
ಈಗಾಗಲೇ ಸಾಕಷ್ಟು ಕಲಾವಿದರು ಧಾರಾವಾಹಿಯಲ್ಲಿ ಅಣ್ಣ-ಅತ್ತಿಗೆ, ತಾಯಿ-ಮಗ ಪಾತ್ರ ಮಾಡಿ ರಿಯಲ್ ಲೈಫ್‌ನಲ್ಲಿ ಜೋಡಿಗಳಾದ ಉದಾಹರಣೆ ಸಾಕಷ್ಟಿದೆ. ಅಂದಹಾಗೆ ಧಾರಾವಾಹಿಯಲ್ಲಿ ಅತ್ತಿಗೆ-ಮೈದುನ ಪಾತ್ರ ಮಾಡಿದ ನಟಿ-ನಟ ನಿಜ ಜೀವನದಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ.
ಯಾವ ಧಾರಾವಾಹಿ? ಏನು ಕಥೆ?
ಹಿಂದಿಯಲ್ಲಿ ghum hai kisikey pyaar meiin serial ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಸದ್ಯ ಮೂರನೇ ಸೀಸನ್ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯ ಮೊದಲ ಸೀಸನ್‌ನಲ್ಲಿ ಅತ್ತಿಗೆ ಪತ್ರಲೇಖಾ, ಮೈದುನ ವಿರಾಟ್ ಚೌಹಾಣ್ ಪಾತ್ರದಲ್ಲಿ ನಟಿಸುತ್ತಿದ್ದ ಕಲಾವಿದರು ಪ್ರೀತಿಸಿ ಮದುವೆಯಾಗಿದ್ದಾರೆ.
Aero India ಶೋನಲ್ಲಿ ಭಾಗಿಯಾಗಿ ವಿಶೇಷ ಥ್ಯಾಂಕ್ಸ್ ಹೇಳಿದ Seetha Raama Serial ವೈಷ್ಣವಿ ಗೌಡ; ಆ A ಯಾರು?
ಧಾರಾವಾಹಿ ಕಥೆ ಏನು?
ಪತ್ರಲೇಖಾ ಪಾತ್ರದಲ್ಲಿ ಐಶ್ವರ್ಯಾ ಶರ್ಮಾ ಅವರು ನಟಿಸಿದ್ದರು. ಇನ್ನು ವಿರಾಟ್ ಚೌಹಾಣ್ ಪಾತ್ರದಲ್ಲಿ ನೀಲ್ ಭಟ್ ನಟಿಸಿದ್ದರು. ಪತ್ರಲೇಖಾಗೆ ವಿರಾಟ್ ಮೇಲೆ ಲವ್ ಇರುತ್ತದೆ. ವಿರಾಟ್ ಪೊಲೀಸ್ ಅಧಿಕಾರಿಯಾಗಿ ಬೇರೆ ಊರಿಗೆ ವರ್ಗಾವಣೆ ಆಗಿರುತ್ತಾನೆ. ಆ ಸಮಯದಲ್ಲಿ ವಿರಾಟ್ ಅಣ್ಣ ಸಾಮ್ರಾಟ್ ಜೊತೆಗೆ ಪತ್ರಲೇಖಾ ಮದುವೆ ಫಿಕ್ಸ್ ಆಗಿರುತ್ತದೆ. ತಾನು ವಿರಾಟ್ ಅಣ್ಣನನ್ನೇ ಮದುವೆ ಆಗ್ತಿರೋದು ಎನ್ನುವ ವಿಷಯ ಪತ್ರಲೇಖಾಗೆ ಗೊತ್ತಿರೋದಿಲ್ಲ, ಪತ್ರಲೇಖಾಳನ್ನು ನನ್ನ ಅಣ್ಣ ಮದುವೆ ಆಗ್ತಿದ್ದಾನೆ ಅಂತ ವಿರಾಟ್‌ಗೂ ಗೊತ್ತಿರೋದಿಲ್ಲ. ಅಂತೂ ಪತ್ರಲೇಖಾ-ಸಾಮ್ರಾಟ್ ಮದುವೆ ಆಗುತ್ತದೆ. ಇನ್ನು ಪರಿಸ್ಥಿತಿಗೆ ಕಟ್ಟುಬಿದ್ದು ವಿರಾಟ್, ಸಯಿಯನ್ನು ಮದುವೆ ಆಗ್ತಾನೆ.
