ʼನಾನು ನಿರಂಜನ್‌ ಪ್ರೀತಿಸ್ತಿದ್ದೀವಾ ಅಂತ ಕೇಳಿದ್ರೆ ನೋ ಅಂತ ಹೇಳಲ್ಲʼ: ಕಮಲಿ ಧಾರಾವಾಹಿ ನಟಿ ಅಮೂಲ್ಯಾ ಗೌಡ!

Published : Mar 13, 2025, 11:19 AM ISTUpdated : Mar 13, 2025, 11:27 AM IST
ʼನಾನು ನಿರಂಜನ್‌ ಪ್ರೀತಿಸ್ತಿದ್ದೀವಾ ಅಂತ ಕೇಳಿದ್ರೆ ನೋ ಅಂತ ಹೇಳಲ್ಲʼ: ಕಮಲಿ ಧಾರಾವಾಹಿ ನಟಿ ಅಮೂಲ್ಯಾ ಗೌಡ!

ಸಾರಾಂಶ

ʼಕಮಲಿʼ ಧಾರಾವಾಹಿ ನಟಿ ಅಮೂಲ್ಯಾ ಗೌಡ, ನಿರಂಜನ್‌ ಬಿಎಸ್‌ ಅವರು ಪ್ರೀತಿ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಹಳೆಯದಾದರೂ ಕೂಡ ಅಮೂಲ್ಯಾ ಈಗ ಹೊಸ ಉತ್ತರ ಕೊಟ್ಟಿದ್ದಾರೆ.  

2018ರಲ್ಲಿ ‘ಕಮಲಿ’ ಧಾರಾವಾಹಿ ಆರಂಭವಾಗಿ 2022ರಲ್ಲಿ ಮುಕ್ತಾಯ ಆಗಿತ್ತು. ಸಾವಿರ ಎಪಿಸೋಡ್‌ ಪೂರೈಸಿದ ಈ ಧಾರಾವಾಹಿ ಹೀರೋ, ಹೀರೋಯಿನ್‌ ಲವ್‌ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಇಂದು ನಿನ್ನೆಯದಲ್ಲ. ಆದರೆ ಈಗ ನಟಿ ಅಮೂಲ್ಯ ಅವರು ಈ ವಿಚಾರಕ್ಕೆ ಉತ್ತರ ಕೊಟಿದ್ದಾರೆ.

ನೋ ಅಂತ ಕೂಡ ಹೇಳಲ್ಲ! 
ಸಂದರ್ಶನವೊಂದರಲ್ಲಿ ಅವರಿಗೆ ಲವ್‌ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು ಮಾತನಾಡಿ, “ಕಮಲಿ ಧಾರಾವಾಹಿ ಸಮಯದಿಂದಲೂ ನಾನು, ನಿರಂಜನ್‌ ಲವ್‌ ಮಾಡ್ತಿದ್ದೀವಿ ಎನ್ನೋ ಮಾತಿದೆ. ನನ್ನ ಕುಟುಂಬಕ್ಕೆ ನಿರಂಜನ್‌ ಗೊತ್ತಿದೆ, ನಿರಂಜನ್‌ ಕುಟುಂಬಕ್ಕೆ ನನ್ನ ಪರಿಚಯ ಇದೆ. ನನ್ನ ಪ್ರಪಂಚದಲ್ಲಿ ನಿರಂಜನ್‌ ಕೂಡ ಇದ್ದಾರೆ. ನಾನು ನಿರಂಜನ್‌ ಅವರನ್ನು ಪ್ರೀತಿ ಮಾಡ್ತಿದ್ದೇನೋ? ಇಲ್ಲವೋ ಎಂದು ಹೇಳಲು ಇಷ್ಟಪಡೋದಿಲ್ಲ. ಆದರೆ ನಾನು ನಿರಂಜನ್‌ ಅವರನ್ನು ಲವ್‌ ಮಾಡ್ತಿಲ್ವಾ ಅಂತ ಕೇಳಿದರೆ ನೋ ಅಂತ ಕೂಡ ಹೇಳೋದಿಲ್ಲ” ಎಂದು ಹೇಳಿದ್ದಾರೆ.

ಕಮಲಿ ಸೀರಿಯಲ್ ಖ್ಯಾತಿಯ ರಿಷಿ ಸರ್ - ಕಮಲಿ ಲವ್ ಮಾಡ್ತಿದ್ದಾರ?? ತೆಲುಗು ಕಾರ್ಯಕ್ರಮದಲ್ಲಿ ಗುಟ್ಟು ರಟ್ಟು

ಮುಂದೆ ಪ್ರೀತಿಸಿ ಮದುವೆ ಆಗಲೂಬಹುದು! 
“ನಾನು ಹಾಗೂ ನಿರಂಜನ್‌ ಸ್ನೇಹಿತರು. ನಿರಂಜನ್‌ ತುಂಬ ಒಳ್ಳೆಯ ಹುಡುಗ. ನಿರಂಜನ್‌, ನಾನು ನಾಳೆ ಪ್ರೀತಿಸಿ ಮದುವೆಯಾಗಲೂಬಹುದು. ಇಂದು ಸೋಶಿಯಲ್‌ ಮೀಡಿಯಾ ತುಂಬ ಸ್ಟ್ರಾಂಗ್‌ ಆಗಿದೆ. ಇಂದು ನಾನು ನಿರಂಜನ್‌ ಅವರನ್ನು ಪ್ರೀತಿಸ್ತಿಲ್ಲ ಅಂತ ಹೇಳಿದ್ರೆ, ನಾಳೆ ನಾವಿಬ್ಬರು ಪ್ರೀತಿಸಿ ಮದುವೆಯಾಗ್ತೀವಿ ಅಂತ ಅಂದಾಗ ಈ ವಿಷಯ ಇಟ್ಟುಕೊಂಡು ಮಾತಾಡ್ತಾರೆ. ಅಂದು ಜಸ್ಟ್‌ ಫ್ರೆಂಡ್ಸ್‌ ಅಂತ ಹೇಳಿದ್ರು, ಈಗ ಮದುವೆಯಾಗಿದ್ದಾರೆ ಅಂತ ಮಾತಾಡ್ತಾರೆ. ಈ ರೀತಿ ಮತ್ತೆ ಮಾತು ಕೇಳಬಾರದು ಅಂತಲೇ ಲವ್‌ ಮಾಡ್ತಿಲ್ಲ ಅಂತ ಕೂಡ ಹೇಳೋದಿಲ್ಲ” ಎಂದು ಅಮೂಲ್ಯ ಹೇಳಿದ್ದಾರೆ.

