ಮೇಘನಾ ಜೊತೆ ಸರಳವಾಗಿ ಎಂಗೇಜ್‌ ಆದ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಶಮಂತ್‌ ಬ್ರೊ ಗೌಡ

Published : Feb 16, 2025, 03:08 PM ISTUpdated : Feb 16, 2025, 06:32 PM IST
ಮೇಘನಾ ಜೊತೆ ಸರಳವಾಗಿ ಎಂಗೇಜ್‌ ಆದ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಶಮಂತ್‌ ಬ್ರೊ ಗೌಡ

ಸಾರಾಂಶ

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟ ಶಮಂತ್‌ ಬ್ರೊ ಗೌಡ ಅವರು ಮೇಘನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟ ಶಮಂತ್‌ ಬ್ರೊ ಗೌಡ ಅವರು ಈಗಾಗಲೇ ತಾವು ಮದುವೆಯಾಗುವ ಹುಡುಗಿ ಯಾರು ಎಂದು ಪರಿಚಯಿಸಿದ್ದಾರೆ. ಮೇಘನಾ ಜೊತೆಗೆ ಹೊಸ ಜೀವನಕ್ಕೆ ಕಾಲಿಡಲು ಅವರು ರೆಡಿ ಆಗಿದ್ದಾರೆ. ಇಂದು ಅವರ ನಿಶ್ಚಿತಾರ್ಥ ಕೂಡ ನಡೆದಿದೆ. ಬ್ರೊ ಗೌಡ, ಮೇಘನಾರ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಮೇಘನಾ ಯಾರು? 
ಮೇಘನಾ ಗ್ರಾಮ್‌ ಅವರ ಕಾಲೇಜಿನ್‌ ಇವೆಂಟ್‌ವೊಂದರಲ್ಲಿ ಶಮಂತ್‌ ಬ್ರೊ ಗೌಡ ಆಗಮಿಸಿದ್ದರು. ಆವೇಳೆ ಶಮಂತ್‌ ಬ್ರೊ ಗೌಡ, ಮೇಘನಾಗೆ ಪರಿಚಯ ಆಗಿತ್ತು. ಆಮೇಲೆ ಆ ಪರಿಚಯ ಸ್ನೇಹ ಆಯ್ತು, ಪ್ರೀತಿ ಹುಟ್ಟಿ ಈಗ ಕುಟುಂಬದವರ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಗಲು ರೆಡಿ ಆಗಿದೆ. ಅಂದಹಾಗೆ ಮೇಘನಾ, ಶಮಂತ್‌ ಬ್ರೊ ಗೌಡಗೆ ಪರಿಚಯ ಆಗಿ ಆರು ವರ್ಷಗಳಿಗೂ ಅಧಿಕ ಕಾಲ ಆಯ್ತು.. ಶಮಂತ್‌ ಅವರು ʼಬಿಗ್‌ ಬಾಸ್ ಕನ್ನಡ ಸೀಸನ್‌ 8ʼ‌ ಶೋ ಹೋಗುವ ಮುನ್ನವೇ ಮೇಘನಾರಿಗೆ ಪರಿಚಯ ಆಗಿ ಮೂರು ವರ್ಷಗಳ ಮೇಲಾಗಿತ್ತು. 

ʼಲಕ್ಷ್ಮೀ ಬಾರಮ್ಮʼ ಶಮಂತ್‌ ಬ್ರೊ ಗೌಡ ಹುಡುಗಿ ಮೇಘನಾ ಬಗ್ಗೆ ಗೊತ್ತಿಲ್ಲದ ಮಾಹಿತಿ!

ಮೇಕಪ್‌ ಆರ್ಟಿಸ್ಟ್ ಆಗಿರೋ ಮೇಘನಾ
ಮೇಘನಾ ಅವರು ಮಾಡೆಲ್‌ ಆಗಿ ಕೆಲಸ ಮಾಡುತ್ತಿದ್ದರು. ಮೇಘನಾ ಅವರು ಮಾಡೆಲ್‌ ಆಗಿ ಕೆಲಸ ಮಾಡುವಾಗ ಚಿತ್ರರಂಗದಲ್ಲಿ ಹೇಗೆ ಇರಬೇಕು?, ಸಂಭಾವನೆ ಹೇಗೆ ತಗೋಬೇಕು? ಯಾವ ರೀತಿ ಕಾಂಟ್ಯಾಕ್ಟ್‌ ಮಾಡಬೇಕು ಎಂಬ ವಿಷಯಗಳ ಬಗ್ಗೆ ಶಮಂತ್‌ ಅವರೇ ಸಲಹೆ ನೀಡುತ್ತಿದ್ದರಂತೆ. ಚಿತ್ರರಂಗದಲ್ಲಿ ಕೆಲಸ ಮಾಡಲು, ವೃತ್ತಿ ಜೀವನದಲ್ಲಿ ಸೆಟಲ್‌ ಆಗಲು ಶಮಂತ್‌ ಸಹಾಯ, ಸಲಹೆ ತುಂಬ ದೊಡ್ಡದು ಎಂದು ಈ ಹಿಂದೆ ನೀಡಿದ್ದಂತಹ ಸಂದರ್ಶನವೊಂದರಲ್ಲಿ ಮೇಘನಾ ಮಾತನಾಡಿದ್ದಾರೆ. ಸದ್ಯ ಅವರೀಗ ಮೇಕಪ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಲಾವಿದರಾದ ತನ್ವಿ ರಾವ್‌ ಮುಂತಾದವರಿಗೆ ಮೇಘನಾ ಅವರೇ ಮೇಕಪ್‌ ಮಾಡಿದ್ದರು. ಮೇಘನಾ ಅವರು ಮಾಡೆಲ್‌ ಆಗಿದ್ದು, ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಅಂದಹಾಗೆ ಮೇಘನಾಗೆ ಶಮಂತ್‌, ಶಮಂತ್‌ಗೆ ಮೇಘನಾ ಸಾಥ್‌ ಇದ್ದೇ ಇದೆ.

Lakshmi Baramma Serial: ಕೀರ್ತಿ, ಲಕ್ಷ್ಮೀ ಬಿಟ್ಟು ಬೇರೆ ಹುಡುಗಿ ಜೊತೆ ಮದುವೆಯಾಗಲು ವೈಷ್ಣವ್‌ ರೆಡಿ!

ಶಮಂತ್‌ ಕಷ್ಟದಲ್ಲಿ ಮೇಘನಾ ಸಾಥ್!‌ 
ಇನ್ನು ಶಮಂತ್‌ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟು ಹತ್ತು ವರ್ಷಗಳುಗೂ ಅಧಿಕ ಕಾಲ ಆಯ್ತು. ʼಬಿಗ್‌ ಬಾಸ್‌ ಕನ್ನಡ ಸೀಸನ್‌ 8ʼ ಶೋ ಹೋಗುವವರೆಗೂ ಶಮಂತ್‌ ಅವರು ಸಾಕಷ್ಟು ಸೋಲು ಅನುಭವಿಸಿದ್ದರು. ಎಷ್ಟೋ ಸಿನಿಮಾಗಳಲ್ಲಿ ನಟಿಸಿದರೂ ದುಡ್ಡು ಕೊಡ್ತಿರಲಿಲ್ಲ, ಕೆಲವೊಂದು ಸಿನಿಮಾಗಳಲ್ಲಿ ಇವರ ದೃಶ್ಯವನ್ನೇ ಕಟ್‌ ಮಾಡುತ್ತಿದ್ದರು. ಹೀಗೆ ಶಮಂತ್‌ರ ಕಷ್ಟ-ಸುಖ ಎಲ್ಲವೂ ಮೇಘನಾಗೆ ಗೊತ್ತಿತ್ತು. ಈ ಹಂತದಲ್ಲಿಯೂ ಶಮಂತ್‌ಗೆ ಮೇಘನಾ ಸಾಥ್‌ ನೀಡಿದ್ದರು‌.

BBK8: ಮನೆಯಲ್ಲಿರವ ಎಲ್ಲಾ ಸದಸ್ಯರು ನಾಮಿನೇಟ್, ಶಮಂತ್ ಗೌಡ್ ಮಾತ್ರ ಸೇಫ್ !

ಯಾರ ಬಳಿಯೂ ಅಷ್ಟಾಗಿ ಮುಕ್ತವಾಗಿ ಮಾತನಾಡದ ಶಮಂತ್‌ ಅವರು ಮೇಘನಾ ಮುಂದೆ ವೃತ್ತಿ ಜೀವನದ ಏರಿಳಿತದ ಬಗ್ಗೆ ಮಾತನಾಡಿದ್ದರಂತೆ. ಈ ಬಗ್ಗೆ ಮೇಘನಾ ಅವರೇ ಹಿಂದೊಮ್ಮೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ಅಂದಹಾಗೆ ಈ ಜೋಡಿ ಯಾವಾಗ ಮದುವೆ ಆಗಲಿದೆ ಎಂದು ಕಾದು ನೋಡಬೇಕಿದೆ. ಇಷ್ಟುದಿನಗಳ ಕಾಲ ಪ್ರೀತಿ ವಿಷಯವನ್ನು ಹೇಳಿಕೊಳ್ಳದೆ ಶಮಂತ್‌, ಮೇಘನಾ ಅವರು ಈಗ ಮದುವೆ ವಿಷಯವನ್ನು ಏಕಾಏಕಿ ಹೇಳಿಕೊಂಡಿರೋದು ಅನೇಕರಿಗೆ ಅಚ್ಚರಿ ತರಿಸಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!