
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಮುಗಿಬಿದ್ದಿದ್ದು, ಕಥೆ ಎಂದಿನಂತೆ ಸಾಗುತ್ತಿದೆ. ಮೊಮ್ಮಗಳು ಶ್ರಾವಣಿ ಮದುವೆಗಾಗಿ ಸಾಲಿಗ್ರಾಮದಿಂದ ಬೆಂಗಳೂರಿಗೆ ಬಂದಿರುವ ಅಜ್ಜಿ ಲಲಿತಾ ದೇವಿ ಇನ್ನು ಅಳಿಯ ವೀರೇಂದ್ರ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಆದ್ರೆ ಇತ್ತೀಚೆಗೆ ಶ್ರಾವಣಿ ಸುಬ್ರಮಣ್ಯ ವೀಕ್ಷಕರಿಗೆ ಶ್ರಾವಣಿ ಸುಬ್ರಮಣ್ಯ ನಿರ್ದೇಶಕರಿಗೆ ಲಲಿತಾ ದೇವಿ ಆರೋಗ್ಯದ ಕಾಳಜಿ ಇಲ್ಲವಾ ಎಂಬ ಪ್ರಶ್ನೆಯೊಂದು ಮೂಡಿದೆ. ಆದ್ರೆ ಒಂದಿಷ್ಟು ಮಂದಿ ಅಜ್ಜಿ ಹಳ್ಳಿಯಿಂದ ಬಂದಿರೋದು. ಹಾಗಾಗಿ ಅಜ್ಜಿ ಗಟ್ಟಿಯಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೂ ಅಜ್ಜಿಯ ಆರೋಗ್ಯದ ಬಗ್ಗೆ ವೀಕ್ಷಕರು ಚಿಂತಿತರಾಗಿದ್ದಾರೆ.
ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ವೀರೇಂದ್ರ ಸರ್ ದೇಸಾಯಿ ರಾಜ್ಯದ ಶಿಕ್ಷಣ ಸಚಿವ. ನೂರಾರು ಕೋಟಿ ಆಸ್ತಿಯ ಒಡೆಯನಾಗಿರುವ ವೀರೇಂದ್ರ ಸರ್ ದೇಸಾಯಿ ಮತ್ತು ಕುಟುಂಬಸ್ಥರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಇನ್ನು ಸಾಲಿಗ್ರಾಮದ ಲಲಿತಾ ದೇವಿ ಅವರು ನೂರಾರು ಕೋಟಿಯ ಒಡತಿಯಾಗಿದ್ದು, ರಾಜ್ಯದ ಪ್ರಭಾವಿ ನಾಯಕನ ಮಡದಿಯಾಗಿದ್ದಾರೆ. ಧಾರಾವಾಹಿಯಲ್ಲಿಯೂ ವೀರೇಂದ್ರ ಸರ್ ದೇಸಾಯಿ ವಾಸಿಸುವ ಮನೆಯನ್ನು ದೊಡ್ಡದಾಗಿಯೇ ತೋರಿಸಲಾಗಿದೆ. ಆದ್ರೆ ಇಷ್ಟು ದೊಡ್ಮನೆಯಲ್ಲಿ ಒಂದು ಲಿಫ್ಟ್ ಇಲ್ಲವಾ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
ಕಳೆದ ಎರಡ್ಮೂರು ವಾರಗಳಿಂದ ಲಲಿತಾ ದೇವಿಯವರು ಪದೇ ಪದೇ ಮೆಟ್ಟಿಲು ಹತ್ತಿ ಹೋಗುವುದು ಮತ್ತು ಇಳಿದು ಬರೋದನ್ನು ತೋರಿಸಲಾಗುತ್ತಿದೆ. ಕೈಯಲ್ಲಿ ಊರುಗೋಲು ಹಿಡಿದು ಕಷ್ಟಪಟ್ಟು ಮೆಟ್ಟಿಲು ಹತ್ತೋದನ್ನು ನೋಡಿದ ವೀಕ್ಷಕರು, ನಿರ್ದೇಶಕರಿಗೆ ಅಜ್ಜಿಯ ಆರೋಗ್ಯದ ಬಗ್ಗೆ ಕಾಳಜಿಯೇ ಇಲ್ಲ ಎಂದು ತಮಾಷೆ ಮಾಡುತ್ತಿದ್ದಾರೆ. ಇನ್ನು ಒಂದಿಷ್ಟು ಮಂದಿ ಅಜ್ಜಿ ಕೋಣೆಯನ್ನು ಕೆಳಗೆ ಶಿಫ್ಟ್ ಮಾಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಜಾನು ತವರಿನಲ್ಲಿಯೂ ಜಯಂತ್‌ನ ಕಿತಾಪತಿ; ಚಿನ್ನುಮರಿಗೆ ವಿಷ್ಯ ಗೊತ್ತಾದ್ರೆ ಉಳಿಗಾಲವೇ ಇಲ್ಲ!
ಮಿನಿಸ್ಟರ್ ವೀರೇಂದ್ರ ಮನೆಯಲ್ಲಿ Extra ಕಾರ್ ಇಲ್ಲವೇ?
ನಿನ್ನೆಯ ಸಂಚಿಕೆಯಲ್ಲಿ ವೀರೇಂದ್ರ ಸರ್ ದೇಸಾಯಿ ತಮ್ಮ ಮೇಲೆ ಕೊಲೆ ಆರೋಪ ಬಂದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಲು ಸುದ್ದಿಗೋಷ್ಠಿಗೆ ತೆರಳಿದ್ದರು. ಆದ್ರೆ ರಾಜೀನಾಮೆಯನ್ನು ತಡೆಯಲು ಲಲಿತಾ ದೇವಿ ನಡೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಈ ದೃಶ್ಯ ನೋಡಿದ ಜನರು, ಮಿನಿಸ್ಟರ್ ವೀರೇಂದ್ರ ಮನೆಯಲ್ಲಿ Extra ಕಾರ್ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಪದ್ಮನಾಭ್ ಆಟೋದಲ್ಲಿ ಬಂದು ಲಲಿತಾ ದೇವಿಯನ್ನು ಕರೆದುಕೊಂಡು ಹೋಗುತ್ತಾನೆ.
ವೀರೇಂದ್ರ ಅನಾರೋಗ್ಯದಿಂದ ಕುಸಿದಾಗಲೂ ಸುಬ್ಬು ಅವರನ್ನು ತನ್ನ ಬೈಕ್‌ನಲ್ಲಿಯೇ ಕರೆದುಕೊಂಡು ಹೋಗಿದ್ದನು. ಈ ಸಮಯದಲ್ಲಿಯೂ ಪಾಪ ವೀರೇಂದ್ರ ಮನೆಯಲ್ಲಿ ಕಾರ್ ಇರಲಿಲ್ಲ. ಹೀಗೆ ಧಾರಾವಾಹಿಯ ಈ ರೀತಿಯ ದೃಶ್ಯಗಳನ್ನು ನೋಡಿ ಮಿನಿಸ್ಟರ್ ವೀರೇಂದ್ರ ಸರ್ ದೇಸಾಯಿ ಬಡವರಾಗ್ತಿದ್ದಾರೆ ಅನ್ನಿಸುತ್ತಿದೆ.
ಇದನ್ನೂ ಓದಿ: ನೋಡಲೇಬೇಕಾದ 5 ಹೃದಯ ವಿದ್ರಾವಕ ಕಥೆಗಳ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.