ಹೈದರಾಬಾದ್‌ಗೆ ಒಟ್ಟಿಗೆ ಪ್ರವಾಸ! 
ಅಮೂಲ್ಯ ಅವರು ಈ ಮೂಲಕ ನಾನು, ನಿರಂಜನ್‌ ಅವರು ಪ್ರೀತಿ ಮಾಡ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳಿದಂತಿದೆ. ಇನ್ನು ಅಮೂಲ್ಯ, ನಿರಂಜನ್‌ ಅವರು ಬೇರೆ ಬೇರೆ ತೆಲುಗು ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. ಇವರಿಬ್ಬರು ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗುವಾಗ ಒಮ್ಮೆ ಸೋನು ಸೂದ್‌ ಅವರ ಭೇಟಿಯಾಗಿತ್ತು. ಅಮೂಲ್ಯ ಅವರು ಸೋನು ಜೊತೆಗೆ ಫೋಟೋ ತೆಗೆಸಿಕೊಂಡು, ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದರು.

ಅಶ್ವಿನಿ ನಕ್ಷತ್ರದ ಹಾದಿಯಲ್ಲಿ ಹೊಸ ಧಾರಾವಾಹಿ ‘ನಿನ್ನ ಜೊತೆ ನನ್ನ ಕಥೆ’... ಇದು ಕಾಂಟ್ರಾಕ್ಟ್ ಮದುವೆಯ ಕಥೆ!

ಹೈದರಾಬಾದ್‌ ವಿಡಿಯೋ ವೈರಲ್!‌ 
ಇನ್ನು‌ ಹೈದರಾಬಾದ್‌ನಲ್ಲಿ ಸೆಟ್‌ವೊಂದರಲ್ಲಿ ಅಮೂಲ್ಯ, ನಿರಂಜನ್ ಅವರು ಬೇರೆ ಬೇರೆ ಧಾರಾವಾಹಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಆಗ ಅಮೂಲ್ಯಾಗೆ ಗಾಯ ಆಗಿದೆ ಎಂದು ನಿರಂಜನ್‌ಗೆ ಫ್ರಾಂಕ್‌ ಕಾಲ್‌ ಮಾಡಿ ಕರೆಸಲಾಗಿತ್ತು. ಆಗ ನಿರಂಜನ್‌ ಅವರು ಕೇರ್‌ ಮಾಡಿದ ರೀತಿ ಅನೇಕರಿಗೆ ಇಷ್ಟ ಆಗಿತ್ತು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. 

ವರ್ಷಗಳ ಬಳಿಕ‌ ‘ನಿನ್ನ ಜೊತೆ ನನ್ನ ಕಥೆ’ ಮೂಲಕ ಕನ್ನಡ ಕಿರುತೆರೆಗೆ ಮರಳಿದ‌ ಕಮಲಿ ಸೀರಿಯಲ್ ರಿಷಿ ಸರ್

ಅಂದಹಾಗೆ ತೆಲುಗು ಶೋವೊಂದರಲ್ಲಿ ಅಮೂಲ್ಯಾ ಗೌಡ ಅವರಿಗೆ ನಿರಂಜನ್‌ಗೆ ಫೋನ್‌ ಮಾಡಿ ಮಾತನಾಡಿ ಅಂತ ಹೇಳಲಾಗಿತ್ತು. ಆಗ ಅಮೂಲ್ಯಾ ಅವರು ಫೋನ್‌ ಡಯಲ್‌ ಮಾಡಿ ಇನ್ನೇನು ನಿರಂಜನ್‌ ಫೋನ್‌ ರಿಸೀವ್‌ ಮಾಡುತ್ತಿದ್ದಂತೆ, “ನಾನಾ ನಾನಾ ಶೋನಲ್ಲಿದ್ದೇನೆ, ಸ್ಪೀಕರ್‌ ಅಲ್ಲಿದೆ ಫೋನ್”‌ ಎಂದು ಸುಳಿವು ಕೊಟ್ಟಿದ್ದರು. ಅದನ್ನು ಕೇಳಿ ಅಲ್ಲಿದ್ದವರೆಲ್ಲ ಇವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂದು ಫಿಕ್ಸ್‌ ಆಗಿದ್ದರು. 

ಅಮೂಲ್ಯಾ ಅವರು ತೆಲುಗು ಧಾರಾವಾಹಿಯಲ್ಲಿ, ನಿರಂಜನ್‌ ಅವರು ಕನ್ನಡದ ಜೊತೆಗೆ ತೆಲುಗು ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಮದುವೆಯಾಗಿ ಖುಷಿಯಿಂದ ಜೀವನ ಮಾಡಿದರೆ ಅನೇಕರು ಖುಷಿಪಡುವವರಿದ್ದಾರೆ, ಏನಂತೀರಾ? 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