ್ಚರಿಯಿಂದ ನೋಡಿದ್ದಾರೆ. ಇನ್ನೇನಾದರೂ ಎಡವಟ್ಟು ಮಾಡಿಕೊಂಡು ಬಿಟ್ರಾ ಎಂದು ಕೆಲವರು ಭಯಪಟ್ಟಿದ್ದಾರೆ. ಕೊನೆಗೆ ಪ್ರತಾಪ್ ಅವರೇ ಎಲ್ಲರನ್ನೂ ಕೂಲ್ ಮಾಡಿ, ನನಗೆ ಒಂದು ದಿನದ ಟಾಸ್ಕ್ ಇದೆ. ಭರ್ಜರಿ ಬ್ಯಾಚಲರ್ಸ್ ಪಾರ್ಟಿ ಷೋಗೋಸ್ಕರ ಒಂದು ದಿನದ ಮಟ್ಟಿಗೆ ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ಕೊನೆಗೆ ಕೆಲವರು ಅವುಗಳನ್ನು ಖರೀದಿ ಮಾಡಿದ್ದಾರೆ. ಇದನ್ನು ನೋಡಿ ಗಗನಾ ಫುಲ್ ಫಿದಾ ಆಗಿಬಿಟ್ಟಿದ್ದಾರೆ. ಇವರನ್ನು ಮದ್ವೆಯಾಗೋಳು ತುಂಬಾ ಲಕ್ಕಿ ಎಂದಿದ್ದಾರೆ.
ವೇದಿಕೆ ಮೇಲೆಯೇ ತಾಳಿ ಕಟ್ಟಿದ ಬಳಿಕ ರಚಿತಾ ರಾಮ್ ಕೆನ್ನೆ ಸವರಿದ ಡ್ರೋನ್ ಪ್ರತಾಪ್! ಕಣ್ಕಣ್ ಬಿಟ್ಟ ಫ್ಯಾನ್ಸ್..
ಅಲ್ಲಿಯೂ ಪ್ರತಾಪ್, ತಮ್ಮ ಸಹಾಯವನ್ನು ಬಿಟ್ಟಿಲ್ಲ. ತಾವು ದುಡಿದಿರುವ ದುಡ್ಡಿನಲ್ಲಿ ಯಾರಿಗಾದರೂ ಸಹಾಯ ಮಾಡಬೇಕು ಎನ್ನಿಸಿತು ಎಂದು ಹೇಳಿ, ಸ್ವಲ್ಪ ದುಡ್ಡನ್ನು ಸಹಾಯ ಕೂಡ ಮಾಡಿ ಹೀರೋ ಎನ್ನಿಸಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಹಲವರು ಇಲ್ಲೂ ನಾಟಕ ಬಿಟ್ಟಿಲ್ಲ ಎಂದರೆ, ನಿನ್ನ ಮುಖ ನೋಡಿ ವಸ್ತುಗಳನ್ನು ಖರೀದಿ ಮಾಡಿದ್ದಾರೆ, ಅದರಲ್ಲೇನು ವಿಶೇಷ ಎಂದು ಪ್ರಶ್ನಿಸುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಡ್ರೋನ್ ಪ್ರತಾಪ್ ಅವರ ನಡವಳಿಕೆ ನೋಡಿ ಇವರಿಗೆ ಲಕ್ಷಾಂತರ ಅಭಿಮಾನಿಗಳು ಹುಟ್ಟುಕೊಂಡಿದ್ದರೂ, ಇವರ ಹಿನ್ನೆಲೆ ನೋಡಿ ಯಾಕೋ ಇನ್ನೂ ಹಲವರು ಇವರನ್ನು ಇನ್ನೂ ನಂಬುವಂತೆ ಕಾಣಿಸುತ್ತಿಲ್ಲ ಎನ್ನುವಂಥ ಕಮೆಂಟ್ಸ್ಗಳೂ ಬರುತ್ತಿವೆ.
