‌ಚಂದನ್‌ ಶೆಟ್ಟಿ ಜೊತೆ ಗುಟ್ಟಾಗಿ ಎಂಗೇಜ್‌ ಆದ 'ಸೀತಾ ವಲ್ಲಭ' ಧಾರಾವಾಹಿ ನಟಿ ಸುಪ್ರೀತಾ ಸತ್ಯನಾರಾಯಣ್!

Published : Apr 14, 2025, 10:43 AM ISTUpdated : Apr 14, 2025, 10:58 AM IST
‌ಚಂದನ್‌ ಶೆಟ್ಟಿ ಜೊತೆ ಗುಟ್ಟಾಗಿ ಎಂಗೇಜ್‌ ಆದ 'ಸೀತಾ ವಲ್ಲಭ' ಧಾರಾವಾಹಿ ನಟಿ ಸುಪ್ರೀತಾ ಸತ್ಯನಾರಾಯಣ್!

ಸಾರಾಂಶ

Supritha Sathyanarayan Engagement: ʼಸೀತಾ ವಲ್ಲಭʼ ಧಾರಾವಾಹಿ ನಟಿ ಸುಪ್ರೀತಾ ಸತ್ಯನಾರಾಯಣ್‌ ಅವರು ಚಂದನ್‌ ಶೆಟ್ಟಿ ಜೊತೆ ಎಂಗೇಜ್‌ ಆಗಿದ್ದಾರೆ. 

ಕನ್ನಡ ಕಿರುತೆರೆ ನಟಿಯೋರ್ವರು ಗುಟ್ಟಾಗಿ ಎಂಗೇಜ್‌ ಆಗಿದ್ದು, ಕೆಲವು ದಿನಗಳ ಬಳಿಕ ಅವರೇ ಈ ವಿಷಯವನ್ನು ರಿವೀಲ್‌ ಮಾಡಿದ್ದಾರೆ. ಹೌದು, ‘ಸೀತಾ ವಲ್ಲಭ’ ಧಾರಾವಾಹಿಯಲ್ಲಿ ಮೈಥಿಲಿ ಪಾತ್ರ ಮಾಡ್ತಿರುವ ನಟಿ ಸುಪ್ರೀತಾ ಸತ್ಯನಾರಾಯಣ್‌ ಅವರು ಎಂಗೇಜ್‌ ಆಗಿದ್ದಾರೆ. ಕಳೆದ ಮಾರ್ಚ್‌ ತಿಂಗಳಿನಲ್ಲಿ ಗುಟ್ಟಾಗಿ ಎಂಗೇಜ್‌ ಆಗಿರೋ ಸುಪ್ರೀತಾ ಅವರು ಈಗ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ. 

ವಿಶೇಷ ಪೋಸ್ಟ್‌ ಹಂಚಿಕೊಂಡ ನಟಿ! 
“ಹೊಸ ಚಾಪ್ಟರ್‌ ಇಲ್ಲಿಂದ ಶುರು. ಹೆಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ? ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ನನಗೆ ತುಂಬ ಇಷ್ಟ. ಆ ನಗುಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್‌ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯು. ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮೀಸ್‌ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್‌ ಯು ಕಂದ. ನನ್ನ ಹೃದಯ ನಿನ್ನದು. 
ತಾಯಿ ತಂದೆ ಎಲ್ಲ ನೀನೆ
ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ
ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮಕೆ
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ

ಅರೆ ಬಟ್ಟೆಹಾಕಲ್ಲ, ಒತ್ತಡಕ್ಕೆ ಮಣಿಯಲ್ಲ: ಸುಪ್ರೀತಾ ಸತ್ಯನಾರಾಯಣ್‌

ಚಂದನ್‌ ಶೆಟ್ಟಿ ಯಾರು?
ಸುಪ್ರೀತಾ ಸತ್ಯನಾರಾಯಣ್‌ ಅವರು ಚಂದನ್‌ ಶೆಟ್ಟಿ ಎನ್ನುವವರನ್ನು ಮದುವೆಯಾಗಲಿದ್ದಾರೆ. ಚಂದನ್‌ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಡಿಜಿಟಲ್‌ ಕ್ರಿಯೇಟರ್‌, ಸಾಫ್ಟ್‌ವೇರ್‌ ಉದ್ಯೋಗಿ ಎಂದು ಬರೆದುಕೊಂಡಿದ್ದಾರೆ. ಕೊಡಗಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ ಎನ್ನಲಾಗಿದೆ. 