ವಿರಾಟ್‌ಗೆ ಮದುವೆ ಆದರೂ ಕೂಡ ಪತ್ರಲೇಖಾ ಅವರಿಬ್ಬರ ಸಂಬಂಧ ಹಾಳು ಮಾಡಲು ನೋಡ್ತಾಳೆ. ಮತ್ತೆ ವಿರಾಟ್‌ನನ್ನು ಪಡೆದುಕೊಳ್ಳಲು ನೋಡ್ತಾಳೆ. ಕೊನೆಗೂ ವಿರಾಟ್-ಸಯಿ ದೂರ ಆಗ್ತಾರೆ. ಸಯಿ ಬದುಕಿಲ್ಲ ಎಂದುಕೊಂಡಿದ್ದ ವಿರಾಟ್ ಪತ್ರಲೇಖಾಳನ್ನು ಮದುವೆ ಆಗ್ತಾನೆ. ಆಮೇಲೆ ಸಯಿ ಬದುಕಿರೋದು ಗೊತ್ತಾದರೂ ಕೂಡ ಸಯಿ ಇನ್ನೊಂದು ಮದುವೆ ಆಗಿದ್ದಕ್ಕೆ ಅವನಿಗೆ ಏನೂ ಮಾಡೋಕೆ ಆಗೋದಿಲ್ಲ. ಕೊನೆಗೆ ಪ್ಲ್ಯಾನ್ ಕ್ರ್ಯಾಶ್‌ನಲ್ಲಿ ಇವರಿಬ್ಬರು ಸಾಯುತ್ತಾರೆ.
'ಮುದ್ದುಲಕ್ಷ್ಮೀ' ಧಾರಾವಾಹಿ ನಟನ ವಿರುದ್ಧ ಮತ್ತೊಂದು ದೂರು ದಾಖಲು; ಚರಿತ್ ಬಾಳಪ್ಪ ನಾಪತ್ತೆ!
ಸರಳ ಮದುವೆ!
ಈ ಧಾರಾವಾಹಿ ಮೂಲಕ ಪರಿಚಯವಾಗಿದ್ದ ನೀಲ್ ಭಟ್, ಐಶ್ವರ್ಯಾ ಶರ್ಮಾ ನಡುವೆ ಪ್ರೀತಿ ಹುಟ್ಟುತ್ತದೆ. 2021ರಲ್ಲಿ ಈ ಜೋಡಿ ಮದುವೆ ಆಗುವುದು. ಈ ಮದುವೆಗೆ ಬಾಲಿವುಡ್ ಕಲಾವಿದರು, ನಿರ್ದೇಶಕರು, ನಟಿ ರೇಖಾ ಕೂಡ ಆಗಮಿಸಿ ಬಂದು ನವಜೋಡಿಗೆ ಶುಭ ಹಾರೈಸಿದ್ದರು.
ಹನಿಮೂನ್ನಲ್ಲೇ ಗಂಡನ ಮೇಲೆ ನಟಿ ಮೇಘನಾ ಗರಂ! ಕ್ಯಾಮೆರಾ ಎದುರೇ ಇದೇನಿದು ಈ ಪರಿ ಆರೋಪ?
ನೆಗೆಟಿವ್ ಕಾಮೆಂಟ್ಸ್
ghum hai kisikey pyaar meiin ಧಾರಾವಾಹಿಯಲ್ಲಿ ಐಶ್ವರ್ಯಾ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀರೋ, ಹೀರೋಯಿನ್‌ಗೆ ಒಂದಾಗೋಕೆ ಬಿಡದ ನೆಗೆಟಿವ್ ಪಾತ್ರ ಅದಾಗಿತ್ತು. ಹೀಗಾಗಿ ವೀಕ್ಷಕರಿಗೆ ಐಶ್ವರ್ಯಾ ಕಂಡರೆ ಬೇಸರ, ಸಿಟ್ಟು ಎಲ್ಲವೂ ಇತ್ತು. ಐಶ್ವರ್ಯಾ ಅವರು ನೀಲ್ ಭಟ್‌ರನ್ನು ಮದುವೆಯಾದರು ಎಂದು ಅನೇಕರು ಸಿಟ್ಟುಮಾಡಿಕೊಂಡಿದ್ದರು. ಈ ಬಗ್ಗೆ ಐಶ್ವರ್ಯಾಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಹಾಕಿದ್ದರಂತೆ. “ರೀಲ್ ಬೇರೆ, ರಿಯಲ್ ಬೇರೆ. ಧಾರಾವಾಹಿಯಲ್ಲಿ ನಾನು ನೆಗೆಟಿವ್ ಪಾತ್ರ ಮಾಡಿದ್ದೀನಿ ಅಂತ ರಿಯಲ್ ಲೈಫ್‌ನಲ್ಲಿಯೂ ನೆಗೆಟಿವ್ ಕಾಮೆಂಟ್ ಹಾಕೋದು ಎಷ್ಟು ಸರಿ?” ಎಂದು ಅವರು ಅಳಲು ತೋಡಿಕೊಂಡಿದ್ದರು.
ನೀಲ್ ಭಟ್ ಅವರು ಸದ್ಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ, ಐಶ್ವರ್ಯಾಗೆ ಉತ್ತಮ ಪ್ರಾಜೆಕ್ಟ್ ಸಿಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.