ಅಷ್ಟಕ್ಕೂ ಇವರ ಹಿನ್ನೆಲೆಗೂ, ಬಿಗ್ಬಾಸ್ನಲ್ಲಿ ಆಫರ್ ಸಿಗುವುದಕ್ಕೂ ಸಂಬಂಧ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಎರಡು ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಸಕತ್ ಹವಾ ಸೃಷ್ಟಿ ಮಾಡಿದ್ದ ಯುವಕ. ಇದ್ದರೆ ಇಂಥ ಮಗ ಇರಬೇಕು, ನೀನೂ ಒಬ್ಬ ಇದ್ಯಾ... ದಂಡ-ಪಿಂಡ ಎಂದೆಲ್ಲಾ ಅದೆಷ್ಟೋ ಅಪ್ಪ-ಅಮ್ಮಂದಿರು ಡ್ರೋನ್ ಪ್ರತಾಪ್ನ ಭಾಷಣ ಕೇಳಿ ಮಕ್ಕಳಿಗೆ ಬೈದದ್ದೇ ಬೈದದ್ದು, ಪ್ರತಾಪ್ನ ಪ್ರತಾಪವನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು. ವಿಶ್ವವಿದ್ಯಾಲಯಗಳಲ್ಲಿ, ಘಟಾನುಘಟಿಗಳ ಎದುರಿನಲ್ಲಿ, ಸೆಲೆಬ್ರಿಟಿಗಳ ಜೊತೆಯಲ್ಲಿ, ರಾಜಕಾರಣಿಗಳು, ಸಿನಿಮಾ ನಟರು... ಹೀಗೆ ಎಲ್ಲರ ಎದುರೂ ಭಾಷಣ ಮಾಡುತ್ತಾ, ತಾನು ಪಟ್ಟಿರುವ ಕಷ್ಟಗಳನ್ನೆಲ್ಲಾ ಕಣ್ಣಿಗೆ ಕಟ್ಟುವಂತೆ ಹೇಳುತ್ತಲೇ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ ಭಲೆ ಭಲೆ ಎನ್ನಿಸಿಕೊಂಡವರು ಡ್ರೋನ್ ಪ್ರತಾಪ್. ಆದರೆ, ಅದೊಂದು ದಿನ ಪ್ರತಾಪ್ಗೆ ಗ್ರಹಗತಿಗಳೇ ಬದಲಾಗೋಯ್ತು. ಡ್ರೋನ್ ಮಾಡುವುದಾಗಿ ಹೇಳಿ ನಂಬಿಸಿದ್ದರಿಂದ ಹಿಡಿದು, ತಮ್ಮ ನೋವಿನ ಜೀವನದ ಬಗ್ಗೆ ಎಲ್ಲರ ಕಣ್ಣು ತೇವ ಮಾಡುವಂತೆ ಆಡಿದ ಮಾತುಗಳು ಎಲ್ಲವೂ ಹಸಿಹಸಿ ಸುಳ್ಳು ಎಂದು ಸುದ್ದಿಯಾಯಿತು. ಅಲ್ಲಿಂದ ಡ್ರೋನ್ ಪ್ರತಾಪ್ ವಿರುದ್ಧ ಗಂಭೀರ ಆರೋಪಗಳೇ ಹರಿದು ಬಂದವು. ಎಷ್ಟೋ ಮಂದಿ ಸುಳ್ಳು ಹೇಳಿ ತಮ್ಮಿಂದ ಹಣ ವಸೂಲಿ ಮಾಡಿದ್ದಾನೆ ಎನ್ನುವ ಆರೋಪಗಳೆಲ್ಲವೂ ಮಾಡಲು ಶುರು ಮಾಡಿದರು. ಕೊನೆಗೆ ದೂರು ದಾಖಲಾಗಿ, ಜೈಲು ಶಿಕ್ಷೆಯೂ ಆಯಿತು. ಕೊನೆಗೂ ಸ್ವತಂತ್ರವಾಗಿ ಡ್ರೋನ್ ಮಾತ್ರ ಮಾಡಿ ತೋರಿಸಲೇ ಇಲ್ಲ. ಆದರೂ ಹೆಸರು ಮಾತ್ರ ಡ್ರೋನ್ ಪ್ರತಾಪ್ ಎಂದೇ ಶಾಶ್ವತವಾಗಿ ಬಿಟ್ಟಿತು!
ನೀನೇ ವಿನ್ನರು, ಸಂಗೀತಾನೇ ರನ್ನರು ಕಣ್ಲಾ... ಹೋಮ್ ಟೂರ್ ಮಾಡಿಸಿದ ಡ್ರೋನ್ ಪ್ರತಾಪ್! ಹಬ್ಬ ಬಲು ಜೋರು