ಲವ್‌ ಮ್ಯಾರೇಜ್?‌ ಅರೇಂಜ್‌ ಮ್ಯಾರೇಜ್?‌ 
ಇವರಿಬ್ಬರದ್ದು ಲವ್‌ ಮ್ಯಾರೇಜ್?‌ ಅರೇಂಜ್‌ ಮ್ಯಾರೇಜ್‌ ಎನ್ನುವ ಬಗ್ಗೆ ಮಾಹಿತಿ ಇಲ್ಲ. ತುಂಬ ಖಾಸಗಿಯಾಗಿ ಈ ನಿಶ್ಚಿಯಾರ್ಥ ನಡೆದಿದೆ. ಎಂಗೇಜ್‌ ಆಗಿ ಹಲವು ದಿನಗಳ ಬಳಿಕ ಸುಪ್ರೀತಾ ಅವರು ಈ ವಿಷಯ ರಿವೀಲ್‌ ಮಾಡಿದ್ದಾರೆ. ಇನ್ನು ಮದುವೆ ಯಾವಾಗ? ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 

ಬ್ರಹ್ಮಗಂಟು ಸೀರಿಯಲ್‌ಗೆ 2ನೇ ನಾಯಕಿಯಾದ ಸೀತಾ ವಲ್ಲಭ ಖ್ಯಾತಿಯ ಕಾವ್ಯ ರಮೇಶ್

ಸೀರಿಯಲ್‌, ಸಿನಿಮಾಗಳಲ್ಲಿ ನಟನೆ! 
ಆರಂಭದಲ್ಲಿ ʼಸೀತಾ ವಲ್ಲಭʼ ಧಾರಾವಾಹಿಯಲ್ಲಿ ನಟಿಸಿದ್ದ ಸುಪ್ರೀತಾ ಅವರು ಆ ನಂತರದಲ್ಲಿ ʼಸರಸುʼ ಧಾರಾವಾಹಿ ಮಾಡಿದರು. ಇದಾದ ನಂತರದಲ್ಲಿ ಸಿನಿಮಾ ಕಡೆಗೆ ಮುಖ ಮಾಡಿದರು. ಸಿನಿಮಾ ಕೂಡ ಅವರಿಗೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಯಶಸ್ಸು ತಂದುಕೊಡಲಿಲ್ಲ. ಮುಂದೆ ಅವರು ಸಿನಿಮಾ ಮಾಡ್ತಾರಾ ಎಂದು ಕಾದು ನೋಡಬೇಕಾಗಿದೆ. ʼಮೆಲೋಡಿ ಡ್ರಾಮಾʼ ಎನ್ನುವ ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸುಗ್ಗಿ!
ಸ್ಯಾಂಡಲ್‌ವುಡ್‌ನಲ್ಲಿ ಈಗ ಮದುವೆ ಸುಗ್ಗಿ ಎನ್ನಬಹುದು. ರಾಮಾಚಾರಿ ಧಾರಾವಾಹಿ ನಟಿ ಶೀಲಾ ಎಚ್‌ ಅವರು ಕೆಲ ದಿನಗಳ ಹಿಂದೆ ಎಂಗೇಜ್‌ ಆಗಿದ್ದರು. ಇನ್ನು ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಶಮಂತ್‌ ಬ್ರೋ ಗೌಡ ಅವರು ಏಂಗೇಜ್‌ ಆಗಿದ್ದು, ಮದುವೆ ಆಗುತ್ತಿದ್ದಾರೆ. ಒಟ್ಟಿನಲ್ಲಿ ಒಬ್ಬರಾದ ಮೇಲೆ ಒಬ್ಬರು ಮದುವೆ ಆಗುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!