Shrirasthu Shubhamasthu Serial Today Episode: ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಮಾಧವನ ಮನೆಗೆ ಬಂದ್ಲು "ಮುದ್ದು ಕಂದಮ್ಮ"... ಮಗಳು ಮನೆ ಸೇರೋ ಹೊತ್ತಲ್ಲೇ ದೂರವಾಗ್ತಾಳಾ ತುಳಸಿ ?
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಗರ್ಭಿಣಿಯಾದರೂ ಕೂಡ ಹೊಟ್ಟೆ ಕಾಣಿಸಿರಲಿಲ್ಲ. ಈಗ ಹೆರಿಗೆಯಾಗಿದೆ. ಮೊಮ್ಮಗು ನೋಡಬೇಕಾದ ಸಮಯದಲ್ಲಿ ತುಳಸಿ ಮದುವೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಈಗ ಅವಳ ಜೀವಕ್ಕೆ ಅಪಾಯವಿದೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ ತುಳಸಿ!
ತುಳಸಿ ಮಗುವಿನ ಬೆಳವಣಿಗೆ ಸರಿಯಾಗಿಲ್ಲ ಅಂತ ವೈದ್ಯರು ಹೇಳಿದ್ದರು. ಆಗ ತುಳಸಿ ಮಗುವನ್ನು ಕಾಪಾಡಿ, ಅದನ್ನು ಸೊಸೆ ಪೂರ್ಣಿ ಕೈಗಿಟ್ಟು ಸಾಯಬೇಕು ಅಂತ ಅಂದುಕೊಂಡಿದ್ದಳು. ತುಳಸಿ ಆರೋಗ್ಯಕ್ಕೆ ಏನೂ ಆಗಬಾರದು ಅಂತ ಮನೆಯವರು ಪ್ರಾರ್ಥನೆ ಮಾಡುತ್ತಿದ್ದರು. ದೇವರ ದಯೆಯೋ, ನಿರ್ದೇಶಕರ ಕೃಪೆಯೋ ತುಳಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಮಗು ಹೆತ್ತು ಪೂರ್ಣಿ ಕೈಗಿತ್ತು ತುಳಸಿ ಸಾವು? ಮುಗಿಯಲಿದೆ ಶ್ರೀರಸ್ತು ಶುಭಮಸ್ತು- ಇದೇನಿದು ಟ್ವಿಸ್ಟ್?
ತುಳಸಿ ಮಗುವಿಗೆ ಜನ್ಮ ನೀಡಿರುವುದನ್ನು ನೋಡಿ, ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿ: ಅತ್ತ ಶಾರ್ವರಿ ಪಾಪ ಬಯಲಾಗ್ತಿದ್ರೆ, ಇತ್ತ ತುಳಸಿ ಜೀವ ಹೋಗೋ ನ್ಯೂಸ್ ಬಂತು!
ತುಳಸಿ ಕೊಲೆಗೆ ಸುಪಾರಿ!
ಇನ್ನೊಂದು ಕಡೆ ತುಳಸಿ ಬದುಕಿದಳು ಅಂತ ಶಾರ್ವರಿಗೆ ತಲೆಬಿಸಿ ಶುರುವಾಗಿದೆ. ಈಗಾಗಲೇ ಸಾಕಷ್ಟು ಬಾರಿ ತುಳಸಿಯನ್ನು ಕೊಲ್ಲಲು ಶಾರ್ವರಿ ಪ್ಲ್ಯಾನ್ ಮಾಡಿದ್ದಳು. ಈಗ ಈ ಪ್ಲ್ಯಾನ್ ಹಳ್ಳ ಹಿಡಿದಿದೆ. ಆಸ್ಪತ್ರೆ ವಾರ್ಡ್‌ನಲ್ಲಿರೋ ತುಳಸಿಯನ್ನು ಕೊಲ್ಲಲು ಶಾರ್ವರಿ ಸುಪಾರಿ ಕೊಟ್ಟಿದ್ದಾಳೆ. ಈಗ ಶಾರ್ವರಿಯ ಸಂಚಿನಂತೆ ತುಳಸಿ ಸತ್ತು ಸ್ವರ್ಗ ಸೇರ್ತಾಳಾ ಎಂಬ ಪ್ರಶ್ನೆ ಎದುರಾಗಿದೆ.
ಶಾರ್ವರಿ ದುಷ್ಟತನ ಮುಗಿಯುತ್ತಿಲ್ಲ!
ಮಗ ಅವಿನಾಶ್ ಹಾಗೂ ಸೊಸೆ ಪೂರ್ಣಿಗೆ ಮಕ್ಕಳಿಲ್ಲ ಅಂತ ತುಳಸಿಗೆ ಕೊರಗಿತ್ತು. ಅದೇ ಸಮಯಕ್ಕೆ ಸರಿಯಾಗಿ ತುಳಸಿ ಗರ್ಭಿಣಿಯಾದಳು. ಆರಂಭದಲ್ಲಿ ತುಳಸಿಯನ್ನು ಅವರ ಮಕ್ಕಳೇ ಒಪ್ಪಿಕೊಳ್ಳಲಿಲ್ಲ, ಮುಜುಗರಪಟ್ಟರು. ಆಮೇಲೆ ತುಳಸಿ ಗುಣ ನೋಡಿ ಎಲ್ಲರೂ ಆ ಮಗುವನ್ನು ನಮ್ಮ ಕುಟುಂಬದ ಕುಡಿ ಎಂದು ಭಾವಿಸಿದರು. ಈಗ ಇಡೀ ಕುಟುಂಬ ಒಂದಾಗಿದೆ, ಎಲ್ಲರೂ ಖುಷಿಯಿಂದ ಇದ್ದಾರೆ. ಆದರೆ ಶಾರ್ವರಿ ಮಾತ್ರ ಈ ಕುಟುಂಬವನ್ನು ಹೇಗೆ ಹಾಳು ಮಾಡಬೇಕು ಅಂತ ಪ್ಲ್ಯಾನ್ ಮಾಡುತ್ತಿದ್ದಾಳೆ.
Shrirasthu Shubhamasthu Serial: ಹೊಸ ಪಾತ್ರದ ಎಂಟ್ರಿಯಾಯ್ತು, ಯಾರವರು?
ಮುಂದೆ ಏನಾಗುವುದು?
ತುಳಸಿ ಸಾಯೋದು ಡೌಟ್ ಎನ್ನಲಾಗಿದೆ. ತುಳಸಿ ಸಾಯೋದಿಲ್ಲ, ಬದಲಾಗಿ ಶಾರ್ವರಿ ಮೋಸಕ್ಕೆ ತಕ್ಕ ಶಾಸ್ತಿ ಸಿಗುವುದು.
ಪಾತ್ರಧಾರಿಗಳು
ತುಳಸಿ ಪಾತ್ರದಲ್ಲಿ ಸುಧಾರಾಣಿ, ಮಾಧವ್ ಪಾತ್ರದಲ್ಲಿ ಅಜಿತ್ ಹಂದೆ, ಶಾರ್ವರಿ ಪಾತ್ರದಲ್ಲಿ ಸಪ್ನಾ ದೀಕ್ಷಿತ್ ಅವರು ನಟಿಸುತ್ತಿದ್ದಾರೆ.