ಮೈ ಡೊಂಕಿನ ವೈಯಾರಿ ಎಂದ ಶ್ರೀರಸ್ತು ಶುಭಮಸ್ತು ಅಕ್ಕ-ತಂಗಿ! ಸೊಂಟ ಹುಷಾರ್​ ಕಣ್ರೀ ಎಂದ ಫ್ಯಾನ್ಸ್​

Published : Feb 16, 2025, 07:04 PM ISTUpdated : Feb 16, 2025, 07:20 PM IST
ಮೈ ಡೊಂಕಿನ ವೈಯಾರಿ ಎಂದ ಶ್ರೀರಸ್ತು ಶುಭಮಸ್ತು ಅಕ್ಕ-ತಂಗಿ! ಸೊಂಟ ಹುಷಾರ್​ ಕಣ್ರೀ ಎಂದ ಫ್ಯಾನ್ಸ್​

ಸಾರಾಂಶ

"ಶ್ರೀರಸ್ತು ಶುಭಮಸ್ತು" ಧಾರಾವಾಹಿಯ ಪೂರ್ಣಿ (ಲಾವಣ್ಯ ಭಾರಧ್ವಾಜ್) ಮತ್ತು ದೀಪಿಕಾ (ದರ್ಶಿನಿ ಡೆಲ್ಟಾ) ಪಾತ್ರಗಳು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿವೆ. ನಿಜ ಜೀವನದಲ್ಲಿ ಆತ್ಮೀಯ ಗೆಳತಿಯರಾದ ಇವರು "ಬಿಂಕದ ಸಿಂಗಾರಿ" ಹಾಡಿಗೆ ರೀಲ್ಸ್ ಮಾಡಿದ್ದಾರೆ. ಲಾವಣ್ಯ ಅವರ ಪತಿ ಶಶಿ, "ಅಮೃತಧಾರೆ" ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ದರ್ಶಿನಿ, ಪ್ರಭುದೇವ ಮತ್ತು ಜಾನಿ ಮಾಸ್ಟರ್ ಜೊತೆ ಕೆಲಸ ಮಾಡಿದ ನೃತ್ಯ ಸಂಯೋಜಕಿ.

ಶ್ರೀರಸ್ತು ಶುಭಮಸ್ತು ಸೀರಿಯಲ್​ ಅಕ್ಕ-ತಂಗಿ ಪೂರ್ಣಿ ಮತ್ತು ದೀಪಿಕಾ ಸೀರಿಯಲ್​ನಲ್ಲಿ ವಾರೆಗಿತ್ತಿಯರೂ ಹೌದು. ಪೂರ್ಣಿಯದ್ದು ಅಬ್ಬಬ್ಬಾ ಎನ್ನುವಷ್ಟು ಮುಗ್ಧತೆ, ಒಳ್ಳೆತನ. ದೀಪಿಕಾದ್ದು ಅಯ್ಯಯ್ಯೋ ಎನ್ನುವಷ್ಟು ಕ್ರೂರತನ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರೂ ಭಿನ್ನ ಭಿನ್ನ ಕ್ಯಾರೆಕ್ಟರ್​ ಇವರದ್ದು. ಸೀರಿಯಲ್​ನಲ್ಲಿ ಇವರಿಬ್ಬರೂ ಎಷ್ಟೇ ವಿಲನ್​ ಆಗಿರಲಿ, ನಿಜ ಜೀವನದಲ್ಲಿ ಮಾತ್ರ ಇಬ್ಬರೂ ಕ್ಲೋಸ್​ ಫ್ರೆಂಡ್ಸ್​. ಪೂರ್ಣಿಯ ರಿಯಲ್​ ಹೆಸರು ಲಾವಣ್ಯ ಭಾರಧ್ವಾಜ್​ ಹಾಗೂ ದೀಪಿಕಾ ನಿಜವಾದ ಹೆಸರು ದರ್ಶಿನಿ ಡೆಲ್ಟಾ. 

ಇವರಿಬ್ಬರೂ ಸೇರಿ ಬಿಂಕದ ಸಿಂಗಾರಿ, ಮೈ ಡೊಂಕಿನ ವೈಯಾರಿ ಹಾಡಿಗೆ ರೀಲ್ಸ್​ ಮಾಡಿದ್ದಾರೆ.  ಅಂದಹಾಗೆ ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್‌ ಪತಿಯ ಹೆಸರು ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಶಶಿ ಅವರು ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ಸಹೋದರನ ಪಾತ್ರ ಮಾಡುತ್ತಿದ್ದಾರೆ.   ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ಹುಟ್ಟಿನ ಬಗ್ಗೆ ಅಪ್ಪ ಹೇಳಿಕೊಂಡಿದ್ದರು. ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!  ಇದೇ ವೇಳೆ, ಶಶಿ-ಲಾವಣ್ಯ ಜೋಡಿ ತಮ್ಮ ಹಲವು ಪರ್ಸನಲ್‌ ವಿಷಯಗಳನ್ನು ಶೇರ್‌ ಮಾಡಿಕೊಂಡಿತ್ತು. ಮದುವೆ ಮತ್ತು ಫಸ್ಟ್​ನೈಟ್​ ಬಗ್ಗೆ ಶಶಿ ಅವರು ಮಾತನಾಡಿದ್ದರು.  ಫಸ್ಟ್ ನೈಟ್‌ನಲ್ಲಿ ಈಕೆಯ  ಕಸಿನ್ಸ್  ನನ್ನನ್ನು ಅಡ್ಡಗಟ್ಟಿ ಒಳಗೆ ಹೆಂಡತಿಯನ್ನ ಬಿಡಬೇಕೆಂದರೆ ಒಬ್ಬೊಬ್ಬರಿಗೆ 4 ಸಾವಿರ ಕೊಡಬೇಕು ಅಂತ ಕೇಳಿದ್ದರು,  ಆಮೇಲೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದರು. ನಾನು ಒಳಗೆ ಹೋದ್ಮೇಲೆ ಅಲ್ಲಿ ಬೆಡ್‌ ಬದಲು ಥರ್ಮೊಕಾಲ್ ಬಬಲ್ಸ್ ಹಾಕಿದ್ದರು. ಕೂತಾಗ ಬಬಲ್ಸ್ ಹಾರಿಬಿಡ್ತು. ಮಧ್ಯರಾತ್ರಿ 3 ಗಂಟೆವರೆಗೂ ಅದನ್ನೆಲ್ಲಾ ಕ್ಲೀನ್ ಮಾಡ್ತಿದ್ವಿ ಎಂದು ನೆನಪಿಸಿಕೊಂಡಿದ್ದರು.  ಅದೇ ರೀತಿ  ಹನಿಮೂನ್‌ಗೆ ಮಾಲ್ದೀವ್ಸ್‌ ಹೋಗುವ ಕನಸನ್ನು ಇನ್ನೂ ಪತಿ ನೆರವೇರಿಸಿಲ್ಲ ಎಂದು ಲಾವಣ್ಯ ವೇದಿಕೆಯ ಮೇಲೆ  ಬೇಸರ ವ್ಯಕ್ತಪಡಿಸಿದ್ದರು.  

ಶ್ರೀರಸ್ತು ಶುಭಮಸ್ತು ಸಂಧ್ಯಾ ಜೊತೆ ನಿಜಕ್ಕೂ ವಿಲನ್​ ಶಾರ್ವರಿನಾ? ಪ್ರೀತಿಯೇ ನನ್ನುಸಿರು ಹಾಡಿಗೆ ಭರ್ಜರಿ ರೀಲ್ಸ್​

ಇನ್ನು ದರ್ಶಿನಿ ಕುರಿತು ಹೇಳುವುದಾದರೆ, ಇವರು ನಟಿಯಾಗೋ ಮೊದಲು ಮಾಡೆಲ್ (Model),  ಜೊತೆಗೆ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

ಓಪನ್ ದ ಬಾಟಲ್ ಹಾಡಿಗೆ ಪುನೀತ್ ರಾಜ್ ಕುಮಾರ್ ಗೆ ಜಾನಿ ಮಾಸ್ಟರ್ ಗೆ ಅಸಿಸ್ಟಂಟ್ ಕೊರಿಯೋಗ್ರಫಿ ಮಾಡಿದ ದರ್ಶಿನಿ, ನನ್ನ ಕೊರಿಯೋಗ್ರಫಿ ಮೇಲೆ ನನಗಿಂತ ಹೆಚ್ಚಿನ ನಂಬಿಕೆ ಇಟ್ಟಿದ್ದ ಪುನೀತ್ ರಾಜ್ ಕುಮಾರ್ (Punith Rajkumar) ಅವರ ಆಶೀರ್ವಾದದಿಂದಲೇ ನಾನು ಇವತ್ತು ಈ ಹಂತಕ್ಕೆ ಬಂದಿದ್ದೇನೆ ಎಂದು ಹೇಳ್ತಾರೆ. ಅಪ್ಪನ ಕನಸಿನಂತೆ ಡ್ಯಾನ್ಸರ್ (dancer) ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ಮೊದಲಿಗೆ ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತಮಿಳಿನಲ್ಲಿ ಜಾನಿ ಮಾಸ್ಟರ್ (Jani Master) ಅವರಿಗೆ ಅಸಿಸ್ಟಂಟ್ ಆಗಿ ಪ್ರಭುದೇವ (Prabhudeva) ಅವರಿಗೆ ಕೊರಿಯೋಗ್ರಫಿ ಮಾಡಿದ ದರ್ಶಿನಿ  ಡೆಲ್ಟಾ ನಾಗರಾಜ್, ಸದ್ಯ ಕನ್ನಡದ ಮೊದಲ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.  

ರೊಮಾಂಟಿಕ್‌ ಸಾಂಗ್‌ಗೆ ಪ್ರೇಮದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಅಭಿ-ದೀಪಿಕಾ ಜೋಡಿ: ವಿಡಿಯೋ ವೈರಲ